ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ Live Photoಗಳನ್ನು ಎಡಿಟ್ ಮಾಡುವುದು

ಫೋಟೋಸ್ ಆ್ಯಪ್‌ನಲ್ಲಿ, ನೀವು Live Photos ಅನ್ನು ಎಡಿಟ್ ಮಾಡಬಹುದು, ಮುಖ್ಯ ಫೋಟೋವನ್ನು ಬದಲಾಯಿಸಬಹುದು ಮತ್ತು ಬೌನ್ಸ್ ಮತ್ತು ಲೂಪ್‌ನಂತಹ ಮೋಜಿನ ಎಫೆಕ್ಟ್‌ಗಳನ್ನು ಸೇರಿಸಬಹುದು.

Live Photo ಎಡಿಟ್‌ಗಳನ್ನು ಮಾಡಿ

ಫೋಟೋ ಎಡಿಟಿಂಗ್ ಟೂಲ್‌ಗಳನ್ನು ಬಳಸುವುದರ ಜೊತೆಗೆ, ನೀವು Live Photoದ ಮುಖ್ಯ ಫೋಟೋವನ್ನು ಬದಲಾಯಿಸಬಹುದು, ಅದರ ಉದ್ದವನ್ನು ಟ್ರಿಮ್ ಮಾಡಬಹುದು, ಸೌಂಡ್ ಅನ್ನು ಮ್ಯೂಟ್ ಮಾಡಬಹುದು ಮತ್ತು Live Photoವನ್ನು ಸ್ಟಿಲ್ ಫೋಟೋವಾಗಿ ಪರಿವರ್ತಿಸಬಹುದು.

  1. ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಒಂದು Live Photoವನ್ನು ತೆರೆಯಿರಿ, ನಂತರ ಎಡಿಟ್ ಬಟನ್ ಅನ್ನು ಟ್ಯಾಪ್ ಮಾಡಿ.

  3. Live Photo ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಪ್ರಮುಖ ಫೋಟೋವನ್ನು ಸೆಟ್ ಮಾಡಿ: ಫ್ರೇಮ್ ವ್ಯೂವರ್‌ನ ಮೇಲೆ ಬಿಳಿ ಫ್ರೇಮ್ ಅನ್ನು ಮೂವ್ ಮಾಡಿ, ಮುಖ್ಯ ಫೋಟೋ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಮುಗಿದಿದೆ ಟ್ಯಾಪ್ ಮಾಡಿ.

    • Live Photoವನ್ನು ಟ್ರಿಮ್ ಮಾಡಿ: Live Photoಗಳು ಪ್ಲೇ ಮಾಡುವ ಫ್ರೇಮ್‌ಗಳನ್ನು ಆಯ್ಕೆಮಾಡಲು ಫ್ರೇಮ್ ವ್ಯೂವರ್‌ನ ಎರಡೂ ತುದಿಯನ್ನು ಡ್ರ್ಯಾಗ್ ಮಾಡಿ.

    • ಸ್ಟೀಲ್ ಫೋಟೋವನ್ನು ಮಾಡಿ: ಲೈವ್ ಫೀಚರ್ ಅನ್ನು ಆಫ್ ಮಾಡಲು ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಲೈವ್ ಬಟನ್ ಅನ್ನು ಟ್ಯಾಪ್ ಮಾಡಿ. Live Photo ಅದರ ಮುಖ್ಯ ಫೋಟೋದ ಸ್ಟಿಲ್ ಆಗುತ್ತದೆ.

    • Live Photo ಅನ್ನು ಮ್ಯೂಟ್ ಮಾಡಿ: ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಮ್ಯೂಟ್ ಬಟನ್ ಅನ್ನು ಟ್ಯಾಪ್ ಮಾಡಿ. ಅನ್‌ಮ್ಯೂಟ್ ಮಾಡಲು ಮತ್ತೆ ಟ್ಯಾಪ್ ಮಾಡಿ.

    ಫೋಟೋಸ್ ಆ್ಯಪ್‌ನಲ್ಲಿನ ಎಡಿಟ್ ಸ್ಕ್ರೀನ್‌ನ ಮಧ್ಯದಲ್ಲಿ Live Photo ಇದೆ. ವೀಡಿಯೊದ ಕೆಳಭಾಗದಲ್ಲಿ ಫ್ರೇಮ್ ವ್ಯೂವರ್ ಇದೆ ಮತ್ತು ಎಡಿಟ್ ಮಾಡಿದ Live Photoದಲ್ಲಿ ಸೇರಿಸಲು ಆಯ್ಕೆಮಾಡಿದ ಫ್ರೇಮ್‌ಗಳ ಸುತ್ತಲೂ ಹಳದಿ ಬಣ್ಣದ ಔಟ್‌ಲೈನ್ ಇದೆ; ಪ್ರಮುಖ ಫೋಟೋ ಮಾಡಲು ಒಂದೇ ಫ್ರೇಮ್ ಅನ್ನು ಆಯ್ಕೆಮಾಡಲಾಗಿದೆ. ಎಡಿಟಿಂಗ್ ಟೂಲ್‌ಗಳು ಸ್ಕ್ರೀನ್‌ನ ಎಡಭಾಗದಲ್ಲಿವೆ: ಮೇಲಿನಿಂದ ಕೆಳಕ್ಕೆ Live Photo, ಸರಿಹೊಂದಿಸಿ, ಫಿಲ್ಟರ್‌ಗಳು ಮತ್ತು ಕ್ರಾಪ್ ಇವೆ. Live Photoವನ್ನು ಆಯ್ಕೆಮಾಡಲಾಗಿದೆ.

Live Photoಗೆ ಎಫೆಕ್ಟ್‌ಗಳನ್ನು ಸೇರಿಸಿ

Live Photos ಅನ್ನು ಮೋಜಿನ ವೀಡಿಯೊಗಳಾಗಿ ಪರಿವರ್ತಿಸಲು ನೀವು ಎಫೆಕ್ಟ್‌ಗಳನ್ನು ಸೇರಿಸಬಹುದು.

  1. ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ ಹೋಗಿ.

  2. Live Photoವನ್ನು ತೆರೆಯಿರಿ.

  3. ಮೇಲಿನ ಎಡ ಮೂಲೆಯಲ್ಲಿರುವ Live ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಆರಿಸಿ:

    • ಲೈವ್: ಲೈವ್ ವೀಡಿಯೊ ಪ್ಲೇಬ್ಯಾಕ್ ಫೀಚರ್ ಅನ್ನು ಅನ್ವಯಿಸುತ್ತದೆ.

    • ಲೂಪ್: ನಿರಂತರ ಲೂಪಿಂಗ್ ವೀಡಿಯೊದಲ್ಲಿ ಆ್ಯಕ್ಷನ್ ಅನ್ನು ಪುನರಾವರ್ತಿಸುತ್ತದೆ.

    • ಬೌನ್ಸ್: ಆ್ಯಕ್ಷನ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ರಿವೈಂಡ್ ಮಾಡುತ್ತದೆ.

    • ಲಾಂಗ್ ಎಕ್ಸ್‌ಪೋಶರ್: ಚಲನೆಯನ್ನು ಬ್ಲರ್ ಮಾಡುವ ಮೂಲಕ ದೀರ್ಘ ಎಕ್ಸ್ ಪೋಶರ್ ಎಫೆಕ್ಟ್‌ನಂತಹ DSLR ಅನ್ನು ಸಿಮ್ಯುಲೇಟ್ ಮಾಡುತ್ತದೆ.

    • ಆಫ್: ಲೈವ್ ವೀಡಿಯೊ ಪ್ಲೇಬ್ಯಾಕ್ ಫೀಚರ್ ಅಥವಾ ಅನ್ವಯಿಸಿದ ಎಫೆಕ್ಟ್ ಅನ್ನು ಆಫ್ ಮಾಡುತ್ತದೆ.

ಒಂದು Live Photoವನ್ನು ವೀಡಿಯೊ ಆಗಿ ಪರಿವರ್ತಿಸಿ

ಸೇವ್ ಮಾಡಲು ಅಥವಾ ಹಂಚಿಕೊಳ್ಳಲು ನೀವು Live Photo ಅನ್ನು ಚಿಕ್ಕ ವೀಡಿಯೊವಾಗಿ ಪರಿವರ್ತಿಸಬಹುದು—ಉದಾಹರಣೆಗೆ, Apple ಸಾಧನಗಳು ಇಲ್ಲದ ಜನರೊಂದಿಗೆ ಹಂಚಿಕೊಳ್ಳಲು.

  1. ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ ಹೋಗಿ.

  2. Live Photoವನ್ನು ತೆರೆಯಿರಿ, ನಂತರ ಮೇಲಿನ ಬಲ ಮೂಲೆಯಲ್ಲಿರುವ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ.

  3. ವೀಡಿಯೊ ಆಗಿ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.