ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ iCloud+ಗೆ ಸಬ್‌ಸ್ಕ್ರೈಬ್ ಮಾಡಿ

iCloud+ ಸೇವೆಯು iCloud ಒದಗಿಸುವ ಎಲ್ಲವನ್ನೂ ನಿಮಗೆ ನೀಡುವುದರ ಜೊತೆಗೆ iCloud ಪ್ರೈವೇಟ್ ರಿಲೇ, “ನನ್ನ ಈಮೇಲ್ ಅನ್ನು ಮರೆಮಾಡಿ”, HomeKit ಸುರಕ್ಷಿತ ವೀಡಿಯೊ ಬೆಂಬಲವನ್ನು ಒಳಗೊಂಡ ಪ್ರೀಮಿಯಂ ಫೀಚರ್‌ಗಳು ಹಾಗೂ ನಿಮ್ಮ ಫೋಟೋಗಳು, ಫೈಲ್‌ಗಳು ಮತ್ತು ಇತ್ಯಾದಿಗಳಿಗಾಗಿ ನಿಮಗೆ ಅಗತ್ಯವಿರುವ ಎಲ್ಲಾ ಸಂಗ್ರಹಣೆಯನ್ನೂ ನೀಡುತ್ತದೆ.

ನೀವು iCloud+ ಅಥವಾ Apple Oneಗೆ ಸಬ್‌ಸ್ಕ್ರೈಬ್ ಮಾಡಬಹುದು. ಅದರಲ್ಲಿ iCloud+ ಮತ್ತು ಇತರ Apple ಸೇವೆಗಳು ಸೇರಿರುತ್ತವೆ. Apple One ಮೂಲಕ Apple ಸಬ್‌ಸ್ಕ್ರಿಪ್ಶನ್‌ಗಳನ್ನು ಬಂಡಲ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಗಮನಿಸಿ: ಕೆಲವು iCloud+ ಫೀಚರ್‌ಗಳಿಗೆ ಕನಿಷ್ಠ ಸಿಸ್ಟಮ್ ಅವಶ್ಯಕತೆಗಳು ಬೇಕಿರುತ್ತವೆ. iCloud+ ಮತ್ತು ಅದರ ಫೀಚರ್‌ಗಳ ಲಭ್ಯತೆಯು ದೇಶ ಅಥವಾ ಪ್ರದೇಶಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ.

iCloud+ನಲ್ಲಿ ಏನೆಲ್ಲವನ್ನು ಸೇರಿಸಲಾಗಿದೆ?

ನೀವು iCloud+ಗೆ ಸಬ್‌ಸ್ಕ್ರೈಬ್ ಮಾಡಿದಾಗ, ನೀವು iPadನಲ್ಲಿ ಈ ಕೆಳಗಿನವುಗಳನ್ನು ಮಾಡಬಹುದು:

iCloud+ ಫೀಚರ್‌ಗಳು ಮತ್ತು ಅವುಗಳು ನಿಮ್ಮ ಎಲ್ಲಾ ಸಾಧನಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, iCloud ಬಳಕೆದಾರರ ಮಾರ್ಗದರ್ಶಿಯನ್ನು ನೋಡಿ.

ನಿಮ್ಮ iCloud+ ಸಬ್‌ಸ್ಕ್ರಿಪ್ಶನ್ ಅನ್ನು ಅಪ್‌ಗ್ರೇಡ್ ಮಾಡಿ, ಬದಲಾಯಿಸಿ ಅಥವಾ ರದ್ದು ಮಾಡಿ

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ, ನಂತರ iCloud ಅನ್ನು ಟ್ಯಾಪ್ ಮಾಡಿ.

  3. ಸಂಗ್ರಹಣೆ ಎಂಬುದನ್ನು ಟ್ಯಾಪ್ ಮಾಡಿ, ಸಂಗ್ರಹಣೆಯ ಪ್ಲಾನ್ ಬದಲಾಯಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಗಮನಿಸಿ: ನಿಮ್ಮ iCloud+ ಸಬ್‌ಸ್ಕ್ರಿಪ್ಶನ್ ಅನ್ನು ನೀವು ರದ್ದು ಮಾಡಿದರೆ, ಹೆಚ್ಚುವರಿ iCloud ಸಂಗ್ರಹಣೆ ಮತ್ತು iCloud+ ಫೀಚರ್‌ಗಳಿಗೆ ನೀವು ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತೀರಿ.

iCloud+ ಅನ್ನು ಹಂಚಿಕೊಳ್ಳಿ

ಕುಟುಂಬದ ಇತರ ಗರಿಷ್ಠ ಐವರು ಸದಸ್ಯರೊಂದಿಗೆ iCloud+ ಅನ್ನು ಹಂಚಿಕೊಳ್ಳಲು ನೀವು ಕುಟುಂಬ ಹಂಚಿಕೆಯನ್ನು ಬಳಸಬಹುದು. iCloud+ ಅನ್ನು ಹಂಚಿಕೊಳ್ಳುವ ನಿಮ್ಮ ಆಹ್ವಾನವನ್ನು ನಿಮ್ಮ ಕುಟುಂಬದ ಸದಸ್ಯರು ಸ್ವೀಕರಿಸಿದಾಗ, ಅವರು ಹೆಚ್ಚುವರಿ ಸಂಗ್ರಹಣೆ ಮತ್ತು ಫೀಚರ್‌ಗಳಿಗೆ ತ್ವರಿತ ಆ್ಯಕ್ಸೆಸ್ ಹೊಂದಿರುತ್ತಾರೆ.

ಗಮನಿಸಿ: ಕುಟುಂಬದ ಗುಂಪಿನೊಂದಿಗೆ iCloud+ ಹಂಚಿಕೊಳ್ಳುವುದನ್ನು ನಿಲ್ಲಿಸಲು, ನೀವು ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಗೊಳಿಸಬಹುದು, ಕುಟುಂಬದ ಗುಂಪಿನಿಂದ ಹೊರಬರಬಹುದು ಅಥವಾ ಕುಟುಂಬ ಹಂಚಿಕೆಯನ್ನು ತೊರೆಯಬಹುದು ಅಥವಾ ಆಫ್ ಮಾಡಬಹುದು. ಕುಟುಂಬ ಹಂಚಿಕೆ ಗುಂಪಿಗೆ ಸದಸ್ಯರನ್ನು ಸೇರಿಸಿ ಎಂಬುದನ್ನು ನೋಡಿ.

ನಿಮ್ಮ Apple ಸಬ್‌ಸ್ಕ್ರಿಪ್ಶನ್‌ಗಳನ್ನು ಸಂಯೋಜಿಸುವ ಕುರಿತಾದ ಮಾಹಿತಿಗಾಗಿ, Apple One ಮೂಲಕ Apple ಸಬ್‌ಸ್ಕ್ರಿಪ್ಶನ್‌ಗಳನ್ನು ಬಂಡಲ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.