ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad ಹೋಮ್ ಸ್ಕ್ರೀನ್‌ನಲ್ಲಿ ಆ್ಯಪ್‌ಗಳು ಮತ್ತು ವಿಜೆಟ್‌ಗಳನ್ನು ಮೂವ್ ಮಾಡಿ

ನಿಮ್ಮ ಹೋಮ್ ಸ್ಕ್ರೀನ್‌ ಲೇಔಟ್ ಅನ್ನು ನೀವು ಬದಲಾಯಿಸಬಹುದು—ನಿಮ್ಮ ವಾಲ್‌ಪೇಪರ್ ಅನ್ನು ಫ್ರೇಮ್ ಮಾಡಲು ಸ್ಕ್ರೀನ್‌ನ ಮೇಲೆ ಎಲ್ಲಿಯಾದರೂ ಆ್ಯಪ್‌ಗಳು ಮತ್ತು ವಿಜೆಟ್‌ಗಳನ್ನು ಮೂವ್ ಮಾಡಿ ಅಥವಾ ಅವುಗಳನ್ನು ಇತರ ಹೋಮ್ ಸ್ಕ್ರೀನ್ ಪುಟಗಳಿಗೆ ಡ್ರ್ಯಾಗ್ ಮಾಡಿ. ನೀವು ಅನೇಕ ಹೋಮ್ ಸ್ಕ್ರೀನ್ ಪುಟಗಳನ್ನು ಹೊಂದಿದ್ದರೆ, ಪ್ರತಿಯೊಂದೂ ವಿಶಿಷ್ಟವಾದ ಲೇಔಟ್ ಅನ್ನು ಹೊಂದಬಹುದು. ನೀವು ಹೋಮ್ ಸ್ಕ್ರೀನ್ ಪುಟಗಳನ್ನು ತಾತ್ಕಾಲಿಕವಾಗಿ ಮರೆಮಾಡಬಹುದು, ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಸ್ಥಳವನ್ನು ಬದಲಾಯಿಸಬಹುದು ಮತ್ತು ಇನ್ನೂ ಹೆಚ್ಚಿನವುಗಳನ್ನು ಮಾಡಬಹುದು.

ಸಲಹೆ: ನಿರ್ದಿಷ್ಟ ಫೋಕಸ್‌ಗೆ (ಉದಾಹರಣೆಗೆ, ನಿಮ್ಮ ವರ್ಕ್ ಫೋಕಸ್) ಸಂಬಂಧಿಸಿರುವ ಎಲ್ಲಾ ಆ್ಯಪ್‌ಗಳು ಮತ್ತು ವಿಜೆಟ್‌ಗಳನ್ನು ನೀವು ಒಂದು ಹೋಮ್ ಸ್ಕ್ರೀನ್ ಪುಟಕ್ಕೆ ಮೂವ್ ಮಾಡಬಹುದು ಹಾಗೂ ಆ ಫೋಕಸ್ ಸಮಯದಲ್ಲಿ ಆ ಪುಟವನ್ನು ಆ್ಯಕ್ಸೆಸ್ ಮಾಡುವಂತೆ ಮಾಡಬಹುದು.

ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿನ ಆ್ಯಪ್‌ಗಳು ಮತ್ತು ವಿಜೆಟ್‌ಗಳನ್ನು ಮೂವ್ ಮಾಡಿ

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ಐಟಮ್‌ಗಳು ಜಿಗಲ್ ಆಗಲು ಪ್ರಾರಂಭಿಸುವವರೆಗೂ ಹೋಮ್ ಸ್ಕ್ರೀನ್ ಹಿನ್ನೆಲೆಯನ್ನು ಒತ್ತಿ ಹಿಡಿದುಕೊಳ್ಳಿ.

  3. ಈ ಕೆಳಗಿನ ಸ್ಥಳಗಳಲ್ಲಿ ಒಂದಕ್ಕೆ ಆ್ಯಪ್ ಅಥವಾ ವಿಜೆಟ್ ಅನ್ನು ಡ್ರ್ಯಾಗ್ ಮಾಡಿ:

    • ಅದೇ ಪುಟದಲ್ಲಿರುವ ಮತ್ತೊಂದು ಸ್ಥಳ—ಸ್ಕ್ರೀನ್‌ನ ಮೇಲ್ಭಾಗ, ಕೆಳಭಾಗ ಅಥವಾ ಅಂಚು ಸೇರಿದಂತೆ

    • ಮತ್ತೊಂದು ಹೋಮ್ ಸ್ಕ್ರೀನ್ ಪುಟ

      ಆ್ಯಪ್ ಅಥವಾ ವಿಜೆಟ್ ಅನ್ನು ಸ್ಕ್ರೀನ್‌ನ ಬಲ ಅಂಚಿಗೆ ಡ್ರ್ಯಾಗ್ ಮಾಡಿ. ಹೊಸ ಪುಟ ಕಾಣಿಸಿಕೊಳ್ಳಲು ನೀವು ಸ್ವಲ್ಪ ಸಮಯ ಕಾಯಬೇಕಾಗಬಹುದು. Dock ಮೇಲಿನ ಡಾಟ್‌ಗಳು ನಿಮ್ಮ ಬಳಿ ಎಷ್ಟು ಪುಟಗಳಿವೆ ಮತ್ತು ನೀವು ಯಾವ ಪುಟವನ್ನು ನೋಡುತ್ತಿದ್ದೀರಿ ಎಂಬುದನ್ನು ತೋರಿಸುತ್ತವೆ.

      ಒಂದು ಆ್ಯಪ್ ಅನ್ನು ಮುಂದಿನ ಪುಟಕ್ಕೆ ಡ್ರ್ಯಾಗ್ ಮಾಡುತ್ತಿರುವುದನ್ನು ತೋರಿಸುವ ಆ್ಯರೋ ಮೂಲಕ ಹೋಮ್ ಸ್ಕ್ರೀನ್‌ನಲ್ಲಿ ಜಿಗಲ್ ಮಾಡುತ್ತಿರುವ ಆ್ಯಪ್‌ಗಳು.

      ಸಲಹೆ: ಸ್ಕ್ರೀನ್‌ನ ಕೆಳಭಾಗದಲ್ಲಿರುವ Dockಗೆ ನೀವು ಆ್ಯಪ್ ಅನ್ನು ಡ್ರ್ಯಾಗ್ ಮಾಡಬಹುದು.

  4. ನೀವು ಪೂರ್ಣಗೊಳಿಸಿದಾಗ, ಮೇಲಿನ ಬಲಭಾಗದಲ್ಲಿರುವ ಮುಗಿದಿದೆ ಅನ್ನು ಟ್ಯಾಪ್ ಮಾಡಿ.

ನಿಮ್ಮ ಹೋಮ್ ಸ್ಕ್ರೀನ್‌ನಿಂದ ವಿಜೆಟ್ ಅನ್ನು ತೆಗೆದುಹಾಕಿ

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ತ್ವರಿತ ಆ್ಯಕ್ಷನ್‌ಗಳ ಮೆನು ತೆರೆಯಲು ವಿಜೆಟ್ ಅನ್ನು ಒತ್ತಿ ಹಿಡಿದುಕೊಳ್ಳಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ವಿಜೆಟ್ ಅನ್ನು ತೆಗೆದುಹಾಕಲು: ವಿಜೆಟ್ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

    • ಸ್ಮಾರ್ಟ್ ಸ್ಟ್ಯಾಕ್ ಅನ್ನು ತೆಗೆದುಹಾಕಲು: ಸ್ಟ್ಯಾಕ್ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

ಹೋಮ್ ಸ್ಕ್ರೀನ್ ಮತ್ತು ಆ್ಯಪ್‌ಗಳನ್ನು ಅವುಗಳ ಮೂಲ ಲೇಔಟ್‌ಗೆ ರೀಸೆಟ್ ಮಾಡಿ

  1. ಸೆಟ್ಟಿಂಗ್ಸ್ ಆ್ಯಪ್‌  > ಸಾಮಾನ್ಯ > iPad ಅನ್ನು ವರ್ಗಾಯಿಸಿ ಅಥವಾ ರೀಸೆಟ್ ಮಾಡಿ ಎಂಬಲ್ಲಿಗೆ ಹೋಗಿ.

  2. ರೀಸೆಟ್ ಮಾಡಿ ಅನ್ನು ಟ್ಯಾಪ್ ಮಾಡಿ, ನಂತರ ಹೋಮ್ ಸ್ಕ್ರೀನ್ ಲೇಔಟ್ ರೀಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    ನೀವು ರಚಿಸಿದ ಯಾವುದೇ ಫೋಲ್ಡರ್‌ಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ iPadನೊಂದಿಗೆ ಬಂದ ಆ್ಯಪ್‌ಗಳ ನಂತರ ನೀವು ಡೌನ್‌ಲೋಡ್ ಮಾಡಿದ ಆ್ಯಪ್‌ಗಳನ್ನು ವರ್ಣಮಾಲೆಯ ಪ್ರಕಾರ ಕ್ರಮಗೊಳಿಸಲಾಗುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.