ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಸ್ಕ್ರೀನ್ ಟೈಮ್‌ ಮೂಲಕ ವೇಳಾಪಟ್ಟಿಗಳನ್ನು ಸೆಟ್ ಮಾಡುವುದು

ನೀವು iPad ಅನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎಂಬುದನ್ನು ನಿರ್ವಹಿಸಲು ಸ್ಕ್ರೀನ್ ಟೈಮ್ ನಿಮಗೆ ಸಹಾಯ ಮಾಡುತ್ತದೆ. ನೀವು ವೇಳಾಪಟ್ಟಿಗಳನ್ನು ರಚಿಸಬಹುದು ಮತ್ತು ನಿಮಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮಿತಿಗಳನ್ನು ಸೆಟ್ ಮಾಡಬಹುದು. ನಿಮ್ಮ ಸ್ಕ್ರೀನ್ ಟೈಮ್ ವೇಳಾಪಟ್ಟಿಯನ್ನು ಕಸ್ಟಮೈಸ್ ಮಾಡಲು ನೀವು ಬಳಸಬಹುದಾದ ಕೆಲವು ವಿಧಾನಗಳು ಇಲ್ಲಿವೆ:

  • ಡೌನ್‌ಟೈಮ್ ಅನ್ನು ನಿಗದಿಗೊಳಿಸಿ: ಹೆಚ್ಚಿನ ಆ್ಯಪ್‌ಗಳು ಲಭ್ಯವಿಲ್ಲದೇ ಇದ್ದಾಗ ನಿರ್ದಿಷ್ಟ ಸಮಯಗಳನ್ನು ಸೆಟ್ ಮಾಡುವ ಮೂಲಕ ರಾತ್ರಿ ಊಟದ ಸಮಯ ಅಥವಾ ಮಲಗುವ ಸಮಯದಲ್ಲಿ ನಿಮ್ಮ ಸ್ಕ್ರೀನ್‌ನಿಂದ ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಿ.

  • ಆ್ಯಪ್ ಬಳಕೆಗೆ ಮಿತಿಗಳನ್ನು ಸೆಟ್ ಮಾಡಿ: ದೈನಂದಿನ ಸಮಯದ ಮಿತಿಗಳನ್ನು ಸೆಟ್ ಮಾಡುವ ಮೂಲಕ ಆ್ಯಪ್‌ಗಳಲ್ಲಿ ನೀವು ಕಳೆಯುವ ಸಮಯವನ್ನು ನಿಯಂತ್ರಿಸಿ.

  • ಕೆಲವು ಆ್ಯಪ್‌ಗಳು ಮತ್ತು ಸಂಪರ್ಕಗಳನ್ನು ಅನುಮತಿಸಿ: ಡೌನ್‌ಟೈಮ್ ಸಮಯದಲ್ಲಿ ಮತ್ತು ನೀವು ಸಮಯ ಮಿತಿಗಳನ್ನು ತಲುಪಿದ ನಂತರವೂ ಲಭ್ಯವಿರುವ ಆ್ಯಪ್‌ಗಳು ಮತ್ತು ಸಂಪರ್ಕಗಳನ್ನು ಆಯ್ಕೆಮಾಡಿ.

ನೀವು ನಿಗದಿತ ಡೌನ್‌ಟೈಮ್ ಸಮಯದಲ್ಲಿ ಆ್ಯಪ್‌ಗಳನ್ನು ಬ್ಲಾಕ್ ಮಾಡಬಹುದು ಇದರಿಂದ ನಿಗದಿಪಡಿಸಿದ ಮಿತಿಗಳನ್ನು ತಲುಪಿದ ನಂತರ ನೀವು ಅದನ್ನು ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ.

ಸ್ಕ್ರೀನ್‌ನಿಂದ ದೂರವಿರುವ ಸಮಯವನ್ನು ನಿಗದಿಪಡಿಸಿ

ನಿಮ್ಮ ಸಾಧನಗಳಿಂದ ನೀವು ದೂರವಿರಲು ಬಯಸುವ ಅವಧಿಗಳಿಗೆ ಆ್ಯಪ್‌ಗಳು ಮತ್ತು ನೋಟಿಫಿಕೇಷನ್‌ಗಳನ್ನು ಬ್ಲಾಕ್ ಮಾಡಿ. ಉದಾಹರಣೆಗೆ, ನೀವು ಊಟದ ಸಮಯದಲ್ಲಿ ಅಥವಾ ಮಲಗುವ ಸಮಯದಲ್ಲಿ ಡೌನ್‌ಟೈಮ್ ಅನ್ನು ನಿಗದಿಪಡಿಸಬಹುದು. ಡೌನ್‌ಟೈಮ್‌ ಸಮಯದಲ್ಲಿ, ನೀವು ಅನುಮತಿಸಲು ಆಯ್ಕೆಮಾಡುವ ಕರೆಗಳು, ಸಂದೇಶಗಳು ಮತ್ತು ಆ್ಯಪ್‌ಗಳು ಮಾತ್ರ ಲಭ್ಯವಿರುತ್ತವೆ. ನಿರ್ದಿಷ್ಟ ಆ್ಯಪ್‌ಗಳು ಮತ್ತು ಸಂಪರ್ಕಗಳನ್ನು ಅನುಮತಿಸುವುದ ಹೇಗೆ ಎಂಬುದನ್ನು ತಿಳಿಯಲು, ನಿರ್ದಿಷ್ಟ ಸಂಪರ್ಕಗಳಿಂದ ಬರುವ ಕರೆಗಳು ಮತ್ತು ಸಂದೇಶಗಳನ್ನು ಅನುಮತಿಸಿ ಅಥವಾ ಬ್ಲಾಕ್ ಮಾಡಿ ಮತ್ತು ಎಲ್ಲಾ ಸಮಯದಲ್ಲೂ ಅನುಮತಿಸುವುದಕ್ಕಾಗಿ ಆ್ಯಪ್‌ಗಳು ಮತ್ತು ಸಂಪರ್ಕಗಳನ್ನು ಆಯ್ಕೆಮಾಡಿ ಅನ್ನು ನೋಡಿ.

ಗಮನಿಸಿ: ಡಿಫಾಲ್ಟ್ ಆಗಿ, ಸ್ಕ್ರೀನ್ ಟೈಮ್ ಮಿತಿಗಳನ್ನು ತಲುಪಿದ ನಂತರ ಅವುಗಳನ್ನು ನಿರ್ಲಕ್ಷಿಸಬಹುದು. ಮಿತಿಗಳನ್ನು ನಿರ್ಲಕ್ಷಿಸುವುದನ್ನು ತಡೆಯುವುದು ಹೇಗೆಂದು ತಿಳಿಯಲು, ನಿಗದಿಗೊಳಿಸಿದ ಡೌನ್‌ಟೈಮ್ ಸಮಯದಲ್ಲಿ ಆ್ಯಪ್‌ಗಳನ್ನು ಬ್ಲಾಕ್ ಮಾಡುವುದು ಅನ್ನು ನೋಡಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಸ್ಕ್ರೀನ್ ಟೈಮ್ ಎಂಬುದನ್ನು ಟ್ಯಾಪ್ ಮಾಡಿ.

    ನಿಮ್ಮ ಮಗುವಿಗಾಗಿ ಡೌನ್‌ಟೈಮ್ ಅನ್ನು ಆನ್ ಮಾಡಲು ನೀವು ಬಯಸಿದರೆ, ನಿಮ್ಮ ಮಗುವಿನ ಹೆಸರನ್ನು ಟ್ಯಾಪ್ ಮಾಡಿ.

  3. ಆ್ಯಪ್ ಮತ್ತು ವೆಬ್‌ಸೈಟ್ ಚಟುವಟಿಕೆಯನ್ನು ಟ್ಯಾಪ್ ಮಾಡಿ, ನಂತರ ನೀವು ಈಗಾಗಲೇ ಹಾಗೆ ಮಾಡಿರದಿದ್ದರೆ ಆ್ಯಪ್ ಮತ್ತು ವೆಬ್‌ಸೈಟ್ ಚಟುವಟಿಕೆಯನ್ನು ಆನ್ ಮಾಡಿ.

  4. ಡೌನ್‌ಟೈಮ್ ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಾಳೆಯವರೆಗೆ ಡೌನ್‌ಟೈಮ್ ಅನ್ನು ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಡೌನ್‌ಟೈಮ್ ಅನ್ನು ಮುಂಚಿತವಾಗಿ ನಿಗದಿಪಡಿಸಲು ‘ನಿಗದಿಪಡಿಸಿರುವುದು’ ಎಂಬುದನ್ನು ಟ್ಯಾಪ್ ಮಾಡಿ.

    ನೀವು ಡೌನ್‌ಟೈಮ್ ಅನ್ನು ನಿಗದಿಪಡಿಸಿದಾಗ, ಡೌನ್‌ಟೈಮ್ ಪ್ರಾರಂಭವಾಗುವ ಮೊದಲು 5-ನಿಮಿಷದ ರಿಮೈಂಡರ್ ಕಳುಹಿಸಲಾಗುತ್ತದೆ. ನೀವು ರಿಮೈಂಡರ್ ಅನ್ನು ನಿರ್ಲಕ್ಷಿಸಬಹುದು ಅಥವಾ ನಿಗದಿತ ಡೌನ್‌ಟೈಮ್ ಪ್ರಾರಂಭವಾಗುವವರೆಗೆ ಡೌನ್‌ಟೈಮ್ ಅನ್ನು ಆನ್ ಮಾಡಬಹುದು.

  5. ಪ್ರತಿ ದಿನ ಅಥವಾ ದಿನಗಳನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಆಯ್ಕೆಮಾಡಿ, ನಂತರ ಪ್ರಾರಂಭ ಮತ್ತು ಅಂತ್ಯದ ಸಮಯವನ್ನು ಸೆಟ್ ಮಾಡಿ.

    ಗಮನಿಸಿ: ನೀವು ದಿನಗಳನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಆಯ್ಕೆ ಮಾಡಿದಾಗ, ವಾರಾಂತ್ಯಗಳಂತಹ ವಾರದ ವಿವಿಧ ದಿನಗಳಿಗಾಗಿ ನೀವು ವೇಳಾಪಟ್ಟಿಗಳನ್ನು ಸೆಟ್ ಮಾಡಬಹುದು.

ನಿಗದಿಪಡಿಸಿರುವುದು ಎಂಬುದನ್ನು ಆಫ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ಡೌನ್‌ಟೈಮ್ ವೇಳಾಪಟ್ಟಿಯನ್ನು ಆಫ್ ಮಾಡಬಹುದು.

ನಿಗದಿಗೊಳಿಸಿದ ಡೌನ್‌ಟೈಮ್ ಸಮಯದಲ್ಲಿ ಆ್ಯಪ್‌ಗಳನ್ನು ಬ್ಲಾಕ್ ಮಾಡುವುದು

ನೀವು ನಿಮಗಾಗಿ ಅಥವಾ ನಿಮ್ಮ ಮಗುವಿಗಾಗಿ ಸ್ಕ್ರೀನ್ ಟೈಮ್ ಪಾಸ್‌ಕೋಡ್ ಅನ್ನು ಸೆಟ್ ಮಾಡಿದರೆ, ಡೌನ್‌ಟೈಮ್ ಸಮಯದಲ್ಲಿ ಆ್ಯಪ್‌ಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಬೇಕೆ ಅಥವಾ ಕೇವಲ ಡಿಮ್ ಮಾಡಬೇಕೆ ಎಂಬುದನ್ನು ನೀವು ಆರಿಸಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್‌ ಆ್ಯಪ್‌ಗೆ  ಹೋಗಿ.

  2. ಸ್ಕ್ರೀನ್ ಟೈಮ್ ಎಂಬುದನ್ನು ಟ್ಯಾಪ್ ಮಾಡಿ.

    ನಿಮ್ಮ ಮಗುವಿಗಾಗಿ ನೀವು ಈ ಫೀಚರ್ ಅನ್ನು ಆನ್ ಮಾಡಲು ಬಯಸಿದರೆ, ನಿಮ್ಮ ಮಗುವಿನ ಹೆಸರನ್ನು ಟ್ಯಾಪ್ ಮಾಡಿ.

  3. ಡೌನ್‌ಟೈಮ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಡೌನ್‌ಟೈಮ್‌ನಲ್ಲಿ ಬ್ಲಾಕ್ ಮಾಡಿ ಎಂಬುದನ್ನು ಆನ್ ಮಾಡಿ.

ಡೌನ್‌ಟೈಮ್‌ನಲ್ಲಿ ಬ್ಲಾಕ್ ಮಾಡಿ ಎಂಬುದನ್ನು ಆನ್ ಮಾಡಿದಾಗ, ಡೌನ್‌ಟೈಮ್ ಸಮಯದಲ್ಲಿ ನಿರ್ಬಂಧಿತ ಆ್ಯಪ್‌ಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ—ಅವು ಮರಳು ಗಡಿಯಾರದ ಐಕಾನ್‌ನೊಂದಿಗೆ ಡಿಮ್ ಆಗಿ ಕಾಣಿಸುತ್ತವೆ. ಡೌನ್‌ಟೈಮ್‌ನಲ್ಲಿ ಬ್ಲಾಕ್ ಮಾಡಿ ಆಫ್ ಆಗಿರುವಾಗ, ಅದು ಡೌನ್‌ಟೈಮ್ ಆಗಿದೆ ಎಂಬುದನ್ನು ನೆನಪಿಸುವ ರಿಮೈಂಡರ್ ಅನ್ನು ನೀವು ನೋಡುತ್ತೀರಿ, ಆದರೆ ನೀವು ಆ್ಯಪ್‌ಗಳನ್ನು ಬಳಸುವುದನ್ನು ಮುಂದುವರಿಸಲು ಆಯ್ಕೆಮಾಡಬಹುದು.

ಆ್ಯಪ್ ಬಳಕೆಗೆ ಮಿತಿಗಳನ್ನು ಸೆಟ್ ಮಾಡಿ

ಆ್ಯಪ್‌ಗಳ ವರ್ಗಕ್ಕಾಗಿ (ಉದಾಹರಣೆಗೆ, ಗೇಮ್ಸ್ ಅಥವಾ ಸಾಮಾಜಿಕ ನೆಟ್‌ವರ್ಕಿಂಗ್) ಮತ್ತು ಪ್ರತ್ಯೇಕ ಆ್ಯಪ್‌ಗಳಿಗಾಗಿ ಸಮಯದ ಮಿತಿಯನ್ನು ಸೆಟ್ ಮಾಡಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್  ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್ ಟೈಮ್ ಎಂಬುದನ್ನು ಟ್ಯಾಪ್ ಮಾಡಿ.

    ನಿಮ್ಮ ಮಗುವಿಗಾಗಿ ಆ್ಯಪ್ ಮಿತಿಗಳನ್ನು ಸೆಟ್ ಮಾಡಲು ನೀವು ಬಯಸಿದರೆ, ನಿಮ್ಮ ಮಗುವಿನ ಹೆಸರನ್ನು ಟ್ಯಾಪ್ ಮಾಡಿ.

  3. ಆ್ಯಪ್ ಮಿತಿಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಮಿತಿಯನ್ನು ಸೇರಿಸಿ ಟ್ಯಾಪ್ ಮಾಡಿ.

  4. ಒಂದು ಅಥವಾ ಅದಕ್ಕಿಂತ ಹೆಚ್ಚಿನ ಆ್ಯಪ್ ವರ್ಗಗಳನ್ನು ಆಯ್ಕೆಮಾಡಿ.

    ಪ್ರತ್ಯೇಕ ಆ್ಯಪ್‌ಗಳಿಗೆ ಮಿತಿಗಳನ್ನು ಸೆಟ್ ಮಾಡಲು, ಆ ವರ್ಗದ ಎಲ್ಲಾ ಆ್ಯಪ್‌ಗಳನ್ನು ನೋಡಲು ವರ್ಗದ ಹೆಸರನ್ನು ಟ್ಯಾಪ್ ಮಾಡಿ, ನಂತರ ನೀವು ಸೀಮಿತಗೊಳಿಸಲು ಬಯಸುವ ಆ್ಯಪ್‌ಗಳನ್ನು ಆಯ್ಕೆಮಾಡಿ. ನೀವು ಅನೇಕ ವರ್ಗಗಳನ್ನು ಅಥವಾ ಆ್ಯಪ್‌ಗಳನ್ನು ಆಯ್ಕೆಮಾಡಿದರೆ, ನೀವು ನಿಗದಿಪಡಿಸಿದ ಸಮಯದ ಮಿತಿಯು ಅವೆಲ್ಲಕ್ಕೂ ಅನ್ವಯವಾಗುತ್ತದೆ.

  5. ಮೇಲಿನ ಬಲಭಾಗದಲ್ಲಿರುವ ಮುಂದಿನು ಎಂಬುದನ್ನು ಟ್ಯಾಪ್ ಮಾಡಿ, ನಂತರ ಅನುಮತಿಸಿರುವ ಸಮಯದ ಪ್ರಮಾಣವನ್ನು ಸೆಟ್ ಮಾಡಿ.

    ಪ್ರತಿ ದಿನಕ್ಕಾಗಿ ಸಮಯದ ಪ್ರಮಾಣವನ್ನು ಸೆಟ್ ಮಾಡಲು, ದಿನಗಳನ್ನು ಕಸ್ಟಮೈಸ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿರ್ದಿಷ್ಟ ದಿನಗಳಿಗಾಗಿ ಮಿತಿಗಳನ್ನು ಸೆಟ್ ಮಾಡಿ.

  6. ನೀವು ಮಿತಿಗಳನ್ನು ಸೆಟ್ ಮಾಡುವುದನ್ನು ಪೂರ್ಣಗೊಳಿಸಿದಾಗ, ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

ಎಲ್ಲಾ ಸಮಯದಲ್ಲೂ ಅನುಮತಿಸುವುದಕ್ಕಾಗಿ ಆ್ಯಪ್‌ಗಳು ಮತ್ತು ಸಂಪರ್ಕಗಳನ್ನು ಆಯ್ಕೆಮಾಡಿ

ಬಳಸಬಹುದಾದ ಆ್ಯಪ್‌ಗಳು ಮತ್ತು ನೀವು ಎಲ್ಲಾ ಸಮಯದಲ್ಲೂ ಸಂವಹನ ನಡೆಸಬಹುದಾದ ಸಂಪರ್ಕಗಳನ್ನು (ಉದಾಹರಣೆಗೆ, ತುರ್ತು ಸಂದರ್ಭದಲ್ಲಿ), ಡೌನ್‌ಟೈಮ್‌ನಲ್ಲಿಯೂ ಸಹ ನಿರ್ದಿಷ್ಟಪಡಿಸಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್  ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್ ಟೈಮ್ ಎಂಬುದನ್ನು ಟ್ಯಾಪ್ ಮಾಡಿ.

    ನಿಮ್ಮ ಮಗುವಿಗಾಗಿ ನೀವು ಈ ಫೀಚರ್ ಅನ್ನು ಆನ್ ಮಾಡಲು ಬಯಸಿದರೆ, ನಿಮ್ಮ ಮಗುವಿನ ಹೆಸರನ್ನು ಟ್ಯಾಪ್ ಮಾಡಿ.

  3. ಯಾವಾಗಲೂ ಅನುಮತಿಸಲಾಗಿದೆ ಎಂಬುದನ್ನು ಟ್ಯಾಪ್ ಮಾಡಿ.

  4. ನೀವು ಸಂವಹನವನ್ನು ಅನುಮತಿಸಲು ಬಯಸುವ ಸಂಪರ್ಕಗಳನ್ನು ನಿರ್ದಿಷ್ಟಪಡಿಸಲು ಸಂಪರ್ಕ ಆ್ಯಪ್ ಅನ್ನು ಟ್ಯಾಪ್ ಮಾಡಿ.

    ಸಂವಹನ ಮಿತಿಗಳಲ್ಲಿ ನೀವು ಆರಿಸಿದ ಆಯ್ಕೆಯು ಇಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ಈ ಸೆಟ್ಟಿಂಗ್ ಅನ್ನು ನಿರ್ದಿಷ್ಟ ಸಂಪರ್ಕಗಳು ಎಂಬುದಕ್ಕೆ ಬದಲಾಯಿಸಬಹುದು, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು:

    • ನನ್ನ ಸಂಪರ್ಕಗಳಿಂದ ಆಯ್ಕೆಮಾಡಿ: ನಿಮ್ಮೊಂದಿಗೆ ಸಂವಹನವ ನಡೆಸಲು ಅನುಮತಿಸಲು ನಿರ್ದಿಷ್ಟ ಜನರನ್ನು ಆಯ್ಕೆಮಾಡಲು.

    • ಹೊಸ ಸಂಪರ್ಕವನ್ನು ಸೇರಿಸಿ: ಹೊಸ ಸಂಪರ್ಕವನ್ನು ಸೇರಿಸಲು ಮತ್ತು ಆ ವ್ಯಕ್ತಿಯೊಂದಿಗೆ ಸಂವಹನವನ್ನು ಅನುಮತಿಸಲು.

  5. ಮೇಲಿನ ಎಡಭಾಗದಲ್ಲಿರುವ ಹಿಂದಕ್ಕೆ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಅನುಮತಿಸಲಾದ ಆ್ಯಪ್‌ಗಳು ಎಂಬುದರ ಕೆಳಗಿರುವ ತೆಗೆದುಹಾಕಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ಆ್ಯಪ್‌ಗಳನ್ನು ಆಯ್ಕೆಮಾಡಿ ಎಂಬುದರ ಕೆಳಗಿರುವ ಇನ್ಸರ್ಟ್ ಬಟನ್ ಅನ್ನು ಟ್ಯಾಪ್ ಮಾಡಿ.

  6. ಮೇಲಿನ ಎಡಭಾಗದಲ್ಲಿರುವ ಹಿಂದಕ್ಕೆ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.