ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಪಾಸ್‌ವರ್ಡ್ ಅನ್ನು ಹುಡುಕಿ

iPadನಲ್ಲಿ, ಖಾತೆಗಳನ್ನು ಹುಡುಕುವ ಮೂಲಕ ಅಥವಾ ವಿಂಗಡಿಸುವ ಮೂಲಕ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಪಾಸ್‌ವರ್ಡ್ ಅನ್ನು ನೀವು ಹುಡುಕಬಹುದು.

ಖಾತೆಯನ್ನು ಹುಡುಕುವ ಮೂಲಕ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಪಾಸ್‌ವರ್ಡ್ ಅನ್ನು ಹುಡುಕಿ

  1. ನಿಮ್ಮ iPadನಲ್ಲಿನ ಪಾಸ್‌ವರ್ಡ್ಸ್ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಹುಡುಕಾಟದ ಫೀಲ್ಡ್‌ನಲ್ಲಿ ಖಾತೆಯ ಹೆಸರನ್ನು ನಮೂದಿಸಿ.

  3. ಖಾತೆಯನ್ನು ಟ್ಯಾಪ್ ಮಾಡಿ, ನಂತರ ಪಾಸ್‌ವರ್ಡ್ ಫೀಲ್ಡ್ ಅನ್ನು ಟ್ಯಾಪ್ ಮಾಡಿ.

ನಿಮ್ಮ ಖಾತೆಗಳನ್ನು ವಿಂಗಡಿಸುವ ಮೂಲಕ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಪಾಸ್‌ವರ್ಡ್ ಅನ್ನು ಹುಡುಕಿ

  1. ನಿಮ್ಮ iPadನಲ್ಲಿನ ಪಾಸ್‌ವರ್ಡ್ಸ್ ಆ್ಯಪ್‌ಗೆ ಹೋಗಿ.

  2. ಎಲ್ಲವನ್ನೂ ಟ್ಯಾಪ್ ಮಾಡಿ.

  3. ಖಾತೆಗಳ ಪಟ್ಟಿಯ ಕೆಳಭಾಗದಲ್ಲಿನ ಈ ಪ್ರಕಾರ ವಿಂಗಡಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಖಾತೆಗಳನ್ನು ನೀವು ಹೇಗೆ ವಿಂಗಡಿಸಲು ಬಯಸುತ್ತೀರಿ ಎಂಬುದನ್ನು ಟ್ಯಾಪ್ ಮಾಡಿ.

  4. ಖಾತೆಯನ್ನು ಗುರುತಿಸಿ ಮತ್ತು ಟ್ಯಾಪ್ ಮಾಡಿ, ನಂತರ ಪಾಸ್‌ವರ್ಡ್ ಫೀಲ್ಡ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.