ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ನಿಮಗಾಗಿ ಆಯ್ಕೆಮಾಡಿದ ಸುದ್ದಿ ಸ್ಟೋರಿಗಳನ್ನು ನೋಡುವುದು

News ಆ್ಯಪ್‌ನಲ್ಲಿರುವ ‘ಇಂದು’ ಎಂಬ ಫೀಡ್, Apple News ಸಂಪಾದಕರು ಆಯ್ಕೆ ಮಾಡಿದ ಟಾಪ್ ಸ್ಟೋರಿಗಳನ್ನು, ನೀವು ಫಾಲೋ ಮಾಡುವ ಚಾನಲ್‌ಗಳು ಮತ್ತು ವಿಷಯಗಳ ಅತ್ಯುತ್ತಮ ಸ್ಟೋರಿಗಳನ್ನು ಮತ್ತು Apple Newsನ ಸ್ಟೋರಿಗಳು ಮತ್ತು ಸಂಚಿಕೆಗಳನ್ನು ಒದಗಿಸುತ್ತದೆ. ಇಂದು ಎಂಬ ಫೀಡ್ ಇತರೆ News ಓದುಗರಲ್ಲಿ ಜನಪ್ರಿಯವಾಗಿರುವ ಟ್ರೆಂಡಿಂಗ್ ಸುದ್ದಿ ಸ್ಟೋರಿಗಳು, ನನ್ನ ಕ್ರೀಡೆಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ Siri ಸೂಚಿಸುವ ಸ್ಟೋರಿಗಳನ್ನು ಒಳಗೊಂಡಿರುತ್ತದೆ. ನಿಮ್ಮ ಸ್ಥಳವನ್ನು ಅವಲಂಬಿಸಿ, ಇಂದು ಎಂಬ ಫೀಡ್ ಸ್ಥಳೀಯ ಸುದ್ದಿಗಳನ್ನು (ನಿಮ್ಮ ಸ್ಥಳೀಯ ಹವಾಮಾನ ಪರಿಸ್ಥಿತಿಗಳೊಂದಿಗೆ) ಮತ್ತು ಪಝಲ್‌ಗಳನ್ನು ಸಹ ಒಳಗೊಂಡಿರಬಹುದು.

ಗಮನಿಸಿ: ಸ್ಥಳೀಯ ಸುದ್ದಿಗಳು ಮತ್ತು ಪಝಲ್‌ಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ.

‘ಇಂದು’ ಎಂಬ ಫೀಡ್‌ನಲ್ಲಿ ಸ್ಟೋರಿಗಳನ್ನು ಆ್ಯಕ್ಸೆಸ್ ಮಾಡುವುದು

  1. ನಿಮ್ಮ iPadನಲ್ಲಿ News ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಸ್ಟೋರಿಯನ್ನು ತೆರೆಯಿರಿ: ಸ್ಟೋರಿಯನ್ನು ಟ್ಯಾಪ್ ಮಾಡಿ.

    • ಗುಂಪಿನೊಳಗಿನ ಹೆಚ್ಚು ಸ್ಟೋರಿಗಳನ್ನು ಓದಿರಿ: ಗುಂಪಿನ ಕೆಳಭಾಗದಲ್ಲಿರುವ ಬಾಣದ ಗುರುತು ಎಂಬುದನ್ನು ಟ್ಯಾಪ್ ಮಾಡಿ.

    • ವೀಡಿಯೊವನ್ನು ಪ್ಲೇ ಮಾಡಿ: ಥಂಬ್‌ನೇಲ್‌ನಲ್ಲಿ ಪ್ಲೇ ಬಟನ್ ಅನ್ನು ಟ್ಯಾಪ್ ಮಾಡಿ.

    • ಹೊಸ ಸ್ಟೋರಿಗಳನ್ನು ಪಡೆಯಿರಿ: ಇತ್ತೀಚಿನ ಸ್ಟೋರಿಗಳೊಂದಿಗೆ ‘ಇಂದು’ ಎಂಬ ಫೀಡ್ ಅನ್ನು ರಿಫ್ರೆಷ್ ಮಾಡಲು ಕೆಳಕ್ಕೆ ಎಳೆಯಿರಿ.

ಚಾನಲ್‌ಗಳು ಮತ್ತು ವಿಷಯಗಳನ್ನು ಫಾಲೋ ಮಾಡಿ, ಅನ್‌ಫಾಲೋ ಮಾಡಿ, ಬ್ಲಾಕ್ ಮಾಡಿ ಮತ್ತು ಅನ್‌ಬ್ಲಾಕ್ ಮಾಡಿ

ಚಾನಲ್‌ಗಳು ಮತ್ತು ವಿಷಯಗಳನ್ನು ಫಾಲೋ ಮಾಡುವ ಮತ್ತು ಬ್ಲಾಕ್ ಮಾಡುವ ಮೂಲಕ ‘ಇಂದು’ ಎಂಬ ಫೀಡ್‌ನಲ್ಲಿ ಏನು ಕಾಣಿಸಿಕೊಳ್ಳಬೇಕು ಎಂಬುದನ್ನು ನೀವು ನಿರ್ಧರಿಸಬಹುದು.

  1. ನಿಮ್ಮ iPadನಲ್ಲಿ News ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಚಾನಲ್ ಫೀಡ್ ಅನ್ನು ತೆರೆಯಿರಿ: ಸ್ಟೋರಿಯನ್ನು ಸ್ಪರ್ಶಿಸಿ ಮತ್ತು ಹಿಡಿದುಕೊಳ್ಳಿ, ಚಾನಲ್ ಹೆಸರನ್ನು ಟ್ಯಾಪ್ ಮಾಡಿ, ನಂತರ ಚಾನಲ್‌ಗೆ ಹೋಗಿ ಎಂಬುದನ್ನು ಟ್ಯಾಪ್ ಮಾಡಿ. ಅಥವಾ ‘ಇಂದು’ ಎಂಬ ಫೀಡ್‌ನಲ್ಲಿ ಸ್ಟೋರಿಯೊಂದನ್ನು ಟ್ಯಾಪ್ ಮಾಡಿ, ನಂತರ ಸ್ಟೋರಿಯ ಮೇಲ್ಭಾಗದಲ್ಲಿರುವ ಚಾನಲ್ ಹೆಸರನ್ನು ಟ್ಯಾಪ್ ಮಾಡಿ.

    • ವಿಷಯದ ಫೀಡ್ ಅನ್ನು ತೆರೆಯಿರಿ: ವಿಷಯ ಶೀರ್ಷಿಕೆಯನ್ನು ಟ್ಯಾಪ್ ಮಾಡಿ—ಉದಾಹರಣೆಗೆ ಚಲನಚಿತ್ರಗಳು ಅಥವಾ ಪ್ರಯಾಣ.

  3. ಫೀಡ್‌ನ ಮೇಲ್ಭಾಗದಲ್ಲಿ, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಫಾಲೋ ಮಾಡಿ: ಫಾಲೋ ಬಟನ್ ಅನ್ನು ಟ್ಯಾಪ್ ಮಾಡಿ.

    • ಅನ್‌ಫಾಲೋ ಮಾಡಿ: ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಚಾನಲ್ ಅನ್ನು ಅನ್‌ಫಾಲೋ ಮಾಡಿ ಅಥವಾ ವಿಷಯವನ್ನು ಅನ್‌ಫಾಲೋ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಬ್ಲಾಕ್ ಮಾಡಿ: ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಚಾನಲ್ ಅನ್ನು ಬ್ಲಾಕ್ ಮಾಡಿ ಅಥವಾ ವಿಷಯವನ್ನು ಬ್ಲಾಕ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಅನ್‌ಬ್ಲಾಕ್ ಮಾಡಿ: ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಚಾನಲ್ ಅನ್ನು ಅನ್‌ಬ್ಲಾಕ್ ಮಾಡಿ ಅಥವಾ ವಿಷಯವನ್ನು ಅನ್‌ಬ್ಲಾಕ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ಟಾಪ್ ಸ್ಟೋರಿಗಳು ಎಲ್ಲರಿಗೂ ಒಂದೇ ರೀತಿ ಕಾಣುತ್ತವೆ. ನೀವು ಬ್ಲಾಕ್ ಮಾಡಿರುವ ಚಾನಲ್‌ನ ಸ್ಟೋರಿಯನ್ನು ಟಾಪ್ ಸ್ಟೋರಿಗಳಲ್ಲಿ ಸೇರಿಸಿದ್ದರೆ, ನಿಮಗೆ ಶೀರ್ಷಿಕೆ ಕಾಣಿಸುತ್ತದೆ, ಆದರೆ ನಿಮ್ಮ ಫೀಡ್‌ನ ಉಳಿದ ಭಾಗದಲ್ಲಿ ಚಾನಲ್ ಇನ್ನೂ ಬ್ಲಾಕ್ ಆಗಿರುತ್ತದೆ.

ನಿಮ್ಮ ಮೆಚ್ಚಿನವುಗಳನ್ನು ನಿರ್ವಹಿಸುವುದು

ಮೆಚ್ಚಿನವುಗಳು ಎಂಬುದು ನಿಮ್ಮ ಫಾಲೋ ಮಾಡುತ್ತಿರುವುದು ಎಂಬ ಪಟ್ಟಿಯಲ್ಲಿನ ನೀವು ಹೆಚ್ಚು ಇಷ್ಟಪಡುವ ಚಾನಲ್‌ಗಳು ಮತ್ತು ವಿಷಯಗಳನ್ನು ತೋರಿಸುತ್ತವೆ (ನೀವು ಸೀಮಿತ ಸಂಖ್ಯೆಯ ಮೆಚ್ಚಿನವುಗಳನ್ನು ಮಾತ್ರ ಹೊಂದಬಹುದು). ನಿಮ್ಮ ಮೆಚ್ಚಿನವುಗಳು ಎಂಬುದಕ್ಕೆ ಚಾನೆಲ್‌ಗಳು ಮತ್ತು ವಿಷಯಗಳನ್ನು ಸೇರಿಸುವುದರಿಂದ ಅವುಗಳನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಲು ಸಾಧ್ಯವಾಗುತ್ತದೆ.

ಗಮನಿಸಿ: ನೀವು ಪ್ರಸ್ತುತ ಫಾಲೋ ಮಾಡುತ್ತಿರುವ ಚಾನೆಲ್‌ಗಳು ಮತ್ತು ವಿಷಯಗಳನ್ನು ಮಾತ್ರ ನಿಮ್ಮ ಮೆಚ್ಚಿನವುಗಳು ಎಂಬುದಕ್ಕೆ ಸೇರಿಸಬಹುದು.

ಸೈಡ್‌ಬಾರ್‌ನಲ್ಲಿ ಮೆಚ್ಚಿನವುಗಳು ಕಾಣಿಸಿಕೊಳ್ಳುತ್ತವೆ.

  1. ನಿಮ್ಮ iPadನಲ್ಲಿ News ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್‌ನ ಮೇಲ್ಭಾಗದಲ್ಲಿರುವ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    ನಿಮಗೆ ಸೈಡ್‌ಬಾರ್ ಕಾಣಿಸದಿದ್ದರೆ, ಸೈಡ್‌ಬಾರ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನಿಮ್ಮ ಮೆಚ್ಚಿನವುಗಳಿಗೆ ಚಾನೆಲ್ ಅಥವಾ ವಿಷಯವನ್ನು ಸೇರಿಸಿ: ಚಾನಲ್ ಅಥವಾ ವಿಷಯವೊಂದರ ಪಕ್ಕದಲ್ಲಿರುವ ಮೆಚ್ಚಿನದಾಗಿ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    • ಮೆಚ್ಚಿನದನ್ನು ತೆಗೆದುಹಾಕಿ: ನೀವು ಇನ್ನು ಮುಂದೆ ಯಾವ ಚಾನಲ್ ಅಥವಾ ವಿಷಯವನ್ನು ಮೆಚ್ಚಿನದು ಎಂಬುದಾಗಿ ಇಟ್ಟುಕೊಳ್ಳಲು ಬಯಸುವುದಿಲ್ಲವೋ ಅದರ ಪಕ್ಕದಲ್ಲಿರುವ ಮೆಚ್ಚಿನದು ಎಂಬುದರಿಂದ ತೆಗೆದುಹಾಕಿ ಬಟನ್ ಅನ್ನು ಟ್ಯಾಪ್ ಮಾಡಿ.

    • ಮೆಚ್ಚಿನವುಗಳನ್ನು ಮರುಕ್ರಮಗೊಳಿಸಿ: ಮರುಕ್ರಮಗೊಳಿಸಿ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನಿಮ್ಮ ಆದ್ಯತೆಯ ಕ್ರಮಕ್ಕೆ ಮೆಚ್ಚಿನವುಗಳನ್ನು ಡ್ರ್ಯಾಗ್ ಮಾಡಿ.

  4. ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

ಇಂದು ಎಂಬ ಫೀಡ್‌ನಲ್ಲಿ ನಿರ್ದಿಷ್ಟ ಚಾನಲ್‌ಗಳು ಮತ್ತು ವಿಷಯ ಗುಂಪುಗಳನ್ನು ಸೂಚಿಸುವುದನ್ನು ನಿಲ್ಲಿಸುವುದು

ಸೂಚಿಸಲಾದ ಚಾನಲ್‌ಗಳು ಮತ್ತು ವಿಷಯ ಗುಂಪುಗಳು ಇಂದು ಎಂಬ ಫೀಡ್‌ನಲ್ಲಿ ಕಾಣಿಸಿಕೊಳ್ಳಬಹುದು, ಆದರೆ ನೀವು ಈ ಸಲಹೆಗಳನ್ನು ನಿಲ್ಲಿಸಬಹುದು.

  1. ನಿಮ್ಮ iPadನಲ್ಲಿ News ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್ ಅಥವಾ ಟ್ಯಾಬ್ ಬಾರ್‌ನಲ್ಲಿ ಇಂದು ಎಂಬುದನ್ನು ಟ್ಯಾಪ್ ಮಾಡಿ.

  3. ಚಾನಲ್ ಅಥವಾ ವಿಷಯ ಗುಂಪಿನಲ್ಲಿನ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಲಹೆ ನೀಡುವುದನ್ನು ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

ಚಾನಲ್ ಅಥವಾ ವಿಷಯವನ್ನು ಬ್ಲಾಕ್ ಮಾಡಿರುವುದಿಲ್ಲ, ಆದರೆ News ಇಂದು ಎಂಬಲ್ಲಿ ಸ್ಟೋರಿ ಗುಂಪನ್ನು ತೋರಿಸುವುದನ್ನು ನಿಲ್ಲಿಸುತ್ತದೆ.

ನೀವು ಯಾವ ರೀತಿಯ ಸ್ಟೋರಿಗಳಿಗೆ ಆದ್ಯತೆ ನೀಡುತ್ತೀರಿ ಎಂಬುದನ್ನು Newsಗೆ ತಿಳಿಸುವುದು

  1. ನಿಮ್ಮ iPadನಲ್ಲಿ News ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್ ಅಥವಾ ಟ್ಯಾಬ್ ಬಾರ್‌ನಲ್ಲಿ ಇಂದು ಎಂಬುದನ್ನು ಟ್ಯಾಪ್ ಮಾಡಿ.

  3. ಶೀರ್ಷಿಕೆ ಎಂಬುದರ ಕೆಳಗೆ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಇನ್ನಷ್ಟು ಸೂಚಿಸಿ ಅಥವಾ ಕಡಿಮೆ ಸೂಚಿಸಿ ಎಂಬುದನ್ನು ಟ್ಯಾಪ್ ಮಾಡಿ.

ನೀವು ಫಾಲೋ ಮಾಡುವ ಚಾನಲ್‌ಗಳಿಂದ ಮಾತ್ರ ಸ್ಟೋರಿಗಳನ್ನು ನೋಡುವುದು

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ News ಆ್ಯಪ್ ಅನ್ನು ಟ್ಯಾಪ್ ಮಾಡಿ.

  3. ‘ಇಂದು’ ಎಂಬುದರಲ್ಲಿ ಸ್ಟೋರಿಗಳನ್ನು ಸೀಮಿತಗೊಳಿಸಿ ಎಂಬುದನ್ನು ಆನ್ ಮಾಡಿ, ನಂತರ ನಿಮ್ಮ ಆಯ್ಕೆಯನ್ನು ಖಚಿತಪಡಿಸಿ.

ಗಮನಿಸಿ: ಸ್ಟೋರಿಗಳನ್ನು ನಿರ್ಬಂಧಿಸುವುದರಿಂದ ಇಂದಿನ ಫೀಡ್‌ನಲ್ಲಿ ಕಾಣಿಸಿಕೊಳ್ಳುವ ಸ್ಟೋರಿಗಳ ವೈವಿಧ್ಯತೆಯನ್ನು ಗಮನಾರ್ಹವಾಗಿ ಸೀಮಿತಗೊಳಿಸುತ್ತದೆ. ನೀವು ಸ್ಟೋರಿಗಳನ್ನು ಸೀಮಿತಗೊಳಿಸಿದಾಗ, ನೀವು ಟಾಪ್ ಸ್ಟೋರಿಗಳು ಮತ್ತು ಟ್ರೆಂಡಿಂಗ್ ಸ್ಟೋರಿಗಳನ್ನು ನೋಡುವುದಿಲ್ಲ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.