iPadನಲ್ಲಿನ Apple Games ಆ್ಯಪ್‌ನಲ್ಲಿ ನಿಮ್ಮ ಗೇಮ್ ಲೈಬ್ರರಿಯನ್ನು ನೋಡಿ ಮತ್ತು ನಿರ್ವಹಿಸಿ

Apple Games ಆ್ಯಪ್‌ನಲ್ಲಿ, ನೀವು Apple Arcade ಟೈಟಲ್‌ಗಳನ್ನು ಬ್ರೌಸ್ ಮಾಡಬಹುದು, ನೀವು ಡೌನ್‌ಲೋಡ್ ಮಾಡಿದ ಗೇಮ್‌ಗಳನ್ನು ನೋಡಬಹುದು, ಗೇಮ್‌ನಲ್ಲಿನ ಇವೆಂಟ್‌ಗಳನ್ನು ನೋಡಬಹುದು ಮತ್ತು ನಿಮ್ಮ ಲೈಬ್ರರಿಯಲ್ಲಿ ನಿಮ್ಮ ಸಾಧನೆಗಳನ್ನು ಟ್ರ್ಯಾಕ್ ಮಾಡಬಹುದು. ನೀವು ಹುಡುಕುತ್ತಿರುವುದನ್ನು ತ್ವರಿತವಾಗಿ ಕಂಡುಕೊಳ್ಳಲು ನಿಮ್ಮ ಗೇಮ್‌ಗಳನ್ನು ವಿಂಗಡಿಸಬಹುದು ಮತ್ತು ಫಿಲ್ಟರ್ ಮಾಡಬಹುದು.

ಗಮನಿಸಿ: Apple Arcade ಮತ್ತು Apple One ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ.

ನಿಮ್ಮ ಗೇಮ್‌ಗಳನ್ನು ವೀಕ್ಷಿಸಿ ಮತ್ತು ವ್ಯವಸ್ಥಿತಗೊಳಿಸಿ

  1. ನಿಮ್ಮ iPadನಲ್ಲಿ Apple Games ಆ್ಯಪ್‌ಗೆ ಹೋಗಿ.

  2. ಲೈಬ್ರರಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನ ಯಾವುದನ್ನಾದರೂ ಮಾಡಿ:

    • ನಿಮ್ಮ ಗೇಮ್‌ಗಳನ್ನು ಬ್ರೌಸ್ ಮಾಡಿ: ನಿಮ್ಮ ಗೇಮ್‌ಗಳು ಎಂಬುದರ ಅಡಿಯಲ್ಲಿರುವ ಗೇಮ್‌ಗಳ ಪಟ್ಟಿಯನ್ನು ಸ್ಕ್ರೋಲ್ ಮಾಡಿ.

    • ನಿಮ್ಮ ಗೇಮ್‌ಗಳನ್ನು ವಿಂಗಡಿಸಿ: ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ವಿಂಗಡಣೆ ಆಯ್ಕೆಯೊಂದನ್ನು ಆರಿಸಿ.(ಇತ್ತೀಚಿನ ಗೇಮ್‌ಗಳು, ಹೆಸರು ಅಥವಾ ಗಾತ್ರ).

    • ನಿಮ್ಮ ಗೇಮ್‌ಗಳನ್ನು ಫಿಲ್ಟರ್ ಮಾಡಿ: ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿರ್ದಿಷ್ಟ ಗೇಮ್‌ಗಳನ್ನು ತೋರಿಸಲು ಫಿಲ್ಟರ್ ಆಯ್ಕೆಯೊಂದನ್ನು ಆರಿಸಿ (ಈ iPadನಲ್ಲಿ, Apple Arcade, ಆಡುತ್ತಿರುವ ಸ್ನೇಹಿತರು, ಕಂಟ್ರೋಲರ್ ಬೆಂಬಲ, ಚಾಲೆಂಜ್ ಬೆಂಬಲ ಅಥವಾ ವರ್ಗಗಳು). ಫಿಲ್ಟರ್ ಅನ್ನು ತೆರವುಗೊಳಿಸಲು, ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಫಿಲ್ಟರ್ ಅನ್ನು ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.

      ಸಲಹೆ: ನಿಮ್ಮ iPadನಲ್ಲಿ ಪ್ರಸ್ತುತವಾಗಿ ಇನ್‌ಸ್ಟಾಲ್ ಆಗಿರುವ ಗೇಮ್‌ಗಳನ್ನು ಮಾತ್ರ ನೋಡಲು, “ಈ iPadನಲ್ಲಿ” ಎಂಬ ಫಿಲ್ಟರ್ ಅನ್ನು ಆಯ್ಕೆಮಾಡಿ.

ಗೇಮ್‌ನಲ್ಲಿನ ಇವೆಂಟ್‌ಗಳು ಅಥವಾ ಇತ್ತೀಚಿನ ಅಪ್‌ಡೇಟ್‌ಗಳನ್ನು ನೋಡುವುದು

  1. ನಿಮ್ಮ iPadನಲ್ಲಿ Apple Games ಆ್ಯಪ್‌ಗೆ ಹೋಗಿ.

  2. ಲೈಬ್ರರಿಯನ್ನು ಟ್ಯಾಪ್ ಮಾಡಿ, ನಂತರ ಇವೆಂಟ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ಗೇಮ್‌ನಲ್ಲಿನ ಇವೆಂಟ್‌ಗಳು ಅಥವಾ ಅಪ್‌ಡೇಟ್‌ಗಳನ್ನು ನೋಡಲು ಬಯಸುವ ಗೇಮ್ ಅನ್ನು ಟ್ಯಾಪ್ ಮಾಡಿ.

ನೀವು ಗೇಮ್ ಒಂದನ್ನು ಹುಡುಕಿದಾಗ ಅಥವಾ ಅದರ ಗೇಮ್ ಪುಟವನ್ನು ಹೋಮ್ ಅಥವಾ ಹುಡುಕಾಟ ಟ್ಯಾಬ್‌ನಲ್ಲಿ ತೆರೆದಾಗ ಸಹ ನೀವು ಇವೆಂಟ್‌ಗಳು ಮತ್ತು ಅಪ್‌ಡೇಟ್‌ಗಳನ್ನು ನೋಡಬಹುದು.

ಗೇಮ್‌ ಒಂದಕ್ಕೆ ಸಂಬಂಧಿಸಿದಂತೆ ನಿಮ್ಮ ಸಾಧನೆಗಳನ್ನು ನೋಡುವುದು

ಬೆಂಬಲಿತ ಗೇಮ್‌ಗಳಿಗಾಗಿ ನಿಮ್ಮ Game Center ಸಾಧನೆಗಳನ್ನು ಟ್ರ್ಯಾಕ್ ಮಾಡಿ. ನಿಮ್ಮ ಪ್ರಗತಿಯನ್ನು ನೀವು ವೀಕ್ಷಿಸಬಹುದು ಮತ್ತು ನೀವು ಯಾವ ಗುರಿಗಳನ್ನು ಪೂರೈಸಿದ್ದೀರಿ ಎಂಬುದನ್ನು ನೋಡಬಹುದು.

  1. ನಿಮ್ಮ iPadನಲ್ಲಿ Apple Games ಆ್ಯಪ್‌ಗೆ ಹೋಗಿ.

  2. ಲೈಬ್ರರಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಾಧನೆಗಳು ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಾಧನೆಗಳನ್ನು ವ್ಯವಸ್ಥಿತಗೊಳಿಸಲು ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಯೊಂದನ್ನು ಆರಿಸಿ.

  4. ನೀವು ಸಾಧನೆಗಳನ್ನು ಪರಿಶೀಲಿಸಲು ಬಯಸುವ ಗೇಮ್ ಅನ್ನು ಟ್ಯಾಪ್ ಮಾಡಿ.

Apple Arcade ಗೇಮ್‌ಗಳನ್ನು ಬ್ರೌಸ್ ಮಾಡುವುದು

ನೀವು Apple Arcade ಅಥವಾ Apple Oneಗೆ ಸಬ್‌ಸ್ಕ್ರೈಬ್ ಮಾಡಿದ್ದರೆ, ನಿಮ್ಮ ಲೈಬ್ರರಿಯಲ್ಲಿರುವ Apple Arcade ಗೇಮ್‌ಗಳನ್ನು ಸಹ ನೀವು ಬ್ರೌಸ್ ಮಾಡಬಹುದು.

  1. ನಿಮ್ಮ iPadನಲ್ಲಿ Apple Games ಆ್ಯಪ್‌ಗೆ ಹೋಗಿ.

  2. ಲೈಬ್ರರಿಯನ್ನು ಟ್ಯಾಪ್ ಮಾಡಿ, ನಂತರ Apple Arcade ಅನ್ನು ಟ್ಯಾಪ್ ಮಾಡಿ.

  3. ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಪ್ರಿವ್ಯೂಗಳನ್ನು ತೋರಿಸಿ ಎಂಬುದನ್ನು ಆನ್ ಅಥವಾ ಆಫ್ ಮಾಡಿ.

    • ಬಿಡುಗಡೆಯ ದಿನಾಂಕ, ಕೊನೆಯದಾಗಿ ಅಪ್‌ಡೇಟ್ ಮಾಡಿರುವುದು, ಹೆಸರು ಅಥವಾ ವರ್ಗದ ಪ್ರಕಾರ ಗೇಮ್‌ಗಳನ್ನು ವಿಂಗಡಿಸಿ.

    • ಕಂಟ್ರೋಲರ್ ಬೆಂಬಲ, ಮಲ್ಟಿಪ್ಲೇಯರ್ ಅಥವಾ ವಯಸ್ಸಿನ ರೇಟಿಂಗ್‌ಗಳ ಪ್ರಕಾರ ಗೇಮ್‌ಗಳನ್ನು ಫಿಲ್ಟರ್ ಮಾಡಿ.

ಗೇಮ್ ಒಂದನ್ನು ಡಿಲೀಟ್ ಮಾಡುವುದು

ನೀವು Apple Games ಆ್ಯಪ್‌ನಲ್ಲೇ ನೇರವಾಗಿ ಗೇಮ್‌ಗಳನ್ನು ಡಿಲೀಟ್ ಮಾಡುವ ಮೂಲಕ ನಿಮ್ಮ iPadನಲ್ಲಿ ಸಂಗ್ರಹಣಾ ಸ್ಥಳಾವಕಾಶವನ್ನು ತೆರವುಗೊಳಿಸಬಹುದು.

  1. ನಿಮ್ಮ iPadನಲ್ಲಿ Apple Games ಆ್ಯಪ್‌ಗೆ ಹೋಗಿ.

  2. ಲೈಬ್ರರಿ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ಡಿಲೀಟ್ ಮಾಡಲು ಬಯಸುವ ಗೇಮ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಗೇಮ್ ಅನ್ನು ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.