iPadನಲ್ಲಿ ಪ್ರಿವ್ಯೂ ಆ್ಯಪ್‌ ಬಳಕೆಯನ್ನು ಪ್ರಾರಂಭಿಸುವುದು

PDF ಫಾರ್ಮ್‌ಗಳನ್ನು ಭರ್ತಿ ಮಾಡಲು ಮತ್ತು ಸಹಿ ಮಾಡಲು, ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು PDF ಡಾಕ್ಯು‌ಮಂಟ್‌ಗಳು ಹಾಗೂ ಚಿತ್ರಗಳಲ್ಲಿ ಬದಲಾವಣೆಗಳನ್ನು ಮಾಡಲು ಪ್ರಿವ್ಯೂ ಆ್ಯಪ್ ಬಳಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಭರ್ತಿ ಮಾಡಬಹುದಾದ ಫೀಲ್ಡ್‌ಗಳನ್ನು ಹೈಲೈಟ್ ಮಾಡಲಾದ PDF ಫಾರ್ಮ್ ಅನ್ನು ತೋರಿಸುವ ಸ್ಕ್ರೀನ್. ಸ್ಕ್ರೀನ್‌ನ ಕೆಳಭಾಗದಲ್ಲಿ, ವಿವರಣಾತ್ಮಕ ಟಿಪ್ಪಣಿ ಸೇರಿಸಿ, ಮಾರ್ಕಪ್, ಸ್ವಯಂಭರ್ತಿ, ಕ್ರಾಪ್, ಮಾಹಿತಿ, ಹಂಚಿಕೊಳ್ಳಿ ಮತ್ತು ಹುಡುಕಿ ಬಟನ್‌ಗಳಿವೆ. ಸ್ವಯಂಭರ್ತಿ ಬಟನ್ ಅನ್ನು ಆಯ್ಕೆಮಾಡಲಾಗಿದೆ.

PDF ಫಾರ್ಮ್‌ಗಳನ್ನು ಭರ್ತಿ ಮಾಡುವುದು

ಪ್ರಿವ್ಯೂನಲ್ಲಿ PDF ಫಾರ್ಮ್ ಅನ್ನು ಭರ್ತಿ ಮಾಡಲು, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಸ್ವಯಂಭರ್ತಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಫೀಲ್ಡ್ ಅನ್ನು ಆಯ್ಕೆಮಾಡಿ. ಪಠ್ಯವನ್ನು ನಮೂದಿಸಿ ಅಥವಾ ಆನ್‌ಸ್ಕ್ರೀನ್ ಕೀಬೋರ್ಡ್‌ನ ಮೇಲೆ ಕಾಣಿಸುವ ಸಲಹೆಯನ್ನು ಟ್ಯಾಪ್ ಮಾಡಿ. ಸಹಿಯನ್ನು ಸೇರಿಸಲು ನಿಮ್ಮ ಬೆರಳು ಅಥವಾ Apple Pencil ಅನ್ನು ಬಳಸಿ.

ಪ್ರಿವ್ಯೂ ಆ್ಯಪ್‌ನ ಮುಖ್ಯ ಸ್ಕ್ರೀನ್. ಹೊಸ ಡಾಕ್ಯುಮಂಟ್ ಮತ್ತು ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡಿ ಎಂಬ ಬಟನ್‌ಗಳು ಸ್ಕ್ರೀನ್‌ನ ಮಧ್ಯದಲ್ಲಿವೆ. ಸ್ಕ್ರೀನ್‌ನ ಕೆಳಭಾಗಕ್ಕೆ ಇತ್ತೀಚಿನವುಗಳು, ಹಂಚಿಕೊಂಡಿರುವುದು ಮತ್ತು ಬ್ರೌಸ್ ಮಾಡಿ ಟ್ಯಾಬ್‌ಗಳಿವೆ.

PDF ಫೈಲ್ ಅನ್ನು ರಚಿಸಲು ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಸೇವ್ ಮಾಡುವುದು

ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಡಾಕ್ಯುಮಂಟ್‌ ಪುಟಗಳನ್ನು ಕ್ಯಾಪ್ಚರ್ ಮಾಡಲು iPad ಕ್ಯಾಮರಾವನ್ನು ಇರಿಸಿ. ಸ್ಕ್ಯಾನ್ ಮಾಡಿದ ಡಾಕ್ಯುಮಂಟ್ ಅನ್ನು ಹುಡುಕಬಹುದಾದ PDF ಆಗಿ ಸೇವ್ ಮಾಡುವ ಮೊದಲು ನೀವು ಕ್ರಾಪ್ ಮಾಡಬಹುದು, ತಿರುಗಿಸಬಹುದು ಮತ್ತು ಬಣ್ಣಗಳನ್ನು ಸರಿಹೊಂದಿಸಬಹುದು.

ಫೋಟೋವನ್ನು ತೋರಿಸುತ್ತಿರುವ ಪ್ರಿವ್ಯೂ ಆ್ಯಪ್. ದ್ರಾಕ್ಷಿಯ ಗೊಂಚಲನ್ನು ಹಿಡಿದಿರುವ ಕೈ ಮುಂಭಾಗದಲ್ಲಿದೆ. ಹಿನ್ನೆಲೆಯಲ್ಲಿ ಆಕಾಶ ಮತ್ತು ಸಾಗರ ಇವೆ

ಚಿತ್ರವೊಂದರಿಂದ ಹಿನ್ನೆಲೆಯನ್ನು ತೆಗೆದುಹಾಕುವುದು

ಚಿತ್ರದಲ್ಲಿ ಮುಖ್ಯವಾದುದರ ಮೇಲೆ ಕೇಂದ್ರೀಕರಿಸಲು ನೀವು ಅದರ ಹಿನ್ನೆಲೆಗಳನ್ನು ತೆಗೆದುಹಾಕಬಹುದು. ಸ್ಕ್ರೀನ್ ಮೇಲ್ಭಾಗದಲ್ಲಿರುವ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಹಿನ್ನೆಲೆಯನ್ನು ತೆಗೆದುಹಾಕಿ ಎಂಬುದನ್ನು ಆಯ್ಕೆಮಾಡಿ.

ಪ್ರಿವ್ಯೂ ಆ್ಯಪ್‌ನಲ್ಲಿ ಪಾಸ್‌ವರ್ಡ್ ಫೀಲ್ಡ್ ಅನ್ನು ತೋರಿಸುತ್ತಿರುವ ಲಾಕ್ ಮಾಡಲಾದ PDF ಫಾರ್ಮ್. ಸ್ಕ್ರೀನ್‌ನ ಕೆಳಭಾಗದಲ್ಲಿ, ಮಾರ್ಕಪ್, ಮಾಹಿತಿ ಮತ್ತು ಹಂಚಿಕೊಳ್ಳಿ ಬಟನ್‌ಗಳಿವೆ.

ಪಾಸ್‌ವರ್ಡ್ ಬಳಸಿ PDF ಡಾಕ್ಯುಮೆಂಟ್ ರಕ್ಷಿಸುವುದು

ಪಾಸ್‌ವರ್ಡ್ ಬಳಸಿ ನೀವು PDF ಅನ್ನು ಲಾಕ್ ಮಾಡಬಹುದು. PDF ಅನ್ನು ತೆರೆಯಿರಿ, ಫೈಲ್ ಹೆಸರಿನ ಪಕ್ಕದಲ್ಲಿರುವ ಆ್ಯಕ್ಷನ್‌ಗಳ ಮೆನು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಲಾಕ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ಪಾಸ್‌ವರ್ಡ್ ಅಗತ್ಯವಿದೆ ಎಂಬುದನ್ನು ಆನ್ ಮಾಡಿ, ನಂತರ ಪಾಸ್‌ವರ್ಡ್ ಅನ್ನು ಪಾಸ್‌ವರ್ಡ್ ಮತ್ತು ದೃಢೀಕರಿಸಿ ಫೀಲ್ಡ್‌ಗಳಲ್ಲಿ ನಮೂದಿಸಿ.

ಪಠ್ಯವನ್ನು ಹೈಲೈಟ್ ಮಾಡಿರುವ ಮತ್ತು ಸ್ಟ್ರೈಕ್ ಥ್ರೂ ಆಗಿರುವ ಪ್ರಿವ್ಯೂ ಆ್ಯಪ್‌ನಲ್ಲಿರುವ ಸರ್ವೀಸ್ ಅಗ್ರಿಮೆಂಟ್ PDF. ಪಠ್ಯದ ಕೆಳಗೆ ಹೈಲೈಟ್, ಅಂಡರ್‌ಲೈನ್ ಮತ್ತು ಸ್ಟ್ರೈಕ್‌ಥ್ರೂ ಬಟನ್‌ಗಳನ್ನು ತೋರಿಸಲಾಗಿದೆ.

ಪಠ್ಯವನ್ನು ಹೈಲೈಟ್ ಮಾಡುವುದು, ಅಂಡರ್‌ಲೈನ್ ಮಾಡುವುದು ಅಥವಾ ಸ್ಟ್ರೈಕ್ ಮಾಡುವುದು

ನೀವು PDFನಲ್ಲಿ ಪಠ್ಯವನ್ನು ಹೈಲೈಟ್ ಮಾಡಬಹುದು, ಅಂಡರ್‌ಲೈನ್ ಮಾಡಬಹುದು ಅಥವಾ ಸ್ಟ್ರೈಕ್ ಮಾಡಬಹುದು. PDF ಅನ್ನು ತೆರೆಯಿರಿ, ನಂತರ ಪಠ್ಯವನ್ನು ಆಯ್ಕೆಮಾಡಿ. ಹೈಲೈಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಬಣ್ಣ, ಅಂಡರ್‌ಲೈನ್ ಮಾಡಿ ಬಟನ್ ಅಥವಾ ಸ್ಟ್ರೈಕ್ ಥ್ರೂ ಬಟನ್ ಅನ್ನು ಟ್ಯಾಪ್ ಮಾಡಿ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.