ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ ಮನೆಯಲ್ಲಿರುವ ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ಇತರರನ್ನು ಆಹ್ವಾನಿಸುವುದು

ಮನೆ ಆ್ಯಪ್‌ನಲ್ಲಿ, ನಿಮ್ಮ ಎಲ್ಲಾ ಸ್ಮಾರ್ಟ್ ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ನೀವು ಇತರರನ್ನು ಆಹ್ವಾನಿಸಬಹುದು ಅಥವಾ ನಿರ್ದಿಷ್ಟ ಸಮಯಗಳಲ್ಲಿ ನಿಮ್ಮ ಕೆಲವು ಅಥವಾ ಎಲ್ಲಾ ಬಾಗಿಲುಗಳು, ಲಾಕ್‌ಗಳು ಮತ್ತು ಭದ್ರತಾ ಸಿಸ್ಟಂನ ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ಅತಿಥಿಯೊಬ್ಬರನ್ನು ಆಹ್ವಾನಿಸಬಹುದು.

ಗಮನಿಸಿ: ರಿಮೋಟ್ ಆ್ಯಕ್ಸೆಸ್ ಮತ್ತು ಅತಿಥಿ ಆ್ಯಕ್ಸೆಸ್‌ಗೆ ಮನೆ ಹಬ್‌ನ ಅಗತ್ಯವಿದೆ, ಉದಾಹರಣೆಗೆ HomePod ಸ್ಪೀಕರ್ ಅಥವಾ Apple TV 4K.

ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ನಿವಾಸಿಗಳನ್ನು ಆಹ್ವಾನಿಸಿ

ಮನೆಯ ನಿವಾಸಿಗಳು ಯಾವುದೇ ಸಮಯದಲ್ಲಿ ಮನೆಯಲ್ಲಿರುವ ಎಲ್ಲಾ ಆ್ಯಕ್ಸೆಸರಿಗಳಿಗೆ ಸ್ಥಳೀಯ ಮತ್ತು ಐಚ್ಛಿಕ ರಿಮೋಟ್ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ.

  1. ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಮನೆ ಟ್ಯಾಬ್‌ನಲ್ಲಿ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಜನರನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿವಾಸಿಯನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಂಪರ್ಕಗಳ ಪಟ್ಟಿಯಿಂದ Apple ಖಾತೆಯನ್ನು ಹೊಂದಿರುವ ಜನರನ್ನು ಆಯ್ಕೆ ಮಾಡಲು ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ಅವರ Apple ಖಾತೆಯ ಈಮೇಲ್ ವಿಳಾಸಗಳನ್ನು ಇವರಿಗೆ ಎಂಬ ಫೀಲ್ಡ್‌ನಲ್ಲಿ ನಮೂದಿಸಿ.

  4. ಆಹ್ವಾನವನ್ನು ಟ್ಯಾಪ್ ಮಾಡಿ.

  5. ಆಹ್ವಾನಿತರಿಗೆ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಲು ಹೇಳಿ:

    • ನೋಟಿಫಿಕೇಷನ್‌ನಲ್ಲಿ: (iPhone ಅಥವಾ iPad) ಸ್ವೀಕರಿಸಿ ಟ್ಯಾಪ್ ಮಾಡಿ.

    • ಮನೆ ಆ್ಯಪ್‌ನಲ್ಲಿ: (iPhone ಅಥವಾ iPad) ‌ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಮನೆಯ ಸೆಟ್ಟಿಂಗ್ಸ್ ಅನ್ನು ಟ್ಯಾಪ್ ಮಾಡಿ, ನಂತರ ಆಹ್ವಾನಿತರ ಹೆಸರನ್ನು ಟ್ಯಾಪ್ ಮಾಡಿ.

    • Apple TV 4Kನಲ್ಲಿ: Apple TVಯಲ್ಲಿ ನನ್ನನ್ನು ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಒಂದು ಅಥವಾ ಅದಕ್ಕಿಂತ ಹೆಚ್ಚಿನ Apple TVಗಳನ್ನು ಆನ್ ಮಾಡಿ.

ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ಅತಿಥಿಗಳನ್ನು ಆಹ್ವಾನಿಸಿ

ಮನೆಯ ಅತಿಥಿಗಳು ನಿಗದಿತ ವೇಳಾಪಟ್ಟಿಯಲ್ಲಿ ನಿರ್ದಿಷ್ಟ ಬಾಗಿಲುಗಳು, ಲಾಕ್‌ಗಳು ಮತ್ತು ಭದ್ರತಾ ಸಿಸ್ಟಂ ಆ್ಯಕ್ಸೆಸರಿಗಳಿಗೆ ಸ್ಥಳೀಯ-ಮಾತ್ರ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ.

ಗಮನಿಸಿ: ಮನೆಯ ಅತಿಥಿಗಳ ಆ್ಯಕ್ಸೆಸ್‌ಗೆ iOS 18, iPadOS 18 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

  1. ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಮನೆ ಟ್ಯಾಬ್‌ನಲ್ಲಿ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಜನರನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಅತಿಥಿಯನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಂಪರ್ಕಗಳ ಪಟ್ಟಿಯಿಂದ Apple ಖಾತೆಯನ್ನು ಹೊಂದಿರುವ ಜನರನ್ನು ಆಯ್ಕೆ ಮಾಡಲು ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ಅವರ Apple ಖಾತೆಯ ಈಮೇಲ್ ವಿಳಾಸಗಳನ್ನು ಇವರಿಗೆ ಎಂಬ ಫೀಲ್ಡ್‌ನಲ್ಲಿ ನಮೂದಿಸಿ.

  4. ಅತಿಥಿ ವೇಳಾಪಟ್ಟಿಗಾಗಿ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ:

    • ಯಾವುದೇ ಸಮಯದಲ್ಲಿ: ಅತಿಥಿಯು ಆಯ್ಕೆಮಾಡಲಾದ ಆ್ಯಕ್ಸೆಸರಿಗಳನ್ನು ಯಾವಾಗ ಬೇಕಾದರೂ ಆ್ಯಕ್ಸೆಸ್ ಮಾಡಬಹುದು.

    • ನಿರ್ದಿಷ್ಟ ದಿನಾಂಕಗಳು: ಅತಿಥಿಯು ನಿರ್ದಿಷ್ಟಪಡಿಸಲಾದ ದಿನಾಂಕಗಳಂದು ಮಾತ್ರ ಆಯ್ಕೆ ಮಾಡಲಾದ ಆ್ಯಕ್ಸೆಸರಿಗಳನ್ನು ಆ್ಯಕ್ಸೆಸ್ ಮಾಡಬಹುದು.

    • ನಿರ್ದಿಷ್ಟ ದಿನಗಳು ಮತ್ತು ಸಮಯಗಳು: ಅತಿಥಿಗಳು ನಿರ್ದಿಷ್ಟಪಡಿಸಲಾದ ದಿನಗಳಲ್ಲಿ ಮತ್ತು ನಿರ್ದಿಷ್ಟಪಡಿಸಲಾದ ಸಮಯಗಳಲ್ಲಿ ಮಾತ್ರ ಆಯ್ಕೆಮಾಡಲಾದ ಆ್ಯಕ್ಸೆಸರಿಗಳನ್ನು ಆ್ಯಕ್ಸೆಸ್ ಮಾಡಬಹುದು.

  5. ಅತಿಥಿಗಳು ಯಾವ ಬಾಗಿಲುಗಳು, ಲಾಕ್‌ಗಳು ಮತ್ತು ಭದ್ರತಾ ಸಿಸ್ಟಂ ಆ್ಯಕ್ಸೆಸರಿಗಳನ್ನು ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ಆಯ್ಕೆಮಾಡಿ.

  6. ಆಹ್ವಾನವನ್ನು ಟ್ಯಾಪ್ ಮಾಡಿ.

  7. ಆಹ್ವಾನಿತರಿಗೆ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಲು ಹೇಳಿ:

    • ನೋಟಿಫಿಕೇಷನ್‌ನಲ್ಲಿ: (iPhone ಅಥವಾ iPad) ಸ್ವೀಕರಿಸಿ ಟ್ಯಾಪ್ ಮಾಡಿ.

    • ಮನೆ ಆ್ಯಪ್‌ನಲ್ಲಿ: (iPhone ಅಥವಾ iPad) ‌ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಮನೆಯ ಸೆಟ್ಟಿಂಗ್ಸ್ ಅನ್ನು ಟ್ಯಾಪ್ ಮಾಡಿ, ನಂತರ ಆಹ್ವಾನಿತರ ಹೆಸರನ್ನು ಟ್ಯಾಪ್ ಮಾಡಿ.

ನಿಮ್ಮ AirPlay-ಸಕ್ರಿಯಗೊಳಿಸಿರುವ ಸ್ಪೀಕರ್‌ಗಳು ಮತ್ತು TVಗಳನ್ನು ಆ್ಯಕ್ಸೆಸ್ ಮಾಡಲು ಇತರರಿಗೆ ಅನುಮತಿಸಿ

  1. ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮನೆಯ ಸೆಟ್ಟಿಂಗ್ಸ್ ಟ್ಯಾಪ್ ಮಾಡಿ.

  3. ಸ್ಪೀಕರ್ ಮತ್ತು TV ಎಂಬುದನ್ನು ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ.

ನೀವು ಎಲ್ಲರಿಗೂ, ಒಂದೇ ನೆಟ್‌ವರ್ಕ್‌ನಲ್ಲಿರುವ ಯಾರಿಗಾದರೂ ಅಥವಾ ನೀವು ಆಹ್ವಾನಿಸಿರುವ ಜನರಿಗೆ ಮಾತ್ರ ಮನೆಯನ್ನು ಹಂಚಿಕೊಳ್ಳಲು ಅನುಮತಿಸಬಹುದು. ಸ್ಪೀಕರ್ ಆ್ಯಕ್ಸೆಸ್ ಅನ್ನು ಅನುಮತಿಸುವ ಪಾಸ್‌ವರ್ಡ್‌ ಸಹ ನಿಮಗೆ ಅಗತ್ಯವಿರಬಹುದು. HomePod ಸ್ಪೀಕರ್ ಮತ್ತು Apple TV 4K ಆ್ಯಕ್ಸೆಸ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು, HomePod ಬಳಕೆದಾರರ ಮಾರ್ಗದರ್ಶಿ ಮತ್ತು Apple TV 4K ಬಳಕೆದಾರರ ಮಾರ್ಗದರ್ಶಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.