ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಸಂಪರ್ಕ ಆ್ಯಪ್‌ನ ಬಳಕೆಯನ್ನು ಪ್ರಾರಂಭಿಸುವುದು

ಫೋನ್ ಸಂಖ್ಯೆಗಳು, ಈಮೇಲ್ ವಿಳಾಸಗಳು, ಹುಟ್ಟುಹಬ್ಬಗಳು ಮತ್ತು ಮುಂತಾದುವನ್ನು ಒಂದೇ ಕಡೆ ಇರಿಸಿಕೊಳ್ಳಲು ಸಂಪರ್ಕ ಆ್ಯಪ್ ಅನ್ನು ಬಳಸಿ.

ಸಂಪರ್ಕ ಆ್ಯಪ್‌ನಲ್ಲಿರುವ ಹೊಸ ಸಂಪರ್ಕ ವಿಂಡೋ.

ಸಂಪರ್ಕವನ್ನು ರಚಿಸಿ

ಸಂಪರ್ಕವೊಂದನ್ನು ರಚಿಸಲು, ಸಂಪರ್ಕ ಆ್ಯಪ್‌ಗೆ ಹೋಗಿ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಸಂಪರ್ಕದ ವಿವರಗಳನ್ನು ಸೇರಿಸಿ, ನಂತರ ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

ವಿವಿಧ ಸಂಪರ್ಕ ಸೇವೆಗಳನ್ನು ತೋರಿಸುತ್ತಿರುವ “ಖಾತೆಯನ್ನು ಸೇರಿಸಿ” ಸ್ಕ್ರೀನ್.

ಇತರ ಖಾತೆಗಳನ್ನು ಸೇರಿಸಿ

ನೀವು iCloud, Google ಅಥವಾ Yahoo ರೀತಿಯ ಇತರೆ ಖಾತೆಗಳಲ್ಲಿ ಸಂಪರ್ಕಗಳನ್ನು ಸೇವ್ ಮಾಡಿದ್ದರೆ, ನಿಮ್ಮ ಎಲ್ಲಾ ಸಂಪರ್ಕಗಳನ್ನು ಒಂದೇ ಸ್ಥಳದಲ್ಲಿ ನೋಡಲು ನೀವು ಅವುಗಳನ್ನು ಸಂಪರ್ಕ ಆ್ಯಪ್‌ಗೆ ಸೇರಿಸಬಹುದು. ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂಪರ್ಕ ಎಂಬಲ್ಲಿಗೆ ಹೋಗಿ, ಸಂಪರ್ಕ ಖಾತೆಗಳು ಎಂಬುದನ್ನು ಟ್ಯಾಪ್ ಮಾಡಿ, ಖಾತೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

ಸಂಪರ್ಕ ಆ್ಯಪ್‌ನಲ್ಲಿರುವ ಸಂಪರ್ಕ ಹಂಚಿಕೆ ವಿಂಡೋ.

ಸಂಪರ್ಕವೊಂದನ್ನು ಹಂಚಿಕೊಳ್ಳಿ

ಸಂಪರ್ಕವನ್ನು ಹಂಚಿಕೊಳ್ಳುವುದು ಸುಲಭವಾಗಿದೆ. ಸಂಪರ್ಕವೊಂದನ್ನು ಆಯ್ಕೆಮಾಡಿ, ನಂತರ ಸಂಪರ್ಕವನ್ನು ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ. ನೀವು ಹಂಚಿಕೊಳ್ಳಲು ಬಯಸುವ ಫೀಲ್ಡ್‌ಗಳನ್ನು ಆರಿಸಿ, ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಂದೇಶ ಅಥವಾ Mail ಆ್ಯಪ್‌ನಂತಹ ಹಂಚಿಕೊಳ್ಳುವಿಕೆಯ ಆಯ್ಕೆಯನ್ನು ಆರಿಸಿ.

iPadನಲ್ಲಿ ಸಂಪರ್ಕಗಳ ಪಟ್ಟಿ ಮತ್ತು iPhoneನಲ್ಲಿ ಸಂಪರ್ಕ ಕಾರ್ಡ್

ನಿಮ್ಮ ಸಂಪರ್ಕಗಳನ್ನು ಸಿಂಕ್ ಮಾಡುವುದು

ನೀವು ಒಂದೇ Apple ಖಾತೆಗೆ ಸೈನ್ ಇನ್ ಆಗಿರುವಾಗ ನಿಮ್ಮ ಇತರೆ Apple ಸಾಧನಗಳಲ್ಲಿ ನಿಮ್ಮ ಸಂಪರ್ಕಗಳನ್ನು ನೋಡಿ. ಸೆಟ್ಟಿಂಗ್ ಆ್ಯಪ್ > [ನಿಮ್ಮ ಹೆಸರು] > iCloud ಎಂಬಲ್ಲಿಗೆ ಹೋಗಿ. iCloudನಲ್ಲಿ ಸೇವ್ ಮಾಡಿರುವುದು ಎಂಬುದರ ಪಕ್ಕದಲ್ಲಿರುವ ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಂಪರ್ಕಗಳನ್ನು ಆನ್ ಮಾಡಿ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.