ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ನಕ್ಷೆ ಆ್ಯಪ್‌ ಬಳಸುವುದು

ನಕ್ಷೆ ಆ್ಯಪ್, ನಕ್ಷೆ ಆ್ಯಪ್‌ನ ವಿಜೆಟ್, Siri ಅಥವಾ ಇತರೆ ಸಾಧನಗಳನ್ನು ಬಳಸಿಕೊಂಡು ನೀವು ಪ್ರಯಾಣದ ಮಾರ್ಗ ನಿರ್ದೇಶನಗಳನ್ನು ಪಡೆಯಬಹುದು. ನೀವು ಹೊರಡುವ ಮೊದಲು ನಿಮ್ಮ Macನಲ್ಲಿ ಸಹ ನೀವು ಅವುಗಳನ್ನು ಪಡೆಯಬಹುದು.

ಪ್ರಮುಖ ಸೂಚನೆ: ಮಾರ್ಗ ನಿರ್ದೇಶನಗಳನ್ನು ಪಡೆಯಲು, iPad ಇಂಟರ್ನೆಟ್‌ಗೆ ಕನೆಕ್ಟ್ ಆಗಿರಬೇಕು ಮತ್ತು ಸ್ಥಳ ಸೇವೆಗಳು ಆನ್ ಆಗಿರಬೇಕು. Wi-Fi + Cellular ಮಾಡಲ್‌ಗಳಲ್ಲಿ, ಮೊಬೈಲ್ ಡೇಟ ದರಗಳು ಅನ್ವಯಿಸಬಹುದು. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

ಮಾರ್ಗ ನಿರ್ದೇಶನಗಳನ್ನು ಪಡೆಯಿರಿ

  1. ನಿಮ್ಮ iPadನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಕ್ಷೆಯಲ್ಲಿ ಎಲ್ಲಿಯಾದರೂ ಒತ್ತಿ ಹಿಡಿದುಕೊಳ್ಳಿ ಅಥವಾ ಹುಡುಕಾಟದ ಫೀಲ್ಡ್‌ನಲ್ಲಿ ಸ್ಥಳವನ್ನು ನಮೂದಿಸಿ.

  3. ಮಾರ್ಗ ನಿರ್ದೇಶನಗಳು ಎಂಬುದನ್ನು ಅಥವಾ ಪ್ರಯಾಣ ಮೋಡ್ ಬಟನ್ ಅನ್ನು ಟ್ಯಾಪ್ ಮಾಡಿ (ಡ್ರೈವಿಂಗ್ , ನಡಿಗೆ , ಸಾರಿಗೆ , ಅಥವಾ ಸೈಕ್ಲಿಂಗ್ ).

  4. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿಮ್ಮ ಆರಂಭದ ಬಿಂದುವು ನನ್ನ ಸ್ಥಳ ಎಂಬುದಾಗಿದ್ದರೆ: ನೀವು ಹೋಗಲು ಬಯಸುವ ಮಾರ್ಗಕ್ಕಾಗಿ ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ ಮಾರ್ಗದಲ್ಲಿ ನೀವು ಪ್ರಯಾಣಿಸುವಾಗ, ನಕ್ಷೆ ಆ್ಯಪ್ ನೀವು ತಲುಪಬೇಕಾದ ಸ್ಥಳಕ್ಕೆ ಹೋಗಲು ಟರ್ನ್-ಬೈ-ಟರ್ನ್ ಮಾರ್ಗ ನಿರ್ದೇಶನಗಳನ್ನು ಮಾತಿನಲ್ಲಿ ಹೇಳುತ್ತದೆ.

    • ನಿಮ್ಮ ಆರಂಭದ ಬಿಂದುವು ಬೇರೊಂದು ಸ್ಥಳವಾಗಿದ್ದರೆ: ನೀವು ಬಳಸಲು ಬಯಸುವ ಮಾರ್ಗಕ್ಕೆ ಸಂಬಂಧಿಸಿದ ಹಂತಗಳು ಎಂಬುದನ್ನು ಟ್ಯಾಪ್ ಮಾಡಿ.

ತಲುಪಬೇಕಾದ ಒಂದೇ ಸ್ಥಳಕ್ಕೆ ಹಲವಾರು ಡ್ರೈವಿಂಗ್ ಮಾರ್ಗದ ಆಯ್ಕೆಗಳನ್ನು ಹೊಂದಿರುವ ನಕ್ಷೆಯನ್ನು ತೋರಿಸುತ್ತಿರುವ iPad. ಪ್ರತಿ ಮಾರ್ಗವು ಅಂದಾಜು ಸಮಯ ಮತ್ತು ದೂರವನ್ನು ಹಾಗೂ ವಿವರವಾದ ನಿರ್ದೇಶನಗಳನ್ನು ನೋಡಲು ಸಹಾಯವಾಗುವ ಹಂತಗಳು ಎಂಬ ಬಟನ್ ಅನ್ನು ತೋರಿಸುತ್ತದೆ. ಪ್ರತಿ ಮಾರ್ಗದಲ್ಲಿನ ಬಣ್ಣದ ಕೋಡಿಂಗ್ ಟ್ರಾಫಿಕ್ ಪರಿಸ್ಥಿತಿಗಳನ್ನು ಸೂಚಿಸುತ್ತದೆ.

ನಕ್ಷೆ ಆ್ಯಪ್‌ನ ವಿಜೆಟ್ ಅನ್ನು ಬಳಸುವುದು

ಸಂಭಾವ್ಯ ತಲುಪಬೇಕಾದ ಸ್ಥಳಕ್ಕೆ ಹೋಮ್ ಸ್ಕ್ರೀನ್ ಅಥವಾ ಇಂದು ವ್ಯೂನಿಂದ ಮಾರ್ಗ ನಿರ್ದೇಶನಗಳನ್ನು ಪಡೆಯಲು, ನಕ್ಷೆ ವಿಜೆಟ್ ಅನ್ನು ಸೇರಿಸಿ.

ಮಾರ್ಗ ನಿರ್ದೇಶನಗಳನ್ನು ಪಡೆಯಲು Siriಯನ್ನು ಬಳಸುವುದು

ಮಾರ್ಗ ನಿರ್ದೇಶನಗಳನ್ನು ಪಡೆಯಲು ನೀವು Siriಯನ್ನು ಬಳಸಿಕೊಂಡು ರಸ್ತೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬಹುದು. ಮತ್ತು ಮಾತಿನ ರೂಪದಲ್ಲಿರುವ ಟರ್ನ್-ಬೈ-ಟರ್ನ್ ಮಾರ್ಗ ನಿರ್ದೇಶನಗಳನ್ನು ಆಲಿಸುವ ಮೂಲಕ, ನಿಮ್ಮ iPad ಅನ್ನು ನೋಡದೆಯೇ ನೀವು ಡ್ರೈವಿಂಗ್, ಸೈಕ್ಲಿಂಗ್ ಮತ್ತು ನಡಿಗೆಯ ಮಾರ್ಗ ನಿರ್ದೇಶನಗಳನ್ನು ಅನುಸರಿಸಬಹುದು.

ನಿಮ್ಮ Macನಿಂದ ನಿಮ್ಮ iPadಗೆ ಮಾರ್ಗ ನಿರ್ದೇಶನಗಳನ್ನು ಕಳುಹಿಸುವುದು

ದೊಡ್ಡ ಪ್ರವಾಸದ ಮೊದಲು ಅಥವಾ ಸೈಕ್ಲಿಂಗ್ ಮಾಡುವ ಒಂದು ದಿನದ ಮೊದಲು, ನಿಮ್ಮ Macನಲ್ಲಿ ನಿಮ್ಮ ಮಾರ್ಗವನ್ನು ನೀವು ಪ್ಲ್ಯಾನ್ ಮಾಡಬಹುದು, ನಂತರ ವಿವರಗಳನ್ನು ನಿಮ್ಮ iPadಗೆ ಹಂಚಿಕೊಳ್ಳಬಹುದು. ನಿಮ್ಮ Mac ಮತ್ತು ನಿಮ್ಮ iPad ಎರಡರಲ್ಲೂ ನೀವು ಒಂದೇ Apple ಖಾತೆಗೆ ಸೈನ್ ಇನ್ ಆಗಿರಬೇಕು.

  1. ನಿಮ್ಮ Macನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಿಮ್ಮ ಪ್ರವಾಸಕ್ಕಾಗಿ ಮಾರ್ಗವೊಂದನ್ನು ರಚಿಸಿ.

    ನಕ್ಷೆ ಆ್ಯಪ್‌ನ ಬಳಕೆದಾರರ ಮಾರ್ಗದರ್ಶಿಯಲ್ಲಿ ನಿಮ್ಮ Macನಲ್ಲಿ ಮಾರ್ಗವನ್ನು ಪ್ಲಾನ್ ಮಾಡಿ ಎಂಬುದನ್ನು ನೋಡಿ.

  3. ಫೈಲ್ > ಹಂಚಿಕೊಳ್ಳಿ > [ ನಿಮ್ಮ ಸಾಧನಕ್ಕೆ] ಕಳುಹಿಸಿ ಎಂಬುದನ್ನು ಆಯ್ಕೆಮಾಡಿ.

iPadನಿಂದ Macಗೆ ಮಾರ್ಗ ನಿರ್ದೇಶನಗಳನ್ನು ಕಳುಹಿಸಲು ನೀವು Handoff ಅನ್ನು ಸಹ ಬಳಸಬಹುದು. iPad ಮತ್ತು ನಿಮ್ಮ ಇತರೆ ಸಾಧನಗಳ ನಡುವೆ ಟಾಸ್ಕ್‌ಗಳನ್ನು ಹ್ಯಾಂಡ್ ಆಫ್ ಮಾಡುವುದು ಅನ್ನು ನೋಡಿ.

Siri: ಮಾರ್ಗ ನಿರ್ದೇಶನಗಳನ್ನು ಪಡೆಯಲು ಮತ್ತು ರಸ್ತೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ನೀವು Siriಯನ್ನು ಬಳಸಬಹುದು. ಉದಾಹರಣೆಗೆ, ಈ ರೀತಿ ಏನಾದರೂ Siriಗೆ ಕೇಳಿ, “Find a charging station” ಅಥವಾ “Give me directions home.” ಮಾರ್ಗ ನಿರ್ದೇಶನಗಳನ್ನು ಪಡೆಯಲು Siriಯನ್ನು ಬಳಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.