ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ News ಬಳಕೆಯನ್ನು ಪ್ರಾರಂಭಿಸುವುದು

News ಆ್ಯಪ್ ನಿಮಗೆ ಹೆಚ್ಚು ಆಸಕ್ತಿ ಇರುವ ವಿಷಯಗಳ ಬಗ್ಗೆ ನೀವು ಓದಲು ಬಯಸುವ ಎಲ್ಲಾ ಸ್ಟೋರಿಗಳನ್ನು—ನಿಮ್ಮ ಮೆಚ್ಚಿನ ಮೂಲಗಳಿಂದ—ಸಂಗ್ರಹಿಸುತ್ತದೆ. Apple News+ ಸಬ್‌ಸ್ಕ್ರೈಬರ್‌ಗಳು ಪಝಲ್‌ಗಳು ಮತ್ತು ರೆಸಿಪಿಗಳಂತಹ ಫೀಚರ್‌ಗಳನ್ನು ಸಹ ಆ್ಯಕ್ಸೆಸ್ ಮಾಡಬಹುದು.

News ಆ್ಯಪ್‌ನಲ್ಲಿರುವ ‘ಇಂದು’ ಫೀಡ್‌ನಿಂದ ಒಂದು ಸ್ಟೋರಿ.

ಇತ್ತೀಚಿನ ಸುದ್ದಿಗಳನ್ನು ನೋಡುವುದು

ಬ್ರೇಕಿಂಗ್ ನ್ಯೂಸ್‌ನಿಂದ ವಿಜ್ಞಾನ ಮತ್ತು ಮನರಂಜನೆಯವರೆಗೆ ಸುದ್ದಿಗಳನ್ನು ಬ್ರೌಸ್ ಮಾಡಲು News ಆ್ಯಪ್‌ ತೆರೆಯಿರಿ. ನೀವು ಹೆಚ್ಚು ಓದಿದಷ್ಟೂ, Siri ನಿಮಗೆ ಯಾವುದು ಮುಖ್ಯ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ನಿಮಗೆ ಇಷ್ಟವಾಗಬಹುದಾದ ಸ್ಟೋರಿಗಳನ್ನು ಸೂಚಿಸುತ್ತದೆ.

ಫಾಲೋ ಮಾಡಿದ ಚಾನಲ್‌ಗಳು ಮತ್ತು ವಿಷಯಗಳು ಲೇಖನದ ಮೇಲಿರುವ News ಸೈಡ್‌ಬಾರ್‌ನಲ್ಲಿ ಕಾಣಿಸಿಕೊಳ್ಳುತ್ತವೆ.

ನಿಮ್ಮ ಫೀಡ್ ಅನ್ನು ಕಸ್ಟಮೈಸ್ ಮಾಡುವುದು

ನೀವು ಆಸಕ್ತಿ ಹೊಂದಿರುವ ನಿರ್ದಿಷ್ಟ ಚಾನಲ್ ಅಥವಾ ವಿಷಯವನ್ನು ಹುಡುಕಲು ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಅದನ್ನು ಫಾಲೋ ಮಾಡಲು ಫಾಲೋ ಬಟನ್ ಅನ್ನು ಟ್ಯಾಪ್ ಮಾಡಿ. ನೀವು ಫಾಲೋ ಮಾಡುವ ಚಾನಲ್‌ಗಳು ಮತ್ತು ವಿಷಯಗಳು ’ಇಂದು’ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ನಿಮಗೆ ಇಷ್ಟವಿಲ್ಲದ ಚಾನಲ್ ಅಥವಾ ವಿಷಯ, ನಿಮ್ಮ ಇಂದು ಫೀಡ್‌ನಲ್ಲಿ ಕಾಣಿಸಬಾರದು ಎಂದಿದ್ದರೆ, ಅದನ್ನು ಒತ್ತಿ ಹಿಡಿದುಕೊಳ್ಳಿ. ನಂತರ ಚಾನಲ್ ಅನ್ನು ಬ್ಲಾಕ್ ಮಾಡಿ, ವಿಷಯವನ್ನು ಬ್ಲಾಕ್ ಮಾಡಿ ಅಥವಾ ಸೂಚಿಸುವುದನ್ನು ನಿಲ್ಲಿಸಿ ಎಂಬುದನ್ನು ಆಯ್ಕೆಮಾಡಿ.

Apple News+ನಲ್ಲಿ ಅನ್ವೇಷಿಸಿ ಪುಟ. ಟ್ಯಾಬ್ ಬಾರ್‌ನಲ್ಲಿ, News+ ಅನ್ನು ಆಯ್ಕೆಮಾಡಲಾಗಿದೆ ಮತ್ತು ಅದರ ಕೆಳಗೆ, News+ನಲ್ಲಿ ಅತ್ಯುತ್ತಮವಾದುದು ಎಂಬ ವಿಭಾಗವನ್ನು ಆಯ್ಕೆಮಾಡಲಾಗಿದೆ.

Apple News+ಗೆ ಸಬ್‌ಸ್ಕ್ರೈಬ್ ಮಾಡಿ

ನೀವು Apple News+ಗೆ ಸಬ್‌ಸ್ಕ್ರೈಬ್ ಮಾಡಿದಾಗ, ನೀವು ನೂರಾರು ಮ್ಯಾಗಜಿನ್‌ಗಳು ಮತ್ತು ಪತ್ರಿಕೆಗಳ ಜೊತೆಗೆ ಪಝಲ್‌ಗಳು ಮತ್ತು ರೆಸಿಪಿಗಳನ್ನು ಆ್ಯಕ್ಸೆಸ್ ಮಾಡಬಹುದು. ನೀವು ಇತರರೊಂದಿಗೆ ಸಂಚಿಕೆಗಳನ್ನು ಹಂಚಿಕೊಳ್ಳಬಹುದು ಅಥವಾ ಆಫ್‌ಲೈನ್‌ನಲ್ಲಿ ಓದಲು ಅವುಗಳನ್ನು ಡೌನ್‌ಲೋಡ್ ಮಾಡಬಹುದು. ಪ್ರಾಂಪ್ಟ್ ಮಾಡಿದಾಗ, ಸಬ್‌ಸ್ಕ್ರಿಪ್ಶನ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

News ಆ್ಯಪ್‌ನಲ್ಲಿರುವ ಪಝಲ್‌ಗಳು ಫೀಡ್.

ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ವಿರಾಮ ತೆಗೆದುಕೊಳ್ಳುವುದು

Apple News+ ಸಬ್‌ಸ್ಕ್ರೈಬರ್‌ಗಳು ಕ್ರಾಸ್‌ವರ್ಡ್, ಕ್ವಾರ್ಟೈಲ್ಸ್, ಸುಡೊಕು ಮತ್ತು ಎಮೋಜಿ ಗೇಮ್‌ನಂತಹ ದೈನಂದಿನ ಪಝಲ್‌ಗಳನ್ನು ಪರಿಹರಿಸಬಹುದು. ಸೈಡ್‌ಬಾರ್‌ನಲ್ಲಿ ಪಝಲ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಪಝಲ್‌ ಒಂದನ್ನು ತೆರೆಯಲು ಟ್ಯಾಪ್ ಮಾಡಿ. ಕ್ವಾರ್ಟೈಲ್ಸ್‌ನಂತಹ ಕೆಲವು ಗೇಮ್‌ಗಳಲ್ಲಿ ಟ್ಯುಟೋರಿಯಲ್ ಇರುತ್ತದೆ, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆಡುವುದು ಹೇಗೆ ಎಂಬುದನ್ನು ಟ್ಯಾಪ್ ಮಾಡಿ.

News ಆ್ಯಪ್‌ನಲ್ಲಿರುವ ರೆಸಿಪಿ ಕ್ಯಾಟಲಾಗ್.

ಹಬ್ಬದೂಟವನ್ನು ತಯಾರಿಸಿ

Apple News+ ಸಬ್‌ಸ್ಕ್ರೈಬರ್‌ಗಳು ಸಾವಿರಾರು ಕ್ಯುರೇಟ್ ಮಾಡಲಾದ ಮತ್ತು ವೈಯಕ್ತಿಕಗೊಳಿಸಿದ ರೆಸಿಪಿಗಳಿಗೆ ಸಹ ಆ್ಯಕ್ಸೆಸ್ ಹೊಂದಿರುತ್ತಾರೆ. ಸೈಡ್‌ಬಾರ್‌ನಲ್ಲಿ ಆಹಾರ ಎಂಬುದನ್ನು ಟ್ಯಾಪ್ ಮಾಡಿ, ನಂತರ ರೆಸಿಪಿ ಕ್ಯಾಟಲಾಗ್ ಬಟನ್ ಅಥವಾ ರೆಸಿಪಿ ಕ್ಯಾಟಲಾಗ್ ಅನ್ನು ಟ್ಯಾಪ್ ಮಾಡಿ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Apple News, Apple News+ ಮತ್ತು ಪಝಲ್‌ಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. Apple ಮೀಡಿಯಾ ಸೇವೆಗಳ ಲಭ್ಯತೆ ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.