ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPad ಬಗ್ಗೆ ಮಾಹಿತಿಯನ್ನು ಪಡೆಯಿರಿ

ಒಟ್ಟಾರೆ ಸಂಗ್ರಹಣೆಯ ಲಭ್ಯತೆ ಮತ್ತು ಪ್ರತಿ ಆ್ಯಪ್ ಬಳಸಿದ ಸಂಗ್ರಹಣೆಯನ್ನು ನೋಡಿ

ಸೆಟ್ಟಿಂಗ್ಸ್  > ಸಾಮಾನ್ಯ > iPad ಸಂಗ್ರಹಣೆ ಎಂಬಲ್ಲಿಗೆ ಹೋಗಿ.

ನಿಮ್ಮ iPhone ಮತ್ತು iPadನಲ್ಲಿನ ಸಂಗ್ರಹಣೆಯನ್ನು ಹೇಗೆ ಪರಿಶೀಲಿಸುವುದು ಮತ್ತು ನಿಮ್ಮ iCloud ಸಂಗ್ರಹಣೆಯನ್ನು ನಿರ್ವಹಿಸಿ ಎಂಬ Apple ಬೆಂಬಲ ಲೇಖನಗಳನ್ನು ನೋಡಿ.

ಬ್ಯಾಟರಿ ಬಳಕೆಯನ್ನು ನೋಡಿ

iPad ಅನ್ನು ಚಾರ್ಜ್ ಮಾಡಿದಾಗಿನಿಂದ ಕಳೆದ ಸಮಯ ಮತ್ತು ಪ್ರತಿ ಆ್ಯಪ್‌ನ ಬ್ಯಾಟರಿ ಬಳಕೆಯನ್ನು ನೋಡಲು ಸೆಟ್ಟಿಂಗ್ಸ್  > ಬ್ಯಾಟರಿ ಎಂಬಲ್ಲಿಗೆ ಹೋಗಿ. ನೀವು ಬ್ಯಾಟರಿಯ ಮಟ್ಟವನ್ನು ಶೇಕಡಾವಾರು ಪ್ರಮಾಣದಲ್ಲಿ ಪ್ರದರ್ಶಿಸಬಹುದು ಮತ್ತು ಕಡಿಮೆ ಪವರ್ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಬಹುದು. iPad ಬ್ಯಾಟರಿಯನ್ನು ಚಾರ್ಜ್ ಮಾಡಿ ಅನ್ನು ನೋಡಿ.

ಮೊಬೈಲ್ ಸೇವೆ ಬಳಕೆಯನ್ನು ನೋಡಿ

ಸೆಟ್ಟಿಂಗ್ಸ್ > ಮೊಬೈಲ್ ಡೇಟ ಎಂಬಲ್ಲಿಗೆ ಹೋಗಿ. iPadನಲ್ಲಿ (Wi-Fi + Cellular ಮಾಡಲ್‌ಗಳು) ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಅನ್ನು ನೋಡಿ.

ನಿಮ್ಮ IMEI ಅನ್ನು ಹುಡುಕಿ

ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ನಿಮ್ಮ iPadಗಾಗಿ IMEI (ಅಂತಾರಾಷ್ಟ್ರೀಯ ಮೊಬೈಲ್ ಸಾಧನ ಗುರುತು) ಅನ್ನು ನೀವು ನೋಡಬಹುದು.

  1. ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಕುರಿತು ಎಂಬಲ್ಲಿಗೆ ಹೋಗಿ.

  2. ನಿಮ್ಮ IMEI ಅನ್ನು ಕಂಡುಕೊಳ್ಳಲು ಕೆಳಕ್ಕೆ ಸ್ಕ್ರಾಲ್ ಮಾಡಿ.

ಹೆಸರು, ಮಾಡಲ್, iPadOS ಆವೃತ್ತಿ, ಕ್ರಮಸಂಖ್ಯೆ ಮತ್ತು ಇನ್ನೂ ಹೆಚ್ಚಿನದನ್ನು ನೋಡಿ

ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಕುರಿತು ಎಂಬಲ್ಲಿಗೆ ಹೋಗಿ. ನೀವು ವೀಕ್ಷಿಸಬಹುದಾದ ಐಟಂಗಳಲ್ಲಿ ಇವು ಸೇರಿವೆ:

  • ಹೆಸರು

  • iPadOS ಸಾಫ್ಟ್‌ವೇರ್ ಆವೃತ್ತಿ

  • ಮಾಡೆಲ್ ಹೆಸರು

  • ಪಾರ್ಟ್ ಮತ್ತು ಮಾಡೆಲ್ ಸಂಖ್ಯೆಗಳು. ಮಾಡಲ್‌ನ ಬಲಭಾಗದಲ್ಲಿ, ಪಾರ್ಟ್ ಸಂಖ್ಯೆ ಕಾಣಿಸಿಕೊಳ್ಳುತ್ತದೆ. ಮಾಡೆಲ್ ಸಂಖ್ಯೆಯನ್ನು ನೋಡಲು, ಪಾರ್ಟ್ ಸಂಖ್ಯೆಯನ್ನು ಟ್ಯಾಪ್ ಮಾಡಿ.

  • ಕ್ರಮ ಸಂಖ್ಯೆ

  • ನೆಟ್‌ವರ್ಕ್ (Wi-Fi + Cellular ಮಾಡಲ್‌ಗಳು)

  • ಹಾಡುಗಳು, ವೀಡಿಯೊಗಳು, ಫೋಟೋಗಳು ಮತ್ತು ಆ್ಯಪ್‌ಗಳ ಸಂಖ್ಯೆ

  • ಸಾಮರ್ಥ್ಯ ಮತ್ತು ಲಭ್ಯವಿರುವ ಸಂಗ್ರಹಣೆ ಸ್ಥಳಾವಕಾಶ

  • ಮೊಬೈಲ್ ಸೇವೆ (Wi-Fi + Cellular ಮಾಡಲ್‌ಗಳು)

  • ಮೊಬೈಲ್ ಡೇಟ ಸಂಖ್ಯೆ (Wi-Fi + Cellular ಮಾಡಲ್‌ಗಳು)

  • Wi-Fi ಮತ್ತು Bluetooth® ವಿಳಾಸಗಳು

  • GSM ನೆಟ್‌ವರ್ಕ್‌ಗಳಿಗಾಗಿ ICCID (ಇಂಟಿಗ್ರೇಟೆಡ್ ಸರ್ಕೀಟ್ ಕಾರ್ಡ್ ಐಡೆಂಟಿಫೈಯರ್ ಅಥವಾ ಸ್ಮಾರ್ಟ್ ಕಾರ್ಡ್) (Wi-Fi + Cellular ಮಾಡಲ್‌ಗಳು)

  • CDMA ನೆಟ್‌ವರ್ಕ್‌ಗಳಿಗಾಗಿ MEID (ಮೊಬೈಲ್ ಇಕ್ಷಿಪ್‌ಮೆಂಟ್ ಐಡೆಂಟಿಫೈಯರ್) (Wi-Fi + Cellular ಮಾಡಲ್‌ಗಳು)

  • ಮೋಡೆಮ್ ಫರ್ಮ್‌ವೇರ್

ಕ್ರಮಸಂಖ್ಯೆ ಮತ್ತು ಇತರ ಐಡೆಂಟಿಫೈಯರ್‌ಗಳನ್ನು ಕಾಪಿ ಮಾಡಲು, ಕಾಪಿ ಮಾಡಿ ಎಂಬುದು ಕಾಣಿಸುವವರೆಗೆ ಐಡೆಂಟಿಫೈಯರ್ ಅನ್ನು ಒತ್ತಿ ಹಿಡಿದುಕೊಳ್ಳಿ.

ಕಾನೂನು ಮತ್ತು ನಿಯಂತ್ರಕ ಮಾಹಿತಿಯನ್ನು (ಕಾನೂನು ಸೂಚನೆಗಳು ಹಾಗೂ ಪರವಾನಗಿಗಳು, ವಾರಂಟಿ ಮತ್ತು RF ಎಕ್ಸ್‌ಪೋಶರ್ ಮಾಹಿತಿ ಸೇರಿದಂತೆ) ಹಾಗೂ ನಿಯಂತ್ರಕ ಗುರುತುಗಳನ್ನು ನೋಡಲು, ಸೆಟ್ಟಿಂಗ್ಸ್ ಆ್ಯಪ್ > ಸಾಮಾನ್ಯ > ಕಾನೂನು ಮತ್ತು ನಿಯಂತ್ರಕ ಎಂಬಲ್ಲಿಗೆ ಹೋಗಿ.

ಡಯಾಗ್ನಾಸ್ಟಿಕ್ ಮಾಹಿತಿಯನ್ನು ನೋಡಿ ಅಥವಾ ಆಫ್ ಮಾಡಿ

ಸೆಟ್ಟಿಂಗ್ ಆ್ಯಪ್  > ಗೌಪ್ಯತೆ ಮತ್ತು ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳು ಎಂಬಲ್ಲಿಗೆ ಹೋಗಿ.

Apple ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ಸಹಾಯ ಮಾಡಲು, ನೀವು ಆನ್ ಮಾಡುವ ಸೆಟ್ಟಿಂಗ್‌ಗಳನ್ನು ಆಧರಿಸಿ iPad ಡಯಾಗ್ನೋಸ್ಟಿಕ್ ಮತ್ತು ಬಳಕೆಯ ಡೇಟವನ್ನು ಕಳುಹಿಸುತ್ತದೆ. ಈ ಡೇಟಾ ಅನಾಮಧೇಯವಾಗಿದೆ ಆದರೆ ಸ್ಥಳದ ಮಾಹಿತಿಯನ್ನು ಒಳಗೊಂಡಿರಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.