ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ FaceTime ವೀಡಿಯೊ ಸೆಟ್ಟಿಂಗ್ಸ್ ಅನ್ನು ಬದಲಾಯಿಸುವುದು

FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, ನೀವು ಪೋರ್ಟ್ರೇಟ್ ಮೋಡ್, ಸ್ಟುಡಿಯೊ ಲೈಟ್ ಮತ್ತು ಸೆಂಟರ್ ಸ್ಟೇಜ್ ಅನ್ನು ಆನ್ ಅಥವಾ ಆಫ್ ಮಾಡಬಹುದು, ಕ್ಯಾಮರಾಗಳ ನಡುವೆ ಸ್ವಿಚ್ ಮಾಡಬಹುದು ಅಥವಾ ನಿಮ್ಮ ಕ್ಯಾಮರಾವನ್ನು ಆನ್ ಅಥವಾ ಆಫ್ ಮಾಡಬಹುದು.

ಪೋರ್ಟ್ರೇಟ್ ಮೋಡ್‌ನೊಂದಿಗೆ ಹಿನ್ನೆಲೆಯನ್ನು ಬ್ಲರ್ ಮಾಡಿ

ಬೆಂಬಲಿತ ಮಾಡಲ್‌ಗಳಲ್ಲಿ, ನೀವು ಪೋರ್ಟ್ರೇಟ್ ಮೋಡ್ ಅನ್ನು ಆನ್ ಮಾಡಬಹುದು, ಇದು ಸ್ವಯಂಚಾಲಿತವಾಗಿ ಹಿನ್ನೆಲೆಯನ್ನು ಬ್ಲರ್ ಮಾಡುತ್ತದೆ ಮತ್ತು ಕ್ಯಾಮರಾದಲ್ಲಿ ಪೋರ್ಟ್ರೇಟ್ ಮೋಡ್‌ ಮಾಡುವಂತೆಯೇ ನಿಮ್ಮ ಮೇಲೆ ವಿಷುವಲ್ ಫೋಕಸ್ ಅನ್ನು ಇರಿಸುತ್ತದೆ.

  1. ನಿಮ್ಮ iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, ನಿಮ್ಮ ಟೈಲ್ ಅನ್ನು ಟ್ಯಾಪ್ ಮಾಡಿ. ನೀವು ಥರ್ಡ್ ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನಲ್ಲಿ ಕರೆಯಲ್ಲಿದ್ದಾಗ, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ನಂತರ ಆ್ಯಪ್‌ನ ಹೆಸರನ್ನು ಟ್ಯಾಪ್ ಮಾಡಿ.

  2. ಪೋರ್ಟ್ರೇಟ್ ಎಂಬುದನ್ನು ಟ್ಯಾಪ್ ಮಾಡಿ.

    ಪೋರ್ಟ್ರೇಟ್ ಮೋಡ್ ಅನ್ನು ಆಫ್ ಮಾಡಲು, ಬಟನ್ ಅನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.

ಪೋರ್ಟ್ರೇಟ್ ಮೋಡ್‌ನಲ್ಲಿ ಹಿನ್ನೆಲೆ ಬ್ಲರ್ ಪ್ರಮಾಣವನ್ನು ಸರಿಹೊಂದಿಸಲು, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, FaceTime (ಅಥವಾ ಥರ್ಡ್ ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನ ಹೆಸರನ್ನು) ಟ್ಯಾಪ್ ಮಾಡಿ, ನಂತರ ಪೋರ್ಟ್ರೇಟ್ ಸ್ಲೈಡರ್ ಅನ್ನು ಬಳಸಿ.

ನಿಮ್ಮ ಮುಖವನ್ನು ಹೈಲೈಟ್ ಮಾಡುವುದು

ಬೆಂಬಲಿತ ಮಾಡಲ್‌ಗಳಲ್ಲಿ, ನೀವು ಸ್ಟುಡಿಯೋ ಲೈಟ್ ಅನ್ನು ಆನ್ ಮಾಡಬಹುದು. ಇದು ಹಿನ್ನೆಲೆಯನ್ನು ಡಿಮ್ ಮಾಡುತ್ತದೆ ಮತ್ತು ನಿಮ್ಮ ಮುಖವನ್ನು ಪ್ರಕಾಶಮಾನಗೊಳಿಸುತ್ತದೆ.

  1. ನಿಮ್ಮ iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, ನಿಮ್ಮ ಟೈಲ್ ಅನ್ನು ಟ್ಯಾಪ್ ಮಾಡಿ. ನೀವು ಥರ್ಡ್ ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನಲ್ಲಿ ಕರೆಯಲ್ಲಿದ್ದಾಗ, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ನಂತರ ಆ್ಯಪ್‌ನ ಹೆಸರನ್ನು ಟ್ಯಾಪ್ ಮಾಡಿ.

  2. ಸ್ಟುಡಿಯೋ ಲೈಟ್ ಅನ್ನು ಟ್ಯಾಪ್ ಮಾಡಿ.

    ಸ್ಟುಡಿಯೋ ಲೈಟ್ ಮೋಡ್ ಅನ್ನು ಆಫ್ ಮಾಡಲು, ಬಟನ್ ಅನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.

ಸ್ಟುಡಿಯೋ ಲೈಟ್ ಮೋಡ್‌ನಲ್ಲಿ ಬೆಳಕಿನ ತೀವ್ರತೆಯನ್ನು ಸರಿಹೊಂದಿಸಲು, ಕಂಟ್ರೋಲ್ ಸೆಂಟರ್ ತೆರೆಯಿರಿ, FaceTime (ಅಥವಾ ಥರ್ಡ್ ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನ ಹೆಸರು) ಟ್ಯಾಪ್ ಮಾಡಿ, ನಂತರ ಸ್ಟುಡಿಯೋ ಲೈಟ್ ಸ್ಲೈಡರ್ ಬಳಸಿ.

ಸೆಂಟರ್ ಸ್ಟೇಜ್ ಅನ್ನು ಆಫ್ ಅಥವಾ ಆನ್ ಮಾಡುವುದು

ಬೆಂಬಲಿತ ಮಾಡಲ್‌ಗಳಲ್ಲಿ, ನೀವು ಸೆಂಟರ್ ಸ್ಟೇಜ್ ಅನ್ನು ಬಳಸಬಹುದಾಗಿದ್ದು, ಇದು ನೀವು FaceTime ಕರೆ ಮಾಡುವ ಸಮಯದಲ್ಲಿ ದೃಷ್ಟಿಕ್ಷೇತ್ರದ ಸುತ್ತಲೂ ಚಲಿಸುವಾಗ ನಿಮ್ಮ ಮುಂಬದಿ ಕ್ಯಾಮರಾವನ್ನು ಫ್ರೇಮ್‌ಗೆ ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.

  1. ನಿಮ್ಮ iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, ನಿಮ್ಮ ಟೈಲ್ ಅನ್ನು ಟ್ಯಾಪ್ ಮಾಡಿ. ನೀವು ಥರ್ಡ್ ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನಲ್ಲಿ ಕರೆಯಲ್ಲಿದ್ದಾಗ, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ನಂತರ ಆ್ಯಪ್‌ನ ಹೆಸರನ್ನು ಟ್ಯಾಪ್ ಮಾಡಿ.

  2. ಸೆಂಟರ್ ಸ್ಟೇಜ್ ಡೀಫಾಲ್ಟ್ ಆಗಿ ಆನ್ ಆಗಿರುತ್ತದೆ. ಸೆಂಟರ್ ಸ್ಟೇಜ್ ಅನ್ನು ಆಫ್ ಮಾಡಲು ಅದನ್ನು ಟ್ಯಾಪ್ ಮಾಡಿ.

    ಸೆಂಟರ್ ಸ್ಟೇಜ್ ಅನ್ನು ಆನ್ ಮಾಡಲು, ಅದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.

ಕೆಲವು iPad ಮಾಡಲ್‌ಗಳಲ್ಲಿ, ಸೆಂಟರ್ ಸ್ಟೇಜ್ ಬಟನ್ ನಿಮ್ಮ ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಸೆಂಟರ್ ಸ್ಟೇಜ್ ಅನ್ನು ಆನ್ ಮಾಡಲು, ನೀವು ನಿಮ್ಮ ಟೈಲ್ ಅನ್ನು ಟ್ಯಾಪ್ ಮಾಡಿದ ನಂತರ ಸೆಂಟರ್ ಸ್ಟೇಜ್ ಬಟನ್ ಅನ್ನು ಟ್ಯಾಪ್ ಮಾಡಬಹುದು.

ಹಿಂಬದಿಯ ಕ್ಯಾಮರಾಗೆ ಸ್ವಿಚ್ ಮಾಡಿ

  1. ನಿಮ್ಮ iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, ನಿಮ್ಮ ಟೈಲ್ ಅನ್ನು ಟ್ಯಾಪ್ ಮಾಡಿ.

  2. ಫ್ಲಿಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಮುಂಬದಿ ಕ್ಯಾಮರಾಗೆ ಮರಳಿ ಸ್ವಿಚ್ ಮಾಡಲು, ಫ್ಲಿಪ್ ಮಾಡಿ ಎಂಬುದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.

ಗಮನಿಸಿ: ನೀವು ಹಿಂಬದಿ ಕ್ಯಾಮರಾವನ್ನು ಬಳಸುತ್ತಿರುವಾಗ 1x ಅನ್ನು ಟ್ಯಾಪ್ ಮಾಡುವ ಮೂಲಕ ಚಿತ್ರವನ್ನು ದೊಡ್ಡದಾಗಿಸಬಹುದು. ಅದನ್ನು ಪುನಃ ಟ್ಯಾಪ್ ಮಾಡುವುದರಿಂದ ಚಿತ್ರವು ಸಾಮಾನ್ಯ ಗಾತ್ರಕ್ಕೆ ಮರಳುತ್ತದೆ.

ನಿಮ್ಮ ಕ್ಯಾಮರಾವನ್ನು ಆಫ್ ಮಾಡಿ

  1. iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, FaceTime ಕಂಟ್ರೋಲ್‌ಗಳು ಕಾಣುವಂತೆ ಮಾಡಲು (ಅವುಗಳು ಕಾಣಿಸದಿದ್ದರೆ) ಸ್ಕ್ರೀನ್ ಆನ್ನು ಟ್ಯಾಪ್ ಮಾಡಿ

  2. ಕ್ಯಾಮರಾ ಸ್ವಿಚ್ ಬಟನ್ ಅನ್ನು ಟ್ಯಾಪ್ ಮಾಡಿ.

    ಕ್ಯಾಮರಾವನ್ನು ಮತ್ತೆ ಆನ್ ಮಾಡಲು ಕ್ಯಾಮರಾ ಸ್ವಿಚ್ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.