iPadನಲ್ಲಿನ Apple Games ಆ್ಯಪ್‌ನಲ್ಲಿ Apple Arcadeಗೆ ಸಬ್‌ಸ್ಕ್ರೈಬ್ ಮಾಡುವುದು

iPhone, iPad, Mac, ಮತ್ತು Apple TV 4Kಯಲ್ಲಿ ಗೇಮ್‌ಗಳ ಕ್ಯುರೇಟ್ ಮಾಡಲಾದ ಸಂಗ್ರಹದ ಅನಿಯಮಿತ ಆ್ಯಕ್ಸೆಸ್ ಅನ್ನು ಆನಂದಿಸಲು Apple Games ಆ್ಯಪ್‌ನಲ್ಲಿ, ನೀವು Apple Arcadeಗೆ ಸಬ್‌ಸ್ಕ್ರೈಬ್ ಮಾಡಬಹುದು.

ನೀವು Apple Arcade ಅಥವಾ Apple Oneಗೆ ಸಬ್‌ಸ್ಕ್ರೈಬ್ ಮಾಡಬಹುದು, ಇದರಲ್ಲಿ Apple Arcade ಮತ್ತು ಇತರ ಸೇವೆಗಳು ಸೇರಿವೆ. Apple One ಮೂಲಕ Apple ಸಬ್‌ಸ್ಕ್ರಿಪ್ಶನ್‌ಗಳನ್ನು ಬಂಡಲ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಗಮನಿಸಿ: Apple Arcade ಮತ್ತು Apple One ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. Apple ಮೀಡಿಯಾ ಸೇವೆಗಳ ಲಭ್ಯತೆ ಎಂಬ Apple ಬೆಂಬಲ ಲೇಖನವನ್ನು ನೋಡಿ. ಸಾಧನಗಳಾದ್ಯಂತ Apple Arcade ಗೇಮ್‌ಗಳ ಲಭ್ಯತೆಯು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬೆಂಬಲದ ಆಧಾರದ ಮೇಲೆ ಬದಲಾಗುತ್ತದೆ. ಎಲ್ಲಾ Apple Arcade ಗೇಮ್‌ಗಳು Mac ಮತ್ತು Apple TV 4Kನಲ್ಲಿ ಲಭ್ಯವಿರುವುದಿಲ್ಲ. ಕೆಲವು ಕಂಟೆಂಟ್ ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. ಎಲ್ಲಾ ಸಾಧನಗಳಲ್ಲಿ Apple Arcade ಗೇಮ್‌ಗಳ ಲಭ್ಯತೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

Arcade ಟ್ಯಾಬ್ ಅನ್ನು ತೋರಿಸುತ್ತಿರುವ Apple Games ಆ್ಯಪ್‌. ಸ್ಕ್ರೀನ್‌ ಮುಂಬರುವ ಗೇಮ್‌ನ ಪ್ರಮೋಷನಲ್ ಆರ್ಟ್ ಅನ್ನು ತೋರಿಸುತ್ತದೆ. ಟ್ಯಾಬ್ ಬಾರ್‌ನಲ್ಲಿ Arcade ಟ್ಯಾಬ್ ಅನ್ನು ಆಯ್ಕೆ ಮಾಡಲಾಗಿದೆ.

Apple Arcadeಗೆ ಸಬ್‌ಸ್ಕ್ರೈಬ್ ಮಾಡಿ

  1. ನಿಮ್ಮ iPadನಲ್ಲಿ Apple Games ಆ್ಯಪ್‌ಗೆ ಹೋಗಿ.

  2. Arcade ಅನ್ನು ಟ್ಯಾಪ್ ಮಾಡಿ, ನಂತರ ಸಬ್‌ಸ್ಕ್ರಿಪ್ಶನ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಕುಟುಂಬ ಸದಸ್ಯರೊಂದಿಗೆ Apple Arcade ಅನ್ನು ಹಂಚಿಕೊಳ್ಳುವುದು

ನೀವು Apple Arcade ಅಥವಾ Apple Oneಗೆ ಸಬ್‌ಸ್ಕ್ರೈಬ್ ಮಾಡಿದಾಗ, ನೀವು ಕುಟುಂಬದ ಇತರ ಐದು ಸದಸ್ಯರೊಂದಿಗೆ Apple Arcade ಅನ್ನು ಹಂಚಿಕೊಳ್ಳಲು ನೀವು ಕುಟುಂಬ ಹಂಚಿಕೆಯನ್ನು ಬಳಸಬಹುದು. ನಿಮ್ಮ ಕುಟುಂಬ ಗುಂಪಿನ ಸದಸ್ಯರು ಏನನ್ನೂ ಮಾಡುವ ಅಗತ್ಯವಿಲ್ಲ—ನಿಮ್ಮ ಸಬ್‌ಸ್ಕ್ರಿಪ್ಶನ್ ಪ್ರಾರಂಭವಾದ ನಂತರ ಅವರು ಮೊದಲ ಬಾರಿಗೆ Apple Games ಆ್ಯಪ್ ಅನ್ನು ತೆರೆದಾಗ Apple Arcade ಅವರಿಗೆ ಲಭ್ಯವಿರುತ್ತದೆ.

ನೀವು Apple Arcade ಅಥವಾ Apple Oneಗೆ ಸಬ್‌ಸ್ಕ್ರೈಬ್ ಆಗಿರುವ ಕುಟುಂಬ ಗುಂಪನ್ನು ಸೇರಿದರೆ ಮತ್ತು ನೀವು ಈಗಾಗಲೇ ಸಬ್‌ಸ್ಕ್ರೈಬ್ ಮಾಡಿದ್ದರೆ, ನಿಮ್ಮ ಮುಂದಿನ ಬಿಲ್ಲಿಂಗ್ ದಿನಾಂಕದಂದು ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ನವೀಕರಿಸಲಾಗುವುದಿಲ್ಲ; ಬದಲಾಗಿ, ನೀವು ಗುಂಪಿನ ಸಬ್‌ಸ್ಕ್ರಿಪ್ಶನ್ ಅನ್ನು ಬಳಸುತ್ತೀರಿ. ನೀವು ಸಬ್‌ಸ್ಕ್ರೈಬ್ ಮಾಡದ ಕುಟುಂಬದ ಗುಂಪಿಗೆ ಸೇರಿಕೊಂಡರೆ, ಆ ಗುಂಪು ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ಬಳಸುತ್ತದೆ.

ಗಮನಿಸಿ: Apple Arcade ಅನ್ನು ಕುಟುಂಬದ ಗುಂಪಿನೊಂದಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸಲು, ನೀವು ಸಬ್‌ಸ್ಕ್ರಿಪ್ಶನ್ ಅನ್ನು ರದ್ದು ಮಾಡಬಹುದು, ಕುಟುಂಬ ಗುಂಪಿನಿಂದ ಹೊರಬರಬಹುದು ಅಥವಾ (ನೀವು ಕುಟುಂಬದ ಗುಂಪಿನ ವ್ಯವಸ್ಥಾಪಕರಾಗಿದ್ದರೆ) ಕುಟುಂಬ ಹಂಚಿಕೆಯನ್ನು ಬಳಸುವುದನ್ನು ನಿಲ್ಲಿಸಬಹುದು.

ನಿಮ್ಮ Apple ಸಾಧನಗಳಲ್ಲಿ Apple Arcade ಗೇಮ್‌ಗಳನ್ನು ಆಡಿ

ನೀವು Apple Arcadeಗೆ ಸಬ್‌ಸ್ಕ್ರೈಬ್ ಮಾಡಿದರೆ, ನೀವು ಒಂದೇ Apple ಖಾತೆಗೆ ಸೈನ್ ಇನ್ ಆಗಿರುವ, ಪ್ರತಿಯೊಂದು ಹೊಂದಾಣಿಕೆಯಾಗುವ ಸಾಧನದಲ್ಲಿ ಆಡಬಹುದು ಮತ್ತು ನಿಮ್ಮ ಗೇಮ್‌ನ ಪ್ರಗತಿಯನ್ನು ಆ್ಯಕ್ಸೆಸ್ ಮಾಡಬಹುದು. ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ Apple Arcade ಗೇಮ್‌ಪ್ಲೇ ಡೇಟಗೆ ಆ್ಯಕ್ಸೆಸ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ನಿಮ್ಮ Apple Arcade ಸಬ್‌ಸ್ಕ್ರಿಪ್ಶನ್ ಅನ್ನು ಬದಲಾಯಿಸಿ ಅಥವಾ ರದ್ದು ಮಾಡಿ

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ, ನಂತರ ಸಬ್‌ಸ್ಕ್ರಿಪ್ಶನ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  3. Apple Arcade ಅಥವಾ Apple One ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ನೀವು ರದ್ದುಗೊಳಿಸಿದರೆ, ಯಾವುದೇ Apple Arcade ಗೇಮ್‌ಗಳನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಂಡರೂ ಅವುಗಳನ್ನು ಆಡಲು ನಿಮಗೆ ಸಾಧ್ಯವಾಗುವುದಿಲ್ಲ.

Apple Arcade ಗೇಮ್‌ಗಳನ್ನು ಮತ್ತೊಮ್ಮೆ ಆಡಲು ಮತ್ತು ನಿಮ್ಮ ಗೇಮ್‌ಪ್ಲೇ ಡೇಟಗೆ ಮತ್ತೆ ಆ್ಯಕ್ಸೆಸ್ ಪಡೆಯಲು ನೀವು ಮರು‌ಸಬ್‌ಸ್ಕ್ರೈಬ್ ಮಾಡಬಹುದು. ನೀವು ತುಂಬಾ ಸಮಯ ಕಾದರೆ, ನೀವು ಮರು‌ಸಬ್‌ಸ್ಕ್ರೈಬ್ ಮಾಡಿದ ನಂತರ ನಿಮ್ಮ ಕೆಲವು ಗೇಮ್‌ಪ್ಲೇ ಡೇಟಗಳನ್ನು ಬೆಂಬಲಿಸದಿರಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.