ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಕುಟುಂಬ ಸದಸ್ಯರೊಂದಿಗೆ Apple ಮತ್ತು App Store ಸಬ್‌ಸ್ಕ್ರಿಪ್ಶನ್‌ಗಳನ್ನು ಹಂಚಿಕೊಳ್ಳಿ

ನೀವು ಕುಟುಂಬ ಹಂಚಿಕೆ ಗುಂಪಿನಲ್ಲಿ ಇರುವಾಗ, ನೀವು Apple ಸಬ್‌ಸ್ಕ್ರಿಪ್ಶನ್‌ಗಳನ್ನು ಹಂಚಿಕೊಳ್ಳಬಹುದು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ App Store ಸಬ್‌ಸ್ಕ್ರಿಪ್ಶನ್‌ಗಳಿಗೆ ಅರ್ಹರಾಗಬಹುದು.

ನಿಮ್ಮ ಕುಟುಂಬ ಹಂಚಿಕೆ ಗುಂಪು ಖರೀದಿ ಹಂಚಿಕೆಯನ್ನು ಆನ್ ಮಾಡಿಕೊಂಡಿದ್ದರೆ, ಗುಂಪಿನೊಂದಿಗೆ ಹಂಚಿಕೊಂಡ ಯಾವುದೇ ಸಬ್‌ಸ್ಕ್ರಿಪ್ಶನ್‌ಗಳನ್ನು ಆಯೋಜಕರ ಡಿಫಾಲ್ಟ್ ಪಾವತಿ ವಿಧಾನಕ್ಕೆ ನೇರವಾಗಿ ಬಿಲ್ ಮಾಡಲಾಗುತ್ತದೆ.

ಗಮನಿಸಿ: ಎಲ್ಲಾ ಸೇವೆಗಳು ಎಲ್ಲಾ ದೇಶಗಳಲ್ಲಿ ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ ಮತ್ತು ಕೆಲವು ಆಯ್ಕೆಗಳು ಸ್ಕ್ರೀನ್ ಸಮಯದಲ್ಲಿ ಸೆಟ್ ಮಾಡಲಾದ ಕಂಟೆಂಟ್ ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ.

Apple ಸಬ್‌ಸ್ಕ್ರಿಪ್ಶನ್‌ಗಳನ್ನು ಹಂಚಿಕೊಳ್ಳಿ

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಕುಟುಂಬ ಎಂಬುದನ್ನು ಟ್ಯಾಪ್ ಮಾಡಿ, ಸಬ್‌ಸ್ಕ್ರಿಪ್ಷನ್‌ಗಳನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನೀವು ಹಂಚಿಕೊಳ್ಳಲು ಬಯಸುವ ಸಬ್‌ಸ್ಕ್ರಿಪ್ಶನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

    • ಸಬ್‌ಸ್ಕ್ರಿಪ್ಶನ್‌ಗಳನ್ನು ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಬ್‌ಸ್ಕ್ರಿಪ್ಶನ್ ಒಂದನ್ನು ಟ್ಯಾಪ್ ಮಾಡಿ.

ಇನ್ನಷ್ಟು ತಿಳಿದುಕೊಳ್ಳಲಲು ಈ ಕೆಳಗಿನ ಯಾವುದನ್ನಾದರೂ ನೋಡಿ.

  • Apple Arcade: Apple Arcadeಗೆ ಸಬ್‌ಸ್ಕ್ರೈಬ್ ಮಾಡಿ ಅನ್ನು ನೋಡಿ. ನಿಮ್ಮ ಕುಟುಂಬದ ಎಲ್ಲಾ ಸದಸ್ಯರು App Storeನಿಂದ Apple Arcade ಗೇಮ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಪ್ಲೇ ಮಾಡಬಹುದು. ಪ್ರತಿಯೊಬ್ಬ ಆಟಗಾರರು ವೈಯಕ್ತಿಕಗೊಳಿಸಿದ ಖಾತೆಯನ್ನು ಪಡೆಯುತ್ತಾರೆ—ನಿಮ್ಮ ಪ್ರಗತಿಯನ್ನು ಸಾಧನಗಳ ನಡುವೆ ಕ್ಯಾರಿ ಓವರ್ ಮಾಡಲಾಗುತ್ತದೆ.

  • Apple Fitness+: Apple Fitness+ ಬಳಕೆದಾರರ ಮಾರ್ಗದರ್ಶಿಯಲ್ಲಿ Apple Fitness+ಗೆ ಸಬ್‌ಸ್ಕ್ರೈಬ್ ಮಾಡಿ ಎಂಬುದನ್ನು ನೋಡಿ. ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ತಮ್ಮ iPhone ಅಥವಾ iPadನಲ್ಲಿ ಫಿಟ್‌ನೆಸ್‌ ಆ್ಯಪ್‌ನಲ್ಲಿ ವರ್ಕ್ಔಟ್‌ಗಳನ್ನು ಆ್ಯಕ್ಸೆಸ್ ಮಾಡಬಹುದು.

  • Apple Music: Apple Musicಗೆ ಸಬ್‌ಸ್ಕ್ರೈಬ್ ಮಾಡಿ ಎಂಬುದನ್ನು ನೋಡಿ. ಕುಟುಂಬದ ಸಬ್‌ಸ್ಕ್ರಿಪ್ಶನ್ ಮೂಲಕ, ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮದೇ ಆದ ಸಂಗೀತ ಲೈಬ್ರರಿ ಮತ್ತು ವೈಯಕ್ತಿಕ ಶಿಫಾರಸುಗಳನ್ನು ಪಡೆಯುತ್ತಾರೆ.

  • Apple News+: Apple News+ಗೆ ಸಬ್‌ಸ್ಕ್ರೈಬ್ ಮಾಡಿ ಎಂಬುದನ್ನು ನೋಡಿ. ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ Apple News+ ಪ್ರಕಟಣೆಗಳನ್ನು ಓದಬಹುದು.

  • Apple TV ಮತ್ತು Apple TV ಚಾನಲ್‌ಗಳು: Apple TVಗೆ ಸಬ್‌ಸ್ಕ್ರೈಬ್ ಮಾಡುವುದು ಮತ್ತು Apple TV ಚಾನಲ್‌ಗಳು ಮತ್ತು ಆ್ಯಪ್‌ಗಳಿಗೆ ಸಬ್‌ಸ್ಕ್ರೈಬ್ ಮಾಡಿ ಅನ್ನು ನೋಡಿ. ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮದೇ ಆದ iPhone, iPod touch, Mac, Apple TV 4Kಯನ್ನು ತಮ್ಮ Apple ಖಾತೆ ಮತ್ತು ಪಾಸ್‌ವರ್ಡ್ ಬಳಸಿ ತಮ್ಮ iPad ಮತ್ತು ಬೆಂಬಲಿತ ಸ್ಮಾರ್ಟ್ TVಗಳು ಹಾಗೂ ಸ್ಟ್ರೀಮಿಂಗ್ ಸಾಧನಗಳಲ್ಲಿ ವೀಕ್ಷಿಸಬಹುದು.

  • iCloud+: iCloud+ಗೆ ಸಬ್‌ಸ್ಕ್ರೈಬ್ ಮಾಡಿ ಎಂಬುದನ್ನು ನೋಡಿ. ನೀವು iCloud+ ಅನ್ನು ಹಂಚಿಕೊಂಡಾಗ, ಕುಟುಂಬದ ಎಲ್ಲಾ ಸದಸ್ಯರು iCloud+ ಫೀಚರ್‌ಗಳು ಮತ್ತು ಸಂಗ್ರಹಣೆಗೆ ಆ್ಯಕ್ಸೆಸ್ ಹೊಂದಿರುತ್ತಾರೆ. ಸಂಗ್ರಹಣೆಗಾಗಿ, ನೀವು ಸಂಗ್ರಹಣೆಯ ಸ್ಥಳವನ್ನು ಮಾತ್ರ ಹಂಚಿಕೊಳ್ಳುತ್ತೀರಿ—ನಿಮ್ಮ ಫೋಟೋಗಳು ಮತ್ತು ಡಾಕ್ಯುಮಂಟ್‌ಗಳು ಖಾಸಗಿಯಾಗಿ ಉಳಿಯುತ್ತವೆ ಮತ್ತು ಎಲ್ಲರೂ ತಮ್ಮ ಸ್ವಂತ ಖಾತೆಗಳನ್ನು ಬಳಸುವುದನ್ನು ಮುಂದುವರಿಸುತ್ತಾರೆ.

ನಿಮ್ಮ Apple ಸಬ್‌ಸ್ಕ್ರಿಪ್ಶನ್‌ಗಳನ್ನು ಸಂಯೋಜಿಸುವ ಕುರಿತಾದ ಮಾಹಿತಿಗಾಗಿ, Apple One ಮೂಲಕ Apple ಸಬ್‌ಸ್ಕ್ರಿಪ್ಶನ್‌ಗಳನ್ನು ಬಂಡಲ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

App Store ಸಬ್‌ಸ್ಕ್ರಿಪ್ಶನ್‌ಗಳನ್ನು ಹಂಚಿಕೊಳ್ಳಿ

ಕುಟುಂಬದ ಸದಸ್ಯರೊಂದಿಗೆ ಯಾವ ಅರ್ಹ App Store ಸಬ್‌ಸ್ಕ್ರಿಪ್ಶನ್‌ಗಳನ್ನು ಹಂಚಿಕೊಳ್ಳಬೇಕು ಎಂಬುದನ್ನು ನೀವು ಆಯ್ಕೆಮಾಡಬಹುದು. App Store ಕುರಿತಾದ ಮಾಹಿತಿಗಾಗಿ, App Storeನಲ್ಲಿ ಆ್ಯಪ್‌ಗಳನ್ನು ಪಡೆಯಿರಿ ಎಂಬುದನ್ನು ನೋಡಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್  ಆ್ಯಪ್‌ಗೆ ಹೋಗಿ.

  2. ಕುಟುಂಬ ಎಂಬುದನ್ನು ಟ್ಯಾಪ್ ಮಾಡಿ, ಸಬ್‌ಸ್ಕ್ರಿಪ್ಶನ್‌ಗಳನ್ನು ಟ್ಯಾಪ್ ಮಾಡಿ, ನಂತರ ಸಬ್‌ಸ್ಕ್ರಿಪ್ಶನ್‌ಗಳನ್ನು ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಎಲ್ಲಾ ಹೊಸ ಸಬ್‌ಸ್ಕ್ರಿಪ್ಶನ್‌ಗಳನ್ನು ಹಂಚಿಕೊಳ್ಳಿ: ಕುಟುಂಬದವರೊಂದಿಗೆ ಹಂಚಿಕೊಳ್ಳಿ ಎಂಬುದನ್ನು ಆನ್ ಮಾಡಿ. ಹಂಚಿಕೊಳ್ಳಲು ಅರ್ಹವಾದ ಹೊಸ ಸಬ್‌ಸ್ಕ್ರಿಪ್ಶನ್ ಅನ್ನು ನೀವು ಖರೀದಿಸಿದಾಗ, ಅದನ್ನು ನಿಮ್ಮ ಕುಟುಂಬ ಹಂಚಿಕೆ ಸದಸ್ಯರೊಂದಿಗೆ ಡಿಫಾಲ್ಟ್ ಆಗಿ ಹಂಚಿಕೊಳ್ಳಲಾಗುತ್ತದೆ.

    • ನಿರ್ದಿಷ್ಟ ಸಬ್‌ಸ್ಕ್ರಿಪ್ಶನ್ ಸೆಟ್ಟಿಂಗ್ಸ್ ಬದಲಾಯಿಸಿ: ಸಬ್‌ಸ್ಕ್ರಿಪ್ಶನ್ ಅನ್ನು ಟ್ಯಾಪ್ ಮಾಡಿ, ನಂತರ ಕುಟುಂಬದೊಂದಿಗೆ ಹಂಚಿಕೊಳ್ಳಿ ಎಂಬುದನ್ನು ಆನ್ ಅಥವಾ ಆಫ್ ಮಾಡಿ.

      ನಿಮಗೆ ಕುಟುಂಬದ ಜೊತೆ ಹಂಚಿಕೊಳ್ಳಿ ಎಂಬುದು ಕಾಣಿಸದಿದ್ದರೆ, ಸಬ್‌ಸ್ಕ್ರಿಪ್ಶನ್ ಹಂಚಿಕೊಳ್ಳಲು ಅರ್ಹವಾಗಿರುವುದಿಲ್ಲ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.