ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iCloud ಡೇಟಕ್ಕಾಗಿ ಸುಧಾರಿತ ಡೇಟ ರಕ್ಷಣೆಯನ್ನು ಬಳಸಿ

ಡಿಫಾಲ್ಟ್ ಆಗಿ, ನಿಮ್ಮ ಮಾಹಿತಿಯು ಟ್ರಾನ್ಸಿಟ್‌ನಲ್ಲಿರುವಾಗ ಅದನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ, ಅದನ್ನು ಎಕ್‌ಕ್ರಿಪ್ಟ್ ಮಾಡಿದ ಫಾರ್ಮ್ಯಾಟ್‌ನಲ್ಲಿ ಸಂಗ್ರಹಿಸುವ ಮೂಲಕ ಮತ್ತು Apple ಡೇಟ ಸೆಂಟರ್‌ಗಳಲ್ಲಿ ನಿಮ್ಮ ಎನ್‌ಕ್ರಿಪ್ಷನ್ ಕೀಗಳನ್ನು ಭದ್ರವಾಗಿರಿಸುವ ಮೂಲಕ, iCloud ನಿಮ್ಮ ಮಾಹಿತಿಯನ್ನು ರಕ್ಷಿಸುತ್ತದೆ. ಇದರ ಜೊತೆಗೆ, ಅನೇಕ Apple ಸೇವೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಅನ್ನು ಬಳಸುತ್ತವೆ; ನಿಮ್ಮ ಮಾಹಿತಿಯನ್ನು ನಿಮಗೆ ಮಾತ್ರ ತಿಳಿದಿರುವ, ನಿಮ್ಮ ಸಾಧನಗಳಿಂದ ಪಡೆಯಲಾದ ಕೀಗಳು ಮತ್ತು ನಿಮ್ಮ ಸಾಧನದ ಪಾಸ್‌ಕೋಡ್ ಬಳಸಿಕೊಂಡು ಎನ್‌ಕ್ರಿಪ್ಟ್ ಮಾಡಲಾಗುತ್ತದೆ.

ಉನ್ನತ ಮಟ್ಟದ ಕ್ಲೌಡ್ ಡೇಟ ಭದ್ರತೆಗಾಗಿ, ನೀವು ಸುಧಾರಿತ ಡೇಟ ರಕ್ಷಣೆಯನ್ನು ಆನ್ ಮಾಡಬಹುದು (iPadOS 16.2 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ). ಇದು ಈ ಕೆಳಗಿನಂತಹ ಹೆಚ್ಚಿನ ಡೇಟ ವಿಭಾಗಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ:

  • ಸಾಧನದ ಬ್ಯಾಕಪ್

  • ಸಂದೇಶಗಳ ಬ್ಯಾಕಪ್

  • iCloud Drive

  • ಟಿಪ್ಪಣಿ

  • ಫೋಟೋಗಳು

  • ರಿಮೈಂಡರ್ಸ್

  • Safari ಬುಕ್‌ಮಾರ್ಕ್‌ಗಳು

  • Siri ಶಾರ್ಟ್‌ಕಟ್ಸ್

  • ವಾಯ್ಸ್ ಮೆಮೊಸ್

  • ವಾಲೆಟ್ ಪಾಸ್‌ಗಳು

ಸುಧಾರಿತ ಡೇಟ ರಕ್ಷಣೆಯೊಂದಿಗೆ, ನಿಮ್ಮ ಸಂರಕ್ಷಿತ ಡೇಟವನ್ನು ನಿಮ್ಮ ವಿಶ್ವಾಸಾರ್ಹ ಸಾಧನಗಳಲ್ಲಿ ಮಾತ್ರ ಡೀಕ್ರಿಪ್ಟ್ ಮಾಡಬಹುದು. ಇದರಿಂದ ಕ್ಲೌಡ್‌ನಲ್ಲಿ ಡೇಟ ಉಲ್ಲಂಘನೆಯಾದ ಸಂದರ್ಭದಲ್ಲಿಯೂ ಸಹ ನಿಮ್ಮ ಮಾಹಿತಿ ಸುರಕ್ಷಿತವಾಗಿರುತ್ತದೆ. Apple ಸಹ ನಿಮ್ಮ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲಾರದು.

ಸುಧಾರಿತ ಡೇಟ ರಕ್ಷಣೆಯನ್ನು ಬಳಸುವುದಕ್ಕಾಗಿ ಇರುವ ಅವಶ್ಯಕತೆಗಳನ್ನು ಕುರಿತು ವಿವರವಾದ ಮಾಹಿತಿಗಾಗಿ, iCloudಗಾಗಿ ಸುಧಾರಿತ ಡೇಟ ರಕ್ಷಣೆಯನ್ನು ಹೇಗೆ ಆನ್ ಮಾಡುವುದು ಎಂಬ Apple ಬೆಂಬಲ ಲೇಖನವನ್ನು ನೋಡಿ.

ಸುಧಾರಿತ ಡೇಟ ರಕ್ಷಣೆಯನ್ನು ಆನ್ ಮಾಡಿ

  1. ಸೆಟ್ಟಿಂಗ್ಸ್ ಆ್ಯಪ್ > [ನಿಮ್ಮ ಹೆಸರು] > iCloudಗೆ ಹೋಗಿ, ನಂತರ ಸುಧಾರಿತ ಡೇಟ ರಕ್ಷಣೆ ಎಂಬುದನ್ನು ಟ್ಯಾಪ್ ಮಾಡಿ.

  2. ಸುಧಾರಿತ ಡೇಟ ರಕ್ಷಣೆಯನ್ನು ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ರಿಕವರಿ ಸಂಪರ್ಕ ಅಥವಾ ರಿಕವರಿ ಕೀಯನ್ನು ಸೆಟಪ್ ಮಾಡಿರದಿದ್ದರೆ, ಖಾತೆ ರಿಕವರಿಯನ್ನು ಟ್ಯಾಪ್ ಮಾಡಿ, ಖಾತೆ ರಿಕವರಿಯನ್ನು ಸೆಟಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

    ಎಚ್ಚರಿಕೆ: ನೀವು ಸುಧಾರಿತ ಡೇಟ ರಕ್ಷಣೆಯನ್ನು ಬಳಸಿದರೆ, ನಿಮ್ಮ ಡೇಟ ರಿಕವರಿಗೆ ನೀವೇ ಜವಾಬ್ದಾರರಾಗಿರುತ್ತೀರಿ. Apple ನಿಮ್ಮ ಡೇಟವನ್ನು ರಿಕವರ್ ಮಾಡಲು ಅಗತ್ಯವಿರುವ ಕೀಗಳನ್ನು ಹೊಂದಿರುವುದಿಲ್ಲವಾದ್ದರಿಂದ ನೀವು ನಿಮ್ಮ ಖಾತೆಯಲ್ಲಿ ರಿಕವರಿ ಸಂಪರ್ಕ ಅಥವಾ ರಿಕವರಿ ಕೀಯನ್ನು ಸೆಟಪ್ ಮಾಡಬೇಕಾಗುತ್ತದೆ. ನಿಮ್ಮ ಪಾಸ್‌ವರ್ಡ್ ಅನ್ನು ನೀವು ಎಂದಾದರೂ ಮರೆತರೆ ಅಥವಾ ನಿಮ್ಮ ಖಾತೆಯ ಆ್ಯಕ್ಸೆಸ್ ಅನ್ನು ಕಳೆದುಕೊಂಡರೆ ನಿಮ್ಮ ಡೇಟಗೆ ಆ್ಯಕ್ಸೆಸ್ ಅನ್ನು ಮರಳಿ ಪಡೆಯಲು ನೀವು ಈ ಹೆಚ್ಚುವರಿ ರಿಕವರಿ ವಿಧಾನಗಳನ್ನು ಬಳಸಬಹುದು.

ನೀವು ನಂತರದ ಸಮಯದಲ್ಲಿ ಸುಧಾರಿತ ಡೇಟ ರಕ್ಷಣೆಯನ್ನು ಆಫ್ ಮಾಡಿಕೊಂಡರೆ, ನಿಮ್ಮ iCloud ಡೇಟದ ಭದ್ರತೆಯು ಸ್ಟ್ಯಾಂಡರ್ಡ್ ಮಟ್ಟಕ್ಕೆ ಮರಳುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.