ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿರುವ FaceTimeನಲ್ಲಿ ಡಾಕ್ಯುಮಂಟ್ ಒಂದರಲ್ಲಿ ಕೊಲಾಬೊರೇಟ್ ಮಾಡುವುದು

FaceTime ಕರೆಯಲ್ಲಿ, ನೀವು ಹಂಚಿಕೊಂಡ ಡಾಕ್ಯುಮೆಂಟ್ ಒಂದರಲ್ಲಿ ಕೊಲಾಬೊರೇಟ್ ಮಾಡಬಹುದು. ಚಾಲ್ತಿಯಲ್ಲಿರುವ FaceTime ಕರೆಯಲ್ಲಿ ನೀವು ಕೊಲಾಬೊರೇಶನ್ ಅನ್ನು ಪ್ರಾರಂಭಿಸಬಹುದು ಅಥವಾ ಡಾಕ್ಯುಮೆಂಟ್ ಅನ್ನು ರಚಿಸಿದ ಆ್ಯಪ್‌ನಿಂದ ನೀವು ಕೊಲಾಬೊರೇಶನ್ ಅನ್ನು ಪ್ರಾರಂಭಿಸಬಹುದು.

  1. ನೀವು ಕೊಲಾಬೊರೇಟ್ ಮಾಡಲು ಬಯಸುವ ಜನರೊಂದಿಗೆ FaceTime ಆ್ಯಪ್‌‌ನಲ್ಲಿ , ಸಂಭಾಷಣೆಯನ್ನು ಪ್ರಾರಂಭಿಸಿ.

  2. ನೀವು ಬಳಸಲು ಬಯಸುವ ಆ್ಯಪ್ ಅನ್ನು ತೆರೆಯಿರಿ, ನಂತರ ಡಾಕ್ಯುಮಂಟ್ ಅನ್ನು ತೆರೆಯಿರಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಕಾಣಿಸುವ ನೋಟಿಫಿಕೇಷನ್‌ನಲ್ಲಿ ಕೊಲಾಬೋರೇಶನ್ ಅನ್ನು ಟ್ಯಾಪ್ ಮಾಡಿ.

    • ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ಡಾಕ್ಯುಮಂಟ್ ಹಂಚಿಕೊಳ್ಳುವ ವಿಧಾನವನ್ನು (FaceTime, AirDrop, Mail ಅಥವಾ ಸಂದೇಶ ಆ್ಯಪ್) ಎಂಬುದನ್ನು ಆಯ್ಕೆಮಾಡಿ, ನಂತರ ಕೊಲಾಬೊರೇಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕಾಣಿಸುವ ಕೊಲಾಬೊರೇಶನ್ ನೋಟಿಫಿಕೇಷನ್‌ನಲ್ಲಿನ ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ.

    ನೀವು ಕೊಲಾಬೊರೇಟ್ ಮಾಡಲು ಬಯಸುವ ಡಾಕ್ಯುಮೆಂಟ್ ಅನ್ನು ನೀವು ಹಂಚಿಕೊಂಡಿದ್ದೀರಿ ಎಂಬ ನೋಟಿಫಿಕೇಷನ್ ಅನ್ನು ಸಹಭಾಗಿಗಳು ಪಡೆಯುತ್ತಾರೆ. ಅವರು ನೋಟಿಫಿಕೇಷನ್‌ನಲ್ಲಿ ತೆರೆಯಿರಿ ಎಂಬುದನ್ನು ಟ್ಯಾಪ್ ಮಾಡಿದಾಗ, ಡಾಕ್ಯುಮೆಂಟ್ ಅವರ ಸಾಧನದಲ್ಲಿ ತೆರೆದುಕೊಳ್ಳುತ್ತದೆ.

    ಡಾಕ್ಯುಮೆಂಟ್ ಅನ್ನು ಸ್ವೀಕರಿಸುವ ಮತ್ತು ತೆರೆಯುವ ಪ್ರತಿಯೊಬ್ಬರೂ ಬದಲಾವಣೆಗಳನ್ನು ಮಾಡಬಹುದು ಮತ್ತು ಇತರರು ಮಾಡಿದ ಬದಲಾವಣೆಗಳನ್ನು ನೋಡಬಹುದು. ಯಾರಾದರೂ ಬದಲಾವಣೆಯನ್ನು ಮಾಡಿದಾಗ, ಡಾಕ್ಯುಮೆಂಟ್‌ನಲ್ಲಿ ಕೊಲಾಬೊರೇಟ್ ಮಾಡುತ್ತಿರುವ ಪ್ರತಿಯೊಬ್ಬರಿಗೂ ನೋಟಿಫಿಕೇಷನ್ ಅನ್ನು ಕಳುಹಿಸಲಾಗುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.