iPadನಲ್ಲಿ ನಿಮ್ಮ ಯೋಗಕ್ಷೇಮಕ್ಕಾಗಿ ಜರ್ನಲ್ ಮಾಡಿ

ಜರ್ನಲ್ ಆ್ಯಪ್‌ನಲ್ಲಿ ನಿಮ್ಮ ಮಾನಸಿಕ ಸ್ಥಿತಿಯನ್ನು ನೀವು ಲಾಗ್ ಮಾಡಬಹುದು. ನೀವು ಜರ್ನಲಿಂಗ್‌ನಲ್ಲಿ ತೊಡಗಿದ್ದಾಗ ಕಳೆದ ಸಮಯವನ್ನು ಆರೋಗ್ಯ ಆ್ಯಪ್‌ನಲ್ಲಿ ಮೈಂಡ್‌ಫುಲ್ ಮಿನಿಟ್ಸ್ ಎಂದು ಸ್ವಯಂಚಾಲಿತವಾಗಿ ಸೇರಿಸಬಹುದು.

ನಿಮ್ಮ ಮಾನಸಿಕ ಸ್ಥಿತಿಯನ್ನು ನೀವು ಲಾಗ್ ಮಾಡಬಹುದಾದ ಟೈಲ್ ಅನ್ನು ತೋರಿಸುವ ಜರ್ನಲ್ ಆ್ಯಪ್‌ನ ಸ್ಕ್ರೀನ್.

ನಿಮ್ಮ ಮನಸ್ಥಿತಿಯನ್ನು ಲಾಗ್ ಮಾಡುವುದು

ನಿಮಗೆ ಏನನಿಸುತ್ತಿದೆ ಎಂಬುದರ ಕುರಿತು ನೀವು ಯೋಚಿಸಬಹುದು ಮತ್ತು ನಿಮ್ಮ ಕ್ಷಣಿಕ ಭಾವನೆಗಳನ್ನು ನಿಮ್ಮ ಜರ್ನಲ್‌ನಲ್ಲಿ ಲಾಗ್ ಮಾಡಬಹುದು.

  1. ನಿಮ್ಮ iPadನಲ್ಲಿರುವ ಜರ್ನಲ್ ಆ್ಯಪ್‌ಗೆ ಹೋಗಿ.

  2. ನಮೂದನ್ನು ರಚಿಸುವಾಗ ಮಾನಸಿಕ ಸ್ಥಿತಿ ಬಟನ್ ಅನ್ನು ಸೇರಿಸಿ ಅನ್ನು ಟ್ಯಾಪ್ ಮಾಡಿ.

    ನಿಮಗೆ ಮಾನಸಿಕ ಸ್ಥಿತಿ ಬಟನ್ ಅನ್ನು ಸೇರಿಸಿ ಕಾಣಿಸದಿದ್ದರೆ, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮಾನಸಿಕ ಸ್ಥಿತಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    ಆರೋಗ್ಯ ಆ್ಯಪ್‌ನ ಆ್ಯಕ್ಸೆಸ್ ಅನ್ನು ಆನ್ ಮಾಡಿ ಎಂದು ನಿಮಗೆ ಕೇಳಬಹುದು.

  3. ನಿಮ್ಮ ಮನಸ್ಥಿತಿ ಹೇಗಿದೆ ಎಂಬುದನ್ನು ಸೂಚಿಸಲು ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ, ನಂತರ ಮುಂದಿನದು ಬಟನ್ ಅನ್ನು ಟ್ಯಾಪ್ ಮಾಡಿ.

  4. ನಿಮಗೆ ಏನನ್ನಿಸುತ್ತಿದೆ ಎಂಬುದನ್ನು ವಿವರಿಸುವ ಯಾವುದೇ ಪದಗಳನ್ನು ಟ್ಯಾಪ್ ಮಾಡಿ, ನಂತರ ಮುಂದಿನದು ಬಟನ್ ಅನ್ನು ಟ್ಯಾಪ್ ಮಾಡಿ.

  5. ನಿಮ್ಮ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತಿರುವ ಸಂಗತಿಯನ್ನು ವಿವರಿಸುವ ಯಾವುದೇ ಪದಗಳನ್ನು ಟ್ಯಾಪ್ ಮಾಡಿ, ನಂತರ ಮುಗಿದಿದೆ ಬಟನ್ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಮನಸ್ಥಿತಿಯನ್ನು ಆರೋಗ್ಯ ಆ್ಯಪ್‌ಗೆ ಸೇರಿಸಲಾಗುತ್ತದೆ. ಮತ್ತು ಅಲ್ಲಿ ನೀವು ಅದರ ಇತಿಹಾಸದಲ್ಲಿನ ಕಾಲಕ್ರಮೇಣ ಬದಲಾವಣೆಗಳನ್ನು ಪರಿಶೀಲಿಸಬಹುದು. ಆರೋಗ್ಯ ಆ್ಯಪ್‌ನಲ್ಲಿ ನಿಮ್ಮ ಮನಸ್ಥಿತಿಯನ್ನು ಲಾಗ್ ಮಾಡಿ ಎಂಬುದನ್ನು ನೋಡಿ.

ನಿಮ್ಮ ಮಾನಸಿಕ ಸ್ಥಿತಿ ಮತ್ತು ಮೈಂಡ್‌ಫುಲ್ ಮಿನಿಟ್ಸ್ ಅನ್ನು ಆ್ಯಕ್ಸೆಸ್ ಮಾಡಲು ಆರೋಗ್ಯ ಆ್ಯಪ್‌ಗೆ ಅನುಮತಿಸುವುದು

ನೀವು ಜರ್ನಲಿಂಗ್‌ನಲ್ಲಿ ತೊಡಗಿದ್ದಾಗ ಕಳೆದ ಸಮಯವನ್ನು ಆರೋಗ್ಯ ಆ್ಯಪ್‌ನಲ್ಲಿ ಮೈಂಡ್‌ಫುಲ್ ಮಿನಿಟ್ಸ್ ಎಂದು ಸ್ವಯಂಚಾಲಿತವಾಗಿ ಸೇರಿಸಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಜರ್ನಲ್ ಅನ್ನು ಟ್ಯಾಪ್ ಮಾಡಿ.

  3. ಆರೋಗ್ಯ ಆ್ಯಕ್ಸೆಸ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಡೇಟ ಆ್ಯಕ್ಸೆಸ್ ಮತ್ತು ಸಾಧನಗಳು ಎಂಬುದನ್ನು ಟ್ಯಾಪ್ ಮಾಡಿ.

  4. ಜರ್ನಲ್ ಅನ್ನು ಟ್ಯಾಪ್ ಮಾಡಿ, ನಂತರ ಮೈಂಡ್‌ಫುಲ್ ಮಿನಿಟ್ಸ್ ಮತ್ತು ಮಾನಸಿಕ ಸ್ಥಿತಿ ಎಂಬುದನ್ನು ಆನ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.