ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಕೀಬೋರ್ಡ್‌ಗಳನ್ನು ಸೇರಿಸಿ ಅಥವಾ ಬದಲಾಯಿಸಿ

ನಿಮ್ಮ iPadನಲ್ಲಿ ವಿವಿಧ ಭಾಷೆಗಳಲ್ಲಿ ಡಿಕ್ಟೇಷನ್ ಬಳಸಲು ಅಥವಾ ಬರೆಯಲು ನೀವು ಕೀಬೋರ್ಡ್‌ಗಳನ್ನು ಸೇರಿಸಬಹುದು. ನಿಮ್ಮ ಆನ್‌ಸ್ಕ್ರೀನ್ ಅಥವಾ ಬಾಹ್ಯ ಕೀಬೋರ್ಡ್‌ನ ಲೇಔಟ್ ಅನ್ನು ಸಹ ನೀವು ಬದಲಾಯಿಸಬಹುದು.

ನೀವು ಇತರ ಭಾಷೆಗಳಿಗೆ ಸಂಬಂಧಿಸಿದ ಕೀಬೋರ್ಡ್‌ಗಳನ್ನು ಸೇರಿಸಿದರೆ, ಕೀಬೋರ್ಡ್‌ಗಳ ನಡುವೆ ಸ್ವಿಚ್ ಮಾಡದೆಯೇ ನೀವು ಎರಡು ಭಾಷೆಗಳಲ್ಲಿ ಟೈಪ್ ಮಾಡಬಹುದು. ನೀವು ಅತ್ಯಂತ ಹೆಚ್ಚಾಗಿ ಬಳಸುವ ಎರಡು ಭಾಷೆಗಳ ನಡುವೆ ನಿಮ್ಮ ಕೀಬೋರ್ಡ್ ಸ್ವಯಂಚಾಲಿತವಾಗಿ ಸ್ವಿಚ್ ಆಗುತ್ತದೆ. (ಎಲ್ಲಾ ಭಾಷೆಗಳಿಗೆ ಲಭ್ಯವಿಲ್ಲ.)

ಮತ್ತೊಂದು ಭಾಷೆಗಾಗಿ ಕೀಬೋರ್ಡ್ ಅನ್ನು ಸೇರಿಸಿ ಅಥವಾ ತೆಗೆದುಹಾಕಿ

  1. ಸೆಟ್ಟಿಂಗ್ ಆ್ಯಪ್  > ಸಾಮಾನ್ಯ > ಕೀಬೋರ್ಡ್ ಎಂಬಲ್ಲಿಗೆ ಹೋಗಿ.

  2. ಕೀಬೋರ್ಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನ ಯಾವುದನ್ನಾದರೂ ಮಾಡಿ:

    • ಕೀಬೋರ್ಡ್ ಅನ್ನು ಸೇರಿಸಿ: ಹೊಸ ಕೀಬೋರ್ಡ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಪಟ್ಟಿಯಿಂದ ಕೀಬೋರ್ಡ್ ಅನ್ನು ಆಯ್ಕೆಮಾಡಿ. ಹೆಚ್ಚಿನ ಕೀಬೋರ್ಡ್‌ಗಳನ್ನು ಸೇರಿಸಲು ಪುನರಾವರ್ತಿಸಿ.

    • ಕೀಬೋರ್ಡ್ ಅನ್ನು ತೆಗೆದುಹಾಕಿ: ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನೀವು ತೆಗೆದುಹಾಕಲು ಬಯಸುವ ಕೀಬೋರ್ಡ್ ಪಕ್ಕದಲ್ಲಿನ ಡಿಲೀಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

    • ನಿಮ್ಮ ಕೀಬೋರ್ಡ್ ಪಟ್ಟಿಯನ್ನು ಮರುಕ್ರಮಗೊಳಿಸಿ: ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಕೀಬೋರ್ಡ್ ಪಕ್ಕದಲ್ಲಿರುವ ಮರುಕ್ರಮಗೊಳಿಸಿ ಬಟನ್ ಅನ್ನು ಪಟ್ಟಿಯಲ್ಲಿನ ಹೊಸ ಸ್ಥಳಕ್ಕೆ ಡ್ರ್ಯಾಗ್ ಮಾಡಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ನೀವು ಬೇರೆ ಭಾಷೆಯ ಕೀಬೋರ್ಡ್ ಅನ್ನು ಸೇರಿಸಿದರೆ, ಅದಕ್ಕೆ ಅನುಗುಣವಾದ ಭಾಷೆಯನ್ನು ಆದ್ಯತೆಯ ಭಾಷೆಯ ಕ್ರಮದ ಪಟ್ಟಿಗೆ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ನೀವು ಸೆಟ್ಟಿಂಗ್ಸ್ > ಸಾಮಾನ್ಯ > ಭಾಷೆ ಮತ್ತು ಪ್ರದೇಶ ಎಂಬಲ್ಲಿ ಈ ಪಟ್ಟಿಯನ್ನು ನೋಡಬಹುದು ಮತ್ತು ಅದಕ್ಕೆ ನೇರವಾಗಿ ಭಾಷೆಗಳನ್ನು ಸೇರಿಸಬಹುದು. ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಳು ಪಠ್ಯವನ್ನು ಹೇಗೆ ಪ್ರದರ್ಶಿಸುತ್ತವೆ ಎಂಬುದನ್ನು ಬದಲಾಯಿಸಲು ನೀವು ಪಟ್ಟಿಯನ್ನು ಮರುಕ್ರಮಗೊಳಿಸಬಹುದು.

ಮತ್ತೊಂದು ಕೀಬೋರ್ಡ್‌ಗೆ ಸ್ವಿಚ್ ಮಾಡಿ

  • ಆನ್‌ಸ್ಕ್ರೀನ್ ಕೀಬೋರ್ಡ್‌ನಲ್ಲಿ: ಎಮೋಜಿ ಬಟನ್ ಅಥವಾ ಕೀಬೋರ್ಡ್ ಅನ್ನು ಸ್ವಿಚ್ ಮಾಡಿ ಕೀ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನೀವು ಸ್ವಿಚ್ ಮಾಡಲು ಬಯಸುವ ಕೀಬೋರ್ಡ್‌ನ ಹೆಸರನ್ನು ಟ್ಯಾಪ್ ಮಾಡಿ.

    ಒಂದು ಕೀಬೋರ್ಡ್‌ನಿಂದ ಇನ್ನೊಂದಕ್ಕೆ ಸ್ವಿಚ್ ಮಾಡಲು ನೀವು ಎಮೋಜಿ ಬಟನ್ ಅಥವಾ ಕೀಬೋರ್ಡ್ ಅನ್ನು ಸ್ವಿಚ್ ಮಾಡಿ ಕೀ ಅನ್ನು ಟ್ಯಾಪ್ ಮಾಡಬಹುದು. ಸಕ್ರಿಯಗೊಳಿಸಿದ ಇತರ ಕೀಬೋರ್ಡ್‌ಗಳನ್ನು ಆ್ಯಕ್ಸೆಸ್ ಮಾಡಲು ಟ್ಯಾಪ್ ಮಾಡುವುದನ್ನು ಮುಂದುವರಿಸಿ.

  • ಬಾಹ್ಯ ಕೀಬೋರ್ಡ್‌ನಲ್ಲಿ: ಕಂಟ್ರೋಲ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಇಂಗ್ಲಿಷ್, ಎಮೋಜಿ ಮತ್ತು ನೀವು ಇನ್ನೊಂದು ಭಾಷೆಗಾಗಿ ಸೇರಿಸುವ ಇತರ ಕೀಬೋರ್ಡ್‌ಗಳ ನಡುವೆ ಸೈಕಲ್ ಮಾಡಲು ಸ್ಪೇಸ್ ಬಾರ್ ಅನ್ನು ಒತ್ತಿ.

    iPad ಮತ್ತು ಸ್ಮಾರ್ಟ್ ಕೀಬೋರ್ಡ್‌ಗಾಗಿ Magic Keyboardನೊಂದಿಗೆ, ನೀವು ಒಂದು ಕೀಬೋರ್ಡ್‌ನಿಂದ ಮತ್ತೊಂದು ಕೀಬೋರ್ಡ್‌ಗೆ ಸ್ವಿಚ್ ಮಾಡಲು ಕೀಬೋರ್ಡ್ ಅನ್ನು ಸ್ವಿಚ್ ಮಾಡಿ ಕೀ ಅನ್ನು ಒತ್ತಬಹುದು.

ಕೀಬೋರ್ಡ್‌ಗೆ ಪರ್ಯಾಯ ಲೇಔಟ್ ಅನ್ನು ನಿಯೋಜಿಸಿ

ನಿಮ್ಮ ಕೀಬೋರ್ಡ್‌ನಲ್ಲಿರುವ ಕೀಗಳಿಗೆ ಹೊಂದಾಣಿಕೆಯಾಗದ ಪರ್ಯಾಯ ಕೀಬೋರ್ಡ್ ಲೇಔಟ್ ಅನ್ನು ನೀವು ಬಳಸಬಹುದು.

  1. ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಕೀಬೋರ್ಡ್ > ಕೀಬೋರ್ಡ್‌ಗಳು ಎಂಬಲ್ಲಿಗೆ ಹೋಗಿ.

  2. ಸ್ಕ್ರೀನ್ ಮೇಲ್ಭಾಗದಲ್ಲಿ ಭಾಷೆಯೊಂದನ್ನು ಟ್ಯಾಪ್ ಮಾಡಿ, ನಂತರ ಪಟ್ಟಿಯಿಂದ ಪರ್ಯಾಯ ಲೇಔಟ್ ಅನ್ನು ಆಯ್ಕೆ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.