ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಆ್ಯಪ್ ಅನ್ನು ಲಾಕ್ ಮಾಡಿ ಅಥವಾ ಮರೆಮಾಡಿ

ನಿಮ್ಮ iPadನಲ್ಲಿರುವ ಏನನ್ನಾದರೂ ಯಾರಿಗಾದರೂ ತೋರಿಸಲು ನೀವು ಬಯಸಿದರೆ ಮತ್ತು ಅವರು ಕೆಲವು ಆ್ಯಪ್‌ಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂಬ ಮಾನಸಿಕ ನೆಮ್ಮದಿ ಬೇಕಿದ್ದರೆ, ನೀವು ಆ್ಯಪ್‌ಗಳನ್ನು ಲಾಕ್ ಮಾಡಬಹುದು ಅಥವಾ ಮರೆಮಾಡಬಹುದು. ಆ್ಯಪ್ ಅನ್ನು ಲಾಕ್ ಮಾಡಲು Face ID, Touch ID ಅಗತ್ಯವಿರುತ್ತದೆ ಅಥವಾ ಅದನ್ನು ತೆರೆಯಲು ನಿಮ್ಮ ಪಾಸ್‌ಕೋಡ್ ಅಗತ್ಯವಿರುತ್ತದೆ. ಲಾಕ್ ಮಾಡಿರುವ ಆ್ಯಪ್‌ನ ಒಳಗಿರುವ ಮಾಹಿತಿಯು ನಿಮ್ಮ ಸಾಧನದಲ್ಲಿರುವ ಇತರ ಸ್ಥಳಗಳಲ್ಲಿ ಕಾಣಿಸುವುದಿಲ್ಲ—ಉದಾಹರಣೆಗೆ, CarPlay, ನೋಟಿಫಿಕೇಷನ್ ಪ್ರಿವ್ಯೂಗಳು, ಹುಡುಕಾಟ, Siri ಸಲಹೆಗಳು ಅಥವಾ ನಿಮ್ಮ ಕರೆ ಇತಿಹಾಸದಲ್ಲಿ.

ನಿಮ್ಮ ಸಾಧನದಲ್ಲಿ ನೀವು ಆ್ಯಪ್ ಅನ್ನು ಲಾಕ್ ಮಾಡಿದಾಗ ಅಥವಾ ಮರೆಮಾಡಿದಾಗ, ಅದು ಆ ಸಾಧನದಲ್ಲಿ ಮಾತ್ರವೇ ಲಾಕ್ ಆಗಿರುತ್ತದೆ ಅಥವಾ ಮರೆಯಾಗಿರುತ್ತದೆ. ಆ್ಯಪ್‌ನ ಲಾಕ್ ಮಾಡಲಾದ ಅಥವಾ ಮರೆಮಾಡಿದ ಸ್ಥಿತಿಯು iCloudನೊಂದಿಗೆ ಸಿಂಕ್ ಆಗುವುದಿಲ್ಲ.

ಗಮನಿಸಿ: ಕುಟುಂಬ ಹಂಚಿಕೆ ಗುಂಪಿನಲ್ಲಿರುವ 13 ವರ್ಷದೊಳಗಿನ ಮಕ್ಕಳಿಗೆ ಆ್ಯಪ್‌ಗಳನ್ನು ಲಾಕ್ ಮಾಡಲು ಅಥವಾ ಮರೆಮಾಡಲು ಸಾಧ್ಯವಾಗುವುದಿಲ್ಲ. ಕುಟುಂಬ ಹಂಚಿಕೆ ಗುಂಪಿನಲ್ಲಿರುವ 13 ರಿಂದ 17 ವಯಸ್ಸಿನವರು ಆ್ಯಪ್ ಅನ್ನು ಲಾಕ್ ಮಾಡಬಹುದು ಅಥವಾ ಮರೆಮಾಡಬಹುದು, ಆದರೆ ಕುಟುಂಬ ಗುಂಪಿನಲ್ಲಿರುವ ಪೋಷಕರು ಅಥವಾ ಪಾಲಕರು ಆ್ಯಪ್ ಅನ್ನು ಡೌನ್‌ಲೋಡ್ ಮಾಡಲಾಗಿದೆ ಎಂಬುದನ್ನು ಮತ್ತು ಅದನ್ನು ಎಷ್ಟು ಸಮಯ ಬಳಸಲಾಗಿದೆ ಎಂಬುದನ್ನು ನೋಡಬಹುದು ಹಾಗೂ ಸ್ಕ್ರೀನ್ ಟೈಮ್ ಅನ್ನು ಬಳಸಿಕೊಂಡು ಅದಕ್ಕೆ ಆ್ಯಕ್ಸೆಸ್ ಅನ್ನು ನಿರ್ಬಂಧಿಸಬಹುದು. (ಈ ವಯೋಮಾನವು ದೇಶ ಅಥವಾ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ.)

ಆ್ಯಪ್ ಅನ್ನು ಲಾಕ್ ಮಾಡಿ

ಆ್ಯಪ್ ಅನ್ನು ಲಾಕ್ ಮಾಡಲು Face ID, Touch ID ಅಗತ್ಯವಿರುತ್ತದೆ ಅಥವಾ ಆ್ಯಪ್ ಅನ್ನು ತೆರೆಯಲು ನಿಮ್ಮ ಪಾಸ್‌ಕೋಡ್ ಅಗತ್ಯವಿರುತ್ತದೆ.

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ನೀವು ಲಾಕ್ ಮಾಡಲು ಬಯಸುವ ಆ್ಯಪ್ ಅನ್ನು ಪತ್ತೆ ಮಾಡಿ.

  3. ತ್ವರಿತ ಆ್ಯಕ್ಷನ್‌ಗಳ ಮೆನು ತೆರೆದುಕೊಳ್ಳುವವರೆಗೂ ಆ್ಯಪ್ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ.

  4. Face ID (ಅಥವಾ Touch ID ಅಥವಾ ಪಾಸ್‌ಕೋಡ್) ಅಗತ್ಯವಿದೆ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ಕ್ಯಾಲ್‌ಕುಲೇಟರ್, ಕ್ಯಾಮರಾ, ಗಡಿಯಾರ, ಸಂಪರ್ಕ, ಹುಡುಕಿ, ನಕ್ಷೆ, ಶಾರ್ಟ್‌ಕಟ್ಸ್ ಮತ್ತು ಸೆಟ್ಟಿಂಗ್ಸ್ ಸೇರಿದಂತೆ—iPadನೊಂದಿಗೆ ಬರುವ ಕೆಲವು ಆ್ಯಪ್‌ಗಳನ್ನು ಲಾಕ್ ಮಾಡಲು ಸಾಧ್ಯವಾಗುವುದಿಲ್ಲ.

ಲಾಕ್ ಮಾಡಲಾದ ಆ್ಯಪ್ ಅನ್ನು ಅನ್‌ಲಾಕ್ ಮಾಡದೆಯೇ ತೆರೆಯುವುದು

ನೀವು ಲಾಕ್ ಮಾಡಿದ ಆ್ಯಪ್ ಅನ್ನು ಶಾಶ್ವತವಾಗಿ ಅನ್‌ಲಾಕ್ ಮಾಡದೆಯೇ ಅದನ್ನು ತೆರೆಯಬಹುದು ಮತ್ತು ಬಳಸಬಹುದು.

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ನೀವು ತೆರೆಯಲು ಬಯಸುವ ಆ್ಯಪ್ ಅನ್ನು ಪತ್ತೆಮಾಡಿ.

  3. ಆ್ಯಪ್ ಅನ್ನು ಟ್ಯಾಪ್ ಮಾಡಿ, ನಂತರ Face ID (ಅಥವಾ Touch ID ಅಥವಾ ಪಾಸ್‌ಕೋಡ್) ಬಳಸಿಕೊಂಡು ದೃಢೀಕರಿಸಿ.

    ನೀವು ಆ್ಯಪ್ ಅನ್ನು ತೊರೆದ ನಂತರ, ಅದು ಮತ್ತೊಮ್ಮೆ ಲಾಕ್ ಆಗುತ್ತದೆ. ಅದನ್ನು ಮತ್ತೆ ತೆರೆಯಲು, ನೀವು ಅದನ್ನು ಮರುದೃಢೀಕರಿಸಬೇಕು.

ಆ್ಯಪ್ ಅನ್‌ಲಾಕ್ ಮಾಡಿ

ನೀವು ಆ್ಯಪ್ ಅನ್ನು ಅನ್‌ಲಾಕ್ ಮಾಡಬಹುದು, ಇದರಿಂದಾಗಿ ಅದನ್ನು ತೆರೆಯಲು ಇನ್ನು ಮುಂದೆ ನೀವು Face ID, Touch ID ಅಥವಾ ಪಾಸ್‌ಕೋಡ್ ಬಳಸುವ ಅಗತ್ಯವಿರುವುದಿಲ್ಲ.

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ನೀವು ಅನ್‌ಲಾಕ್ ಮಾಡಲು ಬಯಸುವ ಆ್ಯಪ್ ಅನ್ನು ಪತ್ತೆಮಾಡಿ.

  3. ಮೆನು ತೆರೆಯುವವರೆಗೆ ಆ್ಯಪ್ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ.

  4. Face IDಯ (ಅಥವಾ Touch ID ಅಥವಾ ಪಾಸ್‌ಕೋಡ್) ಅಗತ್ಯವಿಲ್ಲ ಎಂಬುದನ್ನು ಟ್ಯಾಪ್ ಮಾಡಿ, ನಂತರ Face ID (ಅಥವಾ Touch ID ಅಥವಾ ಪಾಸ್‌ಕೋಡ್) ಬಳಸಿಕೊಂಡು ದೃಢೀಕರಿಸಿ.

ಆ್ಯಪ್ ಅನ್ನು ಮರೆಮಾಡಿ

ಆ್ಯಪ್ ಅನ್ನು ಮರೆಮಾಡುವುದರಿಂದ ಇತರರು ಅದನ್ನು ನೋಡುವುದನ್ನು ಅಥವಾ ತೆರೆಯುವುದನ್ನು ತಡೆಯಬಹುದು (Face ID, Touch ID ಅಥವಾ ಪಾಸ್‌ಕೋಡ್ ಬಳಸಿಕೊಂಡು ನಿಮ್ಮ iPad ಅನ್ನು ದೃಢೀಕರಿಸಲು ಅವರ ಬಳಿ ಯಾವುದಾದರೂ ಮಾರ್ಗ ಇರುವುದನ್ನು ಹೊರತುಪಡಿಸಿ).

ನೀವು ಆ್ಯಪ್ ಅನ್ನು ಮರೆಮಾಡಿದ ನಂತರವೂ ಸ್ಕ್ರೀನ್ ಟೈಮ್, ಆ್ಯಪ್‌ನಿಂದ ಬ್ಯಾಟರಿ ಬಳಕೆಯಂತಹ (ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ) ಕೆಲವು ಕಡೆಗಳಲ್ಲಿ ಮತ್ತು ನಿಮ್ಮ App Store ಖರೀದಿ ಇತಿಹಾಸದಲ್ಲಿ ಅದರ ಹೆಸರು ಈಗಲೂ ಕಾಣಿಸುತ್ತದೆ.

ಗಮನಿಸಿ: ಇನ್‌ಸ್ಟಾಲ್ ಆಗಿ ಬರುವ ಆ್ಯಪ್‌ಗಳನ್ನು ಮರೆಮಾಡಲು ಸಾಧ್ಯವಿಲ್ಲ. ನೀವು App Storeನಿಂದ ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡುವ ಆ್ಯಪ್‌ಗಳನ್ನು ಮಾತ್ರ ಮರೆಮಾಡಬಹುದು. ಬಳಕೆದಾರರು ಡಿಫಾಲ್ಟ್ ವೆಬ್ ಬ್ರೌಸರ್ ಆಗಿ ಸೆಟ್ ಮಾಡಿರುವ ಎಂದಿರುವ ಆ್ಯಪ್‌ಗಳು ಅಥವಾ ಆ್ಯಪ್ ಮಾರ್ಕೆಟ್‌ಪ್ಲೇಸ್ (EUಯಲ್ಲಿ ಮಾತ್ರ ಲಭ್ಯವಿವಿದೆ) ಅನ್ನು ಸಹ ಮರೆಮಾಡಲು ಸಾಧ್ಯವಾಗುವುದಿಲ್ಲ.

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ನೀವು ಮರೆಮಾಡಲು ಬಯಸುವ ಆ್ಯಪ್ ಅನ್ನು ಪತ್ತೆಮಾಡಿ.

  3. ಮೆನು ತೆರೆಯುವವರೆಗೆ ಆ್ಯಪ್ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ.

  4. Face ID (ಅಥವಾ Touch ID ಅಥವಾ ಪಾಸ್‌ಕೋಡ್) ಅಗತ್ಯವಿದೆ ಎಂಬುದನ್ನು ಟ್ಯಾಪ್ ಮಾಡಿ.

  5. ‘ಮರೆಮಾಡಿ ಮತ್ತು Face ID (ಅಥವಾ Touch ID ಅಥವಾ ಪಾಸ್‌ಕೋಡ್) ಅಗತ್ಯವಿದೆ’ ಎಂಬುದನ್ನು ಟ್ಯಾಪ್ ಮಾಡಿ, Face ID (ಅಥವಾ Touch ID ಅಥವಾ ಪಾಸ್‌ಕೋಡ್) ಬಳಸಿಕೊಂಡು ದೃಢೀಕರಿಸಿ.

    ಆ್ಯಪ್ ನಿಮ್ಮ ಹೋಮ್ ಸ್ಕ್ರೀನ್‌ನಿಂದ ಕಣ್ಮರೆಯಾಗುತ್ತದೆ ಮತ್ತು ಆ್ಯಪ್ ಲೈಬ್ರರಿಯ ಕೆಳಭಾಗದಲ್ಲಿರುವ ಮರೆಮಾಡಿರುವ ಫೋಲ್ಡರ್‌ಗೆ ಮೂವ್ ಆಗುತ್ತದೆ.

ಸಲಹೆ: ನೀವು ಮರೆಮಾಡಿದ ಆ್ಯಪ್‌ಗಳ ಪಟ್ಟಿಯನ್ನು ನೋಡಲು, ಸೆಟ್ಟಿಂಗ್ಸ್ ಆ್ಯಪ್‌  > ಆ್ಯಪ್‌ಗಳು > ಮರೆಮಾಡಿದ ಆ್ಯಪ್‌ಗಳು ಎಂಬಲ್ಲಿಗೆ ಹೋಗಿ.

ಮರೆಮಾಡಿದ ಆ್ಯಪ್ ತೆರೆಯಿರಿ

ನೀವು ಮರೆಮಾಡಿರುವ ಆ್ಯಪ್ ಅನ್ನು ನೀವು ತೆರೆಯಬಹುದು ಮತ್ತು ಬಳಸಬಹುದು.

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ಆ್ಯಪ್ ಲೈಬ್ರರಿಗೆ ಹೋಗಲು ನಿಮ್ಮ ಎಲ್ಲಾ ಹೋಮ್ ಸ್ಕ್ರೀನ್ ಪುಟಗಳನ್ನು ಎಡಕ್ಕೆ ಸ್ವೈಪ್ ಮಾಡಿ.

  3. ಆ್ಯಪ್ ಲೈಬ್ರರಿ ಕೆಳಗೆ ಮರೆಮಾಡಿರುವ ಫೋಲ್ಡರ್ ಅನ್ನು ಟ್ಯಾಪ್ ಮಾಡಿ, ನಂತರ Face ID (ಅಥವಾ Touch ID ಅಥವಾ ಪಾಸ್‌ಕೋಡ್) ಬಳಸಿಕೊಂಡು ದೃಢೀಕರಿಸಿ.

  4. ಆ್ಯಪ್ ಅನ್ನು ಟ್ಯಾಪ್ ಮಾಡಿ, ನಂತರ Face ID (ಅಥವಾ Touch ID ಅಥವಾ ಪಾಸ್‌ಕೋಡ್) ಬಳಸಿಕೊಂಡು ದೃಢೀಕರಿಸಿ.

ಆ್ಯಪ್ ಮರೆಮಾಡಿರುವುದನ್ನು ರದ್ದು ಮಾಡಿ

ನೀವು ಆ್ಯಪ್ ಅನ್ನು ಮರೆಮಾಡುವುದನ್ನು ನಿಲ್ಲಿಸಬಹುದು, ಇದರಿಂದ ನೀವು ಅದನ್ನು ನೋಡಬಹುದು.

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ಆ್ಯಪ್ ಲೈಬ್ರರಿಗೆ ಹೋಗಲು ನಿಮ್ಮ ಎಲ್ಲಾ ಹೋಮ್ ಸ್ಕ್ರೀನ್ ಪುಟಗಳನ್ನು ಎಡಕ್ಕೆ ಸ್ವೈಪ್ ಮಾಡಿ.

  3. ಆ್ಯಪ್ ಲೈಬ್ರರಿ ಕೆಳಗೆ ಮರೆಮಾಡಿರುವ ಫೋಲ್ಡರ್ ಅನ್ನು ಟ್ಯಾಪ್ ಮಾಡಿ, ನಂತರ Face ID (ಅಥವಾ Touch ID ಅಥವಾ ಪಾಸ್‌ಕೋಡ್) ಬಳಸಿಕೊಂಡು ದೃಢೀಕರಿಸಿ.

  4. ಆ್ಯಪ್ ಅನ್ನು ಮರೆಮಾಡಿರುವ ಫೋಲ್ಡರ್‌ನಿಂದ ಹೊರಗೆ ಮೂವ್ ಮಾಡಲು, ಆ್ಯಪ್ ಅನ್ನು ಒತ್ತಿ ಹಿಡಿದುಕೊಳ್ಳಿ, Face ID (ಅಥವಾ Touch ID ಅಥವಾ ಪಾಸ್‌ಕೋಡ್) ಅಗತ್ಯವಿಲ್ಲ ಎಂಬುದನ್ನು ಟ್ಯಾಪ್ ಮಾಡಿ, ನಂತರ Face ID (ಅಥವಾ Touch ID ಅಥವಾ ಪಾಸ್‌ಕೋಡ್) ಬಳಸಿಕೊಂಡು ದೃಢೀಕರಿಸಿ.

    ಆ್ಯಪ್ ಲೈಬ್ರರಿಯ ಮೇಲ್ಭಾಗದಲ್ಲಿ ಆ್ಯಪ್ ಕಾಣಿಸಿಕೊಳ್ಳುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.