ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ Apple TV ಆ್ಯಪ್‌ನಲ್ಲಿ MLS ಅನ್ನು ವೀಕ್ಷಿಸಿ

ನೀವು Apple TVಗೆ ಸಬ್‌ಸ್ಕ್ರೈಬ್ ಮಾಡಿದಾಗ Apple TV ಆ್ಯಪ್‌ನಲ್ಲಿರುವ MLS ನಿಮಗೆ Major League Soccer ಇವೆಂಟ್‌ಗಳಿಗೆ ಆ್ಯಕ್ಸೆಸ್ ಅನ್ನು ನೀಡುತ್ತದೆ.

ನೀವು ಒಂದೇ ಸಮಯದಲ್ಲಿ ಅನೇಕ ಪಂದ್ಯಗಳನ್ನು ವೀಕ್ಷಿಸಬಹುದು, ಲೈವ್ ಗೇಮ್‌ನಲ್ಲಿ ಪ್ರಮುಖ ಆಟಗಳ ಕುರಿತು ತಿಳಿದುಕೊಳ್ಳಬಹುದು, ನನ್ನ ಕ್ರೀಡೆಗಳು ಎಂಬುದನ್ನು ಬಳಸಿಕೊಂಡು ನಿಮ್ಮ ಮೆಚ್ಚಿನ MLS ಕ್ಲಬ್‌ಗಳನ್ನು ಫಾಲೋ ಮಾಡಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ) ಮತ್ತು ಕಳೆದ ಸೀಸನ್‌ನಿಂದ MLS ಕ್ಲಬ್ ಪ್ರೊಫೈಲ್‌ಗಳು, ಪ್ಲೇಯರ್ ಪ್ರೊಫೈಲ್‌ಗಳು, ಲೀಗ್ ಮತ್ತು ಕ್ಲಬ್ ಹೈಲೈಟ್‌ಗಳು ಸೇರಿದಂತೆ ಬೇಡಿಕೆಯ ಮೇರೆಗೆ ಕಂಟೆಂಟ್ ಅನ್ನು ಹಾಗೂ ಮುಂತಾದವುಗಳನ್ನ ವೀಕ್ಷಿಸಬಹುದು.

ಗಮನಿಸಿ: ಕೆಲವು MLS ಗೇಮ್‌ಗಳು ಪ್ರೊಮೋಷನಲ್ ಆಧಾರದ ಮೇಲೆ ವೀಕ್ಷಿಸಲು ಲಭ್ಯವಿರಬಹುದು, ಆದರೆ ಎಲ್ಲಾ ಗೇಮ್‌ಗಳು, ಶೋಗಳು ಮತ್ತು ಫೀಚರ್‌ಗಳಿಗೆ ಸಂಪೂರ್ಣ ಆ್ಯಕ್ಸೆಸ್ ಪಡೆಯಲು Apple TV ಸಬ್‌ಸ್ಕ್ರಿಪ್ಶನ್ ಅಗತ್ಯವಿರುತ್ತದೆ.

Major League Soccer ಅನ್ನು ವೀಕ್ಷಿಸುವುದು

  1. ನಿಮ್ಮ iPadನಲ್ಲಿ Apple TV ಆ್ಯಪ್‌ಗೆ ಹೋಗಿ.

  2. MLS ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಫೀಚರ್ ಮಾಡಲಾದ ಪಂದ್ಯಗಳನ್ನು ಎಕ್ಸ್‌ಪ್ಲೋರ್ ಮಾಡಿ: MLS ಸ್ಕ್ರೀನ್‌ನ ಮೇಲ್ಭಾಗದಲ್ಲಿ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

    • ಲಭ್ಯವಿರುವ ಪಂದ್ಯಗಳು, ಲೀಗ್ ಸ್ಟ್ಯಾಂಡಿಂಗ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಬ್ರೌಸ್ ಮಾಡಿ: ವರ್ಗದ ಸಾಲಿಗೆ ಹೋಗಲು ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಲಭ್ಯವಿರುವ ಆಯ್ಕೆಗಳನ್ನು ನೋಡಲು ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

      ಸಲಹೆ: ವರ್ಗದಲ್ಲಿನ ಎಲ್ಲಾ ಐಟಮ್‌ಗಳನ್ನು ನೋಡಲು ಅಥವಾ ಸಂಗ್ರಹಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಸಾಲಿನ ಶೀರ್ಷಿಕೆಯನ್ನು ಟ್ಯಾಪ್ ಮಾಡಿ.

  3. ವೀಕ್ಷಿಸುವುದನ್ನು ಪ್ರಾರಂಭಿಸಲು, ಇವೆಂಟ್ ಅಥವಾ ಪಂದ್ಯವನ್ನು ಟ್ಯಾಪ್ ಮಾಡಿ.

    ಪಂದ್ಯವು ಪ್ರಗತಿಯಲ್ಲಿದ್ದರೆ, ಲೈವ್ ಬ್ರಾಡ್‌ಕಾಸ್ಟ್‌ಗೆ ಟ್ಯೂನ್ ಮಾಡಲು ಲೈವ್ ಆಗಿ ವೀಕ್ಷಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಮೊದಲಿನಿಂದ ವೀಕ್ಷಿಸಲು ಮೊದಲಿನಿಂದ ಆರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ನಿಮ್ಮ ವಾಚ್‌ಲಿಸ್ಟ್‌ಗೆ ಸೇರಿಸಲಾದ ಕ್ರೀಡಾ ಇವೆಂಟ್‌ಗಳು ಲೈವ್ ಇರುವಾಗ ವೀಕ್ಷಿಸುವುದನ್ನು ಮುಂದುವರಿಸಿ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ.

ಲೈವ್ ಗೇಮ್‌ಗಳ ಸ್ಕೋರ್‌ಗಳನ್ನು ಮರೆಮಾಡಲು, ಸೆಟ್ಟಿಂಗ್ಸ್ ಆ್ಯಪ್‌ , ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, TV ಎಂಬುದನ್ನು ಟ್ಯಾಪ್ ಮಾಡಿ, ನಂತರ ಕ್ರೀಡೆಗಳ ಸ್ಕೋರ್‌ಗಳನ್ನು ತೋರಿಸಿ ಎಂಬುದನ್ನು ಆಫ್ ಮಾಡಿ.

ನಿಮ್ಮ ಮೆಚ್ಚಿನ MLS ಕ್ಲಬ್‌ಗಳನ್ನು ಫಾಲೋ ಮಾಡಿ

  1. ನಿಮ್ಮ iPadನಲ್ಲಿ Apple TV ಆ್ಯಪ್‌ಗೆ ಹೋಗಿ.

  2. MLS ಎಂಬುದನ್ನು ಟ್ಯಾಪ್ ಮಾಡಿ, ನಂತರ ಎಲ್ಲಾ ಕ್ಲಬ್‌ಗಳನ್ನು ಬ್ರೌಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಕ್ಲಬ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ತಂಡವನ್ನು ಫಾಲೋ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ‘ಎಲ್ಲಾ ಕ್ಲಬ್‌ಗಳನ್ನು ಬ್ರೌಸ್ ಮಾಡಿ’ ಎಂಬ ಸಾಲಿನ ಮುಂಭಾಗದಲ್ಲಿ ನೀವು ಫಾಲೋ ಮಾಡುವ ಕ್ಲಬ್‌ಗಳು ಕಾಣಿಸುತ್ತವೆ.

ನೀವು ‘ನನ್ನ ಕ್ರೀಡೆಗಳು’ ಎಂಬುದರ ಮೂಲಕ MLS ಕ್ಲಬ್‌ಗಳನ್ನು ಸಹ ಫಾಲೋ ಮಾಡಬಹುದು. ನನ್ನ ಕ್ರೀಡೆಗಳು ಮೂಲಕ ತಂಡಗಳನ್ನು ಫಾಲೋ ಮಾಡಿ ಎಂಬುದನ್ನು ನೋಡಿ.

ಗಮನಿಸಿ: ನೀವು ಕ್ಲಬ್ ಅನ್ನು ಫಾಲೋ ಮಾಡುವಾಗ, ಅವುಗಳ ಪಂದ್ಯಗಳನ್ನು ವೀಕ್ಷಿಸುವುದನ್ನು ಮುಂದುವರಿಸಿ ಎಂಬಲ್ಲಿ ಸ್ವಯಂಚಾಲಿತವಾಗಿ ಕಾಣಿಸಿಕೊಳ್ಳುತ್ತವೆ.

ಪ್ರಮುಖ ಆಟಗಳ ಮೂಲಕ ತಿಳಿದುಕೊಳ್ಳಿ

ನೀವು ಲೈವ್ ಪಂದ್ಯವನ್ನು ವೀಕ್ಷಿಸಲು ಪ್ರಾರಂಭಿಸಿದಾಗ, ನೀವು ತಪ್ಪಿಸಿಕೊಂಡ ಎಲ್ಲಾ ಪ್ರಮುಖ ಆಟಗಳನ್ನು ವೀಕ್ಷಿಸುವ ಮೂಲಕ ನೀವು ಆ್ಯಕ್ಷನ್‌ನ ಕುರಿತು ತಿಳಿಯಬಹುದು. ನೀವು ಪಂದ್ಯದ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪ್ರಮುಖ ಆಟಗಳನ್ನು ಬ್ರೌಸ್ ಮಾಡಬಹುದು ಮತ್ತು ವೀಕ್ಷಿಸಬಹುದು.

  1. ನಿಮ್ಮ iPadನಲ್ಲಿ Apple TV ಆ್ಯಪ್‌ಗೆ ಹೋಗಿ.

  2. MLS ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಪ್ರಗತಿಯಲ್ಲಿರುವ ಪಂದ್ಯಗಳಲ್ಲಿ ತಪ್ಪಿಸಿಕೊಂಡಿರುವುದನ್ನು ತಿಳಿದುಕೊಳ್ಳಿ: ಮ್ಯಾಚ್ ಅನ್ನು ಟ್ಯಾಪ್ ಮಾಡಿ, ನಂತರ ತಪ್ಪಿಸಿಕೊಂಡಿರುವುದನ್ನು ತಿಳಿದುಕೊಳ್ಳಿ ಟ್ಯಾಪ್ ಮಾಡಿ.

    • ಪಂದ್ಯದ ಸಮಯದಲ್ಲಿ ಪ್ರಮುಖ ಆಟಗಳು ಎಂಬಲ್ಲಿಗೆ ಹೋಗಿ: ಪಂದ್ಯವನ್ನು ವೀಕ್ಷಿಸುತ್ತಿರುವಾಗ, ಪ್ಲೇಬ್ಯಾಕ್ ಕಂಟ್ರೋಲ್‌ಗಳನ್ನು ತೋರಿಸಲು ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ, ಪ್ರಮುಖ ಆಟಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಂಗ್ರಹದ ಸಾಲಿನಿಂದ ಪ್ರಮುಖ ಆಟ ಎಂಬುದನ್ನು ಆಯ್ಕೆಮಾಡಿ.

      ನೀವು ತಪ್ಪಿಸಿಕೊಂಡಿರುವುದನ್ನು ತಿಳಿದುಕೊಳ್ಳುತ್ತಿದ್ದರೆ ಅಥವಾ ಪ್ರಮುಖ ಆಟದ ಮೆನುವಿನಿಂದ ನೀವು ಆಯ್ಕೆಮಾಡಿದ ಪ್ರಮುಖ ಆಟದ ಪಂದ್ಯದ ಆರಂಭದಿಂದಲೂ ಪ್ರಮುಖ ಆಟಗಳು ಕ್ರಮವಾಗಿ ಪ್ಲೇ ಆಗಲು ಪ್ರಾರಂಭಿಸುತ್ತವೆ.

  3. ಪ್ರಮುಖ ಆಟಗಳನ್ನು ವೀಕ್ಷಿಸುವಾಗ, ನೀವು ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಬಹುದು:

    • ಸಂಗ್ರಹವನ್ನು ಬ್ರೌಸ್ ಮಾಡಿ: ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

    • ಪಂದ್ಯಕ್ಕೆ ಹಿಂತಿರುಗಿ: ಸ್ಕ್ರೀನ್ ಕೆಳಗಿನ ಎಡ ಮೂಲೆಯಲ್ಲಿ ಲೈವ್‌ಗೆ ಹೋಗಲು ಟ್ಯಾಪ್ ಮಾಡಿ ಅಥವಾ ನೀವು ವೀಕ್ಷಿಸುತ್ತಿರುವ ಕೊನೆಯ ಸ್ಥಳದಿಂದ ಪ್ಲೇಬ್ಯಾಕ್ ಅನ್ನು ಪುನರಾರಂಭಿಸಲು, ಹಿಂದಕ್ಕೆ ಬಟನ್ ಅನ್ನು ಟ್ಯಾಪ್ ಮಾಡಿ.

Apple TVಗೆ ಸಬ್‌ಸ್ಕ್ರಿಪ್ಶನ್ ಅಗತ್ಯವಿದೆ, ಹಾಗೂ ಇದು ಕೆಲವು ದೇಶಗಳು ಮತ್ತು ಪ್ರದೇಶಗಳಲ್ಲಿ ಈ ಕೆಳಗಿನ ಕೆಲವು ಅಥವಾ ಎಲ್ಲವನ್ನೂ ಒಳಗೊಂಡಿರಬಹುದು: Friday Night Baseball, Major League Soccer (MLS) ಮತ್ತು Formula 1. ಎಲ್ಲಾ ಫೀಚರ್‌ಗಳು ಮತ್ತು ಕಂಟೆಂಟ್ ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. Apple TV ಸಬ್‌ಸ್ಕ್ರಿಪ್ಶನ್‌ನಲ್ಲಿ ಥರ್ಡ್ ಪಾರ್ಟಿ ಬ್ರ್ಯಾಂಡ್‌ನ ಸಬ್‌ಸ್ಕ್ರಿಪ್ಶನ್ ಸೇವೆಗಳು ಅಥವಾ Apple TV ಆ್ಯಪ್‌ನಲ್ಲಿ ಬಾಡಿಗೆಗೆ ಅಥವಾ ಖರೀದಿಗೆ ಲಭ್ಯವಿರುವ ಕಂಟೆಂಟ್ ಸೇರಿರುವುದಿಲ್ಲ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.