ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಆ್ಯಕ್ಸೆಸಬಿಲಿಟಿಗಾಗಿ ಆನ್‌ಸ್ಕ್ರೀನ್ ಮತ್ತು ಬಾಹ್ಯ ಕೀಬೋರ್ಡ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ

ಅಪ್ಪರ್‌ಕೇಸ್ ಅಕ್ಷರಗಳನ್ನು ಮಾತ್ರ ತೋರಿಸುವಂತೆ ನೀವು ಆನ್‌ಸ್ಕ್ರೀನ್ ಕೀಬೋರ್ಡ್ ಅನ್ನು iPadನಲ್ಲಿ ಸೆಟ್ ಮಾಡಬಹುದು ಮತ್ತು ನಿಮ್ಮ iPad ಜೊತೆಗೆ ಭೌತಿಕ ಕೀಬೋರ್ಡ್ ಅನ್ನು ಬಳಸುತ್ತಿದ್ದರೆ, ಕೀ ಸೆನ್ಸಿಟಿವಿಟಿಯನ್ನು ಸರಿಹೊಂದಿಸಿ ಮತ್ತು ಕೀಗಳ ಸಂಯೋಜನೆಯನ್ನು ಒತ್ತುವುದನ್ನು ಸುಲಭವಾಗಿಸಿ.

ನೀವು ಸ್ವಯಂ-ತಿದ್ದುಪಡಿ ಮತ್ತು ಟೈಪ್ ಮಾಡಲು ಸ್ಲೈಡ್ ಮಾಡಿ ಎಂಬ ರೀತಿಯಟೈಪಿಂಗ್ ಆಯ್ಕೆಗಳನ್ನು ಸೆಟ್ ಮಾಡಬಹುದು ಮತ್ತು ಇತರ ಭಾಷೆಗಳು ಅಥವಾ ಪರ್ಯಾಯ ಲೇಔಟ್‌ಗಳಿಗಾಗಿ ಕೀಬೋರ್ಡ್‌ಗಳನ್ನು ಸೇರಿಸಬಹುದು.

ಅಪ್ಪರ್‌ಕೇಸ್ ಅಕ್ಷರಗಳನ್ನು ಮಾತ್ರ ತೋರಿಸುವಂತೆ ಆನ್‌ಸ್ಕ್ರೀನ್ ಕೀಬೋರ್ಡ್ ಅನ್ನು ಸೆಟ್ ಮಾಡಿ

ಅಪ್ಪರ್‌ಕೇಸ್ ಅಕ್ಷರಗಳನ್ನು ಓದುವುದು ಸುಲಭವಾದರೆ, ಆನ್‌ಸ್ಕ್ರೀನ್ ಕೀಬೋರ್ಡ್ ಲೋವರ್‌ಕೇಸ್ ಅಕ್ಷರಗಳನ್ನು ತೋರಿಸದಂತೆ ನೀವು ಒಂದು ಆಯ್ಕೆಯನ್ನು ಸೆಟ್ ಮಾಡಬಹುದು.

ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಕೀಬೋರ್ಡ್‌ಗಳು ಮತ್ತು ಟೈಪಿಂಗ್ ಎಂಬಲ್ಲಿಗೆ ಹೋಗಿ, ನಂತರ ಲೋವರ್‌ಕೇಸ್ ಕೀಗಳನ್ನು ತೋರಿಸಿ ಎಂಬುದನ್ನು ಆಫ್ ಮಾಡಿ.

ಸಲಹೆ: Mail, ಸಂದೇಶ, ಟಿಪ್ಪಣಿ ಮತ್ತು Safari ಸೇರಿದಂತೆ ಹಲವು ಆ್ಯಪ್‌ಗಳಲ್ಲಿ ಟೈಪ್ ಮಾಡಲು ದೊಡ್ಡ ಕೀಬೋರ್ಡ್ ಅನ್ನು ಬಳಸಲು, iPad ಅನ್ನು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್‌ಗೆ ತಿರುಗಿಸಿ. ಸ್ಕ್ರೀನ್ ಓರಿಯೆಂಟೇಶನ್ ಅನ್ನು ಬದಲಾಯಿಸಿ ಅಥವಾ ಲಾಕ್ ಮಾಡಿ ಎಂಬುದನ್ನು ನೋಡಿ.

ಬಾಹ್ಯ ಕೀಬೋರ್ಡ್‌ನಲ್ಲಿ ಕೀಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಬದಲಾಯಿಸಿ

ನೀವು iPad ಜೊತೆಗೆ ಭೌತಿಕ ಕೀಬೋರ್ಡ್ ಅನ್ನು ಬಳಸಿದರೆ, ನೀವು ಕೀಗಳ ಸೆನ್ಸಿಟಿವಿಟಿಯನ್ನು ಸರಿಹೊಂದಿಸಬಹುದು ಮತ್ತು ಕೀಗಳ ಸಂಯೋಜನೆಯನ್ನು ಒತ್ತುವುದನ್ನು ಸುಲಭಗೊಳಿಸಬಹುದು.

ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಕೀಬೋರ್ಡ್‌ಗಳು ಮತ್ತು ಟೈಪಿಂಗ್ ಎಂಬಲ್ಲಿಗೆ ಹೋಗಿ, ನಂತರ ಕೆಳಗಿನ ಯಾವುದನ್ನಾದರೂ ಟ್ಯಾಪ್ ಮಾಡಿ:

  • ಕೀ ಪುನರಾವರ್ತಿಸಿ: ಕೀ ಪುನರಾವರ್ತಿಸುವುದನ್ನು ಪ್ರಾರಂಭಿಸುವ ಮೊದಲು ಅದನ್ನು ಎಷ್ಟು ಸಮಯದವರೆಗೆ ಒತ್ತಿ ಹಿಡಿದಿಟ್ಟುಕೊಳ್ಳಬೇಕು ಮತ್ತು ಅದು ಪುನರಾವರ್ತಿಸಲು ಪ್ರಾರಂಭವಾದ ನಂತರ ಎಷ್ಟು ವೇಗವಾಗಿ ಪುನರಾವರ್ತನೆಯಾಗಬೇಕು ಎಂಬುದನ್ನು ನೀವು ಸೆಟ್ ಮಾಡಬಹುದು. ಕೀ ಪುನರಾವರ್ತನೆಯಾಗುವುದನ್ನು ಸಹ ನೀವು ತಡೆಯಬಹುದು.

  • ಸ್ಟಿಕಿ ಕೀಗಳು: ನೀವು ಒಂದೇ ಸಮಯದಲ್ಲಿ ಅನೇಕ ಕೀಗಳನ್ನು ಒತ್ತಬೇಕಾದಾಗ, ಅದರ ಬದಲಿಗೆ ನೀವು ಪ್ರತಿಯೊಂದು ಕೀಯನ್ನು ಪ್ರತ್ಯೇಕವಾಗಿ ಒತ್ತಬಹುದು. ಉದಾಹರಣೆಗೆ, ಕಮಾಂಡ್ ಅನ್ನು ಒತ್ತಿದ ನಂತರ Z ಅನ್ನು ಒತ್ತುವ ಮೂಲಕ ಕೀಬೋರ್ಡ್ ಶಾರ್ಟ್‌ಕಟ್ ಕಮಾಂಡ್-Z ಅನ್ನು ನಮೂದಿಸಿ.

  • ನಿಧಾನಗತಿ ಕೀಗಳು: ನೀವು ಕೀಯನ್ನು ಒತ್ತುವ ಮತ್ತು ಅದು ಸಕ್ರಿಯಗೊಳ್ಳುವ ನಡುವಿನ ಸಮಯವನ್ನು ಸರಿಹೊಂದಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.