ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ರಿಮೈಂಡರ್ಸ್ ಆ್ಯಪ್‌ನಲ್ಲಿ ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ

ನೀವು ರಿಮೈಂಡರ್ಸ್ ಆ್ಯಪ್‌ನಲ್ಲಿ iCloud, ಎಂಟರ್‌ಪ್ರೈಸ್-ನಿರ್ವಹಿತ iCloud, Microsoft Exchange ಮತ್ತು Yahoo ರೀತಿಯ ಅನೇಕ ಖಾತೆಗಳನ್ನು ಬಳಸಬಹುದು ಮತ್ತು ನಿಮ್ಮ ಎಲ್ಲಾ ಮಾಡಬೇಕಿರುವ ಕೆಲಸಗಳ ಪಟ್ಟಿಗಳನ್ನು ಒಂದೇ ಸ್ಥಳದಲ್ಲಿ ಇರಿಸಬಹುದು. ಒಂದೇ ಖಾತೆಗಳನ್ನು ಬಳಸುವ ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ರಿಮೈಂಡರ್‌ಗಳು ಅಪ್ ಟು ಡೇಟ್ ಆಗಿರುತ್ತವೆ.

ಗಮನಿಸಿ: ನೀವು ಅಪ್‌ಡೇಟ್ ಮಾಡಲಾದ ರಿಮೈಂಡರ್‌ಗಳನ್ನು ಬಳಸಿದಾಗ ಈ ಮಾರ್ಗದರ್ಶಿಯಲ್ಲಿ ವಿವರಿಸಲಾಗಿರುವ ರಿಮೈಂಡರ್ಸ್ ಆ್ಯಪ್‌ನ ಎಲ್ಲಾ ಫೀಚರ್‌ಗಳು ಲಭ್ಯವಿರುತ್ತವೆ. ಇತರ ಖಾತೆಗಳನ್ನು ಬಳಸುವಾಗ ಕೆಲವು ಫೀಚರ್‌ಗಳು ಲಭ್ಯವಿರುವುದಿಲ್ಲ.

iCloud ಮೂಲಕ ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ರಿಮೈಂಡರ್‌ಗಳನ್ನು ಅಪ್ ಟು ಡೇಟ್ ಆಗಿರಿಸಿ

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.

  3. iCloud ಅನ್ನು ಟ್ಯಾಪ್ ಮಾಡಿ, ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ರಿಮೈಂಡರ್ಸ್ ಆ್ಯಪ್ ಆನ್ ಮಾಡಿ.

iCloudನಲ್ಲಿ ಸಂಗ್ರಹಿಸಲಾಗಿರುವ ನಿಮ್ಮ ರಿಮೈಂಡರ್‌ಗಳು ಮತ್ತು ನೀವು ಅವುಗಳಲ್ಲಿ ಮಾಡುವ ಯಾವುದೇ ಬದಲಾವಣೆಗಳು ನೀವು ಅದೇ Apple ಖಾತೆಗೆ ಸೈನ್ ಇನ್ ಮಾಡಿರುವ ನಿಮ್ಮ iPhone, iPad, Apple Watch ಮತ್ತು Macನಲ್ಲಿ ಕಾಣಿಸಿಕೊಳ್ಳುತ್ತವೆ.

iCloudನಲ್ಲಿ ಸಂಗ್ರಹಿಸಲಾಗಿರುವ ನಿಮ್ಮ ರಿಮೈಂಡರ್‌ಗಳನ್ನು ಅಪ್‌ಡೇಟ್ ಮಾಡಿ

ನೀವು iOS 12 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಗಳೊಂದಿಗೆ ರಿಮೈಂಡರ್ಸ್ ಆ್ಯಪ್ ಅನ್ನು ಬಳಸುತ್ತಿದ್ದರೆ ಅಟ್ಯಾಚ್‌ಮೆಂಟ್‌ಗಳು, ಫ್ಲ್ಯಾಗ್‌ಗಳು, ಪಟ್ಟಿಯ ಬಣ್ಣಗಳು, ಐಕಾನ್‌ಗಳು ಮತ್ತು ಇತ್ಯಾದಿಗಳಂತಹ ಫೀಚರ್‌ಗಳನ್ನು ಬಳಸಲು iCloudನಲ್ಲಿ ಸಂಗ್ರಹಿಸಲಾಗಿರುವ ನಿಮ್ಮ ರಿಮೈಂಡರ್‌ಗಳನ್ನು ನೀವು ಅಪ್‌ಡೇಟ್ ಮಾಡಬೇಕಾಗಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.

  3. iCloud ಅನ್ನು ಟ್ಯಾಪ್ ಮಾಡಿ, ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ರಿಮೈಂಡರ್ಸ್ ಆ್ಯಪ್ ಅನ್ನು ಆನ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

  4. ರಿಮೈಂಡರ್ಸ್ ಆ್ಯಪ್‌ಗೆ ಹೋಗಿ.

  5. ರಿಮೈಂಡರ್ ಆ್ಯಪ್‌ಗೆ ಸುಸ್ವಾಗತ ಎಂಬ ಸ್ಕ್ರೀನ್‌ನಲ್ಲಿ, ಈ ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಆರಿಸಿ:

    • ಈಗ ಅಪ್‌ಡೇಟ್ ಮಾಡಿ: ಅಪ್‌ಡೇಟ್ ಪ್ರಕ್ರಿಯೆಯನ್ನು ಪ್ರಾರಂಭಿಸಿ.

    • ನಂತರ ಅಪ್‌ಡೇಟ್ ಮಾಡಿ: ನಿಮ್ಮ ಪಟ್ಟಿಗಳ ಮೇಲೆ ನೀಲಿ ಬಣ್ಣದ ಅಪ್ಡೇಟ್ ಬಟನ್ ಕಾಣಿಸಿಕೊಳ್ಳುತ್ತದೆ; ನಿಮ್ಮ ರಿಮೈಂಡರ್‌ಗಳನ್ನು ಅಪ್‌ಡೇಟ್ ಮಾಡಲು ನೀವು ಸಿದ್ಧರಾದಾಗ ಅದನ್ನು ಟ್ಯಾಪ್ ಮಾಡಿ.

ಗಮನಿಸಿ: ಅಪ್‌ಡೇಟ್ ಮಾಡಲಾದ ರಿಮೈಂಡರ್‌ಗಳು iOS ಮತ್ತು macOSನ ಹಿಂದಿನ ಆವೃತ್ತಿಗಳಲ್ಲಿನ ರಿಮೈಂಡರ್ಸ್ ಆ್ಯಪ್‌ನಲ್ಲಿ ಹೊಂದಾಣಿಕೆಯಾಗುವುದಿಲ್ಲ. iOS 13 ಅಥವಾ ನಂತರದ ಆವೃತ್ತಿಗಳಲ್ಲಿ ರಿಮೈಂಡರ್ಸ್ ಆ್ಯಪ್ ಅನ್ನು ಅಪ್‌ಗ್ರೇಡ್ ಮಾಡುವುದು ಎಂಬ Apple ಬೆಂಬಲ ಲೇಖನವನ್ನು ನೋಡಿ.

ಇತರ ಖಾತೆಗಳನ್ನು ಸೇರಿಸಿ

Microsoft Exchange ಮತ್ತು Yahoo ರೀತಿಯ ಇತರ ಖಾತೆಗಳಲ್ಲಿ ನಿಮ್ಮ ಮಾಡಬೇಕಿರುವ ಕೆಲಸಗಳ ಪಟ್ಟಿಗಳನ್ನು ನಿರ್ವಹಿಸಲು ನೀವು ರಿಮೈಂಡರ್ಸ್ ಆ್ಯಪ್ ಅನ್ನು ಬಳಸಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ರಿಮೈಂಡರ್ಸ್ ಎಂಬುದನ್ನು ಟ್ಯಾಪ್ ಮಾಡಿ.

  3. ಖಾತೆಗಳನ್ನು ಟ್ಯಾಪ್ ಮಾಡಿ, ನಂತರ ಖಾತೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಖಾತೆ ಪೂರೈಕೆದಾರರನ್ನು ಆರಿಸಿ, ನಂತರ ನಿಮ್ಮ ಖಾತೆಯ ಮಾಹಿತಿಯನ್ನು ನಮೂದಿಸಿ.

    • ನಿಮ್ಮ ಖಾತೆ ಪೂರೈಕೆದಾರು ಪಟ್ಟಿಯಲ್ಲಿ ಇಲ್ಲವೆಂದರೆ, ಇತರೆ ಎಂಬುದನ್ನು ಟ್ಯಾಪ್ ಮಾಡಿ, CalDAV ಖಾತೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಿಮ್ಮ ಖಾತೆಯ ಮಾಹಿತಿಯನ್ನು ನಮೂದಿಸಿ, ನಂತರ ಆ ಖಾತೆಗಾಗಿ ರಿಮೈಂಡರ್ ಆ್ಯಪ್ ಅನ್ನು ಆನ್ ಮಾಡಿ.

ಖಾತೆಯನ್ನು ತೆಗೆದುಹಾಕಿ

ನೀವು ಖಾತೆಯನ್ನು ತೆಗೆದುಹಾಕಿದಾಗ ಅಥವಾ ಡಿಲೀಟ್ ಮಾಡಿದಾಗ, ಆ ಖಾತೆಯಲ್ಲಿರುವ ರಿಮೈಂಡರ್‌ಗಳು ನಿಮ್ಮ iPadನಲ್ಲಿ ಕಾಣಿಸುವುದಿಲ್ಲ. ರಿಮೈಂಡರ್‌ಗಳು ನಿಮ್ಮ ಇಂಟರ್ನೆಟ್ ಖಾತೆಯಲ್ಲಿ ಮತ್ತು ನೀವು ಈಗಾಗಲೇ ಸೆಟಪ್ ಮಾಡಿರುವ ಇತರ ಎಲ್ಲಾ ಸಾಧನಗಳಲ್ಲಿ ಉಳಿಯುತ್ತವೆ (ಉದಾಹರಣೆಗೆ, iCloud.com ಅಥವಾ Microsoft Exchange).

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ರಿಮೈಂಡರ್ಸ್ ಎಂಬುದನ್ನು ಟ್ಯಾಪ್ ಮಾಡಿ.

  3. ರಿಮೈಂಡರ್ ಆ್ಯಪ್‌ನ ಖಾತೆಗಳನ್ನು ಟ್ಯಾಪ್ ಮಾಡಿ, ನಂತರ ನೀವು ತೆಗೆದುಹಾಕಲು ಬಯಸುವ ಖಾತೆಯನ್ನು ಟ್ಯಾಪ್ ಮಾಡಿ.

  4. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಖಾತೆಯಲ್ಲಿ ರಿಮೈಂಡರ್ ಆ್ಯಪ್ ಅನ್ನು ಬಳಸುವುದನ್ನು ನಿಲ್ಲಿಸಿ: ರಿಮೈಂಡರ್‌ಗಳನ್ನು ಆಫ್ ಮಾಡಿ.

      ಕ್ಯಾಲೆಂಡರ್‌ ಆ್ಯಪ್‌ನಂತಹ ಇತರ ಸೇವೆಗಳಿಗಾಗಿ ನೀವು ಖಾತೆಯ ಬಳಕೆಯನ್ನು ಮುಂದುವರಿಸಬಹುದು.

    • ಖಾತೆಯಲ್ಲಿ ಎಲ್ಲಾ ಸೇವೆಗಳ ಬಳಕೆಯನ್ನು ನಿಲ್ಲಿಸಿ: ಸೈನ್ ಔಟ್ ಮಾಡಿ (iCloud ಖಾತೆಗಾಗಿ) ಅಥವಾ ಖಾತೆಯನ್ನು ಡಿಲೀಟ್ ಮಾಡಿ (ಇತರ ಖಾತೆಗಳಿಗಾಗಿ) ಎಂಬುದನ್ನು ಟ್ಯಾಪ್ ಮಾಡಿ.

      ಸೈನ್ ಔಟ್ ಮಾಡಿ ಅಥವಾ ಖಾತೆಯನ್ನು ಡಿಲೀಟ್ ಮಾಡಿ ಎಂಬ ಆಯ್ಕೆಗಳು ನಿಮಗೆ ಕಾಣಿಸದಿದ್ದರೆ, ನಿಮ್ಮ ಖಾತೆಯನ್ನು ನಿಮ್ಮ ಸಂಸ್ಥೆ ನಿರ್ವಹಿಸುತ್ತಿರಬಹುದು. ತೆಗೆದುಹಾಕುವ ಸೂಚನೆಗಳಿಗಾಗಿ ನಿರ್ವಾಹಕರನ್ನು ಸಂಪರ್ಕಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.