ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ನಿಮ್ಮ ವೈಯಕ್ತಿಕ ಧ್ವನಿಯನ್ನು ರೆಕಾರ್ಡ್ ಮಾಡುವುದು

ನಿಮಗೆ ಮಾತಿನ ಸಾಮರ್ಥ್ಯ ನಶಿಸುವ ಅಪಾಯದಲ್ಲಿದ್ದರೆ ಅಥವಾ ಮಾತಿನ ವೈಕಲ್ಯತೆ ಇದ್ದರೆ ನಿಮ್ಮಂತೆಯೇ ಧ್ವನಿಸುವ ಕೃತಕ ಧ್ವನಿಯನ್ನು ರಚಿಸಲು ನೀವು iPadನಲ್ಲಿ ವೈಯಕ್ತಿಕ ಧ್ವನಿಯನ್ನು ಬಳಸಬಹುದು. ನೀವು ಲೈವ್ ಸ್ಪೀಚ್ ಮೂಲಕ ನಿಮ್ಮ ವೈಯಕ್ತಿಕ ಧ್ವನಿಯನ್ನು ಬಳಸಬಹುದು ಮತ್ತು ವ್ಯಕ್ತಿಗತ ಸಂಭಾಷಣೆಗಳ ಸಮಯದಲ್ಲಿ, ಫೋನ್‌ನಲ್ಲಿ ಮತ್ತು FaceTime ಕರೆಗಳಲ್ಲಿ ಮತ್ತು ಸಹಾಯಕ ಸಂವಹನ ಆ್ಯಪ್‌ಗಳಲ್ಲಿ ನೀವು ಟೈಪ್ ಮಾಡಿದ್ದನ್ನು iPad ಜೋರಾಗಿ ಮಾತನಾಡುವಂತೆ ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ವೈಯಕ್ತಿಕ ಧ್ವನಿ ಎಂಬುದನ್ನು ಟ್ಯಾಪ್ ಮಾಡಿ.

  3. ವೈಯಕ್ತಿಕ ಧ್ವನಿಯನ್ನು ರಚಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

    (ನಿಮ್ಮ ರೆಕಾರ್ಡಿಂಗ್ ಸೆಶನ್ ಅನ್ನು ನೀವು ವಿರಾಮಗೊಳಿಸಬೇಕಿದ್ದರೆ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ. ಪುನರಾರಂಭಿಸಲು, ರೆಕಾರ್ಡಿಂಗ್ ಅನ್ನು ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ.)

    iCloud ಮೂಲಕ ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ವೈಯಕ್ತಿಕ ಧ್ವನಿಯನ್ನು ಬಳಸಲು ಅನುಮತಿಸಲು, ಸಾಧನಗಳಾದ್ಯಂತ ಹಂಚಿಕೊಳ್ಳಿ ಎಂಬುದನ್ನು ಆನ್ ಮಾಡಿ. ನಿಮ್ಮ ವೈಯಕ್ತಿಕ ಧ್ವನಿಯನ್ನು ಬಳಸಲು ಆ್ಯಪ್‌ಗಳಿಗೆ ವಿನಂತಿಸುವುದನ್ನು ಅನುಮತಿಸಲು, ‘ಬಳಸಲು ವಿನಂತಿಸಲು ಆ್ಯಪ್‌ಗಳಿಗೆ ಅನುಮತಿಸಿ’ ಎಂಬುದನ್ನು ಆನ್ ಮಾಡಿ.

ಗಮನಿಸಿ: ನಿಮ್ಮ ವೈಯಕ್ತಿಕ ಧ್ವನಿಯನ್ನು ರಚಿಸುವ ಆಯ್ಕೆಯನ್ನು ನೋಡಲು, ನೀವು ಮೊದಲು ಪಾಸ್‌ಕೋಡ್ ಸೆಟ್ ಮಾಡಬೇಕು. ‘ವೈಯಕ್ತಿಕ ಧ್ವನಿ’ಯು ಬೆಂಬಲಿತ iPad ಮಾಡಲ್‌ಗಳಲ್ಲಿ ಲಭ್ಯವಿದೆ ಮತ್ತು ಎಲ್ಲಾ ಭಾಷೆಗಳಲ್ಲಿ ಲಭ್ಯವಿಲ್ಲ. ನಿಮ್ಮ ವೈಯಕ್ತಿಕ ಧ್ವನಿಯೊಂದಿಗೆ ಲೈವ್ ಸ್ಪೀಚ್ ಅನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಲು ನಿಮ್ಮ iPhone, iPad, Mac ಅಥವಾ Apple Watchನಲ್ಲಿ ಲೈವ್ ಸ್ಪೀಚ್ ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ನಿಮ್ಮ ವೈಯಕ್ತಿಕ ಧ್ವನಿಯನ್ನು ನಿಮ್ಮ iPadನಲ್ಲಿ ಸುರಕ್ಷಿತವಾಗಿ ಸೇವ್ ಮಾಡಲಾಗುತ್ತದೆ ಹಾಗೂ ಫೋನ್ ಮತ್ತು FaceTime ಕರೆಗಳು, ವೈಯಕ್ತಿಕ ಸಂಭಾಷಣೆಗಳು ಮತ್ತು ಥರ್ಡ್-ಪಾರ್ಟಿ ಆಲ್ಟರ್ನೇಟಿವ್ ಮತ್ತು ಆಗ್ಮೆಂಟೇಟಿವ್ ಕಮ್ಯುನಿಕೇಷನ್ (AAC) ಆ್ಯಪ್‌ಗಳ ಸಮಯದಲ್ಲಿ ನೀವು ಇದನ್ನು ಬಳಸಬಹುದಾಗಿದೆ.

ಪ್ರಮುಖ ಸೂಚನೆ: ವೈಯಕ್ತಿಕ ಧ್ವನಿಯನ್ನು ಲೈವ್ ಸ್ಪೀಚ್ ಮತ್ತು ಆಗ್ಮೆಂಟೇಟಿವ್ ಮತ್ತು ಆಲ್ಟರ್ನೇಟಿವ್ ಕಮ್ಯುನಿಕೇಷನ್ (AAC) ಆ್ಯಪ್‌ಗಳ ರೀತಿಯ ನೀವು ಅನುಮತಿಸುವ ಥರ್ಡ್ ಪಾರ್ಟಿ ಆ್ಯಪ್‌ಗಳೊಂದಿಗೆ ಮಾತ್ರ ಬಳಸಬಹುದು. ನೀವು ವೈಯಕ್ತಿಕ ಧ್ವನಿಯನ್ನು ನಿಮ್ಮ ಸ್ವಂತ ಧ್ವನಿಯನ್ನು ಬಳಸಿಕೊಂಡು ಸಾಧನದಲ್ಲಿ ನಿಮ್ಮಂತೆಯೇ ಧ್ವನಿಸುವ ಧ್ವನಿಯನ್ನು ರಚಿಸಲು, ಮತ್ತು ನಿಮ್ಮ ಸ್ವಂತ ವೈಯಕ್ತಿಕ, ವಾಣಿಜ್ಯೇತರ ಬಳಕೆಗಾಗಿ ಮಾತ್ರ ಬಳಸಬಹುದು. ವೈಯಕ್ತಿಕ ಧ್ವನಿಯನ್ನು ರಚಿಸುವುದು ಹೇಗೆ ಎಂಬುದನ್ನು ತಿಳಿಯಲು, ನಿಮ್ಮ iPhone, iPad ಅಥವಾ Macನಲ್ಲಿ ವೈಯಕ್ತಿಕ ಧ್ವನಿಯನ್ನು ರಚಿಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ. ನಿಮ್ಮ ಲೆಗಸಿ ಸಂಪರ್ಕಕ್ಕೆ ನಿಮ್ಮ ವೈಯಕ್ತಿಕ ಧ್ವನಿಯನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.