ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಫೈಲ್ಸ್ ಆ್ಯಪ್‌ನಲ್ಲಿ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಮಾರ್ಪಡಿಸುವುದು

ನೀವು iPadನಲ್ಲಿ ನಿಮ್ಮ ಡಾಕ್ಯುಮಂಟ್‌ಗಳು, ಚಿತ್ರಗಳು, ಫೋಲ್ಡರ್‌ಗಳು ಮತ್ತು ಇತರೆ ಫೈಲ್‌ಗಳನ್ನು ಕಾಪಿ ಮಾಡಬಹುದು, ಮೂವ್ ಮಾಡಬಹುದು, ಕಸ್ಟಮೈಸ್ ಮಾಡಬಹುದು, ಹಂಚಿಕೊಳ್ಳಬಹುದು ಮತ್ತು ಡಿಲೀಟ್ ಮಾಡಬಹುದು.

ಡೌನ್ಲೋಡ್‌ಗಳು, ಪತ್ರಗಳು, ಕುಟುಂಬ ಹೀಗೆ ಮುಂತಾದಂತೆ ಹೆಸರಿಸಲಾದ ಅನೇಕ ಫೋಲ್ಡರ್‌ಗಳು ಮತ್ತು ಸ್ಥಳಗಳನ್ನು ತೋರಿಸುತ್ತಿರುವ ಫೈಲ್ಸ್ ಆ್ಯಪ್. ಸ್ಕ್ರೀನ್‌ನ ಕೆಳಭಾಗದಲ್ಲಿ ಇತ್ತೀಚಿನ ಫೈಲ್‌ಗಳು, ಹಂಚಿಕೊಂಡ ಫೈಲ್‌ಗಳು ಮತ್ತು ಬ್ರೌಸ್ ಟ್ಯಾಬ್‌ನ ಬಟನ್‌ಗಳಿವೆ.

ಡಾಕ್ಯುಮಂಟ್‌ಗಳನ್ನು ಮಾರ್ಪಡಿಸಿ ಮತ್ತು ಮರುಜೋಡಿಸಿ

ಬೆಂಬಲಿತ ಡಾಕ್ಯುಮಂಟ್ ಫಾರ್ಮ್ಯಾಟ್‌ನಲ್ಲಿರುವ ಫೈಲ್ ಅನ್ನು ವೀಕ್ಷಿಸುವಾಗ, ನೀವು ಡಾಕ್ಯುಮಂಟ್‌ನ ಕಂಟೆಂಟ್‌ಗಳನ್ನು ಮಾರ್ಪಡಿಸಬಹುದು ಮತ್ತು ಮರುಜೋಡಿಸಬಹುದು.

  1. ನಿಮ್ಮ iPadನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ನಿಮಗೆ ಬೇಕಾದ ಡಾಕ್ಯುಮಂಟ್ ಅನ್ನು ತೆರೆಯಿರಿ, ಅದರ ಶೀರ್ಷಿಕೆಯನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ:

    • ಫೋಟೋ ಆ್ಯಪ್‌ನಲ್ಲಿ ಸೇವ್ ಮಾಡಿ: ಡಾಕ್ಯುಮಂಟ್ ಅನ್ನು ಫೋಟೋಸ್ ಆ್ಯಪ್‌ನ ಲೈಬ್ರರಿಯಲ್ಲಿ ಸೇವ್ ಮಾಡಿ.

    • ಡ್ಯೂಪ್ಲಿಕೇಟ್: ಡಾಕ್ಯುಮಂಟ್‌ನ ಕಾಪಿಯನ್ನು ಮಾಡಿ.

    • ಮೂವ್ ಮಾಡಿ: ಡಾಕ್ಯುಮಂಟ್ ಅನ್ನು ಬೇರೊಂದು ಸ್ಥಳಕ್ಕೆ ಮೂವ್ ಮಾಡಿ.

    • ಮರುಹೆಸರಿಸಿ: ಡಾಕ್ಯುಮಂಟ್ ಅನ್ನು ಮರುಹೆಸರಿಸಿ.

    • ಎಕ್ಸ್‌ಪೋರ್ಟ್ ಮಾಡಿ: ಫೈಲ್‌ನ ಕಾಪಿಯನ್ನು ಬೇರೆ ಫೈಲ್ ಫಾರ್ಮ್ಯಾಟ್‌ನಲ್ಲಿ ಸೇವ್ ಮಾಡಿ.

    • ಪ್ರಿಂಟ್ ಮಾಡಿ: ಡಾಕ್ಯುಮಂಟ್ ಅನ್ನು ಪ್ರಿಂಟ್ ಮಾಡಿ.

ಡಾಕ್ಯುಮಂಟ್ ಅನ್ನು ಮಾರ್ಕಪ್ ಮಾಡಲು, ಮಾರ್ಕಪ್ ಟೂಲ್‌ಬಾರ್ ಬಟನ್ ಅನ್ನು ಟ್ಯಾಪ್ ಮಾಡಿ.

ಡಾಕ್ಯುಮಂಟ್ ಅನ್ನು ಮರುಹೊಂದಿಸಲು, ಹೈಲೈಟ್ ಮಾಡಲಾದ ಪುಟವೊಂದನ್ನು ಒತ್ತಿ ಹಿಡಿದುಕೊಳ್ಳಿ ಮತ್ತು ಅದನ್ನು ಹೊಸ ಸ್ಥಳಕ್ಕೆ ಡ್ರ್ಯಾಗ್ ಮಾಡಿ.

ಗಮನಿಸಿ: ಫೈಲ್ಸ್ ಆ್ಯಪ್ ಎಲ್ಲಾ ಡಾಕ್ಯುಮಂಟ್ ಫಾರ್ಮ್ಯಾಟ್‌ಗಳನ್ನು ಬೆಂಬಲಿಸುವುದಿಲ್ಲ.

ನಿಮ್ಮ ಫೋಲ್ಡರ್‌ಗಳ ಗೋಚರತೆಯನ್ನು ಕಸ್ಟಮೈಸ್ ಮಾಡುವುದು

ನಿಮ್ಮ ಫೋಲ್ಡರ್‌ಗಳನ್ನು ಸುಲಭವಾಗಿ ಗುರುತಿಸಲು ನೀವು ಬಣ್ಣ ಮತ್ತು ಐಕಾನ್‌ಗಳನ್ನು ಸೇರಿಸಬಹುದು.

  1. ನಿಮ್ಮ iPadನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ನೀವು ಕಸ್ಟಮೈಸ್ ಮಾಡಲು ಬಯಸುವ ಫೋಲ್ಡರ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಫೋಲ್ಡರ್ ಮತ್ತು ಟ್ಯಾಗ್‌ಗಳನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಆಯ್ಕೆಮಾಡಿ.

  3. ಟ್ಯಾಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ಬಣ್ಣವನ್ನು ಆರಿಸಿ, ನಂತರ ಹಿಂದಕ್ಕೆ ಬಟನ್ ಅನ್ನು ಟ್ಯಾಪ್ ಮಾಡಿ.

  4. ಫೋಲ್ಡರ್‌ಗೆ ಎಮೋಜಿಯನ್ನು ಸೇರಿಸಲು ಐಕಾನ್ ಒಂದನ್ನು ಆಯ್ಕೆಮಾಡಿ ಅಥವಾ ಎಮೋಜಿಯನ್ನು ಟ್ಯಾಪ್ ಮಾಡಿ.

ಫೋಲ್ಡರ್‌ನಿಂದ ಐಕಾನ್ ಅನ್ನು ತೆಗೆದುಹಾಕಲು, ಐಕಾನ್‌ಗಳು ಎಂಬುದರ ಕೆಳಗೆ ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.

ಐಕಾನ್, ಪಟ್ಟಿ ಅಥವಾ ಕಾಲಮ್ ವ್ಯೂಗೆ ಬದಲಾಯಿಸುವುದು

iPadನಲ್ಲಿ ತೆರೆದ ಸ್ಥಳ ಅಥವಾ ಫೋಲ್ಡರ್‌ನಲ್ಲಿ ಫೈಲ್‌ಗಳ ನಿಮಗೆ ಹೇಗೆ ಕಾಣಿಸಬೇಕೆಂದು ನೀವು ಬದಲಾಯಿಸಬಹುದು.

ನಿಮ್ಮ iCloud ಡ್ರೈವ್‌ನಲ್ಲಿರುವ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ತೋರಿಸುತ್ತಿರುವ ಫೈಲ್ಸ್ ಆ್ಯಪ್. ಸ್ಕ್ರೀನ್‌ನ ಮೇಲ್ಭಾಗದಲ್ಲಿ ಐಟಮ್‌ಗಳನ್ನು ಆಯ್ಕೆಮಾಡಲು, ಹೊಸ ಫೋಲ್ಡರ್ ರಚಿಸಲು, ವ್ಯೂ ಬದಲಾಯಿಸಲು (ಪಟ್ಟಿ, ಐಕಾನ್‌ಗಳು, ಕಾಲಮ್‌ಗಳು) ಮತ್ತು ಹುಡುಕಲು ಬಟನ್‌ಗಳಿವೆ.
  1. ನಿಮ್ಮ iPadನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಇತ್ತೀಚಿನವುಗಳು, ಹಂಚಿಕೊಂಡಿರುವುದು ಅಥವಾ ಬ್ರೌಸ್ ಮಾಡಿ ಎಂಬಂತಹ ಸ್ಥಳವೊಂದನ್ನು ಟ್ಯಾಪ್ ಮಾಡಿ ಅಥವಾ ಸೈಡ್‌ಬಾರ್ ಬಟನ್ ಅನ್ನು ಟ್ಯಾಪ್ ಮಾಡಿದ ನಂತರ ಸೈಡ್‌ಬಾರ್‌ನಲ್ಲಿ ಸ್ಥಳವನ್ನು ಟ್ಯಾಪ್ ಮಾಡಿ.

  3. ಪಟ್ಟಿ ಬಟನ್, ಐಕಾನ್‌ಗಳ ಬಟನ್ ಅಥವಾ ಕಾಲಮ್ ವ್ಯೂ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಫೈಲ್‌ಗಳನ್ನು ಹೇಗೆ ನೋಡಬೇಕೆಂದು ಆರಿಸಿ.

    ಪಟ್ಟಿಯ ವೀಕ್ಷಣೆಯಲ್ಲಿ ಫೈಲ್ ಅನುಕ್ರಮವನ್ನು ನೋಡಲು, ಫೋಲ್ಡರ್ ಅನ್ನು ವಿಸ್ತರಿಸಲು ಅದರ ಪಕ್ಕದಲ್ಲಿರುವ ಮುಂದಕ್ಕೆ ಬಟನ್ ಅನ್ನು ಟ್ಯಾಪ್ ಮಾಡಿ.

    ಕಾಲಮ್ ವ್ಯೂನಲ್ಲಿ ಫೋಲ್ಡರ್ ಅನುಕ್ರಮವನ್ನು ವಿವರವಾಗಿ ನೋಡಲು, ಬಲತುದಿಯಲ್ಲಿರುವ ಕಾಲಮ್‌ನಲ್ಲಿನ ಐಟಮ್ ಒಂದನ್ನು ಟ್ಯಾಪ್ ಮಾಡಿ. ಫೈಲ್‌ನ ಒಂದರ ಪ್ರಿವ್ಯೂವನ್ನು ಅದರ ಮೆಟಾಡೇಟದೊಂದಿಗೆ ನೋಡಲು (ಉದಾಹರಣೆಗೆ ಅದರ ಪ್ರಕಾರ, ಗಾತ್ರ ಮತ್ತು ರಚನೆಯ ದಿನಾಂಕ), ಕಾಲಮ್ ವ್ಯೂನಲ್ಲಿ ಆ ಫೈಲ್ ಅನ್ನು ಟ್ಯಾಪ್ ಮಾಡಿ. (ಪ್ರಿವ್ಯೂ ಅತ್ಯಂತ ಬಲಭಾಗದ ಕಾಲಮ್‌ನಲ್ಲಿ ಕಾಣಿಸದಿದ್ದರೆ, ಎಡಕ್ಕೆ ಸ್ವೈಪ್ ಮಾಡಿ) ಫೈಲ್ ಅನ್ನು ನೋಡಲು ಮತ್ತು ಫೈಲ್ಸ್ ಆ್ಯಪ್ ಅನ್ನು ತೊರೆಯದೆ ಅದರಲ್ಲಿ ವಿವಿಧ ಆ್ಯಕ್ಷನ್‌ಗಳನ್ನು ನಿರ್ವಹಿಸಲು, ಫೈಲ್ ಪ್ರಿವ್ಯೂ ಎಂಬುದರ ಕೆಳಗಿರುವ ತೆರೆಯಿರಿ ಎಂಬುದನ್ನು ಟ್ಯಾಪ್ ಮಾಡಿ.

ಸುಲಭ ಆ್ಯಕ್ಸೆಸ್‌ಗಾಗಿ ಫೋಲ್ಡರ್ ಅನ್ನು Dockಗೆ ಮೂವ್ ಮಾಡುವುದು

ನೀವು ಹೆಚ್ಚಾಗಿ ಆ್ಯಕ್ಸೆಸ್ ಮಾಡುವ ಫೋಲ್ಡರ್ ಅನ್ನು ಹುಡುಕಲು ಮತ್ತು ತೆರೆಯಲು ಸುಲಭವಾಗುವಂತೆ ನೀವು ಅದನ್ನು Dockಗೆ ಮೂವ್ ಮಾಡಬಹುದು.

  1. ನಿಮ್ಮ iPadನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ಮೆನು ತೆರೆಯುವವರೆಗೆ ನೀವು ಮೂವ್ ಮಾಡಲು ಬಯಸುವ ಫೋಲ್ಡರ್ ಅನ್ನು ಒತ್ತಿ ಹಿಡಿದುಕೊಳ್ಳಿ.

  3. ಮೆನುವಿನಲ್ಲಿ ಸೇರಿಸಿ ಎಂಬುದನ್ನು ಆಯ್ಕೆಮಾಡಿ, ನಂತರ Dock ಅನ್ನು ಟ್ಯಾಪ್ ಮಾಡಿ.

Dockನಲ್ಲಿರುವ ಫೋಲ್ಡರ್ ಅನ್ನು ವಿಸ್ತರಿಸಲು ಮತ್ತು ಅದರಲ್ಲಿರುವ ಫೈಲ್‌ಗಳನ್ನು ನೋಡಲು ನೀವು ಅದನ್ನು ಟ್ಯಾಪ್ ಮಾಡಬಹುದು. ಫೋಲ್ಡರ್‌ನಲ್ಲಿರುವ ಫೈಲ್ ಅನ್ನು ಆ್ಯಪ್‌ನಲ್ಲಿ ತೆರೆಯಲು, ಫೈಲ್ ಅನ್ನು Dockನಲ್ಲಿರುವ ಆ್ಯಪ್‌ಗೆ ಡ್ರ್ಯಾಗ್ ಮಾಡಿ, ಅಥವಾ ಆ್ಯಪ್ ಈಗಾಗಲೇ ತೆರೆದಿದ್ದರೆ ನೇರವಾಗಿ ಆ್ಯಪ್‌ನ ವಿಂಡೋಗೆ ಡ್ರ್ಯಾಗ್ ಮಾಡಿ. ಉದಾಹರಣೆಗೆ, ನೀವು ಸಂದೇಶ ಆ್ಯಪ್ ತೆರೆದಿದ್ದರೆ, ನೀವು ತೆರೆದಿರುವ ಸಂಭಾಷಣೆಗೆ ಫೋಲ್ಡರ್‌ನಿಂದ ಫೈಲ್ ಅನ್ನು ನೇರವಾಗಿ ಡ್ರ್ಯಾಗ್ ಮಾಡಬಹುದು.

ಸೈಡ್‌ಬಾರ್ ಅನ್ನು ಮರುಕ್ರಮಗೊಳಿಸುವುದು

  1. ನಿಮ್ಮ iPadನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್ ತೋರಿಸಲು ಸೈಡ್‌ಬಾರ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ಸೈಡ್‌ಬಾರ್‌ನ ಮೇಲ್ಭಾಗದಲ್ಲಿರುವ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಸೈಡ್‌ಬಾರ್‌ ಅನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಸ್ಥಳವನ್ನು ಮರೆಮಾಡಿ: ಸ್ಥಳವನ್ನು ಆಫ್ ಮಾಡಿ.

    • ಟ್ಯಾಗ್ ಅನ್ನು ಡಿಲೀಟ್ ಮಾಡಿ ಮತ್ತು ಅದನ್ನು ಎಲ್ಲಾ ಐಟಂಗಳಿಂದ ತೆಗೆದುಹಾಕಿ: ಟ್ಯಾಗ್ ಪಕ್ಕದಲ್ಲಿರುವ ತೆಗೆದುಹಾಕಿ ಬಟನ್ ಅನ್ನು ಟ್ಯಾಪ್ ಮಾಡಿ. (ಫೈಲ್ ಅಥವಾ ಫೋಲ್ಡರ್ ಅನ್ನು ಟ್ಯಾಗ್ ಮಾಡಿ ನೋಡಿ.)

    • ಮೆಚ್ಚಿನವುಗಳ ಪಟ್ಟಿಯಿಂದ ಐಟಮ್ ಅನ್ನು ತೆಗೆದುಹಾಕಿ: ಐಟಂನ ಪಕ್ಕದಲ್ಲಿರುವ ತೆಗೆದುಹಾಕಿ ಬಟನ್ ಅನ್ನು ಟ್ಯಾಪ್ ಮಾಡಿ. (ಫೋಲ್ಡರ್ ಅನ್ನು ಮೆಚ್ಚಿನದು ಎಂದು ಗುರುತಿಸಿ ನೋಡಿ.)

    • ಐಟಂನ ಕ್ರಮವನ್ನು ಬದಲಾಯಿಸಿ: ಮರುಕ್ರಮಗೊಳಿಸಿ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ಹೊಸ ಸ್ಥಾನಕ್ಕೆ ಡ್ರ್ಯಾಗ್ ಮಾಡಿ.

ಫೈಲ್ ಅಥವಾ ಫೋಲ್ಡರ್ ಅನ್ನು ಡಿಲೀಟ್ ಮಾಡುವುದು

  1. ನಿಮ್ಮ iPadನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ನೀವು ಡಿಲೀಟ್ ಮಾಡಲು ಬಯಸುವ ಫೈಲ್ ಅಥವಾ ಫೋಲ್ಡರ್ ಅನ್ನು ಪತ್ತೆಮಾಡಿ.

  3. ಐಟಮ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.