ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಮನೆ ಆ್ಯಪ್‌ ಮೂಲಕ ಆ್ಯಕ್ಸೆಸರಿಗಳನ್ನು ಸೆಟಪ್ ಮಾಡುವುದು

ನೀವು ಮೊದಲ ಬಾರಿಗೆ ಮನೆ ಆ್ಯಪ್ ಅನ್ನು ತೆರೆದಾಗ, ಸೆಟಪ್ ಅಸಿಸ್ಟೆಂಟ್ ಮನೆಯನ್ನು ರಚಿಸಲು ನಿಮಗೆ ಸಹಾಯ ಮಾಡುತ್ತದೆ, ಅಲ್ಲಿ ನೀವು ಆಕ್ಸೆಸರಿಗಳನ್ನು ಸೇರಿಸಬಹುದು ಮತ್ತು ರೂಮ್‌ಗಳನ್ನು ವ್ಯಾಖ್ಯಾನಿಸಬಹುದು. ನೀವು ಬೇರೊಂದು ಆ್ಯಕ್ಸೆಸರಿಯನ್ನು ಸೆಟಪ್ ಮಾಡುವಾಗ ಈಗಾಗಲೇ ಮನೆಯೊಂದನ್ನು ರಚಿಸಿದ್ದರೆ, ನೀವು ಈ ಹಂತವನ್ನು ಸ್ಕಿಪ್ ಮಾಡುತ್ತೀರಿ.

ಮನೆಗೆ ಆ್ಯಕ್ಸೆಸರಿಯನ್ನು ಸೇರಿಸಿ

ನೀವು ಲೈಟ್ ಅಥವಾ ಕ್ಯಾಮರಾದಂತಹ ಆ್ಯಕ್ಸೆಸರಿಯನ್ನು ಸೇರಿಸುವ ಮೊದಲು, ಅದು ಪವರ್‌ ಸೋರ್ಸ್‌ಗೆ ಕನೆಕ್ಟ್ ಆಗಿದೆ, ಆನ್ ಮಾಡಲಾಗಿದೆ ಮತ್ತು ನೆಟ್‌ವರ್ಕ್ ಕನೆಕ್ಟಿವಿಟಿಯನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

  1. ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್‌ನಲ್ಲಿ ಹೋಮ್ ಅನ್ನು ಟ್ಯಾಪ್ ಮಾಡಿ, ನಂತರ ಆಕ್ಸೆಸರಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    ನೀವು ಸ್ಕ್ರೀನ್‌ನ ಮೇಲ್ಭಾಗದಲ್ಲಿ ಸೇರಿಸಿ ಬಟನ್ ಅನ್ನು ಸಹ ಟ್ಯಾಪ್ ಮಾಡಬಹುದು, ನಂತರ ಆಕ್ಸೆಸರಿಯನ್ನು ಸೇರಿಸಿ ಎಂಬುದನ್ನು ಆಯ್ಕೆಮಾಡಬಹುದು.

  3. ಈ ಹಿಂದೆ ಮತ್ತೊಂದು ಆ್ಯಪ್‌ಗೆ ಪೇರ್ ಮಾಡಲಾಗಿದ್ದ ಮ್ಯಾಟರ್ ಆ್ಯಕ್ಸೆಸರಿಯನ್ನು ನೀವು ಪೇರ್ ಮಾಡುತ್ತಿದ್ದರೆ, ಇನ್ನಷ್ಟು ಆಯ್ಕೆಗಳನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಆ್ಯಕ್ಸೆಸರಿಯನ್ನು ಆಯ್ಕೆಮಾಡಿ.

  4. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಗಮನಿಸಿ: ಮ್ಯಾಟರ್-ಸಕ್ರಿಯಗೊಳಿಸಲಾದ ಆ್ಯಕ್ಸೆಸರಿಗಳಿಗೆ HomePod ಸ್ಪೀಕರ್ ಅಥವಾ Apple TV 4Kಯಂತಹ ಮನೆ ಹಬ್‌ನ ಅಗತ್ಯವಿದೆ. ಥ್ರೆಡ್ ಆ್ಯಕ್ಸೆಸರಿಗಳಿಗೆ Apple TV 4K (3ನೇ ಜನರೇಷನ್) Wi-Fi + ಈಥರ್ನೆಟ್, HomePod mini, ಬೆಂಬಲಿತ ಥರ್ಡ್ ಪಾರ್ಟಿ ಬಾರ್ಡರ್ ರೂಟರ್ ಅಥವಾ ಥ್ರೆಡ್ ಪೇರಿಂಗ್ ಅನ್ನು ಬೆಂಬಲಿಸುವ ಸಾಧನದಂತಹ ಥ್ರೆಡ್-ಸಕ್ರಿಯಗೊಳಿಸಲಾದ ಮನೆ ಹಬ್‌ನ ಅಗತ್ಯವಿದೆ.

ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಆ್ಯಕ್ಸೆಸರಿಯಲ್ಲಿಯೇ (ಅಥವಾ ಅದರ ಬಾಕ್ಸ್ ಅಥವಾ ಡಾಕ್ಯುಮಂಟೇಷನ್‌ನಲ್ಲಿ) ಕಂಡುಬರುವ 8-ಅಂಕಿಗಳ Apple ಮನೆ ಸೆಟಪ್ ಕೋಡ್ ಅನ್ನು ನಮೂದಿಸಬೇಕಾಗಹುದು ಅಥವಾ Matter-ಸಕ್ರಿಯಗೊಳಿಸಿದ ಆ್ಯಕ್ಸೆಸರಿಗಳಿಗಾಗಿ 11 ಅಥವಾ 21-ಅಂಕಿಗಳ ಕೋಡ್ ಅನ್ನು ನಮೂದಿಸಬೇಕಾಗಬಹುದು. Apple ಮನೆ-ಸ್ಮಾರ್ಟ್ TVಯು ಸ್ಕ್ಯಾನ್ ಮಾಡಲು ನಿಮಗೆ QR ಕೋಡ್ ಅನ್ನು ಪ್ರದರ್ಶಿಸುತ್ತದೆ. ನೀವು ರೂಮ್ ಒಂದಕ್ಕೆ ಆ್ಯಕ್ಸೆಸರಿಯನ್ನು ನಿಯೋಜಿಸಬಹುದು, ಅದಕ್ಕೆ ಹೆಸರನ್ನು ನೀಡಬಹುದು ಹಾಗೂ Siriಯ ಮೂಲಕ ಆ ಆ್ಯಕ್ಸೆಸರಿಯನ್ನು ನಿಯಂತ್ರಿಸುವಾಗ ಈ ಹೆಸರನ್ನು ಬಳಸಬಹುದು. ಸೆಟಪ್ ಸಮಯದಲ್ಲಿ ನೀವು ಸೂಚಿಸಲಾದ ಆಟೋಮೇಷನ್‌ಗಳನ್ನು ಸಹ ಸೇರಿಸಬಹುದು.

ನೀವು Apple TV 4Kಯನ್ನು tvOSನಲ್ಲಿ ಸೆಟಪ್ ಮಾಡಿ ಅದನ್ನು ರೂಮ್ ಒಂದಕ್ಕೆ ನಿಯೋಜಿಸಿದಾಗ, ಅದು iPadನಲ್ಲಿನ ಮನೆ ಆ್ಯಪ್‌ನಲ್ಲಿ ಆ ರೂಮ್‌ನಲ್ಲಿ ಸ್ವಯಂಚಾಲಿತವಾಗಿ ಕಾಣಿಸಿಕೊಳ್ಳುತ್ತದೆ.

ಪೇರ್ ಮಾಡಲಾದ ಮ್ಯಾಟರ್ ಆ್ಯಕ್ಸೆಸರಿಗಳನ್ನು ಸೆಟಪ್ ಮಾಡಲು ನೀವು ಯಾವ ಆ್ಯಪ್ ಅನ್ನು ಬಳಸಿದ್ದರೂ ಸಹ, ಅವುಗಳನ್ನು ಸಾಧನಗಳಾದ್ಯಂತ ಸಿಂಕ್ ಮಾಡಲಾಗುತ್ತದೆ ಮತ್ತು iCloud ಕೀಚೇನ್ ಬಳಸಿ ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಕೀಚೇನ್‌ನಲ್ಲಿ ಸಂಗ್ರಹಿಸಲಾಗಿರುವ, ಈ ಹಿಂದೆ ಪೇರ್ ಮಾಡಲಾದ ಆ್ಯಕ್ಸೆಸರಿಯನ್ನು ನೀವು ಇನ್ನೊಂದು ಮ್ಯಾಟರ್ ಎಕೋಸಿಸ್ಟಮ್ ಆ್ಯಪ್‌ನಲ್ಲಿ ಸುಲಭವಾಗಿ ಸೇರಿಸಬಹುದು. ಈ ಆ್ಯಕ್ಸೆಸರಿಗಳನ್ನು ನಿರ್ವಹಿಸಲು, ಸೆಟ್ಟಿಂಗ್ಸ್ > ಸಾಮಾನ್ಯ ಎಂಬಲ್ಲಿಗೆ ಹೋಗಿ, ನಂತರ ಮ್ಯಾಟರ್ ಆ್ಯಕ್ಸೆಸರಿಗಳನ್ನು ಟ್ಯಾಪ್ ಮಾಡಿ. ನಿಮ್ಮ ಮ್ಯಾಟರ್ ಆಕ್ಸೆಸರಿಗಳನ್ನು ಪೇರ್ ಮಾಡಿ ಮತ್ತು ನಿರ್ವಹಿಸಿ ಎಂಬ Apple ಬೆಂಬಲ ಒದಗಿಸುವ ಲೇಖನವನ್ನು ನೋಡಿ.

ರೂಮ್‌ನಲ್ಲಿರುವ ಆ್ಯಕ್ಸೆಸರಿಗಳನ್ನು ತೋರಿಸಿ

ನೀವು ಪ್ರತ್ಯೇಕ ರೂಮ್‌ಗಳು, ಅವುಗಳಿಗೆ ನಿಯೋಜಿಸಲಾದ ದೃಶ್ಯಗಳು ಮತ್ತು ವರ್ಗದ ಪ್ರಕಾರ ವ್ಯವಸ್ಥಿತಗೊಳಿಸಲಾದ ರೂಮ್‌ನ ಆ್ಯಕ್ಸೆಸರಿಗಳನ್ನು ತೋರಿಸಬಹುದು.

ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

  • ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  • ಸೈಡ್‌ಬಾರ್‌ನಲ್ಲಿ ರೂಮ್ ಅನ್ನು ಟ್ಯಾಪ್ ಮಾಡಿ.

  • ರೂಮ್‌ನ ಹೆಸರಿನ ಪಕ್ಕದಲ್ಲಿರುವ > ಅನ್ನು ಟ್ಯಾಪ್ ಮಾಡಿ.

ಆ್ಯಕ್ಸೆಸರಿಯ ರೂಮ್ ನಿಯೋಜನೆಯನ್ನು ಬದಲಾಯಿಸಿ

  1. ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಆ್ಯಕ್ಸೆಸರಿ ಟೈಲ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಆ್ಯಕ್ಸೆಸರಿ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.

  3. ರೂಮ್ ಅನ್ನು ಟ್ಯಾಪ್ ಮಾಡಿ, ನಂತರ ರೂಮ್ ಒಂದನ್ನು ಆರಿಸಿ.

ಕೋಣೆಯನ್ನು ಎಡಿಟ್ ಮಾಡುವುದು

ನೀವು ರೂಮ್‌ನ ಹೆಸರು ಮತ್ತು ವಾಲ್‌ಪೇಪರ್ ಅನ್ನು ಬದಲಾಯಿಸಬಹುದು, ರೂಮ್ ಅನ್ನು ತೆಗೆದುಹಾಕಬಹುದು ಮತ್ತು ಇನ್ನೂ ಹೆಚ್ಚಿನ ಕ್ರಿಯೆಗಳನ್ನು ಮಾಡಬಹುದು. ನೀವು ರೂಮ್ ಅನ್ನು ತೆಗೆದುಹಾಕಿದಾಗ, ಅದಕ್ಕೆ ನಿಯೋಜಿಸಲಾದ ಆ್ಯಕ್ಸೆಸರಿಗಳು ಡೀಫಾಲ್ಟ್ ರೂಮ್‌ಗೆ ಮೂವ್ ಆಗುತ್ತವೆ.

  1. ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್‌ನಲ್ಲಿ ರೂಮ್‌ ಅನ್ನು ಟ್ಯಾಪ್ ಮಾಡಿ.

  3. ಮನೆ ಟ್ಯಾಬ್‌‌ನಲ್ಲಿ, ರೂಮ್ ಪಕ್ಕದಲ್ಲಿರುವ > ಅನ್ನು ಟ್ಯಾಪ್ ಮಾಡಿ ಅಥವಾ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ರೂಮ್ ಅನ್ನು ಆಯ್ಕೆಮಾಡಿ.

ರೂಮ್‌ಗಳನ್ನು ವಲಯಗಳಾಗಿ ವ್ಯವಸ್ಥಿತಗೊಳಿಸಿ

Siri ಮೂಲಕ ನಿಮ್ಮ ಮನೆಯ ವಿವಿಧ ಪ್ರದೇಶಗಳನ್ನು ಸುಲಭವಾಗಿ ನಿಯಂತ್ರಿಸಲು ನೀವು ರೂಮ್‌ಗಳನ್ನು ಒಂದು ವಲಯವಾಗಿ ಸುಲಭವಾಗಿ ಗುಂಪಾಗಿ ಮಾಡಬಹುದು. ಉದಾಹರಣೆಗೆ, ನೀವು ಎರಡು ಅಂತಸ್ತಿನ ಮನೆಯನ್ನು ಹೊಂದಿದ್ದರೆ, ನೀವು ಮೊದಲ ಮಹಡಿಯಲ್ಲಿರುವ ರೂಮ್‌ಗಳನ್ನು ಕೆಳಮಹಡಿಯ ವಲಯಕ್ಕೆ ನಿಯೋಜಿಸಬಹುದು.

  1. ನಿಮ್ಮ iPadನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಮನೆ ಟ್ಯಾಬ್‌ನಲ್ಲಿ ರೂಮ್‌ನ ಪಕ್ಕದಲ್ಲಿರುವ > ಅನ್ನು ಟ್ಯಾಪ್ ಮಾಡಿ ಅಥವಾ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ರೂಮ್ ಅನ್ನು ಆರಿಸಿ.

  3. ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ರೂಮ್ ಸೆಟ್ಟಿಂಗ್ಸ್ ಅನ್ನು ಟ್ಯಾಪ್ ಮಾಡಿ.

  4. ವಲಯ ಎಂಬುದನ್ನು ಟ್ಯಾಪ್ ಮಾಡಿ, ನಂತರ ಅಸ್ತಿತ್ವದಲ್ಲಿರುವ ವಲಯವನ್ನು ಟ್ಯಾಪ್ ಮಾಡಿ ಅಥವಾ ಹೊಸ ವಲಯಕ್ಕೆ ರೂಮ್ ಅನ್ನು ಸೇರಿಸಲು ಹೊಸದನ್ನು ರಚಿಸಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.