ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಪಿಕ್ಚರ್ ಇನ್ ಪಿಕ್ಚರ್‌ನೊಂದಿಗೆ ಮಲ್ಟಿಟಾಸ್ಕ್ ಮಾಡಿ

ಪಿಕ್ಚರ್ ಇನ್ ಪಿಕ್ಚರ್ ಫೀಚರ್‌ನೊಂದಿಗೆ, ನೀವು ಇತರ ಆ್ಯಪ್‌ಗಳನ್ನು ಬಳಸುವಾಗ ವೀಡಿಯೊವನ್ನು ವೀಕ್ಷಿಸಬಹುದು ಅಥವಾ FaceTime ಅನ್ನು ಬಳಸಬಹುದು.

FaceTime ಕರೆಯ ಸಮಯದಲ್ಲಿ ಅಥವಾ ವೀಡಿಯೊ ವೀಕ್ಷಿಸುತ್ತಿರುವಾಗ ವೀಡಿಯೊವನ್ನು ಮಿನಿಮೈಸ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ಹೋಮ್ ಬಟನ್ ಅನ್ನು ಒತ್ತಿರಿ (ಹೋಮ್ ಬಟನ್ ಹೊಂದಿರುವ iPadನಲ್ಲಿ).

ವೀಡಿಯೊ ವಿಂಡೋ ಗಾತ್ರದಲ್ಲಿ ಚಿಕ್ಕದಾಗಿ ನಿಮ್ಮ ಸ್ಕ್ರೀನ್‌ನ ಒಂದು ಮೂಲೆಗೆ ಸರಿಯುತ್ತದೆ. ಇದರಿಂದ ನೀವು ಹೋಮ್ ಸ್ಕ್ರೀನ್ ಅನ್ನು ನೋಡಬಹುದು ಮತ್ತು ಇತರ ಆ್ಯಪ್‌ಗಳನ್ನು ತೆರೆಯಬಹುದು. ವೀಡಿಯೊ ವಿಂಡೋ ಕಾಣುತ್ತಿರುವಾಗ, ನೀವು ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಬಹುದು:

  • ವೀಡಿಯೊ ವಿಂಡೋ ಗಾತ್ರವನ್ನು ಬದಲಾಯಿಸಿ: ಚಿಕ್ಕ ವೀಡಿಯೊ ವಿಂಡೋವನ್ನು ದೊಡ್ಡದಾಗಿಸಲು, ಪಿಂಚ್ ಮಾಡಿ ಬೆರಳುಗಳನ್ನು ದೂರ ಸರಿಸಿ. ಅದನ್ನು ಮತ್ತೆ ಕುಗ್ಗಿಸಲು, ಪಿಂಚ್ ಮಾಡಿ ಬೆರಳುಗಳನ್ನು ಹತ್ತಿರ ತನ್ನಿ.

  • ಕಂಟ್ರೋಲ್‌ಗಳನ್ನು ತೋರಿಸಿ ಮತ್ತು ಮರೆಮಾಡಿ: ವೀಡಿಯೊ ವಿಂಡೋವನ್ನು ಟ್ಯಾಪ್ ಮಾಡಿ.

  • ವೀಡಿಯೊ ವಿಂಡೋವನ್ನು ಮೂವ್ ಮಾಡಿ: ಅದನ್ನು ಸ್ಕ್ರೀನ್‌ನ ಬೇರೊಂದು ಮೂಲೆಗೆ ಡ್ರ್ಯಾಗ್ ಮಾಡಿ.

  • ವೀಡಿಯೊ ವಿಂಡೋವನ್ನು ಮರೆಮಾಡಿ: ಅದನ್ನು ಸ್ಕ್ರೀನ್‌ನ ಎಡ ಅಥವಾ ಬಲ ಅಂಚಿನ ಕಡೆಗೆ ಡ್ರ್ಯಾಗ್ ಮಾಡಿ.

  • ವೀಡಿಯೊ ವಿಂಡೋವನ್ನು ಮುಚ್ಚಿರಿ: ಮುಚ್ಚಿ ಬಟನ್ ಅನ್ನು ಟ್ಯಾಪ್ ಮಾಡಿ.

  • ಪೂರ್ಣ ವೀಡಿಯೊ ಸ್ಕ್ರೀನ್‌ಗೆ ಹಿಂತಿರುಗಿ: ಚಿಕ್ಕ ವೀಡಿಯೊ ವಿಂಡೋದಲ್ಲಿ ಪೂರ್ಣ ಸ್ಕ್ರೀನ್ ಅನ್ನು ರಿಸ್ಟೋರ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.