ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad ಕ್ಯಾಮರಾವನ್ನು ಬಳಸಿಕೊಂಡು ಟಿಪ್ಪಣಿಯಲ್ಲಿ ಪಠ್ಯ ಮತ್ತು ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡುವುದು

ಟಿಪ್ಪಣಿ ಆ್ಯಪ್‌ನಲ್ಲಿ, ಪಠ್ಯ ಮತ್ತು ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡಲು ನೀವು ಕ್ಯಾಮರಾವನ್ನು ಬಳಸಬಹುದು.

ಡಾಕ್ಯುಮಂಟ್ ಸ್ಕ್ಯಾನ್ ಆಗುತ್ತಿರುವುದನ್ನು ತೋರಿಸುತ್ತಿರುವ ಸ್ಕ್ರೀನ್. ಪಿಕ್ಚರ್ ಅನ್ನು ತೆಗೆದುಕೊಳ್ಳಿ ಎಂಬ ಬಟನ್ ಸ್ಕ್ರೀನ್‌ನ ಬಲಭಾಗದಲ್ಲಿದೆ.

ಟಿಪ್ಪಣಿಯಲ್ಲಿ ಪಠ್ಯವನ್ನು ಸ್ಕ್ಯಾನ್ ಮಾಡಿ

ಬೆಂಬಲಿತ ಭಾಷೆಗಳಲ್ಲಿ, ನೀವು ಕ್ಯಾಮರಾವನ್ನು ಬಳಸಿಕೊಂಡು ಸ್ಕ್ಯಾನ್ ಮಾಡಿದ ಪಠ್ಯವನ್ನು ಸೇರಿಸಬಹುದು.

  1. ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ ಹೋಗಿ.

  2. ಟಿಪ್ಪಣಿಯಲ್ಲಿ, ಅಟ್ಯಾಚ್‌ಮೆಂಟ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಪಠ್ಯವನ್ನು ಸ್ಕ್ಯಾನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಕ್ಯಾಮರಾ ಫ್ರೇಮ್‌ನ ಒಳಗೆ ಪಠ್ಯವು ಗೋಚರಿಸುವಂತೆ iPad ಅನ್ನು ಇರಿಸಿ.

  4. ಪಠ್ಯವನ್ನು ಆಯ್ಕೆ ಮಾಡಲು ಡ್ರ್ಯಾಗ್ ಮಾಡಿ ಅಥವಾ ಗ್ರ್ಯಾಬ್ ಪಾಯಿಂಟ್‌ಗಳನ್ನು ಬಳಸಿ, ನಂತರ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

ಡಾಕ್ಯುಮಂಟ್ ಅನ್ನು ಟಿಪ್ಪಣಿಯಾಗಿ ಸ್ಕ್ಯಾನ್ ಮಾಡಿ

  1. ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ ಹೋಗಿ.

  2. ಟಿಪ್ಪಣಿಯಲ್ಲಿ, ಅಟ್ಯಾಚ್‌ಮೆಂಟ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಡಾಕ್ಯುಮೆಂಟ್ ಪುಟವು ಸ್ಕ್ರೀನ್‌ನಲ್ಲಿ ಕಾಣಿಸುವಂತೆ iPad ಅನ್ನು ಇರಿಸಿ, ಫ್ಲ್ಯಾಶ್ (ಬೆಂಬಲಿತ ಮಾಡೆಲ್‌ಗಳಲ್ಲಿ) ಅಥವಾ ಫಿಲ್ಟರ್‌ಗಳಂತಹ ಯಾವುದೇ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಸ್ವಯಂಚಾಲಿತ ಕ್ಯಾಪ್ಚರ್: iPad ಅನ್ನು ಸ್ಥಿರವಾಗಿ ಹಿಡಿದುಕೊಳ್ಳಿ. iPad ಪುಟದ ಅಂಚುಗಳನ್ನು ಪತ್ತೆಮಾಡಿದಾಗ ಡಾಕ್ಯುಮಂಟ್ ಅನ್ನು ಸ್ವಯಂಚಾಲಿತವಾಗಿ ಕ್ಯಾಪ್ಚರ್‌ ಮಾಡುತ್ತದೆ. ಹೊಂದಾಣಿಕೆಗಳನ್ನು ಮಾಡಲು, ಥಂಬ್‌ನೇಲ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸರಿಹೊಂದಿಸಿ ಎಂಬಂತಹ ಆಯ್ಕೆಯನ್ನು ಟ್ಯಾಪ್ ಮಾಡಿ, ನಿಮ್ಮ ಬದಲಾವಣೆಗಳನ್ನು ಮಾಡಿ, ನಂತರ ಹಿಂದಕ್ಕೆ ಬಟನ್ ಅನ್ನು ಟ್ಯಾಪ್ ಮಾಡಿ.

    • ಹಸ್ತಚಾಲಿತ ಕ್ಯಾಪ್ಚರ್: ಮ್ಯಾನುಯಲ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಚಿತ್ರವನ್ನು ತೆಗೆದುಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ. ಅಗತ್ಯವಿರುವಂತೆ ಅಂಚುಗಳನ್ನು ಸರಿಹೊಂದಿಸಿ, ನಂತರ ಪುನಃ ತೆಗೆದುಕೊಳ್ಳಿ ಅಥವಾ ಉಳಿಸಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

  4. ಹೆಚ್ಚುವರಿ ಪುಟಗಳನ್ನು ಸ್ಕ್ಯಾನ್ ಮಾಡಿ, ನಿಮ್ಮ ಕೆಲಸ ಪೂರ್ಣಗೊಂಡ ನಂತರ ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

    ಡಾಕ್ಯುಮಂಟ್ ಅನ್ನು ಟಿಪ್ಪಣಿಯಲ್ಲಿ PDF ಆಗಿ ಸೇವ್ ಮಾಡಲಾಗಿದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.