ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ನಿಮ್ಮ ಸಂಪರ್ಕದ ಮಾಹಿತಿ ಮತ್ತು ಫೋಟೋವನ್ನು ಸೇರಿಸಿ ಅಥವಾ ಎಡಿಟ್ ಮಾಡಿ

ಸಂಪರ್ಕ ಆ್ಯಪ್‌ನಲ್ಲಿ ನನ್ನ ಕಾರ್ಡ್ ಎಂಬ ಹೆಸರಿನ ನಿಮ್ಮ ಸಂಪರ್ಕ ಕಾರ್ಡ್ ಅನ್ನು ರಚಿಸಲು iPad ನಿಮ್ಮ Apple ಖಾತೆಯನ್ನು ಬಳಸುತ್ತದೆ. ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಜನ್ಮದಿನ ಹಾಗೂ ಸಂಪರ್ಕ ಪೋಸ್ಟರ್ ಅನ್ನು ಒಳಗೊಂಡ ವಿವರಗಳನ್ನು ನೀವು ಸೇರಿಸಬಹುದು ಅಥವಾ ಎಡಿಟ್ ಮಾಡಬಹುದು. ನೀವು ಜನರಿಗೆ ಕರೆ ಮಾಡಿದಾಗ ಅಥವಾ ಸಂದೇಶವನ್ನು ಕಳುಹಿಸಿದಾಗ ನೀವು ಇವುಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು.

ನನ್ನ ಕಾರ್ಡ್ ಅನ್ನು ಪೂರ್ಣಗೊಳಿಸಿ ಅಥವಾ ಎಡಿಟ್ ಮಾಡಿ

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಮೇಲ್ಭಾಗದಲ್ಲಿರುವ ನನ್ನ ಕಾರ್ಡ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    ನಿಮಗೆ ‘ನನ್ನ ಕಾರ್ಡ್’ ಎಂಬುದು ಕಾಣಿಸದಿದ್ದರೆ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಮಾಹಿತಿಯನ್ನು ನಮೂದಿಸಿ, ನಂತರ ಸಂಪರ್ಕದ ಪಟ್ಟಿಗೆ ಹಿಂತಿರುಗಿ, ನಿಮ್ಮ ಸಂಪರ್ಕವನ್ನು ಒತ್ತಿ ಹಿಡಿದುಕೊಳ್ಳಿ ಮತ್ತು ಇದನ್ನು ‘ನನ್ನ ಕಾರ್ಡ್’ ಆಗಿ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಂಪರ್ಕದ ಮಾಹಿತಿಯನ್ನು ನಮೂದಿಸಿ.

    ಸಂಪರ್ಕ ಆ್ಯಪ್ ನಿಮಗೆ ಸಹಾಯ ಮಾಡುವುದಕ್ಕಾಗಿ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳನ್ನು ಸೂಚಿಸುತ್ತದೆ.

ಸಲಹೆ: ನಿಮ್ಮ ಹೆಸರನ್ನು ಉಚ್ಚರಿಸುವುದು ಹೇಗೆಂದು ಸಹ ನೀವು Siriಗೆ ಕಲಿಸಬಹುದು. ನಿಮ್ಮ ಹೆಸರನ್ನು ಹೇಗೆ ಹೇಳಬೇಕು ಎಂಬುದನ್ನು Siriಗೆ ತಿಳಿಸಿ ಅನ್ನು ನೋಡಿ.

ನಿಮ್ಮ ಮನೆಯ ವಿಳಾಸವನ್ನು ಸೇರಿಸಿ ಅಥವಾ ಎಡಿಟ್ ಮಾಡಿ

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಮೇಲ್ಭಾಗದಲ್ಲಿರುವ ನನ್ನ ಕಾರ್ಡ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ವಿಳಾಸವನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ವಿಳಾಸವನ್ನು ಸೇರಿಸಿ.

  4. ವಿಳಾಸದ ಎಡಭಾಗದಲ್ಲಿ ಕಾಣಿಸುವ ಲೇಬಲ್ ಅನ್ನು ಟ್ಯಾಪ್ ಮಾಡಿ, ನಂತರ ಮನೆ ಎಂಬುದನ್ನು ಆಯ್ಕೆ ಮಾಡಿ.

ಆನ್‌ಲೈನ್ ಶಾಪಿಂಗ್ ಅಥವಾ ಆನ್‌ಲೈನ್ ಫಾರ್ಮ್‌ಗಳಂತಹ ಕಡೆಗಳಲ್ಲಿ ನಿಮ್ಮ ವಿಳಾಸವನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಲು ನೀವು Safariಯಲ್ಲಿ ಸ್ವಯಂಭರ್ತಿಯನ್ನು ಬಳಸಬಹುದು. ನಿಮ್ಮ ‘ನನ್ನ ಕಾರ್ಡ್’ ಅನ್ನು ನೀವು ಎಡಿಟ್ ಮಾಡಿದಾಗ, ನಿಮ್ಮ ಸ್ವಯಂಭರ್ತಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಲಾಗುತ್ತದೆ. ವೈಯಕ್ತಿಕ ಮಾಹಿತಿಯನ್ನು ಭರ್ತಿಮಾಡಿ ಎಂಬುದನ್ನು ನೋಡಿ.

ನಿಮ್ಮ ಫೋಟೋ ಮತ್ತು ಪೋಸ್ಟರ್ ಅನ್ನು ಸೇರಿಸಿ ಅಥವಾ ಎಡಿಟ್ ಮಾಡಿ

ನೀವು ಇತರರಿಗೆ ಕರೆ ಮಾಡಿದಾಗ ಅಥವಾ ಸಂದೇಶವನ್ನು ಕಳುಹಿಸಿದಾಗ ಸ್ವಯಂಚಾಲಿತವಾಗಿ ಕಾಣಿಸುವಂತೆ ನೀವು ಫೋಟೋ ಮತ್ತು ಪೋಸ್ಟರ್ ಅನ್ನು ಸೆಟ್ ಮಾಡಬಹುದು.

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಮೇಲ್ಭಾಗದಲ್ಲಿರುವ ನನ್ನ ಕಾರ್ಡ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಂಪರ್ಕದ ಫೋಟೋವನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಫೋಟೋ ಮತ್ತು ಪೋಸ್ಟರ್ ಅನ್ನು ಆಯ್ಕೆ ಮಾಡಿ ಮತ್ತು ಕಸ್ಟಮೈಸ್ ಮಾಡಿ.

ನಿಮ್ಮ ಹೆಸರು ಮತ್ತು ಸಂಪರ್ಕದ ಚಿತ್ರವನ್ನು ಹಂಚಿಕೊಳ್ಳಿ

ನಿಮ್ಮ ಸಂಪರ್ಕದಲ್ಲಿರುವ ಜನರೊಂದಿಗೆ ನಿಮ್ಮ ಅಪ್‌ಡೇಟ್ ಮಾಡಲಾದ ಹೆಸರು, ಫೋಟೋ ಮತ್ತು ಪೋಸ್ಟರ್ ಅನ್ನು ಸ್ವಯಂಚಾಲಿತವಾಗಿ ಹಂಚಿಕೊಳ್ಳಲು ನೀವು ಆರಿಸಿಕೊಳ್ಳಬಹುದು.

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಮೇಲ್ಭಾಗದಲ್ಲಿರುವ ನನ್ನ ಕಾರ್ಡ್ ಎಂಬುದನ್ನು ಟ್ಯಾಪ್ ಮಾಡಿ, ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಸಂಪರ್ಕದ ಫೋಟೋವನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಂಪರ್ಕದ ಫೋಟೋ ಮತ್ತು ಪೋಸ್ಟರ್ ಅನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ಪ್ರಾರಂಭಿಸಲು ಹೆಸರು ಮತ್ತು ಫೋಟೋ ಹಂಚಿಕೊಳ್ಳುವಿಕೆಯನ್ನು ಆನ್ ಮಾಡಿ. (ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗಬಹುದು.)

    ನೀವು ‘ಸಂಪರ್ಕಗಳೊಂದಿಗೆ ಮಾತ್ರ’ ಎಂಬ ಆಯ್ಕೆಯ ಮೂಲಕ ಸ್ವಯಂಚಾಲಿತವಾಗಿ ಹಂಚಿಕೊಳ್ಳಬಹುದು ಅಥವಾ ನಿಮ್ಮ ಹೆಸರು, ಫೋಟೋ ಮತ್ತು ಪೋಸ್ಟರ್ ಅನ್ನು ನೀವು ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವ ಮೊದಲು ಪ್ರಾಂಪ್ಟ್ ಅನ್ನು ಪಡೆಯಲು ‘ಯಾವಾಗಲೂ ಕೇಳಿ’ ಎಂಬುದನ್ನು ಆಯ್ಕೆ ಮಾಡಬಹುದು.

ಸಂಪರ್ಕದ ಸರ್ವನಾಮಗಳನ್ನು ಸೇರಿಸಿ ಅಥವಾ ಎಡಿಟ್ ಮಾಡಿ

ಸಂಪರ್ಕ ಆ್ಯಪ್‌ನಲ್ಲಿ ನಿಮ್ಮ ಸರ್ವನಾಮಗಳನ್ನು ಅಥವಾ ಬೇರೆ ಸಂಪರ್ಕದ ಸರ್ವನಾಮಗಳನ್ನು ನೀವು ಸೇರಿಸಬಹುದು ಅಥವಾ ಎಡಿಟ್ ಮಾಡಬಹುದು.

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ನಿಮ್ಮ ಸರ್ವನಾಮಗಳನ್ನು ಸೇರಿಸಲು ಮೇಲ್ಭಾಗದಲ್ಲಿರುವ ‘ನನ್ನ ಕಾರ್ಡ್’ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಬೇರೊಂದು ಸಂಪರ್ಕವನ್ನು ಆರಿಸಿಕೊಂಡು ಅದಕ್ಕೆ ಸರ್ವನಾಮಗಳನ್ನು ಸೇರಿಸಿ.

  3. ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸರ್ವನಾಮಗಳನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ ಭಾಷೆಯನ್ನು ಆಯ್ಕೆಮಾಡಿ ಮತ್ತು ಸರಿಯಾದ ಸರ್ವನಾಮಗಳನ್ನು ಸೇರಿಸಿ.

    ಸರ್ವನಾಮಗಳನ್ನು ಸೇರಿಸಿ ಎಂಬುದನ್ನು ಮತ್ತೊಮ್ಮೆ ಟ್ಯಾಪ್ ಮಾಡುವ ಮೂಲಕ ನೀವು ಇತರ ಭಾಷೆಗಳಲ್ಲಿಯೂ ಸರ್ವನಾಮಗಳನ್ನು ಸೇರಿಸಬಹುದು.

  5. ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ನೀವು ಸಂಪರ್ಕ ಆ್ಯಪ್ ಅಥವಾ NameDrop ಮೂಲಕ ನಿಮ್ಮ ಸಂಪರ್ಕ ಮಾಹಿತಿಯನ್ನು ಹಂಚಿಕೊಂಡಾಗ, ಡೀಫಾಲ್ಟ್ ಆಗಿ ನಿಮ್ಮ ಸರ್ವನಾಮಗಳನ್ನು ಹಂಚಿಕೊಳ್ಳಲಾಗುವುದಿಲ್ಲ. ನೀವು ಮತ್ತೊಂದು ಸಂಪರ್ಕದ ಮಾಹಿತಿಯನ್ನು ಹಂಚಿಕೊಳ್ಳುವಾಗ, ಅವರ ಸರ್ವನಾಮಗಳನ್ನು ಎಂದಿಗೂ ಹಂಚಿಕೊಳ್ಳಲಾಗುವುದಿಲ್ಲ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.