ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ Safariಯನ್ನು ಕಸ್ಟಮೈಸ್ ಮಾಡಲು ಎಕ್ಸ್‌ಟೆನ್ಶನ್‌ಗಳನ್ನು ಪಡೆಯುವುದು

ನಿಮ್ಮ ಬ್ರೌಸರ್ ಕಾರ್ಯನಿರ್ವಹಿಸುವ ವಿಧಾನವನ್ನು ಕಸ್ಟಮೈಸ್ ಮಾಡಲು ನೀವು ಎಕ್ಸ್‌ಟೆನ್ಶನ್‌ಗಳನ್ನು ಇನ್‌ಸ್ಟಾಲ್ ಮಾಡಬಹುದು. ಉದಾಹರಣೆಗೆ, ಶಾಪಿಂಗ್ ಮಾಡುವಾಗ ಕೂಪನ್‌ಗಳನ್ನು ಹುಡುಕಲು, ವೆಬ್‌ಸೈಟ್‌ಗಳಲ್ಲಿ ಕಂಟೆಂಟ್ ಅನ್ನು ಬ್ಲಾಕ್ ಮಾಡಲು ಹಾಗೂ ಮುಂತಾದವುಗಳನ್ನು ಹುಡುಕಲು ಎಕ್ಸ್‌ಟೆನ್ಶ್‌ಗಳು ನಿಮಗೆ ಸಹಾಯ ಮಾಡುತ್ತವೆ.

Safari ಎಕ್ಸ್‌ಟೆನ್ಶನ್‌ಗಳನ್ನು ಸೇರಿಸಿ

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ಹುಡುಕಾಟ ಫೀಲ್ಡ್‌ನ ಬಲಭಾಗದಲ್ಲಿ ಎಕ್ಸ್‌ಟೆನ್ಶನ್‌ಗಳನ್ನು ನಿರ್ವಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಎಕ್ಸ್‌ಟೆನ್ಶನ್‌ಗಳನ್ನು ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಎಕ್ಸೆಟೆನ್ಶನ್‌ಗಳಿಗಾಗಿ ಹುಡುಕಿ, ಶಿಫಾರಸುಗಳನ್ನು ಸ್ಕ್ಯಾನ್ ಮಾಡಿ ಅಥವಾ App Storeನಲ್ಲಿ ನೋಡಲು ಎಕ್ಸೆಟೆನ್ಶನ್‌ಗಳನ್ನು ಬ್ರೌಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮಗೆ ಬೇಕಾದ ಆ್ಯಪ್ ಅನ್ನು ನೀವು ಕಂಡುಕೊಂಡ ನಂತರ, ಬೆಲೆಯನ್ನು ಟ್ಯಾಪ್ ಮಾಡಿ ಅಥವಾ ಆ್ಯಪ್ ಉಚಿತವಾಗಿದ್ದರೆ, ‘ಪಡೆಯಿರಿ’ ಎಂಬುದನ್ನು ಟ್ಯಾಪ್ ಮಾಡಿ ಮತ್ತು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಗಮನಿಸಿ: iPadನಲ್ಲಿನ Safariಗಾಗಿ ನೀವು ಇನ್‌ಸ್ಟಾಲ್ ಮಾಡುವ ಎಕ್ಸ್‌ಟೆನ್ಶನ್‌ಗಳು, ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿಯೂ ಕಾರ್ಯನಿರ್ವಹಿಸುತ್ತವೆ ಮತ್ತು ನೀವು ಅದೇ Apple ಖಾತೆಗೆ ಸೈನ್ ಇನ್ ಮಾಡಿರುವ ಯಾವುದೇ iPhone, iPad ಅಥವಾ Macನಲ್ಲಿನ Safari ಸೆಟ್ಟಿಂಗ್ಸ್‌ನಲ್ಲಿ ಅವುಗಳು ಗೋಚರಿಸುತ್ತವೆ, ಅವುಗಳನ್ನು ಹುಡುಕಲು ಮತ್ತು ಡೌನ್‌ಲೋಡ್ ಮಾಡಲು ಸುಲಭವಾಗಿಸುತ್ತದೆ.

Safari ಎಕ್ಸ್‌ಟೆನ್ಶನ್‌ ಸೆಟ್ಟಿಂಗ್ಸ್ ಬದಲಾಯಿಸಿ

ನಿಮ್ಮ ಬ್ರೌಸರ್ ಕಾರ್ಯನಿರ್ವಹಿಸುವ ವಿಧಾನವನ್ನು ಕಸ್ಟಮೈಸ್ ಮಾಡಲು ನೀವು ಎಕ್ಸ್‌ಟೆನ್ಶನ್‌ ಅನ್ನು ಬಳಸಬಹುದು. ನೀವು ಯಾವುದೇ ಸಮಯದಲ್ಲಿ Safari ಎಕ್ಸ್‌ಟೆನ್ಶನ್‌ಗಳನ್ನು ಆನ್ ಅಥವಾ ಆಫ್ ಮಾಡಬಹುದು.

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ಹುಡುಕಾಟ ಫೀಲ್ಡ್‌ನ ಬಲಭಾಗದಲ್ಲಿ ಎಕ್ಸ್‌ಟೆನ್ಶನ್‌ಗಳನ್ನು ನಿರ್ವಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಎಕ್ಸ್‌ಟೆನ್ಶನ್‌ಗಳನ್ನು ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ಅನುಮತಿಗಳನ್ನು ನೀಡಲು ಬಯಸುವ ಪ್ರತಿಯೊಂದು ಎಕ್ಸ್‌ಟೆನ್ಶನ್‌ ಅನ್ನು ಟ್ಯಾಪ್ ಮಾಡಿ, ನಂತರ ಪ್ರತಿ ಎಕ್ಸ್‌ಟೆನ್ಶನ್‌ಗೆ ಎಷ್ಟು ಆ್ಯಕ್ಸೆಸ್ ನೀಡಬೇಕು ಎಂಬುದನ್ನು ಆಯ್ಕೆಮಾಡಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

    ಪ್ರಮುಖ ಸೂಚನೆ: ನೀವು ಇನ್‌ಸ್ಟಾಲ್ ಮಾಡಿದ ಎಕ್ಸ್‌ಟೆನ್ಶನ್‌ಗಳನ್ನು ಪರಿಶೀಲಿಸಿ ಮತ್ತು ಅವುಗಳು ಏನು ಮಾಡುತ್ತವೆ ಎಂಬುದರ ಕುರಿತು ನಿಮಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ನೀವು ಸೆಟ್ಟಿಂಗ್ಸ್ ಆ್ಯಪ್‌  > ಆ್ಯಪ್‌ಗಳು > Safari > ಎಕ್ಸ್‌ಟೆನ್ಶನ್‌‌ಗಳು ಎಂಬಲ್ಲಿ ಎಕ್ಸ್‌ಟೆನ್ಶನ್‌ಗಳನ್ನು ಮತ್ತಷ್ಟು ನಿರ್ವಹಿಸಬಹುದು.

ವೈಯಕ್ತಿಕ ವೆಬ್‌ಸೈಟ್‌ಗಾಗಿ Safari ಎಕ್ಸ್‌ಟೆನ್ಶನ್ ಸೆಟ್ಟಿಂಗ್ಸ್ ಬದಲಾಯಿಸಿ

ನಿಮ್ಮ ಒಟ್ಟಾರೆ Safari ಸೆಟ್ಟಿಂಗ್ಸ್ ಬದಲಾಯಿಸದೆಯೇ ನೀವು ವೈಯಕ್ತಿಕ ವೆಬ್‌ಸೈಟ್‌ಗಾಗಿ ಎಕ್ಸ್‌ಟೆನ್ಶನ್ ಅನ್ನು ಆನ್ ಅಥವಾ ಆಫ್ ಮಾಡಬಹುದು.

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ಹುಡುಕಾಟ ಫೀಲ್ಡ್‌ನ ಬಲಭಾಗದಲ್ಲಿ ಎಕ್ಸ್‌ಟೆನ್ಶನ್‌ಗಳನ್ನು ನಿರ್ವಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಎಕ್ಸ್‌ಟೆನ್ಶನ್‌ಗಳನ್ನು ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಪ್ರತಿ ಎಕ್ಸ್‌ಟೆನ್ಶನ್‌ ಅನ್ನು ಆನ್ ಅಥವಾ ಆಫ್ ಮಾಡಿ.

Safari ಎಕ್ಸ್‌ಟೆನ್ಶನ್‌ ಅನ್ನು ತೆಗೆದುಹಾಕಿ

  1. ಹೋಮ್ ಸ್ಕ್ರೀನ್‌ನಲ್ಲಿ ಕೆಳಕ್ಕೆ ಸ್ವೈಪ್ ಮಾಡಿ, ನಂತರ ನೀವು ತೆಗೆದುಹಾಕಲು ಬಯಸುವ ಎಕ್ಸ್‌ಟೆನ್ಶನ್‌ ಅನ್ನು ಹುಡುಕಿ.

  2. ಎಕ್ಸ್‌ಟೆನ್ಶನ್ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ, "ಆ್ಯಪ್ ಅನ್ನು ಡಿಲೀಟ್ ಮಾಡಿ" ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಸೂಚನೆಗಳನ್ನು ಅನುಸರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.