ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad‌ನಲ್ಲಿನ Mail ಆ್ಯಪ್‌ನಲ್ಲಿ ನನ್ನ ಈಮೇಲ್ ಅನ್ನು ಮರೆಮಾಡಿ ಎಂಬುದನ್ನು ಬಳಸುವುದು

ನೀವು iCloud+ಗೆ ಸಬ್‌ಸ್ಕ್ರೈಬ್ ಮಾಡಿದಾಗ, ನಿಮ್ಮ ನಿಜವಾದ ಈಮೇಲ್‌ ವಿಳಾಸವನ್ನು ಖಾಸಗಿಯಾಗಿಡಲು, ನನ್ನ ಈಮೇಲ್‌ ಅನ್ನು ಮರೆಮಾಡಿ ಎಂಬುದು ನಿಮ್ಮ ನಿಜವಾದ ಈಮೇಲ್‌ ಖಾತೆಗೆ ಫಾರ್ವರ್ಡ್ ಮಾಡುವ ಈಮೇಲ್‌ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. Mail ಆ್ಯಪ್‌ನಲ್ಲಿ ನೀವು ಬೇಡಿಕೆಯ ಮೇರೆಗೆ ಅನನ್ಯ ಈಮೇಲ್‌ ವಿಳಾಸಗಳನ್ನು ಸಹ ಜನರೇಟ್ ಮಾಡಬಹುದು.

ನನ್ನ ಈಮೇಲ್ ಅನ್ನು ಮರೆಮಾಡಿ ಎಂಬುದರ ಮೂಲಕ ‌ಈಮೇಲ್ ಅನ್ನು‌ ಕಳುಹಿಸಿ

  1. ನಿಮ್ಮ iPadನಲ್ಲಿ Mail ಆ್ಯಪ್‌ಗೆ ಹೋಗಿ.

  2. ರಚಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಂದೇಶಕ್ಕಾಗಿ ಸ್ವೀಕೃತದಾರರು ಮತ್ತು ವಿಷಯವನ್ನು ಸೇರಿಸಿ.

    ಗಮನಿಸಿ: ನೀವು ನನ್ನ ಈಮೇಲ್ ಅನ್ನು ಮರೆಮಾಡಿ ಎಂಬುದನ್ನು ಬಳಸಿ ಒಂದು ಬಾರಿಗೆ ಒಬ್ಬ ಸ್ವೀಕೃತದಾರರಿಗೆ ಮಾತ್ರ ಸಂದೇಶವನ್ನು ಕಳುಹಿಸಬಹುದು.

  4. ‘ಇವರಿಂದ’ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ಅದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ, ನಂತರ ನನ್ನ ಈಮೇಲ್ ಅನ್ನು‌ ಮರೆಮಾಡಿ ಎಂಬುದನ್ನು ಟ್ಯಾಪ್ ಮಾಡಿ. ‘ಇವರಿಂದ’ ಫೀಲ್ಡ್‌ನಲ್ಲಿ ಹೊಸ, ಅನನ್ಯ ಈಮೇಲ್‌ ವಿಳಾಸ ಕಾಣಿಸಿಕೊಳ್ಳುತ್ತದೆ.

ಸಲಹೆ: ನನ್ನ ಈಮೇಲ್ ಅನ್ನು ಮರೆಮಾಡಿ ಎಂಬುದರ ಮೂಲಕ ಸಂದೇಶವೊಂದಕ್ಕೆ ಸ್ವೀಕೃತದಾರರು ಪ್ರತಿಕ್ರಿಯಿಸಿದಾಗ, ಅವರ ಪ್ರತ್ಯುತ್ತರಗಳನ್ನು ನಿಮ್ಮ ನಿಜವಾದ ಈಮೇಲ್‌ ವಿಳಾಸಕ್ಕೆ ಫಾರ್ವರ್ಡ್ ಮಾಡಲಾಗುತ್ತದೆ. ಈ ವಿಳಾಸಕ್ಕೆ ಫಾರ್ವರ್ಡ್ ಮಾಡಿ ಎಂಬುದನ್ನು ಸೆಟ್ ಮಾಡಲು, ‌ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ನನ್ನ ಈಮೇಲ್ ಅನ್ನು ಮರೆಮಾಡಿ ವಿಳಾಸಗಳನ್ನು ರಚಿಸಿ ಮತ್ತು ನಿರ್ವಹಿಸಿ ಎಂಬುದನ್ನು ನೋಡಿ.

ನನ್ನ ಈಮೇಲ್‌ ಅನ್ನು ಮರೆಮಾಡಿ ಎಂಬುದನ್ನು ಬಳಸಿ ಈಮೇಲ್‌ಗೆ ಪ್ರತ್ಯುತ್ತರಿಸುವುದು

ನಿಮ್ಮ ಅನನ್ಯ, ರ್‍ಯಾಂಡಮ್ ವಿಳಾಸಗಳಲ್ಲಿನ ಒಂದಕ್ಕೆ ಕಳುಹಿಸಿದ ಈಮೇಲ್‌ ಸಂದೇಶವನ್ನು ನೀವು ಸ್ವೀಕರಿಸಿದಾಗ, ನೀವು ಅದೇ ವಿಳಾಸವನ್ನು ಬಳಸಿಕೊಂಡು ಉತ್ತರಿಸಬಹುದು. ಇದು ಸಂಭಾಷಣೆಯನ್ನು ಮುಂದುವರಿಸಲು ಮತ್ತು ನಿಮ್ಮ ನಿಜವಾದ ಈಮೇಲ್‌ ವಿಳಾಸವನ್ನು ಖಾಸಗಿಯಾಗಿಡಲು ನಿಮಗೆ ಅನುವು ಮಾಡಿಕೊಡುತ್ತದೆ. ಪ್ರತ್ಯುತ್ತರಿಸಲು, ಈ ಕೆಳಗಿನವುಗಳನ್ನು ಮಾಡಿ:

  1. ನಿಮ್ಮ iPadನಲ್ಲಿ Mail ಆ್ಯಪ್‌ಗೆ ಹೋಗಿ.

  2. ಸಂದೇಶವನ್ನು ಟ್ಯಾಪ್ ಮಾಡಿ, ನಂತರ ಸಂದೇಶದ ಮೇಲ್ಭಾಗದಲ್ಲಿರುವ ಪ್ರತ್ಯುತ್ತರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ನಿಮ್ಮ ಪ್ರತಿಕ್ರಿಯೆಯನ್ನು ಟೈಪ್ ಮಾಡಿ.

    ಸ್ವೀಕೃತದಾರರಿಗೆ ಕಾಣಿಸುವ ಈಮೇಲ್ ವಿಳಾಸವನ್ನು ನೋಡಲು ನೀವು “ಇವರಿಂದ” ಎಂಬ ಫೀಲ್ಡ್ ಅನ್ನು ಟ್ಯಾಪ್ ಮಾಡಬಹುದು.

ನನ್ನ ಈಮೇಲ್ ಅನ್ನು ಮರೆಮಾಡಿ ಎಂಬುದರ‌ ಮೂಲಕ ಜನರೇಟ್ ಮಾಡಲಾದ ವಿಳಾಸಗಳನ್ನು ನಿರ್ವಹಿಸಿ

ನನ್ನ ಈಮೇಲ್‌ ಅನ್ನು ಮರೆಮಾಡಿ ಎಂಬುದರ ಮೂಲಕ ನೀವು ರಚಿಸುವ ರ್‍ಯಾಂಡಮ್ ವಿಳಾಸಗಳನ್ನು ನೀವು ರಚಿಸಬಹುದು, ನಿಷ್ಕ್ರಿಯಗೊಳಿಸಬಹುದು, ಪುನಃ ಸಕ್ರಿಯಗೊಳಿಸಬಹುದು ಮತ್ತು ನಿರ್ವಹಿಸಬಹುದು. ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ನನ್ನ ಈಮೇಲ್‌ ಅನ್ನು ರಚಿಸಿ ಮತ್ತು ನಿರ್ವಹಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.