ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad ಸ್ಕ್ರೀನ್ ಮೇಲೆ ಝೂಮ್ ಇನ್ ಮಾಡಿ

ಹಲವು ಆ್ಯಪ್‌ಗಳಲ್ಲಿ, ನೀವು ನಿರ್ದಿಷ್ಟ ಐಟಂಗಳನ್ನು ಝೂಮ್ ಇನ್ ಮಾಡಬಹುದು ಅಥವಾ ಝೂಮ್ ಔಟ್ ಮಾಡಬಹುದು. ಉದಾಹರಣೆಗೆ, ನೀವು ಫೋಟೋಗಳನ್ನು ಹತ್ತಿರದಿಂದ ನೋಡಲು ಡಬಲ್ ಟ್ಯಾಪ್ ಮಾಡಬಹುದು ಅಥವಾ ಪಿಂಚ್ ಮಾಡಬಹುದು ಅಥವಾ Safariಯಲ್ಲಿ ವೆಬ್‌ಪುಟದ ಕಾಲಮ್‌ಗಳನ್ನು ವಿಸ್ತರಿಸಬಹುದು. ನೀವು ಏನನ್ನೇ ಮಾಡುತ್ತಿದ್ದರೂ ಸ್ಕ್ರೀನ್ ಅನ್ನು ದೊಡ್ಡದಾಗಿಸಲು ಸಹ ಝೂಮ್ ಫೀಚರ್ ಅನ್ನು ಬಳಸಬಹುದು. ನೀವು ಇಡೀ ಸ್ಕ್ರೀನ್ ಅನ್ನು (ಫುಲ್ ಸ್ಕ್ರೀನ್ ಝೂಮ್) ಮ್ಯಾಗ್ನಿಫೈ ಮಾಡಬಹುದು, ಮರುಗಾತ್ರಗೊಳಿಸಬಹುದಾದ ಲೆನ್ಸ್ ಮೂಲಕ (ವಿಂಡೋ ಝೂಮ್) ಸ್ಕ್ರೀನ್‌ನ ಒಂದು ಭಾಗವನ್ನು ಮಾತ್ರ ಮ್ಯಾಗ್ನಿಫೈ ಮಾಡಬಹುದು ಅಥವಾ ಒಂದು ಸ್ಥಳದಲ್ಲಿ ಉಳಿಯುವ ಸ್ಕ್ರೀನ್‌ನ ಒಂದು ಭಾಗವನ್ನು ಮ್ಯಾಗ್ನಿಫೈ ಮಾಡಬಹುದು (ಪಿನ್ ಮಾಡಲಾದ ಝೂಮ್). ಮತ್ತು, ನೀವು VoiceOver ಜೊತೆಗೆ ಝೂಮ್ ಅನ್ನು ಬಳಸಬಹುದು.

ಸ್ಕ್ರೀನ್‌ನ ಒಂದು ಭಾಗದಲ್ಲಿ ಝೂಮ್ ಇನ್ ಮಾಡಲಾದ ವಿಂಡೋದೊಂದಿಗೆ ಹೋಮ್ ಸ್ಕ್ರೀನ್ ಅನ್ನು ತೋರಿಸುತ್ತಿರುವ iPad.

ಝೂಮ್ ಅನ್ನು ಸೆಟಪ್ ಮಾಡಿ

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಝೂಮ್ ಎಂಬಲ್ಲಿಗೆ ಹೋಗಿ, ನಂತರ ಝೂಮ್ ಅನ್ನು ಆನ್ ಮಾಡಿ.

  2. ಈ ಕೆಳಗಿನ ಯಾವುದಾದರೂ ಒಂದನ್ನು ಸರಿಹೊಂದಿಸಿ:

    • ಫೋಕಸ್ ಅನ್ನು ಅನುಸರಿಸಿ: ನಿಮ್ಮ ಆಯ್ಕೆಗಳು, ಪಠ್ಯ ಇನ್ಸರ್ಷನ್ ಪಾಯಿಂಟ್ ಮತ್ತು ನಿಮ್ಮ ಟೈಪಿಂಗ್ ಅನ್ನು ಟ್ರ್ಯಾಕ್ ಮಾಡಿ.

    • ಸ್ಮಾರ್ಟ್ ಟೈಪಿಂಗ್: ಕೀಬೋರ್ಡ್ ಕಾಣಿಸಿಕೊಂಡಾಗ ವಿಂಡೋ ಝೂಮ್‌ಗೆ ಸ್ವಿಚ್ ಮಾಡಿ.

    • ಕೀಬೋರ್ಡ್ ಶಾರ್ಟ್‌ಕಟ್ಸ್: ಬಾಹ್ಯ ಕೀಬೋರ್ಡ್‌ನಲ್ಲಿನ ಶಾರ್ಟ್‌ಕಟ್‌ಗಳನ್ನು ಬಳಸಿಕೊಂಡು ಝೂಮ್ ಅನ್ನು ನಿಯಂತ್ರಿಸಿ.

    • ಝೂಮ್ ಕಂಟ್ರೋಲರ್: ಕಂಟ್ರೋಲರ್ ಅನ್ನು ಆನ್ ಮಾಡಿ, ಕಂಟ್ರೋಲರ್ ಆ್ಯಕ್ಷನ್‌ಗಳನ್ನು ಸೆಟ್ ಮಾಡಿ ಹಾಗೂ ಬಣ್ಣ ಮತ್ತು ಒಪ್ಯಾಸಿಟಿಯನ್ನು ಸರಿಹೊಂದಿಸಿ.

    • ಝೂಮ್ ಪ್ರದೇಶ: ಪಿನ್ ಮಾಡಲಾದ ಝೂಮ್, ಫುಲ್ ಸ್ಕ್ರೀನ್ ಝೂಮ್ ಅಥವಾ ವಿಂಡೋ ಝೂಮ್ ಅನ್ನು ಆಯ್ಕೆಮಾಡಿ.

    • ಝೂಮ್ ಫಿಲ್ಟರ್: ಯಾವುದೂ ಅಲ್ಲ, ಇನ್ವರ್ಟೆಡ್, ಗ್ರೇಸ್ಕೇಲ್, ಗ್ರೇಸ್ಕೇಲ್ ಇನ್ವರ್ಟೆಡ್ ಅಥವಾ ಲೋ ಲೈಟ್ ಎಂಬುದನ್ನು ಆಯ್ಕೆಮಾಡಿ.

    • ಗರಿಷ್ಠ ಝೂಮ್ ಮಟ್ಟ: ಮಟ್ಟವನ್ನು ಸರಿಹೊಂದಿಸಲು ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.

  3. ನೀವು ಪಾಯಿಂಟರ್ ಸಾಧನದ ಮೂಲಕ iPad ಅನ್ನು ಬಳಸಿದರೆ, ಪಾಯಿಂಟರ್ ಕಂಟ್ರೋಲ್ ಕೆಳಗಿನ ಇವುಗಳನ್ನು ಸಹ ನೀವು ಸೆಟ್ ಮಾಡಬಹುದು:

    • ಝೂಮ್ ಪ್ಯಾನ್: ಪಾಯಿಂಟರ್ ಜೊತೆಗೆ ಸ್ಕ್ರೀನ್ ಇಮೇಜ್ ಹೇಗೆ ಮೂವ್ ಆಗುತ್ತದೆ ಎಂಬುದನ್ನು ಸೆಟ್ ಮಾಡಲು ಕಂಟಿನ್ಯೂಯಸ್, ಸೆಂಟರ್ಡ್ ಅಥವಾ ಎಡ್ಜ್‌ಗಳು ಎಂಬುದನ್ನು ಆಯ್ಕೆಮಾಡಿ.

    • ಝೂಮ್ ಮೂಲಕ ಗಾತ್ರವನ್ನು ಸರಿಹೊಂದಿಸಿ: ಝೂಮ್‌ನೊಂದಿಗೆ ಸ್ಕೇಲ್ ಮಾಡಲು ಪಾಯಿಂಟರ್ ಅನ್ನು ಅನುಮತಿಸಿ.

  4. ಝೂಮ್ ಅನ್ನು ಆ್ಯಕ್ಸೆಸಬಿಲಿಟಿ ಶಾರ್ಟ್‌ಕಟ್‌ಗೆ ಸೇರಿಸಲು, ಸೆಟ್ಟಿಂಗ್ಸ್ > ಆ್ಯಕ್ಸೆಸಬಿಲಿಟಿ > ಆ್ಯಕ್ಸೆಸಬಿಲಿಟಿ ಶಾರ್ಟ್‌ಕಟ್ ಎಂಬಲ್ಲಿಗೆ ಹೋಗಿ, ನಂತರ ಝೂಮ್ ಎಂಬುದನ್ನು ಟ್ಯಾಪ್ ಮಾಡಿ.

ಝೂಮ್ ಬಳಸಿ

  1. ಝೂಮ್ ಅನ್ನು ಆನ್ ಮಾಡಲು ಮೂರು ಬೆರಳುಗಳಿಂದ ಸ್ಕ್ರೀನ್ ಅನ್ನು ಡಬಲ್ ಟ್ಯಾಪ್ ಮಾಡಿ ಅಥವಾ ಆ್ಯಕ್ಸೆಸಬಿಲಿಟಿ ಶಾರ್ಟ್‌ಕಟ್ ಅನ್ನು ಬಳಸಿ.

  2. ಸ್ಕ್ರೀನ್‌ನ ಹೆಚ್ಚಿನ ಭಾಗವನ್ನು ನೋಡಲು, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಮ್ಯಾಗ್ನಿಫಿಕೇಶನ್ ಅನ್ನು ಸರಿಹೊಂದಿಸಿ: ಮೂರು ಬೆರಳುಗಳಿಂದ ಸ್ಕ್ರೀನ್ ಅನ್ನು ಡಬಲ್ ಟ್ಯಾಪ್ ಮಾಡಿ (ಎರಡನೇ ಟ್ಯಾಪ್‌ನ ನಂತರ ನಿಮ್ಮ ಬೆರಳುಗಳನ್ನು ಮೇಲೆತ್ತದೆ), ನಂತರ ಮೇಲಕ್ಕೆ ಅಥವಾ ಕೆಳಕ್ಕೆ ಡ್ರ್ಯಾಗ್ ಮಾಡಿ. ಅಥವಾ ಮೂರು ಬೆರಳುಗಳಿಂದ ಟ್ರಿಪಲ್ ಟ್ಯಾಪ್ ಮಾಡಿ, ನಂತರ ಝೂಮ್ ಮಟ್ಟದ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.

    • ಝೂಮ್ ಲೆನ್ಸ್ ಮೂವ್ ಮಾಡಿ: (ವಿಂಡೋ ಝೂಮ್) ಝೂಮ್ ಲೆನ್ಸ್‌ನ ಕೆಳಭಾಗದಲ್ಲಿನ ಹ್ಯಾಂಡಲ್ ಅನ್ನು ಡ್ರ್ಯಾಗ್ ಮಾಡಿ.

    • ಮತ್ತೊಂದು ಭಾಗಕ್ಕೆ ಪ್ಯಾನ್ ಮಾಡಿ: (ಫುಲ್ ಸ್ಕ್ರೀನ್ ಝೂಮ್) ಮೂರು ಬೆರಳುಗಳಿಂದ ಸ್ಕ್ರೀನ್ ಅನ್ನು ಡ್ರ್ಯಾಗ್ ಮಾಡಿ.

  3. ಝೂಮ್ ಮೆನುವಿನೊಂದಿಗೆ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಲು, ಮೂರು ಬೆರಳುಗಳಿಂದ ಮೂರು ಬಾರಿ ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಸರಿಹೊಂದಿಸಿ:

    • ಪ್ರದೇಶವನ್ನು ಆಯ್ಕೆಮಾಡಿ: ಪಿನ್ ಮಾಡಲಾದ ಝೂಮ್, ಫುಲ್ ಸ್ಕ್ರೀನ್ ಝೂಮ್ ಅಥವಾ ವಿಂಡೋ ಝೂಮ್ ಅನ್ನು ಆಯ್ಕೆಮಾಡಿ.

    • ಲೆನ್ಸ್ ಅನ್ನು ಮರುಗಾತ್ರಗೊಳಿಸಿ: (ವಿಂಡೋ ಝೂಮ್) ಲೆನ್ಸ್ ಅನ್ನು ಮರುಗಾತ್ರಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕಾಣಿಸುವ ಯಾವುದೇ ರೌಂಡ್ ಹ್ಯಾಂಡಲ್‌ಗಳನ್ನು ಡ್ರ್ಯಾಗ್ ಮಾಡಿ.

    • ಫಿಲ್ಟರ್ ಆಯ್ಕೆಮಾಡಿ: ಇನ್ವರ್ಟೆಡ್, ಗ್ರೇಸ್ಕೇಲ್, ಗ್ರೇಸ್ಕೇಲ್ ಇನ್ವರ್ಟೆಡ್ ಅಥವಾ ಲೋ ಲೈಟ್ ಎಂಬುದನ್ನು ಆಯ್ಕೆಮಾಡಿ.

    • ಕಂಟ್ರೋಲರ್ ಆಯ್ಕೆಮಾಡಿ: ಝೂಮ್ ಕಂಟ್ರೋಲರ್ ತೋರಿಸಿ.

  4. ಝೂಮ್ ಕಂಟ್ರೋಲರ್ ಅನ್ನು ಬಳಸಲು, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಝೂಮ್ ಮೆನುವನ್ನು ತೋರಿಸಿ: ಕಂಟ್ರೋಲರ್ ಅನ್ನು ಟ್ಯಾಪ್ ಮಾಡಿ.

    • ಝೂಮ್ ಇನ್ ಅಥವಾ ಝೂಮ್ ಔಟ್: ಕಂಟ್ರೋಲರ್ ಅನ್ನು ಡಬಲ್-ಟ್ಯಾಪ್ ಮಾಡಿ.

    • ಪ್ಯಾನ್: ಝೂಮ್ ಇನ್ ಮಾಡಿರುವಾಗ ಕಂಟ್ರೋಲರ್ ಅನ್ನು ಡ್ರ್ಯಾಗ್ ಮಾಡಿ.

Apple ಬಾಹ್ಯ ಕೀಬೋರ್ಡ್ ಮೂಲಕ ಝೂಮ್ ಅನ್ನು ಬಳಸುವಾಗ, ಝೂಮ್ ಪ್ರದೇಶವು ಇನ್ಸರ್ಷನ್ ಪಾಯಿಂಟ್ ಸ್ಕ್ರೀನ್‌ನ ಮಧ್ಯಭಾಗದಲ್ಲಿ ಇರಿಸಿ ಅದನ್ನು ಅನುಸರಿಸುತ್ತದೆ. iPad Magic ಕೀಬೋರ್ಡ್ ಮತ್ತು ಸ್ಮಾರ್ಟ್ ಕೀಬೋರ್ಡ್ ಅನ್ನು ನೋಡಿ.

ಝೂಮ್ ಅನ್ನು ಆಫ್ ಮಾಡಲು, ಮೂರು ಬೆರಳುಗಳಿಂದ ಸ್ಕ್ರೀನ್ ಅನ್ನು ಡಬಲ್ ಟ್ಯಾಪ್ ಮಾಡಿ ಅಥವಾ ಆಕ್ಸೆಸಬಿಲಿಟಿ ಶಾರ್ಟ್‌ಕಟ್ ಅನ್ನು ಬಳಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.