ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ Safariಯನ್ನು ಬಳಸುವ ವೆಬ್‌ಸೈಟ್‌ಗಳನ್ನು ಹುಡುಕಿ

ವೆಬ್‌ಸೈಟ್‌ಗಳು ಅಥವಾ ನಿರ್ದಿಷ್ಟ ಮಾಹಿತಿಯನ್ನು ಹುಡುಕಲು URL ಅಥವಾ ಹುಡುಕಾಟ ಪದವನ್ನು ನಮೂದಿಸಿ.

ವೆಬ್‌ಪುಟದ ಹುಡುಕಾಟ ಫೀಲ್ಡ್‌ನಲ್ಲಿ “atlas” ಎಂದು ಟೈಪ್ ಮಾಡಲಾಗುತ್ತದೆ ಮತ್ತು URLನ ಉಳಿದ ಭಾಗವನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುತ್ತದೆ. ಹುಡುಕಾಟದ ಫೀಲ್ಡ್‌ನ ಕೆಳಗೆ Google Search ಸಲಹೆಗಳಿವೆ.

ವೆಬ್ ಅನ್ನು ಹುಡುಕುವುದು

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ಹುಡುಕಾಟದ ಫೀಲ್ಡ್‌ನಲ್ಲಿ ಹುಡುಕಾಟ ಪದ, ಫ್ರೇಸ್ ಅಥವಾ URL ಅನ್ನು ನಮೂದಿಸಿ.

  3. ಹುಡುಕಾಟ ಸಲಹೆಯನ್ನು ಟ್ಯಾಪ್ ಮಾಡಿ ಅಥವಾ ಕೀಬೋರ್ಡ್‌ನಲ್ಲಿ ಪ್ರಾರಂಭಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಸೂಚಿಸಲಾದ ಹುಡುಕಾಟ ಪದಗಳನ್ನು ನೋಡಲು ನೀವು ಬಯಸದಿದ್ದರೆ, ಸೆಟ್ಟಿಂಗ್ಸ್  > ಆ್ಯಪ್‌ಗಳು > Safari ಎಂಬಲ್ಲಿಗೆ ಹೋಗಿ ನಂತರ ಸರ್ಚ್ ಎಂಜಿನ್ ಸಲಹೆಗಳನ್ನು ಆಫ್ ಮಾಡಿ (ಹುಡುಕಾಟದ ಕೆಳಗೆ).

ನೀವು ಹುಡುಕುತ್ತಿರುವಾಗ ನಿಮ್ಮ ಮೆಚ್ಚಿನ ವೆಬ್‌ಸೈಟ್‌ಗಳನ್ನು ನೋಡುವುದು

ನೀವು ವಿಳಾಸವನ್ನು ನಮೂದಿಸಿದಾಗ, ಹುಡುಕಿದಾಗ ಅಥವಾ ಹೊಸ ಟ್ಯಾಬ್ ಅನ್ನು ರಚಿಸಿದಾಗ ನಿಮ್ಮ ಮೆಚ್ಚಿನವುಗಳು ಸಲಹೆಗಳಾಗಿ ಕಾಣಿಸಿಕೊಳ್ಳುವಂತೆ ಮಾಡಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Safari ಅನ್ನು ಟ್ಯಾಪ್ ಮಾಡಿ.

  3. ಪ್ರಾರಂಭ ಪುಟದ ಮೆಚ್ಚಿನವುಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಮೆಚ್ಚಿನವುಗಳು ಎಂಬುದನ್ನು ಟ್ಯಾಪ್ ಮಾಡಿ.

    ನಿಮ್ಮ ಮೆಚ್ಚಿನವುಗಳಲ್ಲಿ ನೀವು ಅನೇಕ ಫೋಲ್ಡರ್‌ಗಳನ್ನು ಹೊಂದಿದ್ದರೆ, ನೀವು Safari ಹುಡುಕಾಟ ಸಲಹೆಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸುವ ಫೋಲ್ಡರ್ ಅನ್ನು ಆಯ್ಕೆಮಾಡಬಹುದು.

ವೆಬ್‌ಪೇಜ್ ಅನ್ನು ಹುಡುಕುವುದು

ವೆಬ್‌ಪುಟದಲ್ಲಿ ನೀವು ನಿರ್ದಿಷ್ಟ ಪದ ಅಥವಾ ಫ್ರೇಸ್ ಅನ್ನು ಹುಡುಕಬಹುದು.

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ವೆಬ್ ಪುಟಕ್ಕೆ ಹೋಗಿ.

  3. ಪುಟದ ಮೆನು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಡಾಕ್ಯುಮಂಟ್ ಹುಡುಕಿ ಬಟನ್ ಅನ್ನು ಟ್ಯಾಪ್ ಮಾಡಿ.

  4. ಹುಡುಕಾಟದ ಫೀಲ್ಡ್‌ನಲ್ಲಿ ಪದ ಅಥವಾ ಫ್ರೇಸ್ ಅನ್ನು ನಮೂದಿಸಿ.

  5. ಇತರ ನಿದರ್ಶನಗಳನ್ನು ಹುಡುಕಲು ಮುಂದಿನ ಫಲಿತಾಂಶ ಬಟನ್ ಅನ್ನು ಟ್ಯಾಪ್ ಮಾಡಿ.

ಸರ್ಚ್ ಎಂಜಿನ್ ಅನ್ನು ಆಯ್ಕೆಮಾಡುವುದು

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Safari ಅನ್ನು ಟ್ಯಾಪ್ ಮಾಡಿ.

  3. ಸರ್ಚ್ ಎಂಜಿನ್ ಟ್ಯಾಪ್ ಮಾಡಿ, ನಂತರ ಸರ್ಚ್ ಎಂಜಿನ್ ಅನ್ನು ಆಯ್ಕೆಮಾಡಿ.

ನಿಮ್ಮ ಫೋಟೋಗಳಲ್ಲಿರುವ ವಸ್ತು ಅಥವಾ ವಿಷಯಗಳನ್ನು ಹುಡುಕುವುದು

ವಿಷುಯಲ್ ಲುಕ್ ಅಪ್ ಮೂಲಕ, ನಿಮ್ಮ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಕಂಡುಬರುವ ಜನಪ್ರಿಯ ಹೆಗ್ಗುರುತುಗಳು, ಸಸ್ಯಗಳು, ಸಾಕುಪ್ರಾಣಿಗಳು ಮತ್ತು ಹೆಚ್ಚಿನದನ್ನು ನೀವು ಗುರುತಿಸಬಹುದು ಮತ್ತು ಅದರ ಕುರಿತು ತಿಳಿಯಬಹುದು. ನಿಮ್ಮ ಫೋಟೋಗಳು ಮತ್ತು ವೀಡಿಯೊಗಳಲ್ಲಿನ ವಸ್ತುಗಳನ್ನು ಗುರುತಿಸಲು ವಿಷುವಲ್ ಲುಕ್ ಅಪ್ ಅನ್ನು ಬಳಸಿ ಎಂಬುದನ್ನು ನೋಡಿ.

ಫೋಟೋಸ್ ಆ್ಯಪ್‌ನಲ್ಲಿ ಒಂದು ಫೋಟೋ ತೆರೆದಿದೆ. ಸ್ಕ್ರೀನ್‌ನ ಮೇಲ್ಭಾಗದಲ್ಲಿ, ‘ಮಾಹಿತಿ’ ಬಟನ್ ವಿಷುವಲ್ ಲುಕ್ ಅಪ್ ಮಾಹಿತಿಯು ಲಭ್ಯವಿದೆ ಎಂದು ಸೂಚಿಸುವ ಐಕಾನ್ ಅನ್ನು ಪ್ರದರ್ಶಿಸುತ್ತದೆ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.