ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಟಿಪ್ಪಣಿ ಆ್ಯಪ್‌ನ ಬಳಕೆಯನ್ನು ಪ್ರಾರಂಭಿಸುವುದು

ನೀವು ಮೊದಲ ಬಾರಿ ಮನೆ ಆ್ಯಪ್ ತೆರೆದಾಗ, ನಿಮಗೆ ಹೊಸ ಮನೆಯನ್ನು ರಚಿಸಲು ಸೆಟಪ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ನಂತರ ನೀವು ಆ್ಯಕ್ಸೆಸರಿಗಳನ್ನು ಸೇರಿಸಬಹುದು, ಅವುಗಳನ್ನು ದೂರದಿಂದಲೇ ನಿಯಂತ್ರಿಸಬಹುದು, ನಿಮ್ಮ ಮನೆಯ ಸಾಧನಗಳ ಆ್ಯಕ್ಸೆಸ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬಹುದು ಮತ್ತು ಇನ್ನಷ್ಟು ಮಾಡಬಹುದು.

ಗ್ರಾಫಿಕ್ ಯೋಜನೆ: ನಿಯಂತ್ರಿಸಬಹುದಾದ ವಿವಿಧ ಸಾಧನಗಳನ್ನು ತೋರಿಸುತ್ತಿರುವ ಮನೆ ಆ್ಯಪ್‌ನ ಸ್ಕ್ರೀನ್‌ಶಾಟ್.

ಆ್ಯಕ್ಸೆಸರಿಗಳನ್ನು ಸೇರಿಸುವುದು

ಲಾಕ್‌ಗಳು, ಲೈಟ್‌ಗಳು, ಕ್ಯಾಮರಾಗಳು ಮತ್ತು ಥರ್ಮೋಸ್ಟಾಟ್‌ಗಳಂತಹ ನಿಮ್ಮ ಮನೆಯಲ್ಲಿನ ಹೊಂದಾಣಿಯಾಕೆಗುವ ಆ್ಯಕ್ಸೆಸರಿಗಳನ್ನು ನೀವು ಸೇರಿಸಬಹುದು. ಮೇಲಿನ ಬಲಭಾಗದಲ್ಲಿರುವ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಆ್ಯಕ್ಸೆಸರಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಗ್ರಾಫಿಕ್ ಯೋಜನೆ: ಅನೇಕ ನಿವಾಸಿಗಳನ್ನು ತೋರಿಸುತ್ತಿರುವ ಮನೆ ಆ್ಯಪ್‌ನ ವ್ಯೂ.

ಅತಿಥಿ ಆ್ಯಕ್ಸೆಸ್ ಅನ್ನು ಅನುಮತಿಸುವುದು

ಮನೆಯ ಹಬ್‌ನೊಂದಿಗೆ—ನಿಮ್ಮ ಮನೆ ಆ್ಯಪ್ ಸಾಧನಗಳ ಪೂರ್ಣ ನಿವಾಸಿ ಆ್ಯಕ್ಸೆಸ್ ಅನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು ಅಥವಾ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವವರು, ಸೇವಾ ಸಂಬಂಧಿತ ಕೆಲಸದವರು ಅಥವಾ ತಾತ್ಕಾಲಿಕವಾಗಿ ಭೇಟಿ ನೀಡುವ ಇತರರಿಗೆ ಸೀಮಿತ ಅತಿಥಿ ಆ್ಯಕ್ಸೆಸ್ ಅನ್ನು ನೀಡಬಹುದು. ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಜನರನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿವಾಸಿ ಅಥವಾ ಅತಿಥಿ ಎಂಬುದನ್ನು ಆರಿಸಿ. ನಿಮ್ಮ ಸ್ವೀಕೃತದಾರರನ್ನು ನಮೂದಿಸಿ, ನಂತರ ಆಹ್ವಾನವನ್ನು ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ.

ಗ್ರಾಫಿಕ್ ಯೋಜನೆ: ಶಕ್ತಿಯ ಬಳಕೆಯನ್ನು ತೋರಿಸುತ್ತಿರುವ ಮನೆ ಆ್ಯಪ್ ವ್ಯೂ.

ನಿಮ್ಮ ಶಕ್ತಿಯ ಬಳಕೆಯನ್ನು ಮೇಲ್ವಿಚಾರಿಸುವುದು

ನೀವು ಬೆಂಬಲಿತ ಗೃಹ ವಿದ್ಯುಚ್ಛಕ್ತಿ ಪೂರೈಕೆದಾರರ ಸೇವೆಯನ್ನು ಹೊಂದಿದ್ದರೆ, ನಿಮ್ಮ ಮನೆಯು ಎಷ್ಟು ವಿದ್ಯುಚ್ಛಕ್ತಿ ಬಳಸುತ್ತದೆ ಎಂಬುದನ್ನು ನೀವು ನೋಡಬಹುದು, ನಿರ್ದಿಷ್ಟ ಕಾಲಾವಧಿಗಳಲ್ಲಿ ನಿಮ್ಮ ಬಳಕೆ ಎಷ್ಟಿದೆ ಎಂಬುದನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ವಿದ್ಯುಚ್ಛಕ್ತಿ ದರದ ಪ್ಲ್ಯಾನ್‌ನ ಮಾಹಿತಿಯನ್ನು ವೀಕ್ಷಿಸಬಹುದು. ಪೂರೈಕೆದಾರರನ್ನು ಸೇರಿಸಲು, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಮನೆ ಸೆಟ್ಟಿಂಗ್ಸ್ ಎಂಬುದನ್ನು ಟ್ಯಾಪ್ ಮಾಡಿ, ಶಕ್ತಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಖಾತೆಯನ್ನು ಕನೆಕ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.