ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಸಂಗ್ರಹಣೆಯನ್ನು ನಿರ್ವಹಿಸುವುದು

iPadನಲ್ಲಿ, ಎಷ್ಟು ಸಂಗ್ರಹಣೆ ಸ್ಥಳ ಲಭ್ಯವಿದೆ ಎಂಬುದನ್ನು ನೀವು ಪರಿಶೀಲಿಸಬಹುದು ಮತ್ತು ನಿಮಗೆ ಇನ್ನು ಮುಂದೆ ಅಗತ್ಯವಿಲ್ಲದ ಐಟಮ್‌ಗಳನ್ನು ತೆಗೆದುಹಾಕುವ ಮೂಲಕ ಲಭ್ಯವಿರುವ ಸ್ಥಳವನ್ನು ಹೆಚ್ಚಿಸಬಹುದು.

ನಿಮ್ಮ iPadನಲ್ಲಿನ ಸಂಗ್ರಹಣೆಯನ್ನು ಪರಿಶೀಲಿಸುವುದು

ಸೆಟ್ಟಿಂಗ್ಸ್  > ಸಾಮಾನ್ಯ > iPad ಸಂಗ್ರಹಣೆ ಎಂಬಲ್ಲಿಗೆ ಹೋಗಿ.

ಲಭ್ಯವಿರುವ ಸಂಗ್ರಹಣೆಯನ್ನು ಸ್ಕ್ರೀನ್‌ನ ಮೇಲ್ಭಾಗದಲ್ಲಿ ತೋರಿಸಲಾಗಿದೆ.

ಆ್ಯಪ್‌ಗಳು ಮತ್ತು ಡೇಟವನ್ನು ತೆಗೆದುಹಾಕುವುದು

ನಿಮ್ಮ ಬಳಿ ಕಡಿಮೆ ಸಂಗ್ರಹಣೆ ಇದ್ದಾಗ, iPad ನಿಮ್ಮ ಡೇಟವನ್ನು ಹಾಗೆಯೇ ಉಳಿಸಿಕೊಂಡು, ಬಳಕೆಯಾಗದ ಆ್ಯಪ್‌ಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವಂತೆ ನೀವು ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಪ್‌ಗಳನ್ನು ಟ್ಯಾಪ್ ಮಾಡಿ, App Store ಅನ್ನು ಟ್ಯಾಪ್ ಮಾಡಿ, ನಂತರ ಬಳಕೆಯಾಗದ ಆ್ಯಪ್‌ಗಳನ್ನು ಆಫ್‌ಲೋಡ್ ಮಾಡಿ ಎಂಬುದನ್ನು ಆನ್ ಮಾಡಿ.

    ಸಂಗ್ರಹಣೆ ಕಡಿಮೆಯಾದಾಗ, iPad ಆ್ಯಪ್ ಅನ್ನು ತೆಗೆದುಹಾಕುತ್ತದೆ ಆದರೆ ನಿಮ್ಮ ಡಾಕ್ಯುಮಂಟ್‌ಗಳು ಮತ್ತು ಡೇಟವನ್ನು ಉಳಿಸಿಕೊಳ್ಳುತ್ತದೆ. ಆ್ಯಪ್ ಐಕಾನ್ ಕ್ಲೌಡ್ ಚಿಹ್ನೆಯೊಂದಿಗೆ ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಉಳಿಯುತ್ತದೆ—ಮರು-ಇನ್‌ಸ್ಟಾಲ್ ಮಾಡಲು ಅದನ್ನು ಟ್ಯಾಪ್ ಮಾಡಿ.

ನೀವು ಅನೇಕ ಆ್ಯಪ್‌ಗಳನ್ನು ಹಸ್ತಚಾಲಿತವಾಗಿ ತೆಗೆದುಹಾಕಬಹುದು ಮತ್ತು ನೀವು ಮನಸು ಬದಲಾಯಿಸಿದರೆ ಅವುಗಳನ್ನು ಮರುಲೋಡ್ ಮಾಡಬಹುದು. ಆ್ಯಪ್‌ಗಳನ್ನು ತೆಗೆದುಹಾಕಿ ಅಥವಾ ಡಿಲೀಟ್ ಮಾಡಿ ಎಂಬುದನ್ನು ನೋಡಿ.

ನಿಮ್ಮ iPadನಲ್ಲಿ ನಿಮಗೆ ಇನ್ನು ಮುಂದೆ ಅಗತ್ಯವಿಲ್ಲದ ಡಾಕ್ಯುಮಂಟ್‌ಗಳು ಮತ್ತು ಡೇಟವನ್ನು ನೀವು ಹೊಂದಿದ್ದರೆ, ನೀವು ಅವುಗಳನ್ನು ಫೈಲ್ಸ್ ಆ್ಯಪ್‌ನಲ್ಲಿ ಹುಡುಕಬಹುದು ಮತ್ತು ಡಿಲೀಟ್ ಮಾಡಬಹುದು. ಫೈಲ್ ಅಥವಾ ಫೋಲ್ಡರ್ ಅನ್ನು ಡಿಲೀಟ್ ಮಾಡುವುದು ಅನ್ನು ನೋಡಿ.

ನೀವು TV ಆ್ಯಪ್‌ನಲ್ಲಿ ಡೌನ್‌ಲೋಡ್ ಮಾಡಿದ ಐಟಮ್‌ಗಳನ್ನು ಪರಿಶೀಲಿಸಬಹುದು ಮತ್ತು ನೀವು ಈಗಾಗಲೇ ವೀಕ್ಷಿಸಿರುವ ಐಟಮ್‌ಗಳನ್ನು ತೆಗೆದುಹಾಕಬಹುದು. Apple TV ಆ್ಯಪ್‌ನಲ್ಲಿ ನಿಮ್ಮ ಲೈಬ್ರರಿಯನ್ನು ನಿರ್ವಹಿಸಿ ಎಂಬುದನ್ನು ನೋಡಿ.

ಆಯ್ಕೆಮಾಡಿದ ಫೈಲ್‌ಗಳನ್ನು ಇರಿಸಿಕೊಳ್ಳುವುದು

ನಿಮ್ಮ iPadನಲ್ಲಿ ಯಾವಾಗಲೂ ಆ್ಯಕ್ಸೆಸ್ ಮಾಡಲು ಬಯಸುವ ಫೈಲ್‌ಗಳನ್ನು ನೀವು ಡೌನ್‌ಲೋಡ್ ಮಾಡಿದ್ದರೆ, ಅವುಗಳನ್ನು ತೆಗೆದುಹಾಕಲಾಗುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು. ಆಯ್ಕೆಮಾಡಲಾದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿ ಇರಿಸಿಕೊಳ್ಳಿ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.