ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ನಿಮ್ಮ ಬಗ್ಗೆ Siriಗೆ ಹೇಳುವುದು

ಹೆಚ್ಚು ವೈಯಕ್ತಿಕಗೊಳಿಸಿದ ಅನುಭವಕ್ಕಾಗಿ, ನಿಮ್ಮ ಮನೆ ಮತ್ತು ಕೆಲಸದ ಸ್ಥಳದ ವಿಳಾಸಗಳು ಹಾಗೂ ನಿಮ್ಮ ಸಂಬಂಧಗಳಂತಹ ವಿಷಯಗಳ ಬಗ್ಗೆ ನೀವು Siriಗೆ ಮಾಹಿತಿಯನ್ನು ಒದಗಿಸಬಹುದು. ಇದರಿಂದ ನೀವು “Give me driving directions home” ಮತ್ತು “FaceTime Mom” ರೀತಿ ಕೇಳಬಹುದು.

ನೀವು ಯಾರು ಎಂಬುದನ್ನು Siriಗೆ ತಿಳಿಸುವುದು

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಮೇಲ್ಭಾಗದಲ್ಲಿರುವ ನನ್ನ ಕಾರ್ಡ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಸಂಪರ್ಕ ಮಾಹಿತಿಯನ್ನು ನಮೂದಿಸಿ.

  4. ಸೆಟ್ಟಿಂಗ್ಸ್‌ ಆ್ಯಪ್‌ಗೆ ಹೋಗಿ.

  5. Siri (ಅಥವಾ Apple Intelligence ಮತ್ತು Siri) ಎಂಬುದನ್ನು ಟ್ಯಾಪ್ ಮಾಡಿ, ನನ್ನ ಮಾಹಿತಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.

ನಿಮ್ಮ ಹೆಸರನ್ನು ಹೇಗೆ ಹೇಳಬೇಕು ಎಂಬುದನ್ನು Siriಗೆ ತಿಳಿಸಿ

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಮೇಲ್ಭಾಗದಲ್ಲಿರುವ ನನ್ನ ಕಾರ್ಡ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

  3. ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ “ಫೀಲ್ಡ್ ಅನ್ನು ಸೇರಿಸಿ” ಎಂಬುದನ್ನು ಟ್ಯಾಪ್ ಮಾಡಿ.

  4. ಉಚ್ಚಾರಣೆಯ ಹೆಸರಿನ ಫೀಲ್ಡ್ ಅನ್ನು ಆಯ್ಕೆಮಾಡಿ, ನಂತರ ನಿಮ್ಮ ಹೆಸರನ್ನು ಹೇಗೆ ಹೇಳಬೇಕು ಎಂಬುದನ್ನು ಟೈಪ್ ಮಾಡಿ.

ಸಂಪರ್ಕಗಳಲ್ಲಿ ನೀವು ಯಾವುದೇ ಇತರ ಸಂಪರ್ಕ ಕಾರ್ಡ್‌ಗೆ ಉಚ್ಚಾರಣೆಯನ್ನು ಸೇರಿಸಬಹುದು. ಸಂಪರ್ಕಗಳನ್ನು ಎಡಿಟ್ ಮಾಡಿ ಎಂಬುದನ್ನು ನೋಡಿ.

ಸಂಬಂಧದ ಕುರಿತು Siriಗೆ ಹೇಳುವುದು

“Sarah Milos is my sister” ಅಥವಾ “Hey Siri, Ashley Kamin is my mom” ಈ ರೀತಿ ಏನಾದರೂ ಹೇಳಿ.

ನಿಮ್ಮ Apple ಸಾಧನಗಳಾದ್ಯಂತ Siri ವೈಯಕ್ತೀಕರಣವನ್ನು ನಿರ್ವಹಿಸುವುದು

ನೀವು iCloud ಅನ್ನು ಬಳಸಿದರೆ ಮತ್ತು ಅದೇ Apple ಖಾತೆಗೆ ಸೈನ್ ಇನ್ ಮಾಡಿದರೆ, ನಿಮ್ಮ Siri ಸೆಟ್ಟಿಂಗ್ಸ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿಕೊಂಡು ನಿಮ್ಮ Apple ಸಾಧನಗಳಲ್ಲಿ ಅಪ್ ಟು ಡೇಟ್ ಆಗಿರುತ್ತವೆ.

Siri ವೈಯಕ್ತೀಕರಣವು, iPad ಮತ್ತು ನಿಮ್ಮ ಇತರ ಸಾಧನಗಳಲ್ಲಿ ಅಪ್-ಟು-ಡೇಟ್ ಆಗುವುದನ್ನು ನೀವು ಬಯಸದಿದ್ದರೆ, ನೀವು iCloud ಸೆಟ್ಟಿಂಗ್ಸ್‌ಗೆ ಹೋಗುವ ಮೂಲಕ Siriಯನ್ನು ಆಫ್ ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ, ನಂತರ iCloud ಅನ್ನು ಟ್ಯಾಪ್ ಮಾಡಿ.

  3. ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ Siriಯನ್ನು ಆಫ್ ಮಾಡಿ.

ಗಮನಿಸಿ: ನೀವು ಸ್ಥಳ ಸೇವೆಗಳನ್ನು ಆನ್ ಮಾಡಿದರೆ, ನೀವು ವಿನಂತಿಯನ್ನು ಮಾಡಿದಾಗ ನಿಮ್ಮ ಸಾಧನದ ಸ್ಥಳವನ್ನು Appleಗೆ ಕಳುಹಿಸಿಲಾಗುತ್ತದೆ ಮತ್ತು ನಿಮ್ಮ ವಿನಂತಿಗಳಿಗೆ ಅದರ ಪ್ರತಿಕ್ರಿಯೆಗಳ ನಿಖರತೆಯನ್ನು ಸುಧಾರಿಸಲು Siriಗೆ ಸಹಾಯ ಮಾಡುತ್ತದೆ. ಸಂಬಂಧಿತ ಪ್ರತಿಕ್ರಿಯೆಗಳನ್ನು ನೀಡಲು, Apple ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ IP ವಿಳಾಸವನ್ನು ಭೌಗೋಳಿಕ ಪ್ರದೇಶಕ್ಕೆ ಹೊಂದಿಸುವ ಮೂಲಕ ನಿಮ್ಮ ಸ್ಥಳವನ್ನು ಅಂದಾಜು ಮಾಡಲು ಬಳಸಬಹುದು. ನೀವು ಹಂಚಿಕೊಳ್ಳುವ ಸ್ಥಳದ ಮಾಹಿತಿಯನ್ನು ನಿಯಂತ್ರಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.