ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಸೌಂಡ್‌ಗಳನ್ನು ಬದಲಾಯಿಸಿ ಅಥವಾ ಆಫ್ ಮಾಡಿ

ನೀವು ಕರೆ, ಪಠ್ಯ ಸಂದೇಶ, ಈಮೇಲ್, ರಿಮೈಂಡರ್ ಅಥವಾ ಇತರ ರೀತಿಯ ನೋಟಿಫಿಕೇಷನ್ ಸ್ವೀಕರಿಸಿದಾಗ iPad ಪ್ಲೇ ಮಾಡುವ ಸೌಂಡ್‌ಗಳನ್ನು ನೀವು ಬದಲಾಯಿಸಬಹುದು ಅಥವಾ ಆಫ್ ಮಾಡಬಹುದು.

ನಿಮ್ಮ iPad ಸೌಂಡ್‌ಗಳನ್ನು ಕಸ್ಟಮೈಸ್ ಮಾಡುವುದು

ಅಲರ್ಟ್ ಟೋನ್‌ಗಳು ಮತ್ತು ರಿಂಗ್‌ಟೋನ್‌ಗಳು ಮತ್ತು ರಿಂಗರ್ ಮತ್ತು ಅಲರ್ಟ್ ವಾಲ್ಯೂಮ್‌ಗಳಿಗಾಗಿ ಆಯ್ಕೆಗಳನ್ನು ಸೆಟ್ ಮಾಡಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್  ಆ್ಯಪ್‌ಗೆ ಹೋಗಿ, ನಂತರ ಸೌಂಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  2. ರಿಂಗರ್ ಮತ್ತು ಅಲರ್ಟ್‌ಗಳಿಗಾಗಿ ವಾಲ್ಯೂಮ್ ಅನ್ನು ಸೆಟ್ ಮಾಡಲು ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.

  3. ರಿಂಗ್‌ಟೋನ್ ಮತ್ತು ಅಲರ್ಟ್ ಟೋನ್‌ಗಳಿಗಾಗಿ ಸೌಂಡ್‌ಗಳನ್ನು ಆಯ್ಕೆಮಾಡಲು ರಿಂಗ್‌ಟೋನ್ ಮತ್ತು ಇತರ ಆಯ್ಕೆಗಳನ್ನು ಟ್ಯಾಪ್ ಮಾಡಿ.

iPad ಪ್ಲೇ ಮಾಡುವ ಸೌಂಡ್‌ಗಳನ್ನು ಸಹ ನೀವು ನಿರ್ದಿಷ್ಟ ವ್ಯಕ್ತಿಗಳಿಗಾಗಿ ಬದಲಾಯಿಸಬಹುದು. ಸಂಪರ್ಕ ಆ್ಯಪ್‌ಗೆ ಹೋಗಿ, ವ್ಯಕ್ತಿಯೊಬ್ಬರ ಹೆಸರನ್ನು ಟ್ಯಾಪ್ ಮಾಡಿ, ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ರಿಂಗ್‌ಟೋನ್ ಮತ್ತು ಪಠ್ಯ ಟೋನ್ ಅನ್ನು ಆಯ್ಕೆಮಾಡಿ.

iPad ಅನ್ನು ನಿಶ್ಯಬ್ದಗೊಳಿಸಿ

ಒಳಬರುವ ಕರೆಗಳು, ಅಲರ್ಟ್‌ಗಳು ಮತ್ತು ಸೌಂಡ್ ಎಫೆಕ್ಟ್‌ಗಳನ್ನು ತಾತ್ಕಾಲಿಕವಾಗಿ ನಿಶ್ಯಬ್ದಗೊಳಿಲು ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ನಂತರ ಮ್ಯೂಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

ಸಲಹೆ: ನೀವು ಒಳಬರುವ ಕರೆಗಳು ಮತ್ತು ನೋಟಿಫಿಕೇಷನ್‌ಗಳನ್ನು ನಿರೀಕ್ಷಿಸಿದ್ದಾಗ ಅವುಗಳನ್ನು ಸ್ವೀಕರಿಸದಿದ್ದರೆ, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ನಂತರ ಅಡಚಣೆ ಮಾಡಬೇಡಿ ಎಂಬುದು ಆನ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಅಡಚಣೆ ಮಾಡಬೇಡಿ ಬಟನ್ ಅಡಚಣೆ ಮಾಡಬೇಡಿ ಬಟನ್ ಹೈಲೈಟ್ ಆಗಿದ್ದರೆ, ಅಡಚಣೆ ಮಾಡಬೇಡಿ ಆಫ್ ಮಾಡಲು ಅದನ್ನು ಟ್ಯಾಪ್ ಮಾಡಿ. (“ಅಡಚಣೆ ಮಾಡಬೇಡಿ” ಎಂಬುದು ಆನ್ ಆಗಿರುವಾಗ, ಅದರ ಐಕಾನ್ ಸ್ಟೇಟಸ್ ಬಾರ್‌ನಲ್ಲಿಯೂ ಕಾಣಿಸಿಕೊಳ್ಳುತ್ತದೆ.)

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.