ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸಿ

ನಿಮ್ಮ iPadನಲ್ಲಿ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸೈನ್ ಇನ್ ಮಾಡಲು ಬಳಸುವ ಪಾಸ್‌ವರ್ಡ್ ಅನ್ನು ನೀವು ಬದಲಾಯಿಸಬಹುದು.

  1. ನಿಮ್ಮ iPadನಲ್ಲಿನ ಪಾಸ್‌ವರ್ಡ್ಸ್ ಆ್ಯಪ್‌ಗೆ ಹೋಗಿ.

  2. ಎಲ್ಲಾ ಎಂಬುದನ್ನು ಟ್ಯಾಪ್ ಮಾಡಿ, ನಂತರ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಖಾತೆಯನ್ನು ಪತ್ತೆ ಮಾಡಿ.

  3. ಖಾತೆಯನ್ನು ಟ್ಯಾಪ್ ಮಾಡಿ.

  4. ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಪಾಸ್‌ವರ್ಡ್ ಅನ್ನು ಬದಲಾಯಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ವೆಬ್‌ಸೈಟ್‌ನಲ್ಲಿ ಅಥವಾ ಆ್ಯಪ್‌ನಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸಿ.

    Appleನೊಂದಿಗೆ ಸೈನ್ ಇನ್ ಮಾಡುವುದಕ್ಕಾಗಿ ಅಪ್‌ಗ್ರೇಡ್ ಮಾಡಲು ವೆಬ್‌ಸೈಟ್ ಅಥವಾ ಆ್ಯಪ್ ನಿಮಗೆ ಅನುಮತಿಸಿದರೆ, ನೀವು ಆ ಫೀಚರ್‌ನ ಭದ್ರತೆ ಮತ್ತು ಅನುಕೂಲದ ಪ್ರಯೋಜನ ಪಡೆಯಬಹುದು. ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸುವಾಗ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ನಿಮಗೆ ನೀಡಲಾಗದಿದ್ದರೆ, ನೀವು ನೆನಪಲ್ಲಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲದ ಸದೃಢ ಪಾಸ್‌ವರ್ಡ್ ಅನ್ನು ಸ್ವಯಂಚಾಲಿತವಾಗಿ ರಚಿಸಲುಅನೇಕ ಖಾತೆಗಳು iPadಗೆ ಅನುಮತಿಸುತ್ತವೆ.

ಗಮನಿಸಿ: ಇನ್ನುಮುಂದೆ ಲಭ್ಯವಿಲ್ಲದ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ಪಾಸ್‌ವರ್ಡ್ ಬಗ್ಗೆ iPad ನಿಮಗೆ ಎಚ್ಚರಿಕೆಯನ್ನು ನೀಡಿದರೆ, ನೀವು ಅದರ ಖಾತೆಯನ್ನು ನಿಮ್ಮ iPad ಮತ್ತು iCloud ಕೀಚೇನ್‌ನಿಂದ ತೆಗೆದುಹಾಕಬಹುದು. ನಿಮ್ಮ iPadನಲ್ಲಿನ ಪಾಸ್‌ವರ್ಡ್ಸ್ ಆ್ಯಪ್‌ಗೆ ಹೋಗಿ, ಎಲ್ಲವನ್ನೂ ಟ್ಯಾಪ್ ಮಾಡಿ, ನಂತರ ಖಾತೆಯ ಮೇಲೆ ಎಡಭಾಗಕ್ಕೆ ಸ್ವೈಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.