iPadನಲ್ಲಿ ನಿಮ್ಮ ಸ್ಥಳ ಮತ್ತು ನಕ್ಷೆಯ ವ್ಯೂವನ್ನು ಸೆಟ್ ಮಾಡುವುದು

ನೀವು ನಕ್ಷೆಯಲ್ಲಿ ನಿಮ್ಮ ಸ್ಥಳವನ್ನು ಹುಡುಕಬಹುದು ಮತ್ತು ಭಿನ್ನ ವಿವರಗಳಿಗಾಗಿ ಭಿನ್ನ ನಕ್ಷೆಯ ವ್ಯೂಗಳಿಗೆ ಸ್ವಿಚ್ ಮಾಡಬಹುದು. ನೀವು ಎಕ್ಸ್‌ಪ್ಲೋರ್, ಡ್ರೈವಿಂಗ್, ಸಾರಿಗೆ ಮತ್ತು ಸ್ಯಾಟಲೈಟ್ ವೀಕ್ಷಣೆಗಳಿಂದ ಆಯ್ಕೆ ಮಾಡಬಹುದು.

ಬೆಂಬಲಿತ ಮಾಡಲ್‌ಗಳಲ್ಲಿ ಮತ್ತು ಆಯ್ದ ನಗರಗಳಲ್ಲಿ ನಕ್ಷೆ ಆ್ಯಪ್ ಸಮುದ್ರ ಮಟ್ಟದ ಮೇಲಿನ ಎತ್ತರ, ರಸ್ತೆಗಳು, ಮರಗಳು, ಕಟ್ಟಡಗಳು, ಲ್ಯಾಂಡ್‌ಮಾರ್ಕ್‌ಗಳು ಮತ್ತು ಇತ್ಯಾದಿಗಳಿಗೆ ಹೆಚ್ಚಿನ ವಿವರವನ್ನು ಒದಗಿಸುತ್ತವೆ.

ಗಮನಿಸಿ: ಎಲ್ಲಾ ಫೀಚರ್‌ಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. ಲಭ್ಯತೆಗಾಗಿ, iOS ಮತ್ತು iPadOS ಫೀಚರ್ ಲಭ್ಯತೆ ವೆಬ್‌ಸೈಟ್‌ನಲ್ಲಿ ವಿವರವಾದ ನಗರದ ಅನುಭವ ಎಂಬುದನ್ನು ನೋಡಿ.

ಹಾದಿಗಳು ಮತ್ತು ವೀಕ್ಷಣಾ ಸ್ಥಳಗಳಂತಹ ಮರಗಳು, ಆಸಕ್ತಿಯ ಸ್ಥಳಗಳನ್ನು ತೋರಿಸುತ್ತಿರುವ ರಸ್ತೆ ಮತ್ತು ಪಾರ್ಕ್ ನಕ್ಷೆ.

ಎಚ್ಚರಿಕೆ: ಅಪಾಯಕಾರಿ ಸನ್ನಿವೇಶಗಳಿಗೆ ಕಾರಣವಾಗಬಹುದಾದ ನ್ಯಾವಿಗೇಷನ್ ಮತ್ತು ಅಡಚಣೆಗಳನ್ನು ತಪ್ಪಿಸುವ ಕುರಿತಾದ ಪ್ರಮುಖ ಮಾಹಿತಿಗಾಗಿ, ಪ್ರಮುಖ ಸುರಕ್ಷತಾ ಮಾಹಿತಿ ಎಂಬುದನ್ನು ನೋಡಿ.

ನಿಮ್ಮ ಸ್ಥಳವನ್ನು ಬಳಸಲು ನಕ್ಷೆಗೆ ಅನುಮತಿಸಿ

ನಿಮ್ಮ ಸ್ಥಳವನ್ನು ಕಂಡುಹಿಡಿಯಲು ಮತ್ತು ನಿಖರವಾದ ನಿರ್ದೇಶನಗಳನ್ನು ಒದಗಿಸಲು, iPad ಇಂಟರ್ನೆಟ್‌ಗೆ ಕನೆಕ್ಟ್ ಆಗಿರಬೇಕು ಮತ್ತು ಸ್ಥಳ ಸೇವೆಗಳು ಆನ್ ಆಗಿರಬೇಕು.

ಸ್ಥಳ ಸೇವೆಗಳು ಆಫ್ ಆಗಿವೆ ಎಂಬ ಸಂದೇಶವನ್ನು ನಕ್ಷೆ ಆ್ಯಪ್ ತೋರಿಸಿದರೆ, ಸಂದೇಶವನ್ನು ಟ್ಯಾಪ್ ಮಾಡಿ, ಸೆಟ್ಟಿಂಗ್ಸ್‌ನಲ್ಲಿ ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಥಳ ಸೇವೆಗಳು ಎಂಬುದನ್ನು ಆನ್ ಮಾಡಿ.

Wi-Fi + Cellular ಮಾಡಲ್‌ಗಳಲ್ಲಿನ ಫೀಚರ್‌ಗಳನ್ನು ಬಳಸುವಾಗ, ಮೊಬೈಲ್ ಡೇಟ ದರಗಳು ಅನ್ವಯಿಸಬಹುದು. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

ಗಮನಿಸಿ: ನಕ್ಷೆ ಆ್ಯಪ್‌ನಲ್ಲಿ ಉಪಯುಕ್ತ ಸ್ಥಳ-ಸಂಬಂಧಿತ ಮಾಹಿತಿಯನ್ನು ಪಡೆಯಲು, ಸೆಟ್ಟಿಂಗ್ಸ್ ಆ್ಯಪ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿ ಗಮನಾರ್ಹ ಸ್ಥಳಗಳು ಎಂಬುದನ್ನು ಆನ್ ಆಗಿರಿಸಿ. ಸಮೀಪದಲ್ಲಿರುವ ಆಕರ್ಷಣೆಗಳು, ರೆಸ್ಟೋರೆಂಟ್‌ಗಳು ಮತ್ತು ಸೇವೆಗಳನ್ನು ಹುಡುಕಿ ಎಂಬುದನ್ನು ನೋಡಿ.

ನಿಮ್ಮ ಪ್ರಸ್ತುತ ಸ್ಥಳವನ್ನು ತೋರಿಸುವುದು

ಟ್ರ್ಯಾಕಿಂಗ್ ಆಫ್ ಬಟನ್ ಅನ್ನು ಟ್ಯಾಪ್ ಮಾಡಿ.

ನಕ್ಷೆಯ ಮಧ್ಯದಲ್ಲಿ ನಿಮ್ಮ ಸ್ಥಾನವನ್ನು ಗುರುತಿಸಲಾಗುತ್ತದೆ. ನಕ್ಷೆಯ ಮೇಲ್ಭಾಗವು ಉತ್ತರ ದಿಕ್ಕಿನಲ್ಲಿದೆ. ಮೇಲ್ಭಾಗದಲ್ಲಿ ಉತ್ತರ ದಿಕ್ಕಿನ ಬದಲಾಗಿ ನೀವು ಮುಖಮಾಡಿರುವ ದಿಕ್ಕನ್ನು ತೋರಿಸಲು, ಟ್ರ್ಯಾಕಿಂಗ್ ಆನ್ ಬಟನ್ ಅನ್ನು ಟ್ಯಾಪ್ ಮಾಡಿ. ಉತ್ತರ ದಿಕ್ಕನ್ನು ತೋರಿಸುವುದನ್ನು ಪುನರಾರಂಭಿಸಲು, ನೀವು ಪ್ರಯಾಣಿಸುತ್ತಿರುವ ದಿಕ್ಕಿನ ಜೊತೆ ಟ್ರ್ಯಾಕಿಂಗ್ ಆನ್ ಆಗಿದೆ ಬಟನ್ ಅಥವಾ ದಿಕ್ಸೂಚಿ ಬಟನ್ ಅನ್ನು ಟ್ಯಾಪ್ ಮಾಡಿ.

ನಿಮ್ಮ ಪ್ರಸ್ತುತ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಸ್ಥಳಗಳನ್ನು ಹುಡುಕಿ ಎಂಬುದನ್ನು ನೋಡಿ.

ಮತ್ತೊಂದು ನಕ್ಷೆಯ ವ್ಯೂಗೆ ಸ್ವಿಚ್ ಮಾಡುವುದು

ಪ್ರಸ್ತುತ ನಕ್ಷೆಯು ಎಕ್ಸ್‌ಪ್ಲೋರ್ ಮಾಡಲು , ಡ್ರೈವ್ ಮಾಡಲು , ಸಾರಿಗೆ ವಾಹನದಲ್ಲಿ ಪ್ರಯಾಣಿಸಲು, ಅಥವಾ ಸ್ಯಾಟಲೈಟ್ ವೀಕ್ಷಣೆಗಾಗಿ ಇದೆಯೇ ಎಂಬುದನ್ನು ನಕ್ಷೆಯ ಕೆಳಗಿನ ಬಲಭಾಗದಲ್ಲಿರುವ ಬಟನ್ ಸೂಚಿಸುತ್ತದೆ. ನೀವು ಯಾವುದೇ ಸಮಯದಲ್ಲಿ ನಕ್ಷೆಯ ಪ್ರಕಾರವನ್ನು ಬದಲಾಯಿಸಬಹುದು.

  1. ನಿಮ್ಮ iPadನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಮೇಲಿನ ಬಲಭಾಗದಲ್ಲಿರುವ ಮ್ಯಾಪ್ ಮೋಡ್‌ಗಳು ಬಟನ್ (ಮ್ಯಾಪ್ ಮೋಡ್ ಅನ್ವೇಷಿಸಿ ಬಟನ್, ಡ್ರೈವಿಂಗ್ ಮ್ಯಾಪ್ ಮೋಡ್ ಬಟನ್, ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವಾಗ ಟ್ರಾನ್ಸಿಟ್ ಮ್ಯಾಪ್ ಮೋಡ್ ಬಟನ್, ಸ್ಯಾಟಲೈಟ್ ಮ್ಯಾಪ್ ಮೋಡ್ ಬಟನ್) ಅನ್ನು ಟ್ಯಾಪ್ ಮಾಡಿ.

  3. ಮತ್ತೊಂದು ನಕ್ಷೆಯ ಪ್ರಕಾರವನ್ನು ಆರಿಸಿ, ನಂತರ ಮುಚ್ಚಿ ಬಟನ್ ಅನ್ನು ಟ್ಯಾಪ್ ಮಾಡಿ.

ನೀವು ಡ್ರೈವಿಂಗ್, ಸೈಕ್ಲಿಂಗ್, ನಡಿಗೆ ಮತ್ತು ಸಾರಿಗೆ ಅಥವಾ ಟ್ರಾಫಿಕ್ ಮತ್ತು ಹವಾಮಾನ ಮಾಹಿತಿಯ ಮಾರ್ಗ ನಿರ್ದೇಶನಗಳನ್ನು ನಕ್ಷೆ ಆ್ಯಪ್‌ನಲ್ಲಿ ಪಡೆಯಬಹುದು.

ನಕ್ಷೆ ಆ್ಯಪ್‌ನ ಫೀಚರ್‌ಗಳು ಪ್ರದೇಶ ಮತ್ತು ದೇಶಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ.

ಗಮನಿಸಿ: ನಿಮ್ಮ ಸ್ಥಳದ ಕುರಿತಾದ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತ ಮತ್ತು ಖಾಸಗಿಯಾಗಿಡಲು Apple ಬದ್ಧವಾಗಿದೆ. Appleನ ಬದ್ಧತೆಯ ಕುರಿತು ಇನ್ನಷ್ಟು ಓದಿರಿ: ಸೆಟ್ಟಿಂಗ್ಸ್ ಆ್ಯಪ್ > ಆ್ಯಪ್‌ಗಳು > ನಕ್ಷೆ ಆ್ಯಪ್‌ಗೆ ಹೋಗಿ, ನಂತರ Apple ನಕ್ಷೆ ಮತ್ತು ಗೌಪ್ಯತೆಯ ಕುರಿತು ಎಂಬುದನ್ನು ಟ್ಯಾಪ್ ಮಾಡಿ. ನೀವು ನಿಮ್ಮ ಸ್ಥಳದ ಇತಿಹಾಸವನ್ನು ತೆರವುಗೊಳಿಸಬಹುದು ಅಥವಾ ಇತ್ತೀಚಿನ ಮಾರ್ಗ ನಿರ್ದೇಶನಗಳನ್ನು ಡಿಲೀಟ್ ಮಾಡಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.