ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad ಬಳಸಿ ಸೌಂಡ್‌ಗಳನ್ನು ಗುರುತಿಸುವುದು

ಡೋರ್‌ಬೆಲ್, ಸೈರನ್ ಅಥವಾ ಅಳುತ್ತಿರುವ ಮಗುವಿನ ರೀತಿಯ ಕೆಲವು ಸೌಂಡ್‌ಗಳನ್ನು ನಿಮ್ಮ iPad ನಿರಂತರವಾಗಿ ಕೇಳಿಸಿಕೊಳ್ಳಬಹುದು ಮತ್ತು ಈ ಸೌಂಡ್‌ಗಳನ್ನು ಗುರುತಿಸಿದಾಗ ನಿಮಗೆ ತಿಳಿಸಬಹುದು.

ಗಮನಿಸಿ: ನಿಮಗೆ ಹಾನಿಯಾಗಬಹುದಾದ ಅಥವಾ ಗಾಯಗೊಳ್ಳಬಹುದಾದ, ಹೆಚ್ಚಿನ ಅಪಾಯವಿರುವ ಅಥವಾ ತುರ್ತು ಸಂದರ್ಭಗಳಲ್ಲಿ ಅಥವಾ ನ್ಯಾವಿಗೇಷನ್‌ಗಾಗಿ ಸೌಂಡ್‌ಗಳನ್ನು ಗುರುತಿಸಲು ನಿಮ್ಮ iPad ಅನ್ನು ಅವಲಂಬಿಸಬೇಡಿ.

ಸೌಂಡ್ ಗುರುತಿಸುವಿಕೆಯನ್ನು ಸೆಟಪ್ ಮಾಡುವುದು

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ಸೌಂಡ್ ಮತ್ತು ಹೆಸರು ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ಸೌಂಡ್ ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸೌಂಡ್ ಗುರುತಿಸುವಿಕೆ ಎಂಬುದನ್ನು ಆನ್ ಮಾಡಿ.

    ಗಮನಿಸಿ: ನೀವು ಸೌಂಡ್ ಗುರುತಿಸುವಿಕೆಯನ್ನು ಆನ್ ಮಾಡಿದ ನಂತರ, ನಿಮ್ಮ ಸಾಧನದಲ್ಲಿ ಲಭ್ಯವಿರುವ ಸೌಂಡ್‌ಗಳನ್ನು iPad ಡೌನ್‌ಲೋಡ್ ಮಾಡುವವರೆಗೆ ಕಾಯಬೇಕಾಗಬಹುದು.

  3. ಸೌಂಡ್‌ಗಳನ್ನು ಟ್ಯಾಪ್ ಮಾಡಿ, ನಂತರ iPad ಗುರುತಿಸಲಿ ಎಂದು ನೀವು ಬಯಸುವ ಸೌಂಡ್‌ಗಳನ್ನು ಆನ್ ಮಾಡಿ.

ಸಲಹೆ: ಸೌಂಡ್ ಗುರುತಿಸುವಿಕೆಯನ್ನು ತ್ವರಿತವಾಗಿ ಆನ್ ಅಥವಾ ಆಫ್ ಮಾಡಲು, ಅದನ್ನು ಕಂಟ್ರೋಲ್ ಸೆಂಟರ್‌ಗೆ ಸೇರಿಸಿ.

ಕಸ್ಟಮ್ ಅಲಾರಂ, ಉಪಕರಣ ಅಥವಾ ಡೋರ್‌ಬೆಲ್ ಅನ್ನು ಸೇರಿಸಿ

ಕಸ್ಟಮ್ ಅಲಾರಂ, ಉಪಕರಣ ಅಥವಾ ಡೋರ್‌ಬೆಲ್ ಅನ್ನು ಸ್ವಯಂಚಾಲಿತವಾಗಿ ಗುರುತಿಸದಿದ್ದರೆ ಅವುಗಳನ್ನು ಗುರುತಿಸುವಂತೆ ಸಹ ನೀವು iPad ಅನ್ನು ಸೆಟಪ್ ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ಸೌಂಡ್ ಮತ್ತು ಹೆಸರು ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ಸೌಂಡ್ ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸೌಂಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  3. ಕಸ್ಟಮ್ ಅಲಾರಂ ಅಥವಾ ಕಸ್ಟಮ್ ಉಪಕರಣ ಅಥವಾ ಡೋರ್‌ಬೆಲ್ ಅನ್ನು ಟ್ಯಾಪ್ ಮಾಡಿ, ನಂತರ ಹೆಸರನ್ನು ನಮೂದಿಸಿ.

  4. ನಿಮ್ಮ ಅಲಾರಂ, ಉಪಕರಣ ಅಥವಾ ಡೋರ್‌ಬೆಲ್ ಸಿದ್ಧವಾಗಿರುವಾಗ, iPad ಅನ್ನು ಸೌಂಡ್‌ನ ಹತ್ತಿರ ಇರಿಸಿ ಮತ್ತು ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡಿ.

  5. “ಆಲಿಸಲು ಪ್ರಾರಂಭಿಸಿ” ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.