ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿರುವ ಆ್ಯಪ್‌ಗಳ ನಡುವೆ ಸ್ವಿಚ್ ಮಾಡುವುದು

ಒಂದು ಆ್ಯಪ್ ಅಥವಾ ವಿಂಡೋದಿಂದ ಇನ್ನೊಂದಕ್ಕೆ ತ್ವರಿತವಾಗಿ ಸ್ವಿಚ್ ಮಾಡಲು ನೀವು Dock, Exposé ಅಥವಾ ಜೆಸ್ಚರ್‌ ಅನ್ನು ಬಳಸಬಹುದು. ನೀವು ಮರಳಿ ಸ್ವಿಚ್ ಮಾಡಿದಾಗ, ನೀವು ಎಲ್ಲಿಗೆ ನಿಲ್ಲಿಸಿದ್ದಿರೋ ಅಲ್ಲಿಂದಲೇ ಮುಂದುವರಿಸಬಹುದು.

Dockನಿಂದ ಆ್ಯಪ್ ಒಂದನ್ನು ತೆರೆಯಿರಿ

Dock ಅನ್ನು ತೋರಿಸುವಷ್ಟು ದೂರದಲ್ಲಿ ಸ್ಕ್ರೀನ್‌ ಕೆಳ ತುದಿಯಿಂದ ಮೇಲಕ್ಕೆ ಸ್ವೈಪ್ ಮಾಡಿ, ನಂತರ ನೀವು ತೆರೆಯಲು ಬಯಸುವ ಆ್ಯಪ್‌ ಅನ್ನು ಟ್ಯಾಪ್ ಮಾಡಿ.

ಮೆಚ್ಚಿನ ಆ್ಯಪ್‌ಗಳು Dockನ ಎಡಭಾಗದಲ್ಲಿವೆ ಮತ್ತು ಸೂಚಿಸಲಾದ ಆ್ಯಪ್‌‌ಗಳು—ಉದಾಹರಣೆಗೆ iPadನಲ್ಲಿ ನೀವು ಇತ್ತೀಚೆಗೆ ತೆರೆದಿರುವವು ಮತ್ತು ನಿಮ್ಮ ಸಮೀಪದ iPhone ಅಥವಾ Macನಲ್ಲಿ ತೆರೆದಿರುವವು—Dockನ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. Dockನಲ್ಲಿರುವ ಬಲಭಾಗದ ಐಕಾನ್ ಆ್ಯಪ್‌ ಲೈಬ್ರರಿಯನ್ನು ತೆರೆಯುತ್ತದೆ.

ನೀವು ಫೈಲ್ಸ್ ಆ್ಯಪ್‌ನಿಂದ ಫೋಲ್ಡರ್‌ಗಳನ್ನು Dockಗೆ ಮೂವ್ ಮಾಡಬಹುದು, ಇದರಿಂದ ನೀವು ಅವುಗಳನ್ನು ತ್ವರಿತವಾಗಿ ತೆರೆಯಬಹುದು. ಫೈಲ್ಸ್ ಆ್ಯಪ್‌ನಲ್ಲಿ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಮಾರ್ಪಡಿಸಿ ಎಂಬುದನ್ನು ನೋಡಿ.

ಎಡಭಾಗದಲ್ಲಿ ಆರು ಮೆಚ್ಚಿನ ಆ್ಯಪ್‌‌ಗಳು ಮತ್ತು ಬಲಭಾಗಕ್ಕೆ ಮೂರು ಸೂಚಿಸಲಾದ ಆ್ಯಪ್‌‌ಗಳನ್ನು ತೋರಿಸುತ್ತಿರುವ Dock ಹೊಂದಿರುವ ಹೋಮ್ ಸ್ಕ್ರೀನ್. Dockನಲ್ಲಿರುವ ಬಲಭಾಗದ ಐಕಾನ್ ಆ್ಯಪ್‌ ಲೈಬ್ರರಿಯನ್ನು ತೆರೆಯುತ್ತದೆ.

Exposé ಮೂಲಕ ಆ್ಯಪ್‌ಗಳನ್ನು ನೋಡುವುದು ಮತ್ತು ಅವುಗಳ ನಡುವೆ ಸ್ವಿಚ್ ಮಾಡುವುದು

Exposé ನಿಮ್ಮ ಎಲ್ಲಾ ತೆರೆದ ಆ್ಯಪ್‌ಗಳು ಮತ್ತು ವಿಂಡೋಗಳನ್ನು ಡಿಸ್‌ಪ್ಲೇ ಮಾಡುತ್ತದೆ ಮತ್ತು ಅವುಗಳ ನಡುವೆ ಸ್ವಿಚ್ ಮಾಡಲು ನಿಮಗೆ ಅನುಮತಿಸುತ್ತದೆ.

  1. ಸ್ಕ್ರೀನ್‌ನ ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ, ಸ್ಕ್ರೀನ್‌ನ ಮಧ್ಯಭಾಗದಲ್ಲಿ ನಿಲ್ಲಿಸಿ, ನಂತರ ನಿಮ್ಮ ಬೆರಳನ್ನು ಮೇಲೆತ್ತಿ.

    ಇತ್ತೀಚೆಗೆ ಬಳಸಿದ ಅನೇಕ ಆ್ಯಪ್‌ಗಳನ್ನು ತೋರಿಸುತ್ತಿರುವ Exposé.
  2. ತೆರೆದಿರುವ ಆ್ಯಪ್‌ಗಳನ್ನು ಬ್ರೌಸ್ ಮಾಡಲು, ಬಲಕ್ಕೆ ಅಥವಾ ಎಡಕ್ಕೆ ಸ್ವೈಪ್ ಮಾಡಿ.

    ನೀವು ಒಂದೇ ಸ್ಕ್ರೀನ್‌ನಲ್ಲಿ ಒಂದಕ್ಕಿಂತ ಹೆಚ್ಚು ವಿಂಡೋಗಳಲ್ಲಿ ಕೆಲಸ ಮಾಡುತ್ತಿದ್ದರೆ, ಆ ವಿಂಡೋಗಳು ಬಲಭಾಗದಲ್ಲಿ ಕಾಣಿಸುತ್ತವೆ. ಇತರೆ ತೆರೆದ ಆ್ಯಪ್‌ಗಳು ಎಡಭಾಗದಲ್ಲಿ ಕಾಣಿಸುತ್ತವೆ.

  3. ಆ್ಯಪ್ ವಿಂಡೋವನ್ನು ತೆರೆಯಲು ಅದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.