iPadಗೆ ಗೇಮ್ ಕಂಟ್ರೋಲರ್ ಅನ್ನು ಕನೆಕ್ಟ್ ಮಾಡುವುದು

ನೀವು ಹೊಂದಾಣಿಕೆಯಾಗುವ ಗೇಮ್ ಕಂಟ್ರೋಲರ್ ಅನ್ನು Bluetooth® ಅಥವಾ ವಯರ್ಡ್ ಕನೆಕ್ಷನ್ ಮೂಲಕ ನಿಮ್ಮ iPadಗೆ ಕನೆಕ್ಟ್ ಮಾಡಬಹುದು. ನೀವು ಬಟನ್‌ಗಳನ್ನು ಕಸ್ಟಮೈಸ್ ಮಾಡಬಹುದು, ಸ್ನೇಹಿತರಿಂದ ಸಹಾಯ ಪಡೆಯಲು ಎರಡನೇ ಕಂಟ್ರೋಲರ್ ಅನ್ನು ಸೇರಿಸಬಹುದು ಮತ್ತು iPadನಲ್ಲಿ Apple Games ಆ್ಯಪ್‌ಗೆ ನ್ಯಾವಿಗೇಟ್ ಮಾಡಲು ನಿಮ್ಮ ಕಂಟ್ರೋಲರ್ ಅನ್ನು ಬಳಸಬಹುದು.

Bluetooth ಗೇಮ್ ಕಂಟ್ರೋಲರ್ ಅನ್ನು ಪೇರ್ ಮಾಡುವುದು

  1. ಕಂಟ್ರೋಲರ್ ಅನ್ನು ಡಿಸ್ಕವರಿ ಮೋಡ್‌ನಲ್ಲಿ ಇರಿಸಲು ಅದರೊಂದಿಗೆ ಒದಗಿಸಲಾದ ಸೂಚನೆಗಳನ್ನು ಅನುಸರಿಸಿ.

  2. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  3. Bluetooth ಅನ್ನು ಟ್ಯಾಪ್ ಮಾಡಿ, Bluetooth ಅನ್ನು ಆನ್ ಮಾಡಿ, ನಂತರ ಸಾಧನದ ಹೆಸರನ್ನು ಟ್ಯಾಪ್ ಮಾಡಿ.

ನಿಮ್ಮ Apple ಸಾಧನಕ್ಕೆ ವಯರ್‌ಲೆಸ್ ಗೇಮ್ ಕಂಟ್ರೋಲರ್ ಅನ್ನು ಕನೆಕ್ಟ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ವಯರ್ಡ್ ಗೇಮ್ ಕಂಟ್ರೋಲರ್ ಅನ್ನು ಕನೆಕ್ಟ್ ಮಾಡುವುದು

ನಿಮ್ಮ iPadಗೆ ಹೊಂದಾಣಿಕೆಯಾಗುವ ವಯರ್ಡ್ ಗೇಮ್ ಕಂಟ್ರೋಲರ್ ಅನ್ನು ನೀವು ಕನೆಕ್ಟ್ ಮಾಡಬಹುದು. ನಿಮ್ಮ iPad ಮಾಡಲ್ ಮತ್ತು ಕಂಟ್ರೋಲರ್ ಅನ್ನು ಅವಲಂಬಿಸಿ, ನಿಮಗೆ ಅಡಾಪ್ಟರ್‌ನ ಅವಶ್ಯಕತೆಯಿದೆ (ಪ್ರತ್ಯೇಕವಾಗಿ ಮಾರಾಟಮಾಡಲಾಗುತ್ತದೆ). ನಿಮ್ಮ ಕಂಟ್ರೋಲರ್‌ನೊಂದಿಗೆ ಒದಗಿಸಲಾದ ಸೂಚನೆಗಳನ್ನು ಅನುಸರಿಸಿ.

ಗೇಮ್ ಕಂಟ್ರೋಲರ್ ಬಟನ್‌ಗಳನ್ನು ಕಸ್ಟಮೈಸ್ ಮಾಡುವುದು

ನೀವು ಹೊಂದಾಣಿಕೆಯಾಗುವ ಗೇಮ್ ಕಂಟ್ರೋಲರ್ ಅನ್ನು ಪೇರ್ ಮಾಡಿದ ನಂತರ ಅಥವಾ ಕನೆಕ್ಟ್ ಮಾಡಿದ ನಂತರ, ನೀವು Apple Games ಆ್ಯಪ್‌ನ ಬೆಂಬಲಿತ ಗೇಮ್‌ಗಳಿಗಾಗಿ ಬಟನ್‌ಗಳನ್ನು ಕಸ್ಟಮೈಸ್ ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಸಾಮಾನ್ಯ ಎಂಬುದನ್ನು ಟ್ಯಾಪ್ ಮಾಡಿ, ನಂತರ ಗೇಮ್ ಕಂಟ್ರೋಲರ್ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ಕಸ್ಟಮೈಸ್ ಮಾಡಲು ಬಯಸುವ ಕಂಟ್ರೋಲರ್ ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನ ಯಾವುದನ್ನಾದರೂ ಮಾಡಿ

    • ಡಿಫಾಲ್ಟ್ ಕಂಟ್ರೋಲ್‌ಗಳನ್ನು ಕಸ್ಟಮೈಸ್ ಮಾಡುವುದು: ಡಿಫಾಲ್ಟ್ ಎಂಬುದನ್ನು ಟ್ಯಾಪ್ ಮಾಡಿ.

    • ನಿರ್ದಿಷ್ಟ ಗೇಮ್‌ನ ಕಂಟ್ರೋಲ್‌ಗಳನ್ನು ಕಸ್ಟಮೈಸ್ ಮಾಡುವುದು: ಗೇಮ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ಗೇಮ್ ಅನ್ನು ಆಯ್ಕೆಮಾಡಿ, ನಂತರ ಆಯ್ಕೆಮಾಡಿದ ಗೇಮ್‌ಗೆ ಡಿಫಾಲ್ಟ್ ಅನ್ನು ಟ್ಯಾಪ್ ಮಾಡಿ.

  4. ನಿಮ್ಮ ಕಂಟ್ರೋಲರ್‌ನೊಂದಿಗೆ ನೀವು ಬಳಸಲು ಬಯಸುವ ಆ್ಯಕ್ಷನ್‌ಗಳು ಮತ್ತು ಜೆಸ್ಚರ್‌ಗಳನ್ನು ಆಯ್ಕೆಮಾಡಿ.

ಎರಡನೇ ಗೇಮ್ ಕಂಟ್ರೋಲರ್ ಅನ್ನು ಸೇರಿಸಿ ಮತ್ತು ಸ್ನೇಹಿತರಿಂದ ಸಹಾಯವನ್ನು ಪಡೆಯಿರಿ

ಬಡಿ ಕಂಟ್ರೋಲರ್ ಬಳಸುವಾಗ, iPad ಒಬ್ಬರೇ ಪ್ಲೇಯರ್‌ನ ಕ್ಯಾರೆಕ್ಟರ್ ಅನ್ನು ನಿಯಂತ್ರಿಸುವುದಕ್ಕೆ ಎರಡು ಕಂಟ್ರೋಲರ್‌ಗಳನ್ನು ಬಳಸಲು ಅವಕಾಶ ನೀಡುತ್ತದೆ. ಇದರಿಂದ ಗೇಮ್‌ನ ಕಷ್ಟಕರವಾದ ಭಾಗಗಳಲ್ಲಿ ನ್ಯಾವಿಗೇಟ್ ಮಾಡಲು ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡಬಹುದು. ಗೇಮ್ ಕಂಟ್ರೋಲರ್‌ಗಳನ್ನು ಬೆಂಬಲಿಸುವ ಯಾವುದೇ ಗೇಮ್ ಜೊತೆಗೆ ಬಡಿ ಕಂಟ್ರೋಲರ್ ಬೆಂಬಲಿತವಾಗಿದೆ.

  1. ಎರಡು ಹೊಂದಾಣಿಕೆಯಾಗುವ ಗೇಮ್ ಕಂಟ್ರೋಲರ್‌ಗಳನ್ನು Bluetooth ಅಥವಾ ವಯರ್ಡ್ ಕನೆಕ್ಷನ್ ಮೂಲಕ iPadಗೆ ಕನೆಕ್ಟ್ ಮಾಡಿ.

  2. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  3. ಸಾಮಾನ್ಯ ಎಂಬುದನ್ನು ಟ್ಯಾಪ್ ಮಾಡಿ, ನಂತರ ಗೇಮ್ ಕಂಟ್ರೋಲರ್ ಎಂಬುದನ್ನು ಟ್ಯಾಪ್ ಮಾಡಿ.

  4. ಬಡಿ ಕಂಟ್ರೋಲರ್ ಅನ್ನು ಟ್ಯಾಪ್ ಮಾಡಿ.

  5. ಪ್ರಾಥಮಿಕ ಕಂಟ್ರೋಲರ್ ಅನ್ನು ಆರಿಸಿ, ನಂತರ ಎರಡನೇ ಕಂಟ್ರೋಲರ್ ಅನ್ನು ಆರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.