iPadನಲ್ಲಿನ ರಿಮೈಂಡರ್ಸ್ ಆ್ಯಪ್‌‌ನಲ್ಲಿ Apple Intelligence ಅನ್ನು ಬಳಸುವುದು

Apple Intelligenceನೊಂದಿಗೆ*, Safariಯಲ್ಲಿನ ಆನ್‌ಲೈನ್ ರೆಸಿಪಿಯಿಂದ ದಿನಸಿ ವಸ್ತುಗಳು ಅಥವಾ Mailನಲ್ಲಿನ ಈಮೇಲ್ ಸಂದೇಶದಿಂದ ನಿಮ್ಮ ಆ್ಯಕ್ಷನ್ ಐಟಮ್‌ಗಳಂತಹ ಇತರ ಆ್ಯಪ್‌ಗಳಲ್ಲಿನ ಪಠ್ಯದಿಂದ ಸೂಚಿಸಲಾದ ರಿಮೈಂಡರ್‌ಗಳನ್ನು ಪಡೆಯಬಹುದು. ರಿಮೈಂಡರ್ಸ್ ಆ್ಯಪ್ ಸಂಬಂಧಿತ ರಿಮೈಂಡರ್‌ಗಳನ್ನು ಒಂದು ಪಟ್ಟಿಯೊಳಗೆ ವಿಭಾಗಗಳಾಗಿ ಸ್ವಯಂಚಾಲಿತವಾಗಿ ವರ್ಗೀಕರಿಸಬಹುದು.

ಗಮನಿಸಿ: Apple Intelligence ಎಲ್ಲಾ iPad ಮಾಡಲ್‌ಗಳು ಅಥವಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ** ತೀರಾ ಇತ್ತೀಚಿನ ಲಭ್ಯವಿರುವ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು, ನೀವು iPadOSನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿದ್ದೀರಿ ಮತ್ತು ನಿಮ್ಮ ಸಾಧನದಲ್ಲಿ Apple Intelligence ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸೂಚಿಸಲಾದ ರಿಮೈಂಡರ್‌ಗಳನ್ನು ಪಡೆಯುವುದು

  1. ನೀವು ಪಟ್ಟಿಗೆ ಸೇರಿಸಲು ಬಯಸುವ ಮಾಹಿತಿಯನ್ನು ತೆರೆಯಿರಿ—ಉದಾಹರಣೆಗೆ, Safariಯಲ್ಲಿನ ರೆಸಿಪಿ ಅಥವಾ ಟಿಪ್ಪಣಿ ಆ್ಯಪ್‌ನಲ್ಲಿನ ಮೀಟಿಂಗ್ ಟಿಪ್ಪಣಿಗಳು.

  2. ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ರಿಮೈಂಡರ್ಸ್ ಎಂಬುದನ್ನು ಟ್ಯಾಪ್ ಮಾಡಿ.

    ಸಲಹೆ: Apple Intelligence ಪರಿಶೀಲಿಸಬೇಕೆಂದು ಬಯಸುವ ನಿರ್ದಿಷ್ಟ ಪಠ್ಯ ಅಥವಾ ಬುಲೆಟ್‌ಗಳನ್ನು ಸಹ ನೀವು ಆಯ್ಕೆಮಾಡಬಹುದು. ಪಠ್ಯವನ್ನು ಆಯ್ಕೆಮಾಡಿ, ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ರಿಮೈಂಡರ್ಸ್ ಎಂಬುದನ್ನು ಟ್ಯಾಪ್ ಮಾಡಿ.

    ಸೂಚಿಸಲಾದ ರಿಮೈಂಡರ್‌ಗಳು ನೀವು ಆಯ್ಕೆ ಮಾಡಿದ ಪಠ್ಯದ ಕೆಳಗೆ ಕಾಣಿಸಿಕೊಳ್ಳಬಹುದು.

  3. ರಿಮೈಂಡರ್‌ಗಳನ್ನು ಯಾವ ಪಟ್ಟಿಗೆ ಸೇರಿಸಬೇಕು ಎಂಬುದನ್ನು ಬದಲಾಯಿಸಲು, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಪಾಪ್-ಅಪ್ ಮೆನುವನ್ನು ಟ್ಯಾಪ್ ಮಾಡಿ, ನಂತರ ಪಟ್ಟಿಯೊಂದನ್ನು ಆರಿಸಿ.

  4. ಸಲಹೆಯೊಂದನ್ನು ನಿಮ್ಮ ಪಟ್ಟಿಗೆ ಸೇರಿಸಲು ಅದರ ಪಕ್ಕದಲ್ಲಿರುವ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ಎಲ್ಲಾ ಸಲಹೆಗಳನ್ನು ಸೇರಿಸಲು, “ಎಲ್ಲವನ್ನೂ ಸೇರಿಸಿ” ಎಂಬುದನ್ನು ಟ್ಯಾಪ್ ಮಾಡಿ.

  5. ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

    ನೀವು ಆಯ್ಕೆಮಾಡಿದ ಪಟ್ಟಿಗೆ ನಿಮ್ಮ ರಿಮೈಂಡರ್‌ಗಳನ್ನು ಸೇರಿಸಲಾಗುತ್ತದೆ.

ಸ್ವಯಂ ವರ್ಗೀಕರಿಸಿ ಎಂಬುದನ್ನು ಆನ್ ಅಥವಾ ಆಫ್ ಮಾಡುವುದು

ಸ್ವಯಂ ವರ್ಗೀಕರಣದೊಂದಿಗೆ, ಸಂಬಂಧಿತ ರಿಮೈಂಡರ್‌ಗಳನ್ನು Apple Intelligence ಒಂದು ಪಟ್ಟಿಯೊಳಗೆ ವಿಭಾಗಗಳಾಗಿ ಸ್ವಯಂಚಾಲಿತವಾಗಿ ವಿಂಗಡಿಸಬಲ್ಲದು.

  1. ನಿಮ್ಮ iPadನಲ್ಲಿ ರಿಮೈಂಡರ್ಸ್ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್‌ನಲ್ಲಿ ಪಟ್ಟಿಯೊಂದನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಸ್ವಯಂ ವರ್ಗೀಕರಿಸಿ ಎಂಬುದನ್ನು ಆನ್ ಮಾಡಿ: ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ವಯಂ-ವರ್ಗೀಕರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಸ್ವಯಂ ವರ್ಗೀಕರಿಸಿ ಎಂಬುದನ್ನು ಆಫ್ ಮಾಡಿ: ಸ್ವಯಂ ವರ್ಗೀಕರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ವಿಭಾಗಗಳನ್ನು ಇರಿಸಿಕೊಳ್ಳಬೇಕೋ ಅಥವಾ ತೆಗೆದುಹಾಕಬೇಕೋ ಎಂಬುದನ್ನು ಆಯ್ಕೆಮಾಡಿ.

      ಗಮನಿಸಿ: ವಿಭಾಗಗಳನ್ನು ತೆಗೆದುಹಾಕುವುದರಿಂದ ರಿಮೈಂಡರ್‌ಗಳನ್ನು ಡಿಲೀಟ್ ಮಾಡಲಾಗುವುದಿಲ್ಲ.

ವಿಭಾಗಗಳ ವರ್ಗೀಕರಣದ ರೀತಿಯು ನಿಮಗೆ ಇಷ್ಟವಾಗದಿದ್ದರೆ, ಸ್ವಯಂ ವರ್ಗೀಕರಣ ಎಂಬುದನ್ನು ಆಫ್ ಮಾಡಿ ವಿಭಾಗಗಳನ್ನು ತೆಗೆದುಹಾಕಲು ಪ್ರಯತ್ನಿಸಿ, ನಂತರ ಅದನ್ನು ಮತ್ತೆ ಆನ್ ಮಾಡಿ. ಇದು ಪಟ್ಟಿಯೊಳಗೆ ನಿಮ್ಮ ವಿಭಾಗದ ಶೀರ್ಷಿಕೆಗಳನ್ನು ಮತ್ತು ನೀವು ವ್ಯವಸ್ಥಿತಗೊಳಿಸಿರುವುದನ್ನು ರೀಸೆಟ್ ಮಾಡುತ್ತದೆ.

*Apple Intelligence ಜನರೇಟಿವ್ ಮಾಡಲ್‌ಗಳನ್ನು ಬಳಸುತ್ತದೆ ಮತ್ತು ಔಟ್‌ಪುಟ್‌ಗಳಲ್ಲಿ ವ್ಯತ್ಯಾಸವಾಗಬಹುದು. ನಿಖರತೆಗಾಗಿ ಮುಖ್ಯ ಮಾಹಿತಿಯನ್ನು ಪರಿಶೀಲಿಸಿ.
**Apple Intelligence ಈ ಕೆಳಗಿನ ಭಾಷೆಗಳಿಗೆ ಬೆಂಬಲದೊಂದಿಗೆ ಬೀಟಾದಲ್ಲಿ ಲಭ್ಯವಿದೆ: ಇಂಗ್ಲಿಷ್, ಡ್ಯಾನಿಶ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ನಾರ್ವೇಜಿಯನ್, ಪೋರ್ಚುಗೀಸ್, ಸ್ಪ್ಯಾನಿಷ್, ಸ್ವೀಡಿಷ್, ಟರ್ಕಿಶ್, ಚೈನೀಸ್ (ಸರಳೀಕೃತ), ಚೈನೀಸ್ (ಸಾಂಪ್ರದಾಯಿಕ), ಜಾಪನೀಸ್, ಕೊರಿಯನ್ ಮತ್ತು ವಿಯೆಟ್ನಾಮೀಸ್. ಕೆಲವು ಫೀಚರ್‌ಗಳು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಭಾಷೆ ಮತ್ತು ಫೀಚರ್ ಲಭ್ಯತೆ ಮತ್ತು ಸಿಸ್ಟಂ ಅವಶ್ಯಕತೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.