iPadನಲ್ಲಿನ ಹುಡುಕಿ ಆ್ಯಪ್‌ನಲ್ಲಿ ನಿಮ್ಮ ಸ್ಥಳವನ್ನು ಹಂಚಿಕೊಳ್ಳಿ

ನಿಮ್ಮ ಸ್ಥಳವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನೀವು ಹುಡುಕಿ ಆ್ಯಪ್ ಅನ್ನು ಬಳಸುವ ಮೊದಲು, ನೀವು ಸ್ಥಳ ಹಂಚಿಕೆಯನ್ನು ಸೆಟಪ್ ಮಾಡಬೇಕಾಗುತ್ತದೆ.

ಗಮನಿಸಿ: ನೀವು ಸ್ಥಳ ಹಂಚಿಕೆಯನ್ನು ಸೆಟಪ್ ಮಾಡಿದ ನಂತರವೂ ಇತರರಿಗೆ ನಿಮ್ಮ ಸ್ಥಳ ಕಾಣಿಸದಿದ್ದರೆ, ಸೆಟ್ಟಿಂಗ್ಸ್ ಆ್ಯಪ್  > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಹುಡುಕಿ ಎಂಬಲ್ಲಿ ಸ್ಥಳ ಸೇವೆಗಳು ಆನ್ ಆಗಿವೆಯೆಂದು ಖಚಿತಪಡಿಸಿಕೊಳ್ಳಿ. ಸ್ಥಳ ಹಂಚಿಕೆಯು ಎಲ್ಲಾ ಸ್ಥಳಗಳಲ್ಲಿ ಲಭ್ಯವಿರುವುದಿಲ್ಲ. ನೀವು ಹಂಚಿಕೊಳ್ಳುವ ಸ್ಥಳದ ಮಾಹಿತಿಯನ್ನು ನಿಯಂತ್ರಿಸಿ ಎಂಬುದನ್ನು ನೋಡಿ.

ಪ್ರತಿ ಐಟಮ್‌ಗೆ ಒಟ್ಟು ಆರು ಬಳಕೆದಾರರಂತೆ, ನೀವು AirTag ಅಥವಾ ಇತರ ಐಟಮ್ ಅನ್ನು, ನಿಮ್ಮನ್ನೂ ಸೇರಿಸಿ ಗರಿಷ್ಠ ಐದು ಬಳಕೆದಾರರೊಂದಿಗೆ ಹಂಚಿಕೊಳ್ಳಬಹುದು.

ಸ್ಥಳ ಹಂಚಿಕೆಯನ್ನು ಸೆಟಪ್ ಮಾಡಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳಭಾಗದ ಎಡಬದಿಯಲ್ಲಿರುವ ’ನಾನು’ ಎಂಬುದನ್ನು ಟ್ಯಾಪ್ ಮಾಡಿ, ನಂತರ ನನ್ನ ಸ್ಥಳವನ್ನು ಹಂಚಿಕೊಳ್ಳಿ ಎಂಬುದನ್ನು ಆನ್ ಮಾಡಿ.

    ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತಿರುವ ಸಾಧನವು ‘ಇಲ್ಲಿಂದ ಹಂಚಿಕೊಳ್ಳಲಾಗುತ್ತಿದೆ’ ಎಂಬುದರ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತದೆ.

  3. ನಿಮ್ಮ iPad ಪ್ರಸ್ತುತ ನಿಮ್ಮ ಸ್ಥಳವನ್ನು ಹಂಚಿಕೊಳ್ಳದಿದ್ದರೆ, ನೀವು ಈ iPad ಅನ್ನು ನನ್ನ ಸ್ಥಳವನ್ನಾಗಿ ಬಳಸಿ ಎಂಬುದನ್ನು ಟ್ಯಾಪ್ ಮಾಡಬಹುದು.

ಗಮನಿಸಿ: ಬೇರೊಂದು ಸಾಧನದಿಂದ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು, ಸಾಧನದಲ್ಲಿರುವ ಹುಡುಕಿ ಆ್ಯಪ್ ಅನ್ನು ತೆರೆಯಿರಿ ಮತ್ತು ನಿಮ್ಮ ಸ್ಥಳವನ್ನು ಆ ಸಾಧನಕ್ಕೆ ಬದಲಾಯಿಸಿ.

ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಹುಡುಕಿ ಆ್ಯಪ್‌ ಎಂಬಲ್ಲಿ ಸಹ ನಿಮ್ಮ ಸ್ಥಳ ಹಂಚಿಕೆ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು.

ನಿಮ್ಮ ಸ್ಥಳಕ್ಕಾಗಿ ಲೇಬಲ್ ಅನ್ನು ಸೆಟ್ ಮಾಡಿ

ನಿಮ್ಮ ಪ್ರಸ್ತುತ ಸ್ಥಳವನ್ನು ಹೆಚ್ಚು ಅರ್ಥಪೂರ್ಣವಾಗಿಸಲು ನೀವು ಅದಕ್ಕಾಗಿ ಲೇಬಲ್ ಅನ್ನು ಸೆಟ್ ಮಾಡಬಹುದು (ಉದಾಹರಣೆಗೆ ಮನೆ ಅಥವಾ ಕೆಲಸದ ಸ್ಥಳ). ನೀವು ನಾನು ಎಂಬುದನ್ನು ಟ್ಯಾಪ್ ಮಾಡಿದಾಗ, ನಿಮ್ಮ ಸ್ಥಳದ ಜೊತೆಗೆ ನೀವು ಲೇಬಲ್ ಅನ್ನು ನೋಡುತ್ತೀರಿ.

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳಭಾಗದ ಎಡಬದಿಯಲ್ಲಿರುವ ’ನಾನು’ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಥಳದ ಲೇಬಲ್ ಎಂಬುದನ್ನು ಟ್ಯಾಪ್ ಮಾಡಿ.

  3. ಲೇಬಲ್ ಅನ್ನು ಆಯ್ಕೆಮಾಡಿ.

    ಹೊಸ ಲೇಬಲ್ ಅನ್ನು ಸೇರಿಸಲು, ಕಸ್ಟಮ್ ಲೇಬಲ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ಹೆಸರನ್ನು ನಮೂದಿಸಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಸ್ನೇಹಿತರ ಜೊತೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನನ್ನ ಸ್ಥಳವನ್ನು ಹಂಚಿಕೊಳ್ಳಿ ಎಂಬುದನ್ನು ಆಯ್ಕೆಮಾಡಿ.

  3. ‘ಇವರೊಂದಿಗೆ’ ಫೀಲ್ಡ್‌ನಲ್ಲಿ, ನಿಮ್ಮ ಸ್ಥಳವನ್ನು ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರೋ ಆ ಸ್ನೇಹಿತರ ಹೆಸರನ್ನು ಟೈಪ್ ಮಾಡಿ (ಅಥವಾ ಸಂಪರ್ಕವನ್ನು ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಸಂಪರ್ಕವೊಂದನ್ನು ಆಯ್ಕೆಮಾಡಿ).

  4. ಕಳುಹಿಸಿ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ಥಳವನ್ನು ನೀವು ಎಷ್ಟು ಸಮಯದವರೆಗೆ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ.

ನೀವು ನಿಮ್ಮ ಸ್ಥಳ ಬದಲಾದಾಗ ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಸೂಚಿಸಲೂಬಹುದು

ನೀವು ಕುಟುಂಬ ಹಂಚಿಕೆ ಗುಂಪಿನ ಸದಸ್ಯರಾಗಿದ್ದರೆ, ನಿಮ್ಮ ಸ್ಥಳವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ ಅನ್ನು ನೋಡಿ.

ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ

ನಿರ್ದಿಷ್ಟ ಸ್ನೇಹಿತರೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದನ್ನು ನೀವು ನಿಲ್ಲಿಸಬಹುದು ಅಥವಾ ನಿಮ್ಮ ಸ್ಥಳವನ್ನು ಎಲ್ಲರಿಂದಲೂ ಮರೆಮಾಡಬಹುದು.

  • ಸ್ನೇಹಿತರೊಬ್ಬರ ಜೊತೆ ಹಂಚಿಕೊಳ್ಳುವುದನ್ನು ನಿಲ್ಲಿಸಿ: ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ಯಾವ ವ್ಯಕ್ತಿಯೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ನಿಮಗೆ ಇಷ್ಟವಿಲ್ಲವೊ ಅವರ ಹೆಸರನ್ನು ಟ್ಯಾಪ್ ಮಾಡಿ. ನನ್ನ ಸ್ಥಳವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಥಳವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

  • ಪ್ರತಿಯೊಬ್ಬರಿಂದ ನಿಮ್ಮ ಸ್ಥಳವನ್ನು ಮರೆಮಾಡಿ: ಸ್ಕ್ರೀನ್‌ನ ಕೆಳಗಿನ ಎಡಭಾಗದಲ್ಲಿರುವ ’ನಾನು’ ಎಂಬುದನ್ನು ಟ್ಯಾಪ್ ಮಾಡಿ, ನಂತರ ನನ್ನ ಸ್ಥಳವನ್ನು ಹಂಚಿಕೊಳ್ಳಿ ಎಂಬುದನ್ನು ಆಫ್ ಮಾಡಿ.

ಸ್ಥಳ ಹಂಚಿಕೊಳ್ಳುವ ವಿನಂತಿಗೆ ಪ್ರತಿಕ್ರಿಯಿಸಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ.

  3. ವಿನಂತಿಯನ್ನು ಕಳುಹಿಸಿದ ಸ್ನೇಹಿತರ ಹೆಸರಿನ ಕೆಳಗಿರುವ ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ಥಳವನ್ನು ನೀವು ಎಷ್ಟು ಸಮಯದವರೆಗೆ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ.

    ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ನೀವು ಬಯಸದಿದ್ದರೆ, ರದ್ದುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.

ಹೊಸ ಸ್ಥಳ ಹಂಚಿಕೆ ವಿನಂತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿರುವ ನಾನು ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ನೇಹಿತರ ವಿನಂತಿಗಳನ್ನು ಅನುಮತಿಸಿ ಎಂಬುದನ್ನು ಆಫ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.