ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ Apple Pencilನಿಂದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗುರುತು ಮಾಡಿ

iPad ಸ್ಕ್ರೀನ್‌ನ ಚಿತ್ರವನ್ನು ತ್ವರಿತವಾಗಿ ತೆಗೆದುಕೊಳ್ಳಲು ನೀವು Apple Pencil ಅನ್ನು ಬಳಸಬಹುದು, ನಂತರ ಇತರರೊಂದಿಗೆ ಹಂಚಿಕೊಳ್ಳಲು ಅಥವಾ ಡಾಕ್ಯುಮೆಂಟ್‌ಗಳಲ್ಲಿ ಬಳಸಲು ಅದನ್ನು ಗುರುತು ಮಾಡಬಹುದು.

  1. ಸ್ಕ್ರೀನ್ ಅನ್ನು ಕ್ಯಾಪ್ಚರ್ ಮಾಡಲು, Apple Pencil ಬಳಸಿ ನಿಮ್ಮ iPadನ ಕೆಳಗಿರುವ ಎರಡೂ ಮೂಲೆಗಳಿಂದ ಸ್ವೈಪ್ ಮಾಡಿ.

  2. ಸ್ಕ್ರೀನ್‌ಶಾಟ್ ಅನ್ನು ಗುರುತು ಮಾಡಲು, Apple Pencil ಬಳಸಿ ಡ್ರಾ ಮಾಡಿ.

    ಡ್ರಾಯಿಂಗ್ ಟೂಲ್‌ಗಳನ್ನು ಬದಲಾಯಿಸಲು ಸ್ಕ್ರೀನ್‌ನ ಕೆಳಗಿರುವ ಟೂಲ್ ಪ್ಯಾಲೆಟ್ ಅನ್ನು ಬಳಸಿ. iPadನಲ್ಲಿ ಮಾರ್ಕಪ್ ಬಳಸಿಕೊಂಡು ಡಾಕ್ಯುಮಂಟ್‌ಗಳಲ್ಲಿ ಬರೆಯಿರಿ ಮತ್ತು ಬಿಡಿಸಿ ಅನ್ನು ನೋಡಿ.

  3. ಗುರುತಿಸಲಾದ ಸ್ಕ್ರೀನ್‌ಶಾಟ್ ಅನ್ನು ಇತರರಿಗೆ ಕಳುಹಿಸಲು (ಸಂದೇಶದಲ್ಲಿರುವಂತೆ) ಅಥವಾ ಅದನ್ನು ಡಾಕ್ಯುಮಂಟ್‌ನಲ್ಲಿ ಸೇವ್ ಮಾಡಲು (ಟಿಪ್ಪಣಿಯಲ್ಲಿರುವಂತೆ), ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ.

  4. ನೀವು ಪೂರ್ಣಗೊಳಿಸಿದಾಗ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.