ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಫೋಟೋ ಮತ್ತು ವೀಡಿಯೊ ಮಾಹಿತಿಯನ್ನು ನೋಡುವುದು

ನೀವು ಫೋಟೋ ಅಥವಾ ವೀಡಿಯೊದ ಬಗ್ಗೆ ಸೇವ್ ಮಾಡಿರುವ ಮೆಟಾಡೇಟದ ಮಾಹಿತಿಯನ್ನು ಫೋಟೋಸ್ ಆ್ಯಪ್‌ನಲ್ಲಿ ಹುಡುಕಬಹುದು. ನೀವು ಕೆಲವು ಸಂಗ್ರಹಿಸಿದ ಕೆಲವು ಡೇಟಗಳಾದ ದಿನಾಂಕ, ಸಮಯ ಮತ್ತು ಸ್ಥಳವನ್ನು ಸಹ ಬದಲಾಯಿಸಬಹುದು.

ಫೋಟೋ ಮತ್ತು ವೀಡಿಯೊ ಮೆಟಾಡೇಟವನ್ನು ನೋಡಿ

  1. ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ ಹೋಗಿ.

  2. ನೀವು ಯಾವುದರ ಮೆಟಾಡೇಟವನ್ನು ನೋಡಲು ಬಯಸುವಿರೋ ಆ ಫೋಟೋ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಿ, ನಂತರ ಮೇಲಕ್ಕೆ ಸ್ವೈಪ್ ಮಾಡಿ ಅಥವಾ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ.

    ಫೋಟೋ ಅಥವಾ ವೀಡಿಯೊದ ಅನುಸಾರ, ನೀವು ಈ ಕೆಳಗಿನ ವಿವರಗಳನ್ನು ನೋಡುತ್ತೀರಿ:

    • ಫೋಟೋದಲ್ಲಿ ಗುರುತಿಸಲಾದ ಜನರು (ಜನರು ಮತ್ತು ಸಾಕುಪ್ರಾಣಿಗಳನ್ನು ಹುಡುಕಿ ಮತ್ತು ಹೆಸರಿಸಿ ಎಂಬುದನ್ನು ನೋಡಿ)

    • ಫೋಟೋ ಅಥವಾ ವೀಡಿಯೊವನ್ನು ವಿವರಿಸಲು ಮತ್ತು ಹುಡುಕಾಟದ ಫೀಲ್ಡ್‌ನಲ್ಲಿ ಹುಡುಕುವುದನ್ನು ಸುಲಭಗೊಳಿಸಲು ಇರುವ ಕ್ಯಾಪ್ಷನ್ ಫೀಲ್ಡ್

    • ವಿಷುವಲ್ ಲುಕ್ ಅಪ್ ಮೂಲಕ ಪತ್ತೆಹಚ್ಚಲಾದ ಐಟಮ್‌ಗಳು

    • ಕಾನ್ಸರ್ಟ್‌ಗಳು ಮತ್ತು ಕ್ರೀಡಾ ಇವೆಂಟ್‌ಗಳಲ್ಲಿ ತೆಗೆದ ಫೋಟೋಗಳು ಮತ್ತು ವೀಡಿಯೊಗಳ ಇವೆಂಟ್ ಮಾಹಿತಿ

    • ಯಾವ ಸಾಧನದಿಂದ ಫೋಟೋ ಅಥವಾ ವೀಡಿಯೊವನ್ನು ಕ್ಯಾಪ್ಚರ್ ಮಾಡಲಾಗಿದೆ

    • ಫೋಟೋ ಅಥವಾ ವೀಡಿಯೊವನ್ನು ತೆಗೆದುಕೊಂಡಿರುವ ದಿನಾಂಕ ಮತ್ತು ಸಮಯ (ದಿನಾಂಕ ಮತ್ತು ಸಮಯವನ್ನು ಎಡಿಟ್ ಮಾಡಲು ಸರಿಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ)

    • ಲೆನ್ಸ್, ಶಟರ್ ಸ್ಪೀಡ್, ಫೈಲ್ ಗಾತ್ರ ಮುಂತಾದ ಕ್ಯಾಮರಾ ಮೆಟಾಡೇಟ

    • ಫೋಟೋ ಅಥವಾ ವೀಡಿಯೊವನ್ನು ತೆಗೆದುಕೊಂಡಿರುವ ಸ್ಥಳ (ನಕ್ಷೆಯಲ್ಲಿ ಸ್ಥಳವನ್ನು ನೋಡಲು ಲಿಂಕ್ ಅನ್ನು ಟ್ಯಾಪ್ ಮಾಡಿ; ಸ್ಥಳವನ್ನು ಎಡಿಟ್ ಮಾಡಲು ಸರಿಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ; ಸ್ಥಳವನ್ನು ನಮೂದಿಸಲು ಸ್ಥಳವನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ)

    • ಫೋಟೋ ಅಥವಾ ವೀಡಿಯೊವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದರೆ, ಅದನ್ನು ಯಾರು ಹಂಚಿಕೊಂಡಿದ್ದಾರೆ ಎಂಬುದು

    • ಈ ಫೋಟೋ ಯಾವ ಆಲ್ಬಮ್‌ಗಳಲ್ಲಿದೆ (ಆಲ್ಬಮ್ ತೆರೆಯಲು ಟ್ಯಾಪ್ ಮಾಡಿ)

    ಫೋಟೋಸ್ ಆ್ಯಪ್‌ನಲ್ಲಿ ಒಂದು ಫೋಟೋ ತೆರೆದಿದೆ. ಮೇಲಿನಿಂದ ಕೆಳಕ್ಕೆ, ಫೋಟೋ ತೆಗೆದುಕೊಂಡ ದಿನಾಂಕ ಮತ್ತು ಸಮಯ, ಫೈಲ್ ಹೆಸರು, iPhone ಮಾಡಲ್ ಮತ್ತು ಕ್ಯಾಮರಾ ಸೆಟ್ಟಿಂಗ್ಸ್ ಹಾಗೂ ಫೋಟೋ ತೆಗೆದುಕೊಂಡ ಸ್ಥಳದ ನಕ್ಷೆಯು ಸೇರಿದಂತೆ ಮೆಟಾಡೇಟ ಮಾಹಿತಿಯು ಫೋಟೋದ ಮೇಲೆ ಕಾಣಿಸಿಕೊಳ್ಳುತ್ತದೆ.
  3. ಮೆನುವನ್ನು ಮುಚ್ಚಲು ಮುಚ್ಚಿ ಬಟನ್ ಅನ್ನು ಟ್ಯಾಪ್ ಮಾಡಿ.

ದಿನಾಂಕ, ಸಮಯ ಅಥವಾ ಸ್ಥಳವನ್ನು ಬದಲಾಯಿಸಿ

  1. ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಫೋಟೋ ಅಥವಾ ವೀಡಿಯೊವನ್ನು ತೆರೆಯಲು ಅದನ್ನು ಟ್ಯಾಪ್ ಮಾಡಿ, ನಂತರ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ.

  3. “ದಿನಾಂಕ ಮತ್ತು ಸಮಯವನ್ನು ಸರಿಹೊಂದಿಸಿ” ಟ್ಯಾಪ್ ಮಾಡಿ ಅಥವಾ “ಸ್ಥಳವನ್ನು ಸರಿಹೊಂದಿಸಿ” ಎಂಬುದನ್ನು ಟ್ಯಾಪ್ ಮಾಡಿ, ನಂತರ ಹೊಸ ಮಾಹಿತಿಯನ್ನು ನಮೂದಿಸಿ.

    • ದಿನಾಂಕ ಮತ್ತು ಸಮಯದ ಬದಲಾವಣೆಗಳಿಗಾಗಿ, ಅಪ್‌ಡೇಟ್ ಮಾಡಲು ಕ್ಯಾಲೆಂಡರ್ ಮತ್ತು ಗಡಿಯಾರ ಎಂಬುದನ್ನು ಬಳಸಿ, ನಂತರ ಸರಿಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಸ್ಥಳ ಬದಲಾವಣೆಗಳಿಗಾಗಿ, ಪಠ್ಯ ಫೀಲ್ಡ್‌ನಲ್ಲಿ ಫೋಟೋ ತೆಗೆದ ಸ್ಥಳವನ್ನು ನಮೂದಿಸಿ, ನಂತರ ಸ್ಥಳನಕ್ಷೆಯ ಕೆಳಗೆ ಅದು ಕಾಣಿಸಿಕೊಂಡಾಗ ಸ್ಥಳ ಎಂಬುದನ್ನು ಟ್ಯಾಪ್ ಮಾಡಿ.

ಫೋಟೋಗಳ ಬ್ಯಾಚ್‌ನ ದಿನಾಂಕ, ಸಮಯ ಅಥವಾ ಸ್ಥಳವನ್ನು ಬದಲಾಯಿಸಲು, ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನೀವು ಬದಲಾಯಿಸಲು ಬಯಸುವ ಥಂಬ್‌ನೇಲ್‌ಗಳನ್ನು ಟ್ಯಾಪ್ ಮಾಡಿ, ನಂತರ ಮೇಲಿನ ಹಂತಗಳನ್ನು ಅನುಸರಿಸಿ.

ಫೋಟೋ ಅಥವಾ ವೀಡಿಯೊವನ್ನು ಅದರ ಮೂಲ ದಿನಾಂಕ, ಸಮಯ ಅಥವಾ ಸ್ಥಳಕ್ಕೆ ರಿವರ್ಟ್ ಮಾಡಲು, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ದಿನಾಂಕ ಮತ್ತು ಸಮಯವನ್ನು ಸರಿಹೊಂದಿಸಿ ಅಥವಾ ಸ್ಥಳವನ್ನು ಸರಿಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ರಿವರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.