ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನೊಂದಿಗೆ ಸಂವಹನ ನಡೆಸಲು ವಾಯ್ಸ್ ಕಂಟ್ರೋಲ್ ಕಮಾಂಡ್‌ಗಳನ್ನು ಬಳಸುವುದು

ನಿಮ್ಮ iPadನಲ್ಲಿ ವಾಯ್ಸ್ ಕಂಟ್ರೋಲ್ ಅನ್ನು ಆನ್ ಮಾಡಿದ ನಂತರ, ಸ್ಕ್ರೀನ್ ಮೇಲಿರುವುದರೊಂದಿಗೆ ಸಂವಹನ ನಡೆಸಲು, ಜೆಸ್ಚರ್‌ಗಳು ಮತ್ತು ಬಟನ್ ಒತ್ತುವಿಕೆಗಳನ್ನು ನಿರ್ವಹಿಸಲು, ಪಠ್ಯವನ್ನು ಡಿಕ್ಟೇಟ್ ಮಾಡಲು ಮತ್ತು ಎಡಿಟ್ ಮಾಡಲು ಹಾಗೂ ಇನ್ನೂ ಹೆಚ್ಚಿನದನ್ನು ಮಾಡಲು ನೀವು ಕಮಾಂಡ್‌ಗಳನ್ನು ಮಾತಿನಲ್ಲಿ ಹೇಳಬಹುದು.

ಗಮನಿಸಿ: ವಾಯ್ಸ್ ಕಂಟ್ರೋಲ್ ಆನ್ ಆಗಿರುವಾಗ, ಪಠ್ಯವನ್ನು ಡಿಕ್ಟೇಟ್ ಮಾಡಲು ನೀವು ವಾಯ್ಸ್ ಕಂಟ್ರೋಲ್ ಅನ್ನು ಬಳಸುತ್ತೀರಿ; ಸ್ಟ್ಯಾಂಡರ್ಡ್ iPadOS ಡಿಕ್ಟೇಷನ್ ಲಭ್ಯವಿರುವುದಿಲ್ಲ. ನಿಮ್ಮ ಧ್ವನಿಯ ಮೂಲಕ iPad ಅನ್ನು ನಿಯಂತ್ರಿಸದೆ ಡಿಕ್ಟೇಷನ್ ಬಳಸಿಕೊಂಡು ಪಠ್ಯವನ್ನು ನಮೂದಿಸಲು ಬಯಸಿದರೆ, ಪಠ್ಯವನ್ನು ಡಿಕ್ಟೇಟ್ ಮಾಡಿ ಎಂಬುದನ್ನು ನೋಡಿ. ವಾಯ್ಸ್ ಕಂಟ್ರೋಲ್ ಎಲ್ಲಾ ಭಾಷೆಗಳಲ್ಲಿ ಲಭ್ಯವಿಲ್ಲ. iOS ಮತ್ತು iPadOS ಫೀಚರ್ ಲಭ್ಯತೆ ವೆಬ್‌ಸೈಟ್ ಅನ್ನು ನೋಡಿ.

ವಾಯ್ಸ್ ಕಂಟ್ರೋಲ್ ಅನ್ನು ಸೆಟಪ್ ಮಾಡುವುದು

ನೀವು ಮೊದಲ ಬಾರಿಗೆ ವಾಯ್ಸ್ ಕಂಟ್ರೋಲ್ ಅನ್ನು ಆನ್ ಮಾಡುವ ಮೊದಲು, Wi-Fi ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ iPad ಕನೆಕ್ಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. iPad, Appleನಿಂದ ಒಂದು-ಬಾರಿಯ ಫೈಲ್ ಡೌನ್‌ಲೋಡ್ ಅನ್ನು ಪೂರ್ಣಗೊಳಿಸಿದ ನಂತರ, ವಾಯ್ಸ್ ಕಂಟ್ರೋಲ್ ಅನ್ನು ಬಳಸಲು ನಿಮಗೆ ಇಂಟರ್ನೆಟ್ ಕನೆಕ್ಷನ್ ಅಗತ್ಯವಿರುವುದಿಲ್ಲ.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > Voice Control ಎಂಬುದಕ್ಕೆ ಹೋಗಿ.

  2. 'ವಾಯ್ಸ್ ಕಂಟ್ರೋಲ್ ಅನ್ನು ಸೆಟಪ್ ಮಾಡಿ' ಎಂಬುದನ್ನು ಟ್ಯಾಪ್ ಮಾಡಿ, ನಂತರ ಫೈಲ್ ಡೌನ್‌ಲೋಡ್ ಅನ್ನು ಪ್ರಾರಂಭಿಸಲು 'ಮುಂದುವರಿಸಿ' ಎಂಬುದನ್ನು ಟ್ಯಾಪ್ ಮಾಡಿ.

    ಡೌನ್‌ಲೋಡ್ ಪೂರ್ಣಗೊಂಡಾಗ, ವಾಯ್ಸ್ ಕಂಟ್ರೋಲ್ ಅನ್ನು ಆನ್ ಮಾಡಲಾಗಿದೆ ಎಂಬುದನ್ನು ಸೂಚಿಸಲು ಸ್ಟೇಟಸ್ ಬಾರ್‌ನಲ್ಲಿ ವಾಯ್ಸ್ ಕಂಟ್ರೋಲ್ ಐಕಾನ್ ಕಾಣಿಸಿಕೊಳ್ಳುತ್ತದೆ.

  3. ಈ ಕೆಳಗಿನವುಗಳ ರೀತಿಯ ಆಯ್ಕೆಗಳನ್ನು ಸೆಟ್ ಮಾಡಿ:

    • ಭಾಷೆ: ಆಫ್‌ಲೈನ್ ಬಳಕೆಗೆ ಭಾಷೆಯನ್ನು ಸೆಟ್ ಮಾಡಿ ಮತ್ತು ಭಾಷೆಗಳನ್ನು ಡೌನ್‌ಲೋಡ್ ಮಾಡಿ.

    • ಕಮಾಂಡ್‌ಗಳನ್ನು ಕಸ್ಟಮೈಸ್ ಮಾಡಿ: ಲಭ್ಯವಿರುವ ಕಮಾಂಡ್‌ಗಳನ್ನು ನೋಡಿ ಮತ್ತು ಹೊಸ ಕಮಾಂಡ್‌ಗಳನ್ನು ರಚಿಸಿ.

    • ಶಬ್ದಕೋಶ: ಹೊಸ ಪದಗಳು ಮತ್ತು ಫ್ರೇಸ್‌ಗಳನ್ನು ಗುರುತಿಸಲು ವಾಯ್ಸ್ ಕಂಟ್ರೋಲ್‌ಗೆ ಕಲಿಸಿರಿ. ನೀವು ಪದ ಅಥವಾ ಫ್ರೇಸ್ ಅನ್ನು ನಮೂದಿಸಬಹುದು ಮತ್ತು ನೀವು ಅದನ್ನು ಹೇಗೆ ಉಚ್ಚರಿಸುತ್ತೀರಿ ಎಂಬುದನ್ನು ವಾಯ್ಸ್ ಕಂಟ್ರೋಲ್‌ಗೆ ಕಲಿಸಬಹುದು ಅಥವಾ ಶಬ್ದಕೋಶದ ಪಟ್ಟಿಯನ್ನು ಇಂಪೋರ್ಟ್ ಮಾಡಬಹುದು.

      ಗಮನಿಸಿ: ಎಲ್ಲಾ ವಾಯ್ಸ್ ಕಂಟ್ರೋಲ್ ಭಾಷೆಗಳು ಕಸ್ಟಮ್ ಶಬ್ದಕೋಶವನ್ನು ಬೆಂಬಲಿಸುವುದಿಲ್ಲ.

    • ದೃಢೀಕರಣವನ್ನು ತೋರಿಸಿ: ವಾಯ್ಸ್ ಕಂಟ್ರೋಲ್ ಒಂದು ಕಮಾಂಡ್ ಅನ್ನು ಗುರುತಿಸಿದಾಗ, ಸ್ಕ್ರೀನ್‌ನ ಮೇಲ್ಭಾಗದಲ್ಲಿ ವಿಷುವಲ್ ದೃಢೀಕರಣವು ಕಾಣಿಸಿಕೊಳ್ಳುತ್ತದೆ.

    • ಸೌಂಡ್ ಪ್ಲೇ ಮಾಡಿ: ವಾಯ್ಸ್ ಕಂಟ್ರೋಲ್ ಒಂದು ಕಮಾಂಡ್ ಅನ್ನು ಗುರುತಿಸಿದಾಗ, ಕಿವಿಗೆ ಕೇಳಿಸುವ ಸೌಂಡ್ ಪ್ಲೇ ಆಗುತ್ತದೆ.

    • ಸುಳಿವುಗಳನ್ನು ತೋರಿಸಿ: ಕಮಾಂಡ್ ಸಲಹೆಗಳು ಮತ್ತು ಸುಳಿವುಗಳನ್ನು ನೋಡಿ.

    • ಓವರ್‌ಲೇ: ಸ್ಕ್ರೀನ್ ಎಲಿಮೆಂಟ್‌ಗಳ ಮೇಲೆ ಸಂಖ್ಯೆಗಳು, ಹೆಸರುಗಳು ಅಥವಾ ಗ್ರಿಡ್ ಅನ್ನು ಪ್ರದರ್ಶಿಸಿ.

    • ಗಮನದ ಅರಿವು: Face ID ಹೊಂದಿರುವ iPadನಲ್ಲಿ, ನಿಮ್ಮ iPad ಕಡೆಗೆ ನೀವು ನೋಡಿದಾಗ ವಾಯ್ಸ್ ಕಂಟ್ರೋಲ್ ಎಚ್ಚರಗೊಳ್ಳುತ್ತದೆ ಮತ್ತು ನೀವು ಬೇರೆ ಕಡೆ ನೋಡಿದಾಗ ಸ್ಲೀಪ್‌ಗೆ ಹೋಗುತ್ತದೆ.

ವಾಯ್ಸ್ ಕಂಟ್ರೋಲ್ ಅನ್ನು ಆನ್ ಅಥವಾ ಆಫ್ ಮಾಡಿ

ನೀವು ವಾಯ್ಸ್ ಕಂಟ್ರೋಲ್ ಅನ್ನು ಸೆಟಪ್ ಮಾಡಿದ ನಂತರ, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡುವ ಮೂಲಕ ನೀವು ಅದನ್ನು ತ್ವರಿತವಾಗಿ ಆನ್ ಅಥವಾ ಆಫ್ ಮಾಡಬಹುದು:

ಕಮಾಂಡ್‌ಗಳನ್ನು ಬಳಸಲು ಪ್ರಾರಂಭಿಸುವುದು

ನಿಮ್ಮ iPadನಲ್ಲಿ ವಾಯ್ಸ್ ಕಂಟ್ರೋಲ್ ಅನ್ನು ಬಳಸಲು, ಕೇವಲ ಒಂದು ಕಮಾಂಡ್ ಅನ್ನು ಹೇಳಿ.

ವಾಯ್ಸ್ ಕಂಟ್ರೋಲ್: ಉದಾಹರಣೆಗೆ, “ಕಂಟ್ರೋಲ್ ಸೆಂಟರ್ ತೆರೆಯಿರಿ”, “ಹೋಮ್‌ಗೆ ಹೋಗಿ”, “ ಐಟಮ್ ಹೆಸರು ಟ್ಯಾಪ್ ಮಾಡಿ” ಅಥವಾ “ವಾಲ್ಯೂಮ್ ಅನ್ನು ಹೆಚ್ಚಿಸಿ” ಎಂದು ಹೇಳಿ.

ಸಲಹೆ: ವಾಯ್ಸ್ ಕಂಟ್ರೋಲ್ ಬಗ್ಗೆ ತಿಳಿದುಕೊಳ್ಳಲು ಮತ್ತು ಅಗತ್ಯ ಕಮಾಂಡ್‌ಗಳನ್ನು ಅಭ್ಯಾಸ ಮಾಡಲು ಸಂವಾದಾತ್ಮಕ ವಾಯ್ಸ್ ಕಂಟ್ರೋಲ್ ಟ್ಯುಟೋರಿಯಲ್ ಅನ್ನು ಬಳಸಿ. ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ವಾಯ್ಸ್ ಕಂಟ್ರೋಲ್ ಎಂಬುದಕ್ಕೆ ಹೋಗಿ, ನಂತರ ವಾಯ್ಸ್ ಕಂಟ್ರೋಲ್ ಟ್ಯುಟೋರಿಯಲ್ ತೆರೆಯಿರಿ ಎಂಬುದನ್ನು ಟ್ಯಾಪ್ ಮಾಡಿ.

ವಾಯ್ಸ್ ಕಂಟ್ರೋಲ್ ಅನ್ನು ವಿರಾಮಗೊಳಿಸಿ ಅಥವಾ ಪುನರಾರಂಭಿಸಿ

ನೀವು ಹೇಳುವ ಪದಗಳನ್ನು ಕಮಾಂಡ್‌ಗಳು ಅಥವಾ ಡಿಕ್ಟೇಷನ್ ಎಂದು ಅರ್ಥೈಸಿಕೊಳ್ಳುವುದು ನಿಮಗೆ ಇಷ್ಟವಿಲ್ಲದಿದ್ದಾಗ ವಾಯ್ಸ್ ಕಂಟ್ರೋಲ್ ಅನ್ನು ವಿರಾಮಗೊಳಿಸಿ. ವಾಯ್ಸ್ ಕಂಟ್ರೋಲ್ ಕಮಾಂಡ್‌ಗಳು ಮತ್ತು ಡಿಕ್ಟೇಷನ್‌ಗಳನ್ನು ಪುನಃ ಆಲಿಸಬೇಕೆಂದು ನೀವು ಸಿದ್ಧರಾದಾಗ ಅದನ್ನು ಪುನರಾರಂಭಿಸಿ.

ವಾಯ್ಸ್ ಕಂಟ್ರೋಲ್: “ಆಲಿಸುವುದನ್ನು ನಿಲ್ಲಿಸಿ” ಅಥವಾ “ಆಲಿಸುವುದನ್ನು ಪ್ರಾರಂಭಿಸಿ” ಎಂದು ಹೇಳಿ.

ನೀವು ಯಾವ ಕಮಾಂಡ್‌ಗಳನ್ನು ಬಳಸಬಹುದು ಎಂಬುದನ್ನು ನೋಡಿ

ಲಭ್ಯವಿರುವ ಕಮಾಂಡ್‌ಗಳ ಪಟ್ಟಿಯನ್ನು ತೋರಿಸಿ, ಇದು ನೀವು ಕಾರ್ಯನಿರ್ವಹಿಸುತ್ತಿರುವ ಆ್ಯಪ್ ಮತ್ತು ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಅವಲಂಬಿಸಿ ಬದಲಾಗುತ್ತದೆ. ಉದಾಹರಣೆಗೆ, ಡಾಕ್ಯುಮಂಟ್ ಬರೆಯುವಾಗ ಪಠ್ಯ ಫಾರ್ಮ್ಯಾಟಿಂಗ್ ಕಮಾಂಡ್‌ಗಳನ್ನು ನೀವು ನೋಡುತ್ತೀರಿ.

ವಾಯ್ಸ್ ಕಂಟ್ರೋಲ್: “ಕಮಾಂಡ್‌ಗಳನ್ನು ತೋರಿಸಿ” ಎಂದು ಹೇಳಿ.

ಬೆಂಬಲಿತ ಕಮಾಂಡ್‌ಗಳ ಸಂಪೂರ್ಣ ಪಟ್ಟಿಯನ್ನು ಬ್ರೌಸ್ ಮಾಡಲು ಮತ್ತು ಅವುಗಳನ್ನು ಹೇಗೆ ಬಳಸುವುದು ಎಂಬುದರ ಉದಾಹರಣೆಗಳನ್ನು ನೋಡಲು, ಸೆಟ್ಟಿಂಗ್ಸ್ ಆ್ಯಪ್ > ಆ್ಯಕ್ಸೆಸಬಿಲಿಟಿ > ವಾಯ್ಸ್ ಕಂಟ್ರೋಲ್ > ಕಮಾಂಡ್‌ಗಳು ಎಂಬುದಕ್ಕೆ ಹೋಗಿ.

ಸ್ಕ್ರೀನ್ ಮೇಲಿನ ಐಟಮ್‌ಗಳನ್ನು ಲೇಬಲ್ ಮಾಡುವುದು

ಯಾವುದನ್ನಾದರೂ ಏನೆಂದು ಕರೆಯಬೇಕೆಂದು ನಿಮಗೆ ಖಚಿತವಾಗಿರದಿದ್ದಾಗ, ಸ್ಕ್ರೀನ್ ಮೇಲೆ ಪ್ರತಿಯೊಂದು ಐಟಮ್‌ನ ಪಕ್ಕದಲ್ಲಿ ಹೆಸರು ಅಥವಾ ಸಂಖ್ಯೆಯನ್ನು ನೀವು ಪ್ರದರ್ಶಿಸಬಹುದು. ನಂತರ ನೀವು ಐಟಮ್‌ನೊಂದಿಗೆ ಸಂವಹನ ನಡೆಸಲು ಅದರ ಹೆಸರು ಅಥವಾ ಸಂಖ್ಯೆಯನ್ನು ಬಳಸಬಹುದು.

ವಾಯ್ಸ್ ಕಂಟ್ರೋಲ್: “ಹೆಸರುಗಳನ್ನು ತೋರಿಸಿ”, “ಸಂಖ್ಯೆಗಳನ್ನು ತೋರಿಸಿ” ಅಥವಾ “ಪಠ್ಯ ಸಂಖ್ಯೆಗಳನ್ನು ತೋರಿಸಿ” ಎಂದು ಹೇಳಿ.

ಐಟಮ್‌ನೊಂದಿಗೆ ಸಂವಹನ ನಡೆಸಲು, ಅದರ ಹೆಸರು ಅಥವಾ ಸಂಖ್ಯೆಯನ್ನು ಹೇಳಿ ಅಥವಾ ಕಮಾಂಡ್ ಅನ್ನು ಹೇಳಿ—ಉದಾಹರಣೆಗೆ ಐಟಮ್‌ನ ಹೆಸರು ಅಥವಾ ಸಂಖ್ಯೆಯ ನಂತರ—“ದೀರ್ಘವಾಗಿ ಒತ್ತಿರಿ”. ನೀವು ಕಮಾಂಡ್ ಅನ್ನು ಹೇಳಿದ ನಂತರ ಐಟಮ್ ಹೆಸರುಗಳು ಅಥವಾ ಸಂಖ್ಯೆಗಳು ಕಣ್ಮರೆಯಾಗುತ್ತವೆ.

ಸ್ಕ್ರೀನ್ ಮೇಲೆ ಸಂಖ್ಯಾತ್ಮಕ ಗ್ರಿಡ್ ಅನ್ನು ತೋರಿಸುವುದು

ಗ್ರಿಡ್ ಅನ್ನು ಸೂಪರ್ಇಂಪೋಸ್ ಮಾಡುವ ಮೂಲಕ ನೀವು ಸ್ಕ್ರೀನ್‌ನ ನಿಖರವಾದ ಪ್ರದೇಶದ ಜೊತೆ ಸಂವಹನವನ್ನು ಸುಲಭಗೊಳಿಸಬಹುದು.

ವಾಯ್ಸ್ ಕಂಟ್ರೋಲ್: “ಗ್ರಿಡ್ ತೋರಿಸಿ” ಎಂದು ಹೇಳಿ.

  • ಗ್ರಿಡ್‌ನಲ್ಲಿರುವ ಸ್ಥಳದೊಂದಿಗೆ ಸಂವಹನ ನಡೆಸಿ: ನೀವು ಸಂವಹನ ನಡೆಸಲು ಬಯಸುವ ಸ್ಥಳದಲ್ಲಿ ಒಂದು ಸಂಖ್ಯೆ ಇದ್ದರೆ, ಗ್ರಿಡ್ ಸಂಖ್ಯೆಯ ನಂತರ—“ಟ್ಯಾಪ್ ಮಾಡಿ” ಎಂಬಂತಹ ಯಾವುದೇ ಕಮಾಂಡ್ ಅನ್ನು ಹೇಳಿ. ನೀವು ಕಮಾಂಡ್ ಅನ್ನು ಹೇಳಿದ ನಂತರ ಗ್ರಿಡ್ ಕಣ್ಮರೆಯಾಗುತ್ತದೆ.

  • ಗ್ರಿಡ್‌ನ ಒಂದು ಪ್ರದೇಶವನ್ನು ನಿರ್ದಿಷ್ಟಗೊಳಿಸಿ: ನೀವು ಸ್ಥಳವನ್ನು ಮತ್ತಷ್ಟು ಪರಿಷ್ಕರಿಸಬೇಕೆಂದರೆ, ಗ್ರಿಡ್ ಸಂಖ್ಯೆಯನ್ನು ಹೇಳುವ ಮೂಲಕ ಆ ಪ್ರದೇಶದಲ್ಲಿನ ಹೆಚ್ಚು ವಿವರವಾದ ಗ್ರಿಡ್ ಅನ್ನು ತೋರಿಸಿ.

ಓವರ್‌ಲೇಯನ್ನು ಆಫ್ ಮಾಡಲು “ಹೆಸರುಗಳನ್ನು ಮರೆಮಾಡಿ”, “ಸಂಖ್ಯೆಗಳನ್ನು ಮರೆಮಾಡಿ” ಅಥವಾ “ಗ್ರಿಡ್ ಅನ್ನು ಮರೆಮಾಡಿ” ಎಂದು ಹೇಳಿ.

ಪಠ್ಯವನ್ನು ನಮೂದಿಸಿ

ಪಠ್ಯ ಇನ್‌ಪುಟ್ ಪ್ರದೇಶದಲ್ಲಿ ಕೆಲಸ ಮಾಡುವಾಗ, ನೀವು ಪ್ರತಿ ಪದವನ್ನು (ಡಿಕ್ಟೇಶನ್ ಮೋಡ್ ಮೂಲಕ) ಅಥವಾ ಪ್ರತಿ ಅಕ್ಷರವನ್ನು (ಕಾಗುಣಿತ ಮೋಡ್ ಮೂಲಕ) ಡಿಕ್ಟೇಟ್ ಮಾಡಬಹುದು. ವಾಯ್ಸ್ ಕಂಟ್ರೋಲ್ ಕಮಾಂಡ್ ಅನ್ನು ತಪ್ಪಾಗಿ ಪಠ್ಯದಂತೆ ನಮೂದಿಸುವುದನ್ನು ತಪ್ಪಿಸಲು, ಕಮಾಂಡ್‌ಗಳಿಗೆ ಮಾತ್ರ ವಾಯ್ಸ್ ಕಂಟ್ರೋಲ್ ಪ್ರತಿಕ್ರಿಯಿಸುವಂತೆ ಮಾಡಿ (ಕಮಾಂಡ್ ಮೋಡ್ ಮೂಲಕ).

ನೀವು ಪಠ್ಯ ಇನ್‌ಪುಟ್ ಪ್ರದೇಶದಲ್ಲಿರುವಾಗ ಮತ್ತು ಸ್ಕ್ರೀನ್ ಮೇಲಿನ ಐಟಮ್‌ಗಳನ್ನು ಸಂಖ್ಯೆಗಳೊಂದಿಗೆ ಲೇಬಲ್ ಮಾಡಿರುವಾಗ, ಪ್ರತಿಯೊಂದು ಪಠ್ಯದ ಸಾಲಿನ ಪಕ್ಕದಲ್ಲಿ ಸಂಖ್ಯೆಗಳನ್ನು ತೋರಿಸಲಾಗುತ್ತದೆ. ಆಯ್ಕೆಯಲ್ಲಿರುವ ಪ್ರತಿಯೊಂದು ಪದದ ಸಂಖ್ಯೆಯನ್ನು ಪ್ರದರ್ಶಿಸಲು ಒಂದು ಸಾಲು ಅಥವಾ ಪಠ್ಯದ ಮತ್ತೊಂದು ವಿಭಾಗವನ್ನು ಆಯ್ಕೆಮಾಡಿ; ಪದದಲ್ಲಿರುವ ಪ್ರತಿಯೊಂದು ಅಕ್ಷರದ ಸಂಖ್ಯೆಯನ್ನು ತೋರಿಸಲು ಒಂದೇ ಪದವನ್ನು ಆಯ್ಕೆಮಾಡಿ. ಪಠ್ಯ ಐಟಮ್‌ನೊಂದಿಗೆ ಸಂವಹನ ನಡೆಸಲು (ಉದಾಹರಣೆಗೆ ಸಾಲು ಅಥವಾ ಪದ), ಐಟಮ್‌ನ ಹೆಸರು ಅಥವಾ ಸಂಖ್ಯೆಯ ನಂತರ ಕಮಾಂಡ್ ಅನ್ನು ಹೇಳಿ. ಉದಾಹರಣೆಗೆ, ನೀವು “[ ಐಟಮ್‌ ಸಂಖ್ಯೆ] ಡಿಲೀಟ್ ಮಾಡಿ ” ಅಥವಾ “[ ಐಟಮ್ ಸಂಖ್ಯೆ] ಅಪ್ಪರ್‌ಕೇಸ್ ಮಾಡಿ” ಎಂದು ಹೇಳಬಹುದು.

ಕಮಾಂಡ್

ವಿವರಣೆ

ವಾಯ್ಸ್ ಕಂಟ್ರೋಲ್: “ಡಿಕ್ಟೇಷನ್ ಮೋಡ್” ಎಂದು ಹೇಳಿ.

ಪ್ರತಿ ಪದವನ್ನು ಡಿಕ್ಟೇಟ್ ಮಾಡಿ.

ನೀವು ಹೇಳುವ ಯಾವುದೇ ಪದಗಳು ವಾಯ್ಸ್ ಕಂಟ್ರೋಲ್ ಕಮಾಂಡ್‌ಗಳಲ್ಲದಿದ್ದಲ್ಲಿ ಅವುಗಳನ್ನು ಪಠ್ಯವಾಗಿ ನಮೂದಿಸಲಾಗುತ್ತದೆ. ಡಿಕ್ಟೇಷನ್ ಮೋಡ್ ಡಿಫಾಲ್ಟ್ ಆಗಿ ಆನ್ ಆಗಿದೆ.

ಕೆಲವು ವಾಯ್ಸ್ ಕಂಟ್ರೋಲ್ ಭಾಷೆಗಳಲ್ಲಿ, ನೀವು ಹೇಳುವುದಕ್ಕೆ ಹಲವಾರು ಪದಗಳು ಫೋನೆಟಿಕ್ ಆಗಿ ಹೊಂದಿಕೆಯಾದರೆ, ಅವು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ. ನಿಮಗೆ ಬೇಕಾದುದನ್ನು ಆಯ್ಕೆಮಾಡಲು ಟ್ಯಾಪ್ ಮಾಡಿ.

ವಾಯ್ಸ್ ಕಂಟ್ರೋಲ್: “ಕಾಗುಣಿತದ ಮೋಡ್” ಎಂದು ಹೇಳಿ.

ಪ್ರತಿಯೊಂದು ಅಕ್ಷರವನ್ನು ಡಿಕ್ಟೇಟ್ ಮಾಡಿ.

ಡಿಕ್ಟೇಷನ್ ಮೋಡ್‌ನಲ್ಲಿ ಪದವೆಂದು ಗುರುತಿಸಲಾಗದಂತಹ ಪಾಸ್‌ವರ್ಡ್, ವೆಬ್ ವಿಳಾಸ ಅಥವಾ ಅಕ್ಷರಗಳ ಇನ್ನೊಂದು ಸರಣಿಯನ್ನು ನೀವು ನಮೂದಿಸಬೇಕಾದರೆ ಕಾಗುಣಿತದ ಮೋಡ್ ಸಹಾಯ ಮಾಡುತ್ತದೆ.

ಕಾಗುಣಿತದ ಮೋಡ್ ಆನ್ ಆಗಿರುವಾಗ, ಪಠ್ಯ ಇನ್‌ಪುಟ್ ಪ್ರದೇಶದಲ್ಲಿ ಕಾಗುಣಿತದ ಮೋಡ್ ಐಕಾನ್ ಕಾಣಿಸಿಕೊಳ್ಳುತ್ತದೆ.

ಅಕ್ಷರಗಳನ್ನು ನಮೂದಿಸುವಾಗ ನಿಖರತೆಯನ್ನು ಹೆಚ್ಚಿಸಲು, ನೀವು ಅಕ್ಷರದ ಫೋನೆಟಿಕ್ ಆಲ್ಫಾಬೆಟ್ ಕೋಡ್ ವರ್ಡ್ ಅನ್ನು ಬಳಸಬಹುದು (ಉದಾಹರಣೆಗೆ, “abc” ಅನ್ನು ನಮೂದಿಸಲು “Alfa Bravo Charli” ಎಂದು ಹೇಳಿ).

ಗಮನಿಸಿ: ಎಲ್ಲಾ ವಾಯ್ಸ್ ಕಂಟ್ರೋಲ್ ಭಾಷೆಗಳಲ್ಲಿ ಕಾಗುಣಿತದ ಮೋಡ್ ಲಭ್ಯವಿಲ್ಲ.

ವಾಯ್ಸ್ ಕಂಟ್ರೋಲ್: “ಕಮಾಂಡ್ ಮೋಡ್” ಎಂದು ಹೇಳಿ.

ವಾಯ್ಸ್ ಕಂಟ್ರೋಲ್ ಕಮಾಂಡ್‌ಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತದೆ.

ಕಮಾಂಡ್‌ಗಳಿಲ್ಲದ ಪದಗಳು ಮತ್ತು ಅಕ್ಷರಗಳನ್ನು ನಿರ್ಲಕ್ಷಿಸಲಾಗುತ್ತದೆ ಮತ್ತು ಪಠ್ಯವಾಗಿ ನಮೂದಿಸಲಾಗುವುದಿಲ್ಲ. ನೀವು ಸರಣಿ ಕಮಾಂಡ್‌ಗಳನ್ನು ಹೇಳಬೇಕಾದಾಗ ಮತ್ತು ಅವುಗಳನ್ನು ಪಠ್ಯ ಇನ್‌ಪುಟ್ ಪ್ರದೇಶದಲ್ಲಿ ಅಜಾಗರೂಕತೆಯಿಂದ ನಮೂದಿಸುವುದು ನಿಮಗೆ ಬೇಡವಾದಾಗ ಕಮಾಂಡ್ ಮೋಡ್ ಸಹಾಯಕವಾಗುತ್ತದೆ.

ಕಮಾಂಡ್ ಮೋಡ್ ಆನ್ ಆಗಿರುವಾಗ, ಪಠ್ಯವನ್ನು ನಮೂದಿಸಲು ನಿಮಗೆ ಡಿಕ್ಟೇಟ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸೂಚಿಸಲು ಪಠ್ಯ ಇನ್‌ಪುಟ್ ಪ್ರದೇಶದಲ್ಲಿ ಕಮಾಂಡ್ ಮೋಡ್ ಐಕಾನ್ ಕಾಣಿಸಿಕೊಳ್ಳುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.