ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಫೋಕಸ್‌ಗಾಗಿ ನೋಟಿಫಿಕೇಷನ್‌ಗಳನ್ನು ಅನುಮತಿಸುವುದು ಅಥವಾ ನಿಶ್ಶಬ್ದಗೊಳಿಸುವುದು

ನೀವು ಫೋಕಸ್ ಅನ್ನು ಸೆಟಪ್ ಮಾಡಿದಾಗ, ನೀವು ನೋಟಿಫಿಕೇಷನ್‌ಗಳನ್ನು ಸ್ವೀಕರಿಸಲು ಬಯಸುವ ಜನರು ಮತ್ತು ಆ್ಯಪ್‌ಗಳನ್ನು ಆಯ್ಕೆಮಾಡಬಹುದು. ಉದಾಹರಣೆಗೆ, ಕೆಲಸದ ಫೋಕಸ್ ಅನ್ನು ಸೆಟಪ್ ಮಾಡಿ ಮತ್ತು ನಿಮ್ಮ ಸಹೋದ್ಯೋಗಿಗಳು ಮತ್ತು ನೀವು ಕೆಲಸ ಮಾಡಲು ಬಳಸುವ ಆ್ಯಪ್‌ಗಳಿಂದ ಬರುವ ನೋಟಿಫಿಕೇಷನ್‌ಗಳನ್ನು ಮಾತ್ರ ಅನುಮತಿಸಿ.

ಫೋಕಸ್ ಸಮಯದಲ್ಲಿ ನಿರ್ದಿಷ್ಟ ಜನರಿಂದ ಬರುವ ನೋಟಿಫಿಕೇಷನ್‌ಗಳನ್ನು ಅನುಮತಿಸಿ ಅಥವಾ ನಿಶ್ಯಬ್ದಗೊಳಿಸಿ

  1. ಸೆಟ್ಟಿಂಗ್ಸ್ ಆ್ಯಪ್  > ಫೋಕಸ್ ಎಂಬಲ್ಲಿಗೆ ಹೋಗಿ, ನಂತರ ಫೋಕಸ್ ಅನ್ನು ಆಯ್ಕೆಮಾಡಿ—ಉದಾಹರಣೆಗೆ, ಅಡಚಣೆ ಮಾಡಬೇಡಿ, ವೈಯಕ್ತಿಕ, ನಿದ್ರೆ ಅಥವಾ ಕೆಲಸ.

  2. ಜನರು ಎಂಬುದನ್ನು ಟ್ಯಾಪ್ ಮಾಡಿ (ಅಥವಾ ಜನರನ್ನು ಆಯ್ಕೆಮಾಡಿ), ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ನಿರ್ದಿಷ್ಟ ಜನರನ್ನು ಅನುಮತಿಸಿ: ಇವರಿಂದ ಬರುವ ನೋಟಿಫಿಕೇಷನ್‌ಗಳನ್ನು ಅನುಮತಿಸಿ ಎಂಬುದನ್ನು ಟ್ಯಾಪ್ ಮಾಡಿ, ‘ಜನರನ್ನು ಸೇರಿಸಿ’ ಬಟನ್ ಟ್ಯಾಪ್ ಮಾಡಿ, ನಂತರ ನಿಮ್ಮ ಸಂಪರ್ಕಗಳಿಂದ ಅವರನ್ನು ಆಯ್ಕೆಮಾಡಿ.

      ಕೆಲವು ಜನರ ಗುಂಪುಗಳಿಂದ ಕರೆಗಳು ಬರುವಂತೆ ಸಹ ಅನುಮತಿಸಲು ನೀವು ಆನ್ ಮಾಡಬಹುದು ಮತ್ತು ಪುನರಾವರ್ತಿತ ಕರೆಗಳನ್ನು ಅನುಮತಿಸಬಹುದು (ಒಂದೇ ವ್ಯಕ್ತಿಯಿಂದ 3 ನಿಮಿಷಗಳಲ್ಲಿ ಎರಡು ಅಥವಾ ಹೆಚ್ಚಿನ ಕರೆಗಳು).

    • ನಿರ್ದಿಷ್ಟ ಜನರನ್ನು ನಿಶ್ಯಬ್ದಗೊಳಿಸಿ: ಇವರಿಂದ ಬರುವ ನೋಟಿಫಿಕೇಷನ್‌ಗಳನ್ನು ನಿಶ್ಯಬ್ದಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ, ‘ಜನರನ್ನು ಸೇರಿಸಿ’ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಸಂಪರ್ಕಗಳಿಂದ ಅವರನ್ನು ಆಯ್ಕೆಮಾಡಿ.

      ‘ನಿಶ್ಯಬ್ದಗೊಳಿಸಿರುವ ಜನರಿಂದ ಕರೆಗಳನ್ನು ಅನುಮತಿಸಿ’ ಎಂಬುದನ್ನು ಸಹ ನೀವು ಆನ್ ಮಾಡಬಹುದು.

ಗಮನಿಸಿ: ನಿಮ್ಮ ಫೋಕಸ್ ಸೆಟ್ಟಿಂಗ್ಸ್ ಏನೇ ಇದ್ದರೂ, ನಿಮ್ಮ ತುರ್ತು ಸಂಪರ್ಕಗಳಿಂದ ಬರುವ ಕರೆಗಳನ್ನು ನೀವು ಅನುಮತಿಸಬಹುದು. ಕೆಳಗೆ ನೋಟಿಫಿಕೇಷನ್‌ಗಳನ್ನು ನಿಶ್ಯಬ್ದಗೊಳಿಸಿದಾಗ ತುರ್ತು ಸಂಪರ್ಕಗಳಿಂದ ಬರುವ ಕರೆಗಳನ್ನು ಅನುಮತಿಸಿ ಅನ್ನು ನೋಡಿ.

ಇಂಟೆಲಿಜೆಂಟ್ ಬ್ರೇಕ್‌ಥ್ರೂ ಮತ್ತು ನಿಶ್ಯಬ್ಧಗೊಳಿಸುವಿಕೆ ಆನ್ ಆಗಿದ್ದಾಗ, Apple Intelligence ನಿಮಗೆ ಅಡ್ಡಿಪಡಿಸಲು ಪ್ರಮುಖ ನೋಟಿಫಿಕೇಷನ್‌ಗಳಿಗೆ ಮಾತ್ರ ಅನುಮತಿಸುತ್ತದೆ ಮತ್ತು ಮುಖ್ಯವಲ್ಲವೆಂದು ನಿರ್ಧರಿಸಲಾದ ನೋಟಿಫಿಕೇಷನ್‌ಗಳನ್ನು ನಿಶ್ಯಬ್ಧಗೊಳಿಸುತ್ತದೆ. Apple Intelligence ಮೂಲಕ ನೋಟಿಫಿಕೇಷನ್‌ಗಳನ್ನು ಸಾರಾಂಶಗೊಳಿಸಿ ಮತ್ತು ಅಡಚಣೆಗಳನ್ನು ಕಡಿಮೆ ಮಾಡಿ ಎಂಬುದನ್ನು ನೋಡಿ.

ಫೋಕಸ್ ಸಮಯದಲ್ಲಿ ನಿರ್ದಿಷ್ಟ ಆ್ಯಪ್‌ಗಳಿಂದ ಬರುವ ನೋಟಿಫಿಕೇಷನ್‌ಗಳನ್ನು ಅನುಮತಿಸಿ ಅಥವಾ ನಿಶ್ಯಬ್ದಗೊಳಿಸಿ

  1. ಸೆಟ್ಟಿಂಗ್ಸ್ ಆ್ಯಪ್  > ಫೋಕಸ್ ಎಂಬಲ್ಲಿಗೆ ಹೋಗಿ, ನಂತರ ಫೋಕಸ್ ಅನ್ನು ಆಯ್ಕೆಮಾಡಿ—ಉದಾಹರಣೆಗೆ, ಅಡಚಣೆ ಮಾಡಬೇಡಿ, ವೈಯಕ್ತಿಕ, ನಿದ್ರೆ ಅಥವಾ ಕೆಲಸ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ (ಅಥವಾ ಆ್ಯಪ್‌ಗಳನ್ನು ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ), ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿರ್ದಿಷ್ಟ ಆ್ಯಪ್‌ಗಳನ್ನು ಅನುಮತಿಸಿ: ‘ಇವುಗಳಿಂದ ಬರುವ ನೋಟಿಫಿಕೇಷನ್‌ಗಳನ್ನು ಅನುಮತಿಸಿ’ ಎಂಬುದನ್ನು ಟ್ಯಾಪ್ ಮಾಡಿ, ‘ಆ್ಯಪ್‌ಗಳನ್ನು ಸೇರಿಸಿ’ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆ್ಯಪ್‌ಗಳನ್ನು ಆಯ್ಕೆಮಾಡಿ.

    • ನಿರ್ದಿಷ್ಟ ಆ್ಯಪ್‌ಗಳನ್ನು ನಿಶ್ಯಬ್ದಗೊಳಿಸಿ: ‘ಇವುಗಳಿಂದ ಬರುವ ನೋಟಿಫಿಕೇಷನ್‌ಗಳನ್ನು ನಿಶ್ಯಬ್ದಗೊಳಿಸಿ’ ಎಂಬುದನ್ನು ಟ್ಯಾಪ್ ಮಾಡಿ, ‘ಆ್ಯಪ್‌ಗಳನ್ನು ಸೇರಿಸಿ’ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆ್ಯಪ್‌ಗಳನ್ನು ಆಯ್ಕೆಮಾಡಿ.

    ಗಮನಿಸಿ: ನಿಮ್ಮ ಹೋಮ್ ಸ್ಕ್ರೀನ್‌ಗೆ ನೀವು ಸೇರಿಸಿರುವ ನಿರ್ದಿಷ್ಟ ವೆಬ್ ಆ್ಯಪ್‌ಗಳಿಂದ ಬರುವ ನೋಟಿಫಿಕೇಷನ್‌ಗಳನ್ನು ನೀವು ಅನುಮತಿಸಬಹುದು ಅಥವಾ ನಿಶ್ಯಬ್ದಗೊಳಿಸಬಹುದು. (ನಿಮ್ಮ ಹೋಮ್ ಸ್ಕ್ರೀನ್‌ಗೆ ವೆಬ್‌ಸೈಟ್ ಐಕಾನ್ ಅನ್ನು ಸೇರಿಸಿಎಂಬುದನ್ನು ನೋಡಿ.)

ನೀವು ಸಮಯ ಸೂಕ್ಷ್ಮ ನೋಟಿಫಿಕೇಷನ್‌ಗಳನ್ನು ಸಹ ಆನ್ ಮಾಡಬಹುದಾಗಿದ್ದು ಅದು ಎಲ್ಲಾ ಆ್ಯಪ್‌ಗಳಿಗೆ ಕೂಡಲೇ ಸಮಯ ಸೂಕ್ಷ್ಮ ನೋಟಿಫಿಕೇಷನ್‌ಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ.

ನಿಮ್ಮ ಫೋಕಸ್ ಸ್ಟೇಟಸ್ ಅನ್ನು ಹಂಚಿಕೊಳ್ಳಿ

ನೀವು ಫೋಕಸ್ ಅನ್ನು ಬಳಸುವಾಗ, ನೀವು ಫೋಕಸ್ ಅನ್ನು ಸೆಟಪ್ ಮಾಡಿದಾಗ ನೀವು ನಿರ್ದಿಷ್ಟಪಡಿಸಿದ ಸೆಟ್ಟಿಂಗ್ಸ್‌ನಲ್ಲಿ ಕಾಣಿಸಿಕೊಳ್ಳಲು ಅದು ಜನರು ಮತ್ತು ಆ್ಯಪ್‌ಗಳಿಂದ ನೀವು ಸ್ವೀಕರಿಸುವ ನೋಟಿಫಿಕೇಷನ್‌ಗಳನ್ನು ಮಿತಿಗೊಳಿಸುತ್ತದೆ.

ನೀವು ಫೋಕಸ್ ಅನ್ನು ಬಳಸುವಾಗ ಮತ್ತು ಫೋಕಸ್ ಸ್ಟೇಟಸ್ ಆನ್ ಆಗಿರುವಾಗ ಮತ್ತು ಇತರರು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ನೀವು ನೋಟಿಫಿಕೇಷನ್‌ಗಳನ್ನು ನಿಶ್ಯಬ್ದಗೊಳಿಸಿದ್ದೀರಿ ಎಂಬುದನ್ನು ಅವರು ನೋಡಬಹುದು, ಆದರೆ ನೀವು ಬಳಸುತ್ತಿರುವ ಫೋಕಸ್‌ನ ಹೆಸರನ್ನು ಅವರು ನೋಡಲು ಸಾಧ್ಯವಿಲ್ಲ.

  1. ಸೆಟ್ಟಿಂಗ್ಸ್  > ಫೋಕಸ್ > ಫೋಕಸ್ ಸ್ಟೇಟಸ್ ಎಂಬಲ್ಲಿಗೆ ಹೋಗಿ.

  2. ಫೋಕಸ್ ಸ್ಟೇಟಸ್ ಅನ್ನು ಹಂಚಿಕೊಳ್ಳಿ ಎಂಬುದನ್ನು ಆನ್ ಮಾಡಿ, ನಂತರ ನಿಮ್ಮ ಫೋಕಸ್ ಸ್ಟೇಟಸ್ ಅನ್ನು ಹಂಚಿಕೊಳ್ಳಲು ಬಯಸುವ ಫೋಕಸ್ ಆಯ್ಕೆಗಳನ್ನು ಆರಿಸಿ.

ನೀವು ಹಂಚಿಕೊಳ್ಳುವ ಫೋಕಸ್ ಸ್ಟೇಟಸ್ ಅನ್ನು ನಿಯಂತ್ರಿಸುವುದು

ನೀವು ಸೆಟಪ್ ಮಾಡುವ ಪ್ರತಿ ಫೋಕಸ್ ಆಯ್ಕೆಗಾಗಿ (ಅಡಚಣೆ ಮಾಡಬೇಡಿ, ವೈಯಕ್ತಿಕ, ಕೆಲಸ ಹಾಗೂ ಮುಂತಾದವುಗಳಿಗೆ), ನೀವು ಆ ಫೋಕಸ್ ಅನ್ನು ಬಳಸುತ್ತಿರುವಾಗ ನಿಮ್ಮ ಫೋಕಸ್ ಸ್ಟೇಟಸ್ ಅನ್ನು ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. ನೀವು ಬಳಸುತ್ತಿರುವ ಫೋಕಸ್‌ಗಾಗಿ ನೀವು ಫೋಕಸ್ ಸ್ಟೇಟಸ್ ಅನ್ನು ಆನ್ ಮಾಡಿದಾಗ, ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುವ ಜನರಿಗೆ (ಉದಾಹರಣೆಗೆ, ಸಂದೇಶ ಆ್ಯಪ್ ಅನ್ನು ಬಳಸಿ) ನೀವು “ನೋಟಿಫಿಕೇಷನ್‌ಗಳನ್ನು ನಿಶ್ಯಬ್ದಗೊಳಿಸಿದ್ದೀರಿ” ಎಂಬುದು ಕಾಣಿಸುತ್ತದೆ.

ನಿಮ್ಮ ಫೋಕಸ್ ಸ್ಟೇಟಸ್‌ನ ಕುರಿತಾದ ಸಂದೇಶಗಳು ಆ್ಯಪ್‌ಗಳಲ್ಲಿ ಕಾಣಿಸಿಕೊಳ್ಳದಂತೆ ನೀವು ತಡೆಯಬಹುದು.

  1. ಸೆಟ್ಟಿಂಗ್ಸ್ ಆ್ಯಪ್  > ಫೋಕಸ್ > ಫೋಕಸ್ ಸ್ಟೇಟಸ್ ಎಂಬಲ್ಲಿಗೆ ಹೋಗಿ.

  2. ಫೋಕಸ್ ಸ್ಟೇಟಸ್ ಹಂಚಿಕೊಳ್ಳಿ ಎಂಬುದನ್ನು ಆಫ್ ಮಾಡಿ.

    ಪರ್ಯಾಯವಾಗಿ, ಯಾವುದರಿಂದ ನಿಮ್ಮ ಫೋಕಸ್ ಸ್ಟೇಟಸ್ ಅನ್ನು ನೀವು ಹಂಚಿಕೊಳ್ಳಲು ಇಷ್ಟಪಡುವುದಿಲ್ಲವೋ ಆ ಫೋಕಸ್ ಆಯ್ಕೆಗಳನ್ನು ನೀವು ಆಫ್ ಮಾಡಬಹುದು (ಇಲ್ಲಿಂದ ಹಂಚಿಕೊಳ್ಳಿ ಎಂಬುದರ ಕೆಳಗೆ).

ನೋಟಿಫಿಕೇಷನ್‌ಗಳನ್ನು ನಿಶ್ಯಬ್ದಗೊಳಿಸಿದಾಗ ತುರ್ತು ಸಂಪರ್ಕಗಳಿಂದ ಬರುವ ಕರೆಗಳನ್ನು ಅನುಮತಿಸಿ

ನಿಮ್ಮ iPad ಅಥವಾ ನೋಟಿಫಿಕೇಷನ್‌ಗಳನ್ನು ನಿಶ್ಯಬ್ದಗೊಳಿಸಿದಾಗಲೂ ತುರ್ತು ಸಂಪರ್ಕಗಳಿಂದ ಸೌಂಡ್‌ಗಳು ಮತ್ತು ವೈಬ್ರೇಶನ್‌ಗಳು ಬರುವಂತೆ ನೀವು ಅನುಮತಿಸಬಹುದು.

  1. ಸಂಪರ್ಕ ಆ್ಯಪ್ ಅನ್ನು ತೆರೆಯಿರಿ .

  2. ಸಂಪರ್ಕವನ್ನು ಆಯ್ಕೆಮಾಡಿ, ನಂತರ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

  3. ರಿಂಗ್‌ಟೋನ್ ಅಥವಾ ಪಠ್ಯ ಟೋನ್ ಅನ್ನು ಟ್ಯಾಪ್ ಮಾಡಿ, ನಂತರ ತುರ್ತು ಬೈಪಾಸ್ ಅನ್ನು ಆನ್ ಮಾಡಿ.

*Apple Intelligence ಈ ಕೆಳಗಿನ ಭಾಷೆಗಳಿಗೆ ಬೆಂಬಲದೊಂದಿಗೆ ಬೀಟಾದಲ್ಲಿ ಲಭ್ಯವಿದೆ: ಇಂಗ್ಲಿಷ್, ಡ್ಯಾನಿಶ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ನಾರ್ವೇಜಿಯನ್, ಪೋರ್ಚುಗೀಸ್, ಸ್ಪ್ಯಾನಿಷ್, ಸ್ವೀಡಿಷ್, ಟರ್ಕಿಶ್, ಚೈನೀಸ್ (ಸರಳೀಕೃತ), ಚೈನೀಸ್ (ಸಾಂಪ್ರದಾಯಿಕ), ಜಾಪನೀಸ್, ಕೊರಿಯನ್ ಮತ್ತು ವಿಯೆಟ್ನಾಮೀಸ್. ಕೆಲವು ಫೀಚರ್‌ಗಳು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಭಾಷೆ ಮತ್ತು ಫೀಚರ್ ಲಭ್ಯತೆ ಮತ್ತು ಸಿಸ್ಟಂ ಅವಶ್ಯಕತೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.