ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ವಾಲ್‌ಪೇಪರ್ ಅನ್ನು ಬದಲಾಯಿಸಿ

iPadನಲ್ಲಿ, ಲಾಕ್ ಸ್ಕ್ರೀನ್ ಅಥವಾ ಹೋಮ್ ಸ್ಕ್ರೀನ್‌ಗೆ ವಾಲ್‌ಪೇಪರ್ ಆಗಿ ಚಿತ್ರ ಅಥವಾ ಫೋಟೋವನ್ನು ಆರಿಸಿ. ನೀವು ಡೈನಾಮಿಕ್ ಮತ್ತು ಸ್ಥಿರ ಚಿತ್ರಗಳನ್ನು ಆಯ್ಕೆ ಮಾಡಬಹುದು.

ವಾಲ್‌ಪೇಪರ್ ಸೆಟ್ಟಿಂಗ್ಸ್‌ನ ಸ್ಕ್ರೀನ್, ಮೇಲ್ಭಾಗದಲ್ಲಿ ಹೊಸ ವಾಲ್‌ಪೇಪರ್ ಅನ್ನು ಆಯ್ಕೆಮಾಡುವ ಬಟನ್ ಮತ್ತು ಪ್ರಸ್ತುತ ವಾಲ್‌ಪೇಪರ್‌ನೊಂದಿಗೆ ಲಾಕ್ ಸ್ಕ್ರೀನ್ ಮತ್ತು ಹೋಮ್ ಸ್ಕ್ರೀನ್‌ನ ಚಿತ್ರಗಳು.
  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ವಾಲ್‌ಪೇಪರ್ ಎಂಬುದನ್ನು ಟ್ಯಾಪ್ ಮಾಡಿ, ಹೊಸ ವಾಲ್‌ಪೇಪರ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನಿಮ್ಮ ವಾಲ್‌ಪೇಪರ್ ಅನ್ನು ವಿನ್ಯಾಸಗೊಳಿಸಲು ವಾಲ್‌ಪೇಪರ್ ಗ್ಯಾಲರಿಯ ಮೇಲ್ಭಾಗದಲ್ಲಿರುವ ಫೋಟೋಗಳು, ಜ್ರೋತಿಷ್ಯ ಅಥವಾ ಹವಾಮಾನದಂತಹ ಬಟನ್ ಅನ್ನು ಟ್ಯಾಪ್ ಮಾಡಿ.

    • ಫೀಚರ್ ಮಾಡಲಾದ ಸೆಟ್‌ಗಳಲ್ಲಿ ಒಂದರಿಂದ ವಾಲ್‌ಪೇಪರ್ ಆಯ್ಕೆಯನ್ನು ಆರಿಸಿ (ನಿಸರ್ಗ, ಐಲ್ ಆಫ್ ಸ್ಕೈ, ಇತ್ಯಾದಿ).

      ಗಮನಿಸಿ: ನಿಮಗೆ ಬಳಸಲು ಬೇಕಾದ ವಾಲ್‌ಪೇಪರ್ ಆಯ್ಕೆಗಳು (ಉದಾಹರಣೆಗೆ, ಹವಾಮಾನ ಅಥವಾ ಖಗೋಳಶಾಸ್ತ್ರ) ನಿಮಗೆ ಕಾಣಿಸದಿದ್ದರೆ, ಹೆಚ್ಚಿನ ಆಯ್ಕೆಗಳನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ನೀವು ಇಷ್ಟಪಡುವ ಆಯ್ಕೆಯ ಕೆಳಗಿರುವ ‘ಪಡೆಯಿರಿ’ ಎಂಬುದನ್ನು ಟ್ಯಾಪ್ ಮಾಡಿ.

  3. ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಆರಿಸಿ:

    • ಲಾಕ್ ಸ್ಕ್ರೀನ್ ಮತ್ತು ಹೋಮ್ ಸ್ಕ್ರೀನ್ ಎರಡರಲ್ಲೂ ವಾಲ್‌ಪೇಪರ್ ಅನ್ನು ಬಳಸಬೇಕೇ ಬೇಡವೇ ಎಂಬುದನ್ನು ಆರಿಸಿ: ವಾಲ್‌ಪೇಪರ್ ಪೇರ್ ರೂಪದಲ್ಲಿ ಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಹೋಮ್ ಸ್ಕ್ರೀನ್‌ಗೆ ಮತ್ತಷ್ಟು ಬದಲಾವಣೆಗಳನ್ನು ಮಾಡಿ: ಹೋಮ್ ಸ್ಕ್ರೀನ್ ಅನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ವಾಲ್‌ಪೇಪರ್ ಬಣ್ಣವನ್ನು ಬದಲಾಯಿಸಲು ಒಂದು ಬಣ್ಣವನ್ನು ಟ್ಯಾಪ್ ಮಾಡಿ, ಕಸ್ಟಮ್ ಫೋಟೋವನ್ನು ಬಳಸಲು ಫೋಟೋವೊಂದನ್ನು ಆಯ್ಕೆಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ಆ್ಯಪ್‌ಗಳು ಎದ್ದುಕಾಣಿಸುವಂತೆ ಮಾಡಲು ವಾಲ್‌ಪೇಪರ್ ಅನ್ನು ಬ್ಲರ್ ಮಾಡುವುದಕ್ಕಾಗಿ 'ಬ್ಲರ್’ ಎಂಬ ಆಯ್ಕೆಯನ್ನು ಆರಿಸಿ.

ಸಲಹೆ: ನಿಮ್ಮ ಲಾಕ್ ಸ್ಕ್ರೀನ್ ಅನ್ನು ನಿರ್ದಿಷ್ಟ ಫೋಕಸ್‌ಗೆ ಲಿಂಕ್ ಮಾಡುವ ಮೂಲಕ ನಿಮ್ಮ ವಾಲ್‌ಪೇಪರ್ ಸ್ವಯಂಚಾಲಿತವಾಗಿ ಬದಲಾಗುವಂತೆ ನೀವು ಸೆಟ್ ಮಾಡಬಹುದು. (ನಿಮ್ಮ ಲಾಕ್ ಸ್ಕ್ರೀನ್‌ಗೆ ಫೋಕಸ್ ಅನ್ನು ಲಿಂಕ್ ಮಾಡಿ ಅನ್ನು ನೋಡಿ.) ನೀವು ಆ ಫೋಕಸ್‌ಗೆ ಸ್ವಿಚ್ ಮಾಡಿದಾಗ, ನಿಮ್ಮ ವಾಲ್‌ಪೇಪರ್ ಸ್ವಯಂಚಾಲಿತವಾಗಿ ಸ್ವಿಚ್ ಆಗುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.